Home Crime ನೀನೆ ನನ್ನ ಜೀವಾ, ಚಿನ್ನಾ, ರನ್ನ ಅಂತಾ ಹಿಂದೆ ಬಿದ್ದವನ ನಂಬಿದ್ದಕ್ಕೆ ಮದುವೆಯಾಗಿ ಕೈ ಕೊಟ್ಟ...

ನೀನೆ ನನ್ನ ಜೀವಾ, ಚಿನ್ನಾ, ರನ್ನ ಅಂತಾ ಹಿಂದೆ ಬಿದ್ದವನ ನಂಬಿದ್ದಕ್ಕೆ ಮದುವೆಯಾಗಿ ಕೈ ಕೊಟ್ಟ ಪ್ರಿಯತಮಾ..! ಅವನಿಗಾಗಿ ಯುವತಿ ಧರಣೆ..!

715
0
SHARE

ಈತ ನೀನೆ ನನ್ನ ಜೀವಾ ಕಣೆ, ನಾನು ಸಾಯೋವರೆಗೂ ನಿನ್ನನ್ನ ಚನ್ನಾಗಿ ನೋಡ್ಕೋತಿನಿ ಅಂತ ಗುಟ್ಟಾಗಿ ತಾಳಿ ಕಟ್ಟಿದ್ದ. ಚಿನ್ನಾ, ರನ್ನ ಅಂತೆಲ್ಲ ಹೇಳಿ ಕಾಲೇಜು ದಿನಗಳಲ್ಲಿ ಕೈ ಕೈ ಹಿಡಿದು ಪಾರ್ಕ್, ಸಿನಿಮಾ ಅಂತೆಲ್ಲ ಸುತ್ತಾಡಿದ್ದ.

ಆದ್ರೆ ಪ್ರಿಯತಮನನ್ನ ನಂಬಿದ ಯುವತಿ ಈಗ ಮೋಸ ಹೋಗಿದ್ದಾಳೆ. ನ್ಯಾಯಕ್ಕಾಗಿ ಪ್ರಿಯತಮನ ಮನೆ ಮುಂದೆ ಹೋರಾಟ ನಡೆಸಿದ್ದಾಳೆ.ಪ್ರೀತಿಯ ಬಲೆಗೆ ಬಿದ್ದು ಮೋಸ ಹೋದ ಯುವತಿಯ ಗೋಳಿದು. ಧಾರವಾಡದ ಈ ಜೋಡಿ ಕಾಲೇಜಿನ ದಿನಗಳಲ್ಲಿ ಪ್ರೀತಿಯ ಗುಂಗಿಗೆ ಬಿದ್ದು ಮದುವೆಯಾಗಿದ್ದಾರೆ.

ಬಳಿಕ ಯುವಕ ಚಿನ್ನ, ರನ್ನ ಅನ್ನುತ್ತಿದ್ದ ಪ್ರಿಯತಮೆಗೆ ಕೈ ಕೊಟ್ಟು ಪರಾರಿಯಾಗಿ ಮತ್ತೊಂದು ಮದುವೆಗೆ ಸಿದ್ಧನಾಗಿದ್ದಾನೆ.ಧಾರವಾಡದ ಕಲ್ಯಾಣನಗರದ ಅಭಿಷೇಕ್ ಹಾಗೂ ಯುವತಿ ಗೀತಾ ಹಳೆಮನಿ ಕಾಲೇಜು ಲವರ್ಸ್. ಗೀತಾಳನ್ನ ಕಾಡಿ ಬೇಡಿ ಲವ್ ಪ್ರಪೋಸ್ ಮಾಡಿ ಸುತ್ತಾಡಿಸಿದ್ದಾನೆ. ಬಳಿಕ ಯಾರಿಗೂ ತಿಳಿಯದ ಹಾಗೆ ಮದುವೆಯಾಗಿ ಸಂಸಾರವನ್ನು ನಡೆಸಿದ್ದಾನೆ.

ಆದ್ರೆ ಈಗ ಯುವಕ ನೀನು ಯಾರು ಅನ್ನೋದೆ ಗೊತ್ತಿಲ್ಲ, ನನಗೂ ನಿನಗೂ ಏನು ಸಂಬಂಧ ಅತ ಯುವತಿಗೆ ಪ್ರಶ್ನೆ ಮಾಡಿ ಕೈ ಕೊಟ್ಟಿದ್ದಾನೆ.ಇದೀಗ ಯುವತಿ ನ್ಯಾಯಕ್ಕಾಗಿ ಯುವಕನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ.2 ವರ್ಷಗಳ ಕಾಲ ಹಾಲು ಜೇನಿನಂತಿದ್ದ ಪ್ರೇಮ ಪಕ್ಷಿಗಳ ಬಾಳಲ್ಲಿ ಈಗ ಬಿರುಕು ಮೂಡಿದೆ.

ಪ್ರೀತಿಯ ಕಡಲಲ್ಲಿ ತೇಲುತ್ತಿದ್ದ ಯುವತಿ ಬದುಕು ನಡು ಬೀದಿಗೆ ಬಂದು ನಿಂತಿದೆ. ಯುವತಿಗೆ ಮುಂದಿನ ಜೀವನ ಹೇಗೆ ಎಂಬುದು ತಿಳಿಯದಾಗಿದೆ. ಪ್ರಿಯಕರ ಅಭಿಷೇಕ್ ಪಾಟೀಲ್ ನಿವಾಸದ ಮುಂದೆ ಧರಣಿ ಕುಳಿತು ನ್ಯಾಯಕ್ಕಾಗಿ ಕಣ್ಣೀರಿಡುತ್ತಿದ್ದಾಳೆ. ಈಕೆಯ ಹೋರಾಟಕ್ಕೆ ಸಂಘಟನೆಯೊಂದು ಆಸರೆಯಾಗಿದೆ.

ಸಂಘಟನೆ ಮುಖಂಡರು ಯುವತಿಗೆ ನ್ಯಾಯ ನೀಡಿ ಎಂದು ಅಭಿಷೇಕ್ ಪೋಷಕರಲ್ಲಿ ಮನವಿ ಮಾಡಿದೆ. ಇತ್ತ ಮತ್ತೊಂದು ಮದುವೆಗೆ ಸಿದ್ಧನಾಗಿರೋ ಅಭಿಷೇಕ್ ವಿರುದ್ಧ ದೂರು ದಾಖಲಾಗಿದೆ.ಕಾಲೇಜು ಜೀವನದಲ್ಲಿ ಪ್ರೀತಿ, ಪ್ರೇಮ, ಪ್ರಣಯಕ್ಕೆ ಬಿದ್ದ ಯುವತಿಯ ಜೀವನ ಹಾಳಗಿದೆ. ಪ್ರೀತಿ ಮಾಡುತ್ತಿದ್ದಾಗ ರನ್ನ.

ಚಿನ್ನಾ ಅನ್ನುತ್ತಿದ್ದವನು ಕೈಕೊಟ್ಟಿದ್ದಾನೆ. ಎರಡು ಮಗ್ಧ ಹೃದಯಗಳ ಭಾವನೆಗಳು ಚೂರು ಚೂರಾಗಿವೆ. ಯುವತಿ ಮಾತ್ರ ನನಗೆ ನನ್ನ ಪ್ರಿಯತಮನೆ ಬೇಕು. ಅವನಿಲ್ಲದೆ ಜೀವನವಿಲ್ಲ ಎಂದು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದಾಳೆ. ಈಗ ಯುವಕನ ಪೋಷಕರೆ ಯುವತಿಗೆ ನ್ಯಾಯ ನೀಡಬೇಕಾಗಿದೆ.

LEAVE A REPLY

Please enter your comment!
Please enter your name here