Home Crime ನಿಮ್ಮ ಬೈಕ್ ನ ಸೇಲ್ ಗಿಟ್ಟಿದ್ದೀರಾ..?? ಅದ್ರ ಫೋಟೋಗಳನ್ನ OLX ನಲ್ಲಿ ಅಪ್ಲೋಡ್ ಮಾಡಿದ್ದೀರಾ..?? ನಕಲಿ...

ನಿಮ್ಮ ಬೈಕ್ ನ ಸೇಲ್ ಗಿಟ್ಟಿದ್ದೀರಾ..?? ಅದ್ರ ಫೋಟೋಗಳನ್ನ OLX ನಲ್ಲಿ ಅಪ್ಲೋಡ್ ಮಾಡಿದ್ದೀರಾ..?? ನಕಲಿ ಚೆಕ್ ಕೊಟ್ಟು ವಂಚನೆ ಮಾಡ್ತಾನೆ ಹುಷಾರ್…! ಹಾಗಾದ್ರೆ ಈ ಸ್ಟೋರಿ ಮಿಸ್ ಮಾಡ್ದೇ ಓದಿ..!!

228
0
SHARE

OLXನಲ್ಲಿ ಬೈಕ್ ಖರೀದಿಗಾಗಿ, ಕಾಲ್ ಮಾಡ್ತಾನೆ…ನಕಲಿ ಚೆಕ್ ಕೊಟ್ಟು ಮೂರು ಪಂಗನಾಮ ಹಾಕ್ತಾನೆ.. ನಿಮ್ಮ ಬೈಕ್ ನ್ನ ಸೇಲ್ ಗಿಟ್ಟಿದ್ದೀರಾ..?? ಅದ್ರ ಫೋಟೋಗಳನ್ನ ಓಎಲ್ಎಕ್ಸ್ ಅಪ್ ಲೋಡ್ ಮಾಡಿದ್ದೀರಾ. ಹಾಗಾದ್ರೆ, ಸ್ವಲ್ಪ ಎಚ್ಚರದಿಂದಿರಿ. ನಿಮ್ಮ ಬೈಕ್ ಖರೀದಿ ಹೆಸ್ರಲ್ಲಿ ವಂಚಕರು ನಿಮ್ಮ ಮನೆ ಬಾಗಿಲು ತಟ್ತಾರೆ. ಖರೀದಿ ಮಾಡಿ ಚೆಕ್ ಕೊಡ್ತಾರೆ…

ಅದನ್ನ ಬ್ಯಾಂಕ್ ಗೆ ಹಾಕಿದಾಗ್ಲೇ ಗೊತ್ತಾಗೋದು ನೀವು ಮೋಸ ಹೋಗಿದ್ದೀರಿ ಅಂತ. ಅಂತಹದ್ದೇ ರೀತಿಯಲ್ಲಿ ಜನರಿಗೆ ವಂಚಿಸ್ತಿದ್ದ ವಂಚಕನೊಬ್ಬ ಇದೀಗ ಪೊಲೀಸ್ರ ಬಲೆಗೆ ಬಿದ್ದಿದ್ದಾನೆ.ಈ ರೀತಿ ಮುಖ ಮುಚ್ಚುಕೊಂಡು ಹೋಗ್ತಾ ಇದ್ದಾನಲ್ಲ ಈತನ ಹೆಸರು ಭಾಸ್ಕರ. ಮೂಲತಃ ತಮಿಳುನಾಡಿನ ತಿರುಮಣ್ಣಾಮಲೈನವ. ಈತ ಮಾಡ್ತಾ ಇದ್ದದ್ದೂ ಚೀಟಿಂಗ್ ಕೆಲಸ…

ಕಷ್ಟ ಅಂತ ತಮ್ಮ ಬೈಕ್, ಕಾರ್‌ಗಳನ್ನ ಸೇಲ್ ಮಾಡೋದಕ್ಕೆ ಆಪ್ ಡೌನ್ ಲೋಡ್ ಮಾಡಿದ್ರೆ, ಅಂತಹವ್ರನ್ನೇ ಟಾರ್ಗೆಟ್ ಮಾಡಿಕೊಂಡು ಮೋಸ ಮಾಡೋದು…. ಈ ಚೀಟರ್ ಭಾಸ್ಕರ, ದುಡ್ಡು ಮಾಡೋ ಸಲುವಾಗಿ ಊರು ಬಿಟ್ಟು ಬೆಂಗಳೂರಿಗೆ ಬಂದಿದ್ದ. ಆದ್ರೆ, ಈತ ಹಿಡಿದ ದಾರಿ ಮಾತ್ರ ಮೋಸ ಮಾಡೋದು…

ಓಎಲ್ಎಕ್ಸ್‌ನಲ್ಲಿ ವಾಹನಗಳನ್ನ ಸೇಲ್ ಮಾಡುವವರನ್ನೇ ಟಾರ್ಗೆಟ್ ಮಾಡ್ತಿದ್ದ. ಅದರಲ್ಲೂ ರಾಯಲ್ ಎನ್ ಫೀಲ್ಡ್ ಬೈಕ್ ಸೇಲ್ ಮಾಡೋರನ್ನ ನೋಡಿ ಸಖತ್ ಏಮಾರಿಸುತ್ತಿದ್ದ. ಬೈಕ್ ಸೇಲ್ ಮಾಡೋರಿಗೆ ಕಾಲ್ ಮಾಡಿ ಡೀಲ್ ಫಿಕ್ಸ್ ಮಾಡ್ಕೊಂಡು, ನಂತರ ನಕಲಿ ಚೆಕ್ ಕೊಟ್ಟು, ಬೈಕ್‌ನ ಎಲ್ಲಾ ದಾಖಲೆಗಳಿಗೆ ಸೈನ್ ಮಾಡಿಕೊಂಡು ಅಲ್ಲಿಂದ ಎಸ್ಕೇಪ್ ಆಗ್ತಿದ್ದ…

ಬೈಕ್ ಮಾರಿದವರಿಗೆ ನಾವು ಮೋಸ ಹೋಗಿದ್ದೀವಿ ಎಂದು ಗೊತ್ತಾಗುತ್ತಿದ್ದದ್ದು, ಬ್ಯಾಂಕ್ ಸಿಬ್ಬಂದಿ ಅದು ನಕಲಿ ಚೆಕ್ ಅಂತಾ ಹೇಳಿದಾಗ ಮಾತ್ರ…ಇನ್ನು, ಈ ವಂಚಕ ಇದೇ ರೀತಿ ಮೂವರಿಗೆ ವಂಚಿಸಿದ್ದ. ಈ ಕುರಿತು ಮಾರತ್ತಹಳ್ಳಿ, ಮಡಿವಾಳ, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗಳಲ್ಲಿ ಕೇಸ್ ದಾಖಲಾಗಿತ್ತು…

ಇದೀಗ ವಿಲ್ಸನ್ ಗಾರ್ಡನ್ ಪೊಲೀಸರು ವಂಚಕನನ್ನ ಬಂಧಿಸಿ, 3 ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನ ವಶಪಡಿಸಿಕೊಂಡಿದ್ದಾರೆ.ಅದೇನೆ ಇರಲಿ, ದುಡ್ಡಿನ ಆಸೆಗೆಂದು ಅಮಾಯಕರನ್ನ ವಂಚಿಸುತ್ತಿದ್ದವನಿಗೆ ಇದೀಗ ಕೃಷ್ಣ ಜನ್ಮಸ್ಥಳದಲ್ಲಿ ಮುದ್ದೆ ಮುರಿಯುತ್ತಿದ್ದಾನೆ…

 

LEAVE A REPLY

Please enter your comment!
Please enter your name here