Home Crime ನಿರಾಶ್ರಿತರಿಗೆ ಸಚಿವ ರೇವಣ್ಣ ಬಿಸ್ಕೆಟ್ ಎಸೆದ ವಿಚಾರ | “ಉದ್ದೇಶ ಪೂರ್ವಕವಾಗಿ ಅವರು ಮಾಡಿಲ್ಲ, ಜನರ...

ನಿರಾಶ್ರಿತರಿಗೆ ಸಚಿವ ರೇವಣ್ಣ ಬಿಸ್ಕೆಟ್ ಎಸೆದ ವಿಚಾರ | “ಉದ್ದೇಶ ಪೂರ್ವಕವಾಗಿ ಅವರು ಮಾಡಿಲ್ಲ, ಜನರ ಮನಸ್ಸಿಗೆ ನೋವಾಗಿದ್ರೆ ಕ್ಷಮಿಸಿ” ತಂದೆಯನ್ನು ಸಮರ್ಥಿಸಿಕೊಂಡ ಪ್ರಜ್ವಲ್ ರೇವಣ್ಣ…

418
0
SHARE

ಈ ಬಗ್ಗೆ ಪ್ರತಿಕ್ರಿಯೆ ಕೊಡುತ್ತಿರುವ ನಾಯಕರು ಎಲ್ಲಿ ಪ್ರವಾಸ ಮಾಡುತ್ತಿದ್ದಾರೆ.ರೇವಣ್ಣವ್ರು ಕಳೆದ ನಾಲ್ಕು ದಿನದಿಂದ ಪ್ರವಾಸ ಮಾಡುತ್ತಿದ್ದಾರೆ.ಯಡಿಯೂರಪ್ಪ ನಿನ್ನೆ ಹೋಗಿ ಬಂದಿದ್ದಾರೆ. ನಿರಾಶ್ರಿತರಿಗೆ ಸಚಿವ ಎಚ್ ಡಿ ರೇವಣ್ಣ ಬಿಸ್ಕೆಟ್ ಎಸೆದ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪುತ್ರ ಪ್ರಜ್ವಲ್ ರೇವಣ್ಣ ಸಮರ್ಥಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಆ ಸ್ಥಳದಲ್ಲಿ ಯಾವ ರೀತಿ ಪರಿಸ್ಥಿತಿ ಇತ್ತು ಅನ್ನೊದು ನಮಗೆ ಗೊತ್ತಿದೆ. ಈ ಬಗ್ಗೆ ಮಾತನಾಡುವ ನಾಯಕರು ಎಲ್ಲಿ ಪ್ರವಾಸ ಮಾಡ್ತಿದ್ದಾರೆ? ನಮ್ಮ ಅಪ್ಪ ಕಳೆದ ನಾಲ್ಕು ದಿನಗಳದಿಂದ ಪ್ರವಾಸ ಮಾಡ್ತಿದ್ದಾರೆ.

ಒಳ್ಳೆ ಕೆಲ್ಸ ಮಾಡಬೇಕಾದ್ರೆ ಅದ್ರಲ್ಲಿ ಕೆಟ್ಟದನ್ನು ನೋಡೋದನ್ನು ಬಿಡಲಿ. ಬೇರೆ ಸ್ಥಳಕ್ಕೆ ಹೋಗಬೇಕು ಅನ್ನೋ ಗಾಬರಿಯಲ್ಲಿ ಬಿಸ್ಕೆಟ್ ಎಸೆದಿರಬಹುದು. ಜನತೆಗೆ ನೋವಾಗಿದ್ದರೆ ನಮ್ಮ ತಂದೆ ಪರವಾಗಿ ರಾಜ್ಯದ ಜನತೆಗೆ ಕ್ಷಮೆ ಕೋರುತ್ತೇನೆಂದು ಹೇಳಿದ್ದಾರೆ.

ಉದ್ದೇಶಪೂರ್ವಕವಾಗಿ ಆ ರೀತಿ ಬಿಸ್ಕೆಟ್ ಎಸೆದಿಲ್ಲ.ಆದರೂ ಜನರ ಮನಸ್ಸಿಗೆ ನೋವಾಗಿದ್ರೆ ನಾನು ನಮ್ಮ ತಂದೆ ಪರವಾಗಿ ಕ್ಷಮೆ ಕೇಳುತ್ತೇನೆ.

LEAVE A REPLY

Please enter your comment!
Please enter your name here