Home KARNATAKA ನಿರ್ಭಯಾ ಅತ್ಯಾಚಾರಿಗಳನ್ನು ನೇಣಿಗೇರಿಸಿದ ಹ್ಯಾಂಗ್ ಮ್ಯಾನ್ ಪವನ್ ಗೆ ಒಂದು ಲಕ್ಷ ನೀಡಿದ ನಟ ಜಗ್ಗೇಶ್..

ನಿರ್ಭಯಾ ಅತ್ಯಾಚಾರಿಗಳನ್ನು ನೇಣಿಗೇರಿಸಿದ ಹ್ಯಾಂಗ್ ಮ್ಯಾನ್ ಪವನ್ ಗೆ ಒಂದು ಲಕ್ಷ ನೀಡಿದ ನಟ ಜಗ್ಗೇಶ್..

708
0
SHARE

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಇಂದು ಬೆಳಗ್ಗೆ 5:30 ದೆಹಲಿಯ ತಿಹಾರ್ ಜೈಲಿನಲ್ಲಿ ನೇಣಿಗೇರಿಸಲಾಯಿತು.ಈ ನಾಲ್ಕೂ ಅಪರಾಧಿಗಳಿಗೆ ನೇಣಿನ ಕುಣಿಕೆಯನ್ನು ತೊಡಿಸಿದ ಪವನ್ ಗೆ ಕನ್ನಡದ ಖ್ಯಾತ ಚಿತ್ರ ನಟ ಜಗ್ಗೇಶ್ ಒಂದು ಲಕ್ಷ ದೇಣಿಗೆಯನ್ನು ನೀಡಿದ್ದಾರೆ.ನಿರ್ಭಯಾ ಸಾಮೂಹಿಕ ಅತ್ಯಾಚಾರಿಗಳಿಗೆ ಸುಪ್ರೀಂಕೋರ್ಟ್ ನೇಣಿನ ಕುಣಿಕೆಯನ್ನು ಬಿಗಿಗೊಳಿಸಿದೆ.ಅವರಿಗೆ ನೇಣು ಬಿಗಿಯುವ ಹ್ಯಾಂಗಮ್ಯಾನ್ ಗೆ ತಾನು ಒಂದು ಲಕ್ಷ ದೇಣಿಗೆಯನ್ನು ನೀಡುವುದಾಗಿ ಈ ಹಿಂದೆಯೇ ಜಗ್ಗೇಶ್ ಘೋಷಿಸಿದ್ದರು .ಅದರಂತೆ ಇಂದು ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ  ಅಪರಾಧಿಗಳನ್ನು ಏರಿಸಿದ ಪವನ್ಗೆ ಒಂದು ಲಕ್ಷ ದೇಣಿಗೆ ನೀಡಿದ್ದಾರೆ.

ಜಗ್ಗೇಶ್ ಒಂದು ಲಕ್ಷ ದೇಣಿಗೆಯನ್ನು ನೀಡಿದ್ದರಿಂದ ಸಂತೋಷ ಕಂಡಿರುವ ಪವನ್ ಈ ಹಣದಲ್ಲಿ ತನ್ನ ಮಗಳ ಮದುವೆ ಮಾಡುವುದಾಗಿ ಸಂತೋಷ ವ್ಯಕ್ತಪಡಿಸಿದ್ದಾರೆ.ನಾಲ್ವರಿಗೆ ಗಲ್ಲು ಇದೇ ಮೊದಲು : ತಿಹಾರ್ ಜೈಲಿನಲ್ಲಿ ಹೀಗೆ ಏಳು ವರ್ಷಗಳ ಹಿಂದೆ ಭಯೋತ್ಪಾದಕ ಅಫ್ಜಲ್ ಗುರುವನ್ನು ಈ ಹಿಂದೆ ಗಲ್ಲಿಗೇರಿಸಲಾಗಿತ್ತು .ಅದಾದ ಬಳಿಕ ಇದೇ ಮೊದಲ ಬಾರಿಗೆ ನಾಲ್ವರು ಅಪರಾಧಿಗಳನ್ನು ಭಾರತದಲ್ಲಿ ಒಟ್ಟಿಗೆ ನೆರವೇರಿಸಲಾಗಿದ್ದು ಇದೇ ಮೊದಲು ಇದಕ್ಕಾಗಿ ತಿಹಾರ್ ಜೈಲು ಹೊಸ ಇತಿಹಾಸವನ್ನು ನಿರ್ಮಿಸಿದೆ.

ಅಂದು ದೆಹಲಿಯಲ್ಲಿ ಏನಾಗಿತ್ತು ?  2012 ಡಿ 16ರಂದು ದಿಲ್ಲಿಯಲ್ಲಿ ಚಲಿಸುವ ಬಸ್ ನಲ್ಲಿ 23ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಮೇಲೆ ಆರು ಮಂದಿ ಅತ್ಯಾಚಾರ ಎಸಗಿದ್ದರು. ಜೀವನ್ಮರಣದ ಹೋರಾಟ ನಡೆಸಿ ಡಿಸೆಂಬರ್ 23 ರಂದು ಸಿಂಗಾಪುರ ಆಸ್ಪತ್ರೆಯಲ್ಲಿ ಸಂತ್ರಸ್ತೆ ಮೃತ ಪಟ್ಟಿದ್ದರು .ಆರು ಆರೋಪ ಆರು ಅಪರಾಧಿಗಳ ಪೈಕಿ ಒಬ್ಬ ಬಾಲಾಪರಾಧಿಗೆ ಶಿಕ್ಷೆ ಪೂರ್ಣಗೊಂಡಿದೆ. ಮತ್ತೊಬ್ಬ ಅಪರಾಧಿ ರಾಮ್ ಸಿಂಗ್ ತಿಹಾರ್ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎಂದು ಬೆಳಗ್ಗೆ ಉಳಿದ ನಾಲ್ಕು ಅಪರಾಧಿಗಳಿಗೆ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೆ ಏರಿಸಲಾಯಿತು .ಅಪರಾಧಿಗಳಾದ ಅಕ್ಷಯ್ ಪವನ್ ಗುಪ್ತಾ ಮುಖೇಶ್ ಸಿಂಗ್ ವಿನಯ್ ಈ ನಾಲ್ವರನ್ನು ಆ್ಯಂಡ್ ಮಾಡಿದ ಆ್ಯಂಡ್ ಮಾನ್ ಪವನ್ ಗೆ ನಮ್ಮ ಖ್ಯಾತ ಚಲನಚಿತ್ರ ನಟ ಜಗ್ಗೇಶ್ ಒಂದು ಲಕ್ಷ ದೇಣಿಗೆ ನೀಡಿರುವುದು ಇತರರಿಗೆ ಮಾದರಿಯಾಗಿದೆ.

LEAVE A REPLY

Please enter your comment!
Please enter your name here