Home District ನಿಲ್ಲದ ಆಪರೇಷನ್ ಕಮಲ ಆಡಿಯೋ ಬಾಂಬ್ ಫೈಟಿಂಗ್..! ಕುಮಾರಸ್ವಾಮಿದ್ದು ಥರ್ಡ್ ಗ್ರೇಡ್ ಪಾಲಿಟಿಕ್ಸ್..! ಶಾಸಕನ ಪುತ್ರ...

ನಿಲ್ಲದ ಆಪರೇಷನ್ ಕಮಲ ಆಡಿಯೋ ಬಾಂಬ್ ಫೈಟಿಂಗ್..! ಕುಮಾರಸ್ವಾಮಿದ್ದು ಥರ್ಡ್ ಗ್ರೇಡ್ ಪಾಲಿಟಿಕ್ಸ್..! ಶಾಸಕನ ಪುತ್ರ ಭೇಟಿಯಾಗಿದ್ದು ಸತ್ಯ ಎಂದು BSY ತಪ್ಪೊಪ್ಪಿಗೆ..!

393
0
SHARE

ಆಪರೇಷನ್ ಕಮಲ ಆಡಿಯೋ ಬಾಂಬ್ ಜಟಾಪಟಿ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸ್ತಿಲ್ಲ. ವಿಪಕ್ಷನಾಯಕ ಯಡಿಯೂರಪ್ಪ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಕೆಂಡ ಕಾರಿದ್ದಾರೆ. ಕುಮಾರಸ್ವಾಮಿ ಥರ್ಡ್ ಗ್ರೇಡ್ ಪಾಲಿಟಿಕ್ಸ್ ಮಾಡುತಿದ್ದಾರೆ.

ಎಮ್ ಎಲ್ ಎ ಮಗನನ್ನು ಕಳಿಸಿಕೊಟ್ಟು ತಮಗೆ ಬೇಕಾದ ಹಾಗೆ ಮಾತನಾಡಿಸಿಕೊಂಡಿದ್ದಾರೆ. ಸಿ ಎಮ್ ಕುಮಾರಸ್ವಾಮಿ ಬೇಕಾದನ್ನು ಮಾತ್ರ ಬಳಕೆ ಮಾಡಿಕೊಂಡ್ರು. ನನ್ನ ಬಳಿ ಶರಣಗೌಡ ಬಂದಿದ್ದು ನಿಜ. ಆದ್ರೆ ಕುಮಾರಸ್ವಾಮಿ ಕುತಂತ್ರದಿಂದ ಅವರನ್ನು ಕಳಿಸಿದ್ದಾರೆ. ಸ್ವತಃ ಪ್ರಜ್ವಲ್ ರೇವಣ್ಣಾ ಅವರೇ ನಮ್ಮದು ಸೂಟ್ ಕೇಸ್ ಸಂಸ್ಕೃತಿ ಅಂತ ಹೇಳಿದ್ದಾರೆ.

ಸೂಟ್ ಕೇಸ್ ಇಲ್ಲದೇ ಯಾವುದೇ ಕೆಲಸ ಆಗಲ್ಲಾ ಎಂದು. ಈ ಬಗ್ಗೆ ನನ್ನ ಬಳಿಯೂ ದಾಖಲೆ ಇವೆ. ಸೋಮವಾರ ಅವರ ಬಂಡವಾಳ ಬಯಲು ಮಾಡುವೆ ನನ್ನ ಬಳಿಯೂ ಆಡಿಯೋ ಇದೆ ಎಂದು ಯಡಿಯೂರಪ್ಪ ಕಿಡಿಕಾರಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಶ್ರೀರಾಮುಲು ಕುಮಾರಸ್ವಾಮಿ ನಕಲಿ ಆಡಿಯೋ ಬಿಡುಗಡೆ ಮಾಡಿದ್ದಾರೆ.

ಬಿಎಸ್ವೈ ಗೆ ತಂತ್ರ, ಕುತಂತ್ರ ಇಲ್ಲ. ಅವರ ಕುರ್ಚಿಯ ಉಳಿವಿಗೆ ಆಡಿಯೋ ಹುನ್ನಾರ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆ.ಎಸ್.ಈಶ್ವರಪ್ಪ ಸಿ.ಎಂ. ಕುಮಾರಸ್ವಾಮಿ ಹಾಗು,

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ ಮೈತ್ರಿ ಸರ್ಕಾರ ಬಿದ್ದು ಹೋಗುತ್ತೆ ಎಂಬ ಭಯದಿಂದ, ಮಾಡಬಾರದ ಆರೋಪಗಳನ್ನೆಲ್ಲಾ ಮಾಡುತ್ತಿದ್ದಾರೆ.ಅವರೇ ದಂದ್ವ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

LEAVE A REPLY

Please enter your comment!
Please enter your name here