Home District ನಿಮ್ ವಾಹನದ ಸಂಖ್ಯೆ ನಂ. 6 ರಿಂದ ಎಂಡ್ ಆಗುತ್ತಾ..? ಹಂಗಾದ್ರೆ ಅಪ್ಪಿ ತಪ್ಪಿ...

ನಿಮ್ ವಾಹನದ ಸಂಖ್ಯೆ ನಂ. 6 ರಿಂದ ಎಂಡ್ ಆಗುತ್ತಾ..? ಹಂಗಾದ್ರೆ ಅಪ್ಪಿ ತಪ್ಪಿ ನೆಲಮಂಗಲದ ಕಡೆ ಹೋಗ್ಬಿಟ್ಟಿರಾ ಹುಷಾರ್..! ನೀವು ಸೇಫ್ ಆಗಿರ್ಬೇಕು ಅಂದ್ರೆ ನಿಮ್ ಗಾಡಿನ ಸೇಲ್ ಮಾಡ್ಬಿಡಿ..!

1833
0
SHARE

ಮೌಢ್ಯವೋ ಇಲ್ಲ ಜೀವಭಯವೋ.. ವಾಹನಗಳಲ್ಲಿರೋ ಸಂಖ್ಯೆ 6 ಅಂದ್ರೆ ಬೆಚ್ಚಿಬೀಳ್ತಾರೆ ಇಲ್ಲಿನ ಜನ.. ಅಯ್ಯೋ ನಿಮ್ ಗಾಡಿಯಲ್ಲಿ ನಂಬರ್ ಸಿಕ್ಸ್ ಇದೆಯಾ ಮೊದ್ಲು ಅದನ್ನ ಸೇಲ್ ಮಾಡಿ ಪ್ರಾಣ ಉಳಿಸ್ಕೊಳ್ಳಿ ಅಂತಾರೆ.ನೆಲಮಂಗಲ ಜನರ ಪಾಲಿಗೆ ಡೇಂಜರ್ ಅಂತೆ ಆರು- ಅಪಘಾತವಾಗಿರೋದ್ರಲ್ಲಿ ಸಿಕ್ಸ್ ನಂಬರ್ ಇರೋ ವಾಹನಗಳೇ ಹೆಚ್ಚು- ಜೀವಭಯಕ್ಕೆ ಹೆದರಿ ವೆಹಿಕಲ್ ಸೇಲ್.

ನಿಮ್ಮ ಹತ್ರ ಬೈಕ್ , ಕಾರು, ಲಾರಿ ಏನೇ ಇರ್ಲಿ ಅದ್ರ ಸಂಖ್ಯೆ ನಂಬರ್ ಆರರಿಂದ ಎಂಡ್ ಆಗುತ್ತಾ..? ಹಂಗಿದ್ರೆ ಅಪ್ಪಿ ತಪ್ಪಿ ನೆಲಮಂಗಲದ ಕಡೆ ಮಾತ್ರ ಹೋಗ್ಬೇಡಿ..ಆ ಕಡೆ ಹೋದ್ರೂ ನೀವು ಸೇಫ್ ಆಗಿರ್ಬೇಕು ಅಂದ್ರೆ, ನಿಮ್ ಗಾಡಿಯಲ್ಲಿ ಸಂಖ್ಯೆ 6 ಇದ್ರೆ ಅದನ್ನ ಸೇಲ್ ಮಾಡಿ ಬಿಡಿ.. ಅಯ್ಯೋ ಈಗಂತ ನಾವ್ ಹೇಳ್ತಿರೋದಲ್ಲ.. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಜನ..

ಕಾರು, ಬೈಕ್, ಲಾರಿ, ಅಟೋ, ಬಸ್ಸು ಹೀಗೆ ಸಂಚಾರಿ ಠಾಣೆ ಮುಂದೆ ಸಾಲು ಸಾಲು ಭೀಕರ ಅಪಘಾತವಾಗಿ ನುಜ್ಜುಗುಜ್ಜಾದ ವಾಹನಗಳು.. ಇದಕ್ಕೆ ಅಸಲಿ ಕಾರಣ ಏನಂತೀರಾ.. ಈ ವೇಹಿಕಲ್ ಗಳ ನಂಬರ್ ಪ್ಲೇಟ್‌ನಲ್ಲಿರೋ ಸಂಖ್ಯೆ ಸಿಕ್ಸ್ (6)..ಹೌದು, 22 ರಾಜ್ಯಗಳಿಗೆ ಸಂಪರ್ಕ ಕಲ್ಪಿಸೋ ಸಿಲಿಕಾನ್ ಸಿಟಿಯ ಹೆಬ್ಬಾಗಿಲು ನೆಲಮಂಗಲ ಮಾರ್ಗವಾಗಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 4 ಮತ್ತು 48 ರಲ್ಲಿ ಅಪಘಾತಗಳು ಸಂಭವಿಸುತ್ತಲೇ ಇವೆ..

ಈ ಬಗ್ಗೆ ನೂರಾರು ಪ್ರಕರಣಗಳು ದಾಖಲಾಗಿವೆ.. ಈ ಅಪಘಾತಗಳಿಗೆ ಅಸಲಿ ಕಾರಣ ವಾಹನಗಳಲ್ಲಿರೋ ಸಂಖ್ಯೆ 6 ಅಂತೆ.. ಇಲ್ಲಿನ ಸ್ಥಳೀಯರ ಪ್ರಕಾರ ನಂಬರ್ ಪ್ಲೇಟ್‌ನಲ್ಲಿ ಸಂಖ್ಯೆ ಆರು ಇದ್ರೆ ಅದರಲ್ಲೂ ಕೊನೆ ನಂಬರ್ 6 ಇದ್ರೆ ಆ ವಾಹನ ಸವಾರರು ಯಮಲೋಕ ಸೇರೋದು ಗ್ಯಾರಂಟಿ ಅಂತಾ ಆತಂಕ ವ್ಯಕ್ತಪಡಿಸ್ತಾರೆ.ನೆಲಮಂಗಲ ವ್ಯಾಪ್ತಿ ಪ್ರತಿಯೊಬ್ಬರು ಸಂಖ್ಯೆ 6 ಇರೋ ವಾಹನಗಳಂದ್ರೆನೆ ಬೆಚ್ಚಿಬೀಳ್ತಾರೆ..

ಈ ಬಗ್ಗೆ ಜ್ಯೋತಿಷ್ಯ ಕೇಳಿ 6 ರ ಸಂಖ್ಯೆಯಲ್ಲಿ ವಾಹನಗಳಿದ್ರೆ ಅವುಗಳನ್ನ ಸೇಲ್ ಕೂಡ ಮಾಡಿದ್ದಾರೆ.. ಸಂಖ್ಯೆ 6 ಇದ್ರೆ ಹೊಸ ವಾಹನಗಳೂ ಬೇಡ ಅಂತಾ ಬೆಚ್ಚಿಬೀಳ್ತಾರೆ.. ಬೈ ಚಾನ್ಸ್ ಗೊತ್ತಿಲ್ಲದವರು ಬಂದ್ರೆ ಫಸ್ಟ್ ಅವರ ವಾಹನದ ನಂಬರ್ ಪ್ಲೇಟ್ ಮೇಲೆ ಕಣ್ಣಾಡಿಸಿ ಎಚ್ಚರಿಕೆ ಕೂಡ ಕೊಡ್ತಾರೆ.ಮೌಡ್ಯವೋ ಇಲ್ಲ ಜೀವ ಭಯವೋ.. ಅಪಘಾತಗಳಿಂದ ವಾಹನಗಳಲ್ಲಿರೋ ಸಂಖ್ಯೆ 6ನ್ನ ಯಮನಂತೆ ನೋಡ್ತಾರೆ ಇಲ್ಲಿನ ಜನ..

LEAVE A REPLY

Please enter your comment!
Please enter your name here