Home District ನೀರಿಗಾಗಿ CM HDKಗೆ ಹಾಡಿನ ಮೂಲಕ ಮನವಿ…ಕೆರೆಗೆ ನೀರು ಹರಿಸುವಂತೆ ಮನಮುಟ್ಟುವ ರೀತಿ ಮನವಿ ಮಾಡಿದ...

ನೀರಿಗಾಗಿ CM HDKಗೆ ಹಾಡಿನ ಮೂಲಕ ಮನವಿ…ಕೆರೆಗೆ ನೀರು ಹರಿಸುವಂತೆ ಮನಮುಟ್ಟುವ ರೀತಿ ಮನವಿ ಮಾಡಿದ ಯುವ ರೈತ…

277
0
SHARE

ತುಮಕೂರು‌ ಜಿಲ್ಲೆಯ ಜೀವನಾಡಿಯಾಗಿರೋ ಹೇಮೆಯನ್ನ ಧಕ್ಕಿಸಿಕೊಳ್ಳಲು ಕಲ್ಪತರು ನಾಡಿನ ರೈತರು ಇನ್ನಿಲ್ಲದ ಕಸರತ್ತು ಮಾಡುವಂತಾಗಿದೆ..ಸದಾ ಬರಡು ಭೂಮಿಯಾಗೇ ಉಳಿಯೋ ಶಿರಾ ತಾಲೂಕಿನ ಕೆರೆಗಳಲ್ಲಿ ಈ ಬಾರಿಯೂ ಹನಿ‌ ನೀರಿಲ್ಲದೇ ರೈತರು ಕೈಚೆಲ್ಲಿ ಕುಳಿತಿದ್ದಾರೆ…ಈ ಮಧ್ಯೆ ಇಲ್ಲೊಬ್ಬ ಯುವ ರೈತ ತನ್ನದೇ ಶೈಲಿಯಲ್ಲಿ ನಾಡದೊರೆಯ ಕಣ್ತೆರೆಸಲು ತಾನೇ ಸಾಹಿತ್ಯ ಬರೆದು ಹಾಡಿದ್ದಾನೆ..

ಈ ಮೂಲಕ ಶಿರಾ ಕೆರೆಗೆ ನೀರು ಹರಿಸಬೇಕೆಂದು ಸಿಎಂ ಕುಮಾರಸ್ವಾಮಿಯವರನ್ನ ಬೇಡಿಕೊಂಡಿದ್ದಾನೆ…ಕೈಯ ಮುಗಿಯುವೆನು ಅಣ್ಣಾ ಸಿಎಂ ಕುಮಾರಣ್ಣಾ… ಮದಲೂರು ಕೆರೆಗೆ ನೀರು ಹರಿಸಿರಣ್ಣಾ… ಇದು ಯಾವುದೋ ಸಿನಿಮಾಗಾಗಿ ಹಾಡಿದ ಹಾಡಲ್ಲ,… ನೀರಿಲ್ಲದೇ ಪರದಾಡುತ್ತಿರೋ ತುಮಕೂರಿನ ಯುವಕ ತಾನೇ ಸಾಹಿತ್ಯ ರಚಿಸಿ,ಸರ್ಕಾರದ ಕಣ್ಣು ತೆರೆಸಲು ಹಾಡಿರುವ ಹಾಡು…

ಇಲ್ನೋಡಿ ಎತ್ತ ನೋಡಿದರೂ ಬರಡು ಭೂಮಿ,, ಹನಿ‌ ನೀರಿಲ್ಲದೇ ಒಣಗಿದ ಕೆರೆ.. ಇದು ಈ ಬಾರಿಯೂ ಬರಪೀಡಿತ ಜಿಲ್ಲೆಯಾಗಿ ಘೋಷಸಲ್ಪಟ್ಟ ಕಲ್ಪತರು ನಾಡು ತುಮಕೂರು.. ಇಲ್ಲಿನ ಶಿರಾ ತಾಲ್ಲೂಕಿನ ಕೆರೆಗಳು ಪ್ರತಿ ಬಾರಿಯಂತೆ ಈ ಬಾರಿಯೂ ನೀರು ಕಾಣದಂತಾಗಿದೆ.. ಜಿಲ್ಲೆಯ ಜೀವನಾಡಿಯಾಗಿರೋ ಹೇಮಾವತಿ ನೀರು ಶಿರಾ ತಾಲೂಕಿನ ಮದಲೂರು ಕೆರೆಗೆ ಬರುತ್ತೇ ಅನ್ನೋ ಕನಸು ಮಾತ್ರ ಇನ್ನೂ ಕನಸಾಗಿಯೇ ಉಳಿದುಬಿಟ್ಟಿದೆ..

ಮದಲೂರು ಕೆರೆಗೆ ನೀರು ಹರಿಸಬೇಕೆನ್ನೋ ಹಂಬಲದಿಂದ ಇಲ್ಲೊಬ್ಬ ಯುವ ರೈತ ನಾಡದೊರೆಯ ಮನ ಮುಟ್ಟುವಂತೆ ತನ್ನದೇ ಶೈಲಿಯಲ್ಲಿ ಮನವಿ ಮಾಡಿಕೊಂಡಿದ್ದಾನೆ..ಇನ್ನು ಮದಲೂರು ಕೆರೆಗೆ ನೀರು ಹರಿಸುವಂತೆ ಹಲವಾರು ಹೋರಾಟಗಳು ನಡೆದಿದೆ.. ರಕ್ತದ ಮೂಲಕ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದು ಮನವಿಯನ್ನೂ ಮಾಡಲಾಗಿದೆ.. ಆದ್ರೂ ಮದಲೂರು ಕೆರೆಗೆ ಹನಿ ನೀರೂ ಹರಿದಿಲ್ಲ.

ಇದರಿಂದ ಬೇಸತ್ತ ಶಿರಾ ತಾಲೂಕಿನ ಪೂಜಾರ್ ಮುದ್ದನಹಳ್ಳಿ ಯುವ ರೈತ ಮಂಜುನಾಥ್ ಸಿ.ಅಶ್ವತ್ ಹಾಡಿರುವ ” ಒಳಿತು ಮಾಡು ಮನುಜ” ಎಂಬ ಹಾಡನ ಸಂಗೀತಕ್ಕೆ ತಾನೇ ಬೇರೆ ಸಾಹಿತ್ಯ ಬರೆದು ಹಾಡಿದ್ದಾರೆ. ಈ ಮೂಲಕ ಸಿಎಂ ಕುಮಾರಸ್ವಾಮಿಗೆ ನೀರು ಹರಿಸುವಂತೆ ಮನವಿ ಮಾಡಿದ್ದಾರೆ. ಸುಮಾರು ಐದು ನಿಮಿಷದ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಈ ಹಿಂದೆ ರಕ್ತದಲ್ಲಿ ಪತ್ರ ಬರೆದು ಕಳುಹಿಸಿದರೂ ಸಹ ಸರ್ಕಾರ ರೈತರತ್ತ ಮುಖ ಮಾಡಿರಲಿಲ್ಲ.‌.ಹಲವಾರು ವರ್ಷಗಳಿಂದ ನೀರು ಕಾಣದೇ ಬರಡಾಗಿರೋ ಮದಲೂರು ಕೆರೆಗೆ ನೀರು ಹರಿಸಿ ರೈತರ ಸ್ವಾವಲಂಬಿ ಬದುಕಿಗೆ ಆಶಾದಾಯಕವಾಗಬೇಕಿದೆ..ಈ ಹಾಡಿನ ಮೂಲಕವಾದರೂ ನಾಡದೊರೆ ಕುಮಾರಣ್ಣನ ಮನ ಕರಗಿ ಶಿರಾ ರೈತರಿಗೆ ಉಳಿತಾಗುತ್ತಾ ಕಾದುನೋಡ್ಬೇಕಿದೆ..

LEAVE A REPLY

Please enter your comment!
Please enter your name here