ಗೋಲಗೇರಿ ಗ್ರಾಮದಲ್ಲಿ ನೀರಾವರಿ ಯೋಜನೆಯನ್ನ ಜಾರಿಗೆ ತಂದು ಅಲ್ಲಿನ ರೈತರ ಬವಣೆಯನ್ನ ನೀಗಿಸಿದ್ದಕ್ಕೆ ಪಕ್ಷಾತೀತವಾಗಿ ಗೌಡರಿಗೆ ಕಂಚಿನ ಪುತ್ಥಳಿಯನ್ನ ನಿರ್ಮಾಣ ಮಾಡಿ ರೈತರು ಅಭಿನಂದನೆ ಸಲ್ಲಿಸಿದ್ರು. ಆದ್ರೆ ಈಗ ದ್ವೇಷದ ರಾಜಕಾರಣಕ್ಕೋ ಅಥವಾ ಕಿಡಿಗೇಡಿಗಳ ಕೃತ್ಯಕ್ಕೋ ಸಿಂದಗಿಯ ಗೋಲಗೇರಿಯಲ್ಲಿ ಪುತ್ಥಳಿಗೆ ಬೆಂಕಿ ಹಚ್ಚಿ ವಿಕೃತಿ ಮೆರೆಯಲಾಗಿದೆ.
ವಿಜಯಪುರ ಜಿಲ್ಲೆಯ ಗೋಳಗೇರಿಯ ರೈತರಿಗೆ ದೇವೇಗೌಡರು ನೀರಾವರಿ ಯೋಜನೆ ಜಾರಿ ಮಾಡಿದ್ರು. ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಸಚಿವ ಎಂ.ಸಿ.ಮನಗೂಳಿ ಒತ್ತಡಕ್ಕೆ ಮಣಿದು ಗುತ್ತಿ ಬಸವಣ್ಣ ನೀರಾವರಿ ಯೋಜನೆಗೆ ಚಾಲನೆ ನೀಡಿದ್ರು. ಅಂದು ಪಕ್ಷತೀತವಾಗಿ ಸಿಂದಗಿ ತಾಲೂಕಿನ ರೈತ ಬಾಂಧವರು ದೇವೇಗೌಡರು ಹಾಗೂ ಎಂಸಿ ಮನಗೊಳಿಯವರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ತೀರ್ಮಾನಿಸಿದ್ರು.
ಅದರಂತೆ ಫೆಬ್ರವರಿ 14, 2014ರಲ್ಲಿ ಗೋಲಗೇರಿಯಲ್ಲಿ ಪ್ರತಿಮೆ ನಿರ್ಮಾಣ ಮಾಡಿ ಕುಮಾರಸ್ವಾಮಿ ಹಾಗೂ ದೇವೇಗೌಡರಿಂದ ಉದ್ಘಾಟನೆಗೊಂಡಿತ್ತು. ಆದ್ರೆ ಇಂದು ಕಿಡಿಗೇಡಿಗಳು ಪ್ರತಿಮೆಗೆ ಬೆಂಕಿ ಹಚ್ಚಿದ್ದು ಇದು ದೇವೇಗೌಡರು ಹಾಗೂ ಮನಗೊಳಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.ಪುತ್ಥಳಿಗೆ ಬೆಂಕಿ ಹಚ್ಚಿ ಹಾನಿ ಮಾಡಿದ ವಿಷಯ ತಿಳಿಯುತ್ತಿದ್ದಂತೆ ನೂರಾರು ಅಭಿಮಾನಿಗಳು ಗೋಲಗೇರಿಯ ಘಟನೆ ನಡೆದ ಸ್ಥಳದಲ್ಲಿ ಜಮಾಯಿಸಿದ್ರು.
ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ರು. ಸಿಂದಗಿಯ ಅಲಮೇಲ ಪಟ್ಟಣದಲ್ಲಿ ದೇವೇಗೌಡರು ಹಾಗೂ ಸಚಿವ ಮನಗೂಳಿ ಅಭಿಮಾನಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ರು. ದುಷ್ಕರ್ಮಿಗಳನ್ನ ಬಂಧಿಸುವಂತೆ ಆಗ್ರಹಿಸಿದ್ರು. ಒಟ್ಟಾರೆ ನೀರಾವರಿ ಹರಿಕಾರರ ಪುತ್ಥಳಿಗಳಿಗೆ ಬೆಂಕಿ ಹಚ್ಚಿರುವ ಪ್ರಕರಣ . ಜೆಡಿಎಸ್ ವರಿಷ್ಠ ದೇವೇಗೌಡರು ಹಾಗೂ ಸಚಿವ ಮನಗೂಳಿ ಯವರ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕಲಕೇರಿ ಪೋಲಿಸರು ರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.