Home Crime ನಿಯಂತ್ರಣ ಕಳೆದುಕೊಂಡು ನದಿಗೆ ಹಾರಿದ ಬೊಲೆರೋ..! ಪತಿ, ಮಕ್ಕಳ ರಕ್ಷಣೆ, ಸೀಟ್ ಬೆಲ್ಟ್‌ನಲ್ಲಿ ಸಿಲುಕಿದ್ದ ಮಹಿಳೆ...

ನಿಯಂತ್ರಣ ಕಳೆದುಕೊಂಡು ನದಿಗೆ ಹಾರಿದ ಬೊಲೆರೋ..! ಪತಿ, ಮಕ್ಕಳ ರಕ್ಷಣೆ, ಸೀಟ್ ಬೆಲ್ಟ್‌ನಲ್ಲಿ ಸಿಲುಕಿದ್ದ ಮಹಿಳೆ ಸಾವು..!

492
0
SHARE

ಅವರ ಕುಟುಂಬ ಸದಸ್ಯರು ಬೊಲೆರೋ ವಾಹನದಲ್ಲಿ ಮದುವೆಗೆ ಹೊರಟಿದ್ದರು. ಆದರೆ, ಮದುವೆಗೆ ಹೊರಟ ಕುಟುಂಬಕ್ಕೆ ಆಘಾತ ಕಾದಿತ್ತು. ಶಾಂಭವಿ ನದಿಯ ತಡೆಗೋಡೆಯಿಲ್ಲದ ಸೇತುವೆ ದಾಟುವಾಗ, ಬೊಲೆರೋ ವಾಹನ ನದಿಗೆ ಬಿದ್ದಿದೆ. ಹಿಂದಿನ ಸೀಟಲ್ಲಿ ಸೀಟ್ ಬೆಲ್ಟ್ ಹಾಕ್ಕೊಂಡಿದ್ದ ಮಹಿಳೆ ಮೃತಪಟ್ಟರೆ, ಆಕೆಯ ಪತಿ ಮತ್ತು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕಿನ್ನಿಗೋಳಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಆಘಾತಕಾರಿ ಘಟನೆ ನಡೆದಿತ್ತು. ಶಾಂಭವಿ ನದಿಯ ತೆರೆದ ಸೇತುವೆಯಲ್ಲಿ ಸಾಗುತ್ತಿದ್ದ ಬೊಲೆರೋ ವಾಹನ ನದಿಗೆ ಬಿದ್ದು, ನಾಲ್ವರು ನೀರಿನಲ್ಲಿ ಮುಳುಗಿದ್ದರು. ಕೂಡಲೇ ವಿಷಯ ತಿಳಿದ ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದಾರೆ. ವಾಹನದಲ್ಲಿದ್ದ ಮೂವರನ್ನು ರಕ್ಷಿಸಿದ್ರೆ, ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಕಾರ್ಕಳ ತಾಲೂಕಿನ ಬೋಳ ಗ್ರಾಮದ ಪದವು ನಿವಾಸಿ ಸ್ಟ್ಯಾನಿ ಮಸ್ಕರೇನಸ್, ಪತ್ನಿ ಡಯಾನಾ ಮತ್ತು ಮಕ್ಕಳಾದ ಶೆಲ್ಡನ್ ಮತ್ತು ಶರ್ಮನ್ ಜೊತೆಗೆ ಮಂಗಳೂರಿಗೆ ಮದುವೆ ಕಾರ್ಯಕ್ಕೆ ತೆರಳಿದ್ದರು. ಆದರೆ, ಬೊಲೆರೋ ವಾಹನದಲ್ಲಿ ಸಾಗುತ್ತಿದ್ದಾಗ ಕಿನ್ನಿಗೋಳಿಯ ಸಂಕಲಕರಿಯ ಎಂಬಲ್ಲಿ ತೆರೆದ ಸೇತುವೆಯಿಂದ ವಾಹನ ನದಿಗೆ ಬಿದ್ದಿದೆ.

ಕೂಡಲೇ ಸ್ಟ್ಯಾನಿ ಮಸ್ಕರೇನಸ್ ಮತ್ತು ಮುಂದಿನ ಸೀಟಲ್ಲಿದ್ದ ಇಬ್ಬರು ಮಕ್ಕಳು ವಾಹನದಿಂದ ಹೊರಬಂದಿದ್ದು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ, ಹಿಂಭಾಗದಲ್ಲಿ ಸೀಟಿನಲ್ಲಿ ಸೀಟ್ ಬೆಲ್ಟ್ ಹಾಕ್ಕೊಂಡಿದ್ದ ಮಹಿಳೆ ಡಯಾನಾ ನೀರಿನಲ್ಲಿ ಉಸಿರುಗಟ್ಟಿ ಸಾವು ಕಂಡಿದ್ದಾರೆ. ಬಳಿಕ ಸ್ಥಳೀಯರು ದೋಣಿ ಮೂಲಕ ತೆರಳಿ ಡಯಾನಾ ಶವ ಮೇಲಕ್ಕೆತ್ತಿದ್ದಾರೆ.

ಕಿನ್ನಿಗೋಳಿಯ ಸಂಕಲಕರಿಯದಲ್ಲಿ ಅತಿ ಹಳೆಯದಾದ ಸೇತುವೆ ಇದಾಗಿದ್ದು, ಬೊಲೆರೋ ಸೈಡ್ ಕೊಡುವ ಭರದಲ್ಲಿ ನದಿಗೆ ಉರುಳಿದೆ ಎನ್ನಲಾಗುತ್ತಿದೆ. ಈ ಹಿಂದೆಯೂ ಇಲ್ಲಿ ಅಪಘಾತಗಳಾಗಿದ್ದು, ಜಿಲ್ಲಾಡಳಿತ ಮಾತ್ರ ತಡೆಗೋಡೆ ನಿರ್ಮಿಸದೆ ನಿರ್ಲಕ್ಷ್ಯ ವಹಿಸಿದೆ ಅಂತಾ ಸ್ಥಳೀಯರು ದೂರಿದ್ದಾರೆ.

LEAVE A REPLY

Please enter your comment!
Please enter your name here