Home District ನಿರ್ಣಾಯಕ ಭದ್ರಾವತಿ ಕ್ಷೇತ್ರಕ್ಕೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಭೇಟಿ..! ಮೈತ್ರಿ ಮುಖಂಡರಲ್ಲಿ ಗರಿಗೆದರಿದ ಆಶಾವಾದ…!

ನಿರ್ಣಾಯಕ ಭದ್ರಾವತಿ ಕ್ಷೇತ್ರಕ್ಕೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಭೇಟಿ..! ಮೈತ್ರಿ ಮುಖಂಡರಲ್ಲಿ ಗರಿಗೆದರಿದ ಆಶಾವಾದ…!

2600
0
SHARE

ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಭದ್ರಾವತಿ ಕ್ಷೇತ್ರಕ್ಕೆ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ನ ಹಾಲಿ ಶಾಸಕ ಸಂಗಮೇಶ್ ಬಣದಲ್ಲಿರುವ ಗೊಂದಲ ನಿವಾರಣೆಗೆ ಮದ್ದು ನೀಡುವಲ್ಲಿ ಶಿವಕುಮಾರ್ ಸಫಲರಾಗುವರೇ ಎಂಬ ಕುತೂಹಲ ಕಾರ್ಯಕರ್ತರಲ್ಲಿ ಗರಿಗೆದರಿದೆ.

ಡಿಕೆಶಿ ಸಂಧಾನ ಯಶಸ್ವಿಯಾದಲ್ಲಿ. ಭದ್ರಾವತಿ ಕ್ಷೇತ್ರ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪರಿಗೆ ಫಲ ನೀಡುವುದೇ ಎಂಬ ಆಶಾವಾದ ಮುಖಂಡರಲ್ಲಿ ಚಿಗುರೊಡೆದಿದೆ.ಮೈತ್ರಿ ಅಭ್ಯರ್ಥಿ ಗೆಲುವಿಗೆ ಶಿವಮೊಗ್ಗ ಕ್ಷೇತ್ರದಲ್ಲಿ ಈಗಾಗಲೇ ರಣತಂತ್ರಗಳು ನಡೆದಿವೆ. ಗೆಲುವಿಗೆ ಸಹಕಾರಿಯಾಗುವ ಭದ್ರಾವತಿ ಕ್ಷೇತ್ರದ ಮೇಲೆ ಈಗ ಕಾಂಗ್ರೆಸ್ ಕಣ್ಣು ಹಾಕಿದೆ.

ಬಿಜೆಪಿ ಬೇಸ್ ಇಲ್ಲದ ಭದ್ರಾವತಿಯಲ್ಲಿ ಪ್ರತಿ ಭಾರಿಯೂ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತದಾರ ಮನ್ನಣೆ ನೀಡುತ್ತಾನೆ ಹಾಗಾಗಿ ಮೈತ್ರಿ ಪಕ್ಷದ ಮುಖಂಡರು ಈ ಬಗ್ಗೆ ರಣತಂತ್ರ ಹಣೆಯಲು ಟ್ರಬಲ್ ಶೂಟರ್ ಮೊರೆ ಹೋಗಿದ್ದಾರೆ.ಟ್ರಬಲ್ ಶೂಟರ್ ಡಿಕೆಶಿ ಭದ್ರಾವತಿಗೆ ಭೇಟಿ ನೀಡಿದ್ದಾರೆ.ಭದ್ರಾವತಿ ರಾಜಕಾರಣ ಪಕ್ಷ ರಾಜಕಾರಣಕ್ಕಿಂತ ವ್ಯಕ್ತಿ ರಾಜಕಾರಣಕ್ಕೆ ಮಹತ್ವ ಇರುವ ಕ್ಷೇತ್ರ. ಇಲ್ಲಿ ಹಾಲಿ ಶಾಸಕ ಬಿ.ಕೆ.ಸಂಗಮೇಶ್, ಮಾಜಿ ಶಾಸಕ ಅಪ್ಪಾಜಿಗೌಡ ನಡುವೆಯೇ ಕೇಂದ್ರಕೃತವಾಗಿದೆ.

ಆದ್ರೆ ಪ್ರತಿ ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ರೂಪದಲ್ಲಿ ಬಿಜೆಪಿ ಓಟ್ ಬ್ಯಾಂಕ್ ಗಿಟ್ಟಿಸಿಕೊಂಡು ಬಂದಿದೆ. ಇದಕ್ಕೆ ಕಾರಣ. ಈ ಇಬ್ಬರು ನಾಯಕರುಗಳ ಇಬ್ಬಂಗಿ ನೀತಿ ಎಂಬುದು ನಿರ್ವಿವಾದ. ಹೀಗಾಗಿ ಕಾಂಗ್ರೆಸ್ ಬಣದಲ್ಲಿರೋ ಗೊಂದಲ ಬಗೆ ಹರಿಸಲು ಡಿಕೆಶಿ ಕ್ಷೇತ್ರಕ್ಕೆ ಭೇಟಿ ನೀಡಿ ಒಗ್ಗಟ್ಟಿನ ಮಂತ್ರ ಘೋಷಣೆ ಮಾಡಿದ್ದಾರೆ.ಕಳೆದ ಲೋಕಸಭೆ ಚುಪಚುನಾವಣೆಯಲ್ಲಿ ಬಳ್ಳಾರಿ ಉಸ್ತುವಾರಿ ವಹಿಸಿಕೊಂಡಿದ್ದ ಶಿವಕುಮಾರ್ ಮಧು ಬಂಗಾರಪ್ಪ ಕರೆದರೂ. ಕಾರ್ಯದೊತ್ತಡದಿಂದ ಬರಲು ಸಾಧ್ಯವಾಗಲಿಲ್ಲ.

ಹೀಗಾಗಿ ಕಾಂಗ್ರೇಸ್ ಜೆಡಿಎಸ್ ತಳಮಟ್ಟದಲ್ಲಿ ಸಂಘಟನೆಯಾಗಲಿಲ್ಲ. ಪಕ್ಷದ ಮುಖಂಡರ ಭಿನ್ನಾಭಿಪ್ರಾಯ ಕೂಡ ಶಮನವಾಗಿರಲಿಲ್ಲ. ಈಗ ಡಿಕೆಶಿ ಖುದ್ದಾಗಿ ಶಿವಮೊಗ್ಗ ಕ್ಷೇತ್ರದ ಬಗ್ಗೆ ಆಸಕ್ತಿ ವಹಿಸಿದ್ದು ಮೈತ್ರಿಗೆ ಪ್ಲಸ್ ಆಗುತ್ತೆ ಎನ್ನಲಾಗಿದೆ. ಒಟ್ಟಾರೆ ಬಿಜೆಪಿ ಗೆಲುವಿನ ಓಟಕ್ಕೆ ದೋಸ್ತಿ ಪಡೆಗಳು ಬೇಕ್ ಹಾಕಲು ಮುಂದಾಗಿದ್ದು ಎಷ್ಟರ ಮಟ್ಟಿಗೆ ಯಶಕಾಣುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here