Home Cinema ’ನೀರ್‌ದೋಸೆ ಬೆಡಗಿ’ಯ ಕಂಕಣಭಾಗ್ಯದ ಕಥೆ ಕೇಳ್ರಿ..! ’ಸುಮನ್-ಸಜನ್’ ಲವ್ ಸ್ಟೋರಿ..!

’ನೀರ್‌ದೋಸೆ ಬೆಡಗಿ’ಯ ಕಂಕಣಭಾಗ್ಯದ ಕಥೆ ಕೇಳ್ರಿ..! ’ಸುಮನ್-ಸಜನ್’ ಲವ್ ಸ್ಟೋರಿ..!

1221
0
SHARE

ಸುಮನ್ ರಂಗನಾಥನ್ ತಮ್ಮ ಫ್ಯಾನ್ಸ್‌ಗಳಿಗೆ ಹೊಸ ಸರ್‌ಪ್ರೈಸ್ ಕೊಟ್ಟಿದ್ದಾರೆ. ಇಷ್ಟುದಿನ ತಮ್ಮ ಹಾಟ್ ಲುಕ್ ಹಾಗೂ ಆಯ್ಕೆ ಮಾಡಿಕೊಳ್ಳೊ ಸಿನಿಮಾಗಳ ಮೂಲಕ ಸೌಂಡ್ ಮಾಡ್ತಿದ್ದ ಸುಮನ್ ಈಗ ಸುದ್ಧಿಯಾಗಿರೋದೆ ಬೇರೆ ವಿಷಯಕ್ಕೆ. ಇಷ್ಟು ದಿನ ಪ್ರೀತಿ,ಪ್ರೇಮ,ಪ್ರಣಯಗಳಿಂದ ಸ್ವಲ್ಪ ದೂರವಿದ್ದ ಸುಮನ್ ಫೈನಾಲಿ ತಮ್ಮ ಹೃದಯವನ್ನ ಯಾರಿಗೋ ಅರ್ಪಿಸಿಬಿಟ್ಟಿದ್ದಾರೆ.

ಸೌಂದರ್ಯಕ್ಕೆ ವಯಸ್ಸು ಅಡ್ಡ ಬರಲ್ಲ ಅನ್ನೋಕೆ ನಮ್ಮ ಸ್ಯಾಂಡಲ್‌ವುಡ್‌ನಲ್ಲಿ ಸುಮನ್ ರಂಗನಾಥನ್‌ಗಿಂತ ಬೇರೆ ಫೈನ್ ಎಕ್ಸ್ಂಪಲ್ ಬೇಕಾ ಹೇಳಿ. ತನ್ನ ಮಾದಕ ನೋಟಗಳಿಂದಲೇ ಸಿನಿರಸಿಕರ ನಿದ್ರೆ ಕೆಡಿಸೋ ಸುಮನ್ ಈಗ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ನಂಬೋಕೆ ಸ್ವಲ್ಪ ಕಷ್ಟವಾದ್ರೂ ಇದು ನಿಜನೇ ಕಣ್ರೀ. ಇಷ್ಟುದಿನಗಳ ಕಾಲ ಸಿಂಗಲ್ ಆಗಿದ್ದ ಸುಮನ್‌ಗೆ ಈಗ ಸಜನ್ ಕೈ ಹಿಡಿದು ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಈ ಸಜನ್ ಚಿನ್ನಪ್ಪ ನಿಜಕ್ಕೂ ಯಾರಪ್ಪ ಎನ್ನುವ ಪ್ರಶ್ನೆಗೆ ಉತ್ತರ ನಾವ್ ಹೇಳ್ತೀವಿ ಕೇಳಿ. ಸಜನ್ ಒಬ್ಬ ಕೊಡಗು ಮೂಲದ ಬಿಜಿನೆಸ್‌ಮ್ಯಾನ್. ಕೊಡಗಿನಲ್ಲಿ ತಮ್ಮದೇ ಸ್ವತಂ ಕಾಫಿ ಎಸ್ಟೇಟ್ ಹೊಂದಿದ್ದಾರೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಪರಿಚಯವಾದ ಸುಮನ್‌ಗೆ ಸಜನ್ ಮೊದಲನೋಟದಲ್ಲೇ ಕ್ಲೀನ್‌ಬೋಲ್ಡ್ ಆಗಿದ್ದಾರೆ. ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಪ್ರೀತಿಗೆ ಯೂಟರ್ನ್ ಹೊಡೆದಿದೆ. ಆದರೆ ೮ ತಿಂಗಳ ಡೇಟಿಂಗ್ ಬಳಿಕವೇ ಇಬ್ಬರೂ ಮದುವೆಯಾಗುವ ನಿರ್ಧಾರಕ್ಕೆ ಬಂದ್ರಂತೆ. ಹಾಗಾಗೀ ಇದೇ ಜೂನ್.೩ನೇ ತಾರೀಖು ಕುಟುಂಬದವರ ಸಮ್ಮುಖದಲ್ಲಿ ಸಿಂಪಲ್ ಆಗಿ ಸಪ್ತಪದಿ ತುಳಿದಿದ್ದಾರೆ ಈ ಲವ್‌ಬಡ್ಸ್ ಸುಮನ್ ಆಂಡ್ ಸಜನ್.

ಆದರೆ ಈ ಬಗ್ಗೆ ಯಾರ ಬಳಿಯೂ ನಟಿ ಸುಮನ್ ಬಹಿರಂಗವಾಗಿ ಅನೌನ್ಸ್ ಮಾಡಿರಲಿಲ್ಲ. ಸರಳಮದುವೆಯಲ್ಲೇ ನಂಬಿಕೆಯಿಟ್ಟಿದ್ದ ಸುಮನ್ ಕುಟುಂಬ ಹಾಗೂ ಕೆಲವೇಕೆಲವು ಆತ್ಮೀಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ. ಸುಮನ್ ಹಾಗೂ ಸಜನ್ ರಿಜಿಸ್ಟ್ರಾರ್ ಮ್ಯಾರೇಜ್ ಆಗುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ. ಇಬ್ಬರೂ ಮನಸ್ಸು ಮಾಡಿದ್ರೆ ಆಡಂಬರವಾಗಿಯೇ ಮದುವೆಯಾಗಬಹುದಿತ್ತು. ಆದರೆ ಸರಳವಾಗಿ ಮದುವೆಯಾಗಿ ಮದುವೆಯ ವಿಷಯವನ್ನ ಸ್ವಲ್ಪ ಗೌಪ್ಯವಾಗಿಟ್ಟಿದ್ದಾರೆ.

ಸುಮನ್ ಒಬ್ಬ ಪ್ರತಿಭಾನ್ವಿತಾ ಬಹುಭಾಷಾ ನಟಿ. ಆದರೆ ಪಾತ್ರಗಳ ಸೆಲೆಕ್ಷನ್‌ನಲ್ಲೂ ವೆರಿವೆರಿ ಚ್ಯೂಸಿ. ತಮಗೆ ಇಷ್ಟವಾಗುವಂತಹ ಕ್ಯಾರೆಕ್ಟರ್ ಬಂದ್ರೆ ಮಾತ್ರ ಆಕ್ಟ್ ಮಾಡೋಕೆ ಓಕೆ ಅಂತಾರೆ ಈ ಡಬಲ್ ಇಂಜಿನ್ ಹುಡುಗಿ. ಕನ್ನಡದಲ್ಲಿ ಮಾತ್ರವಲ್ಲದೇ ಹಿಂದಿ, ತೆಲುಗು,ತಮಿಳು ಭಾಷೆಗಳಲ್ಲೂ ತಮ್ಮ ಟ್ಯಾಲೆಂಟ್ ಏನು ಅಂತ ತೋರಿಸಿದ್ದಾರೆ ಈ ಎಜ್‌ಲೆಸ್ ಬ್ಯೂಟಿ. ಇತ್ತೀಚೆಗೆ ಕನ್ನಡದಲ್ಲಿ ’ನೀರ್‌ದೋಸೆ, ಡಬಲ್‌ಎಂಜಿನ್ ಹಾಗೂ ಕವಲುದಾರಿ’ಯಂತಹ ಬೇರೆಬೇರೆ ಶೇಡ್‌ಗಳಿರೋ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಾಕೆ ಈ ಸುಮನ್ ರಂಗನಾಥ್.ಈಗ ಸಡನ್ನಾಗಿ ಸುಮನ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿರೋದು ಸ್ವಲ್ಪ ಶಾಕ್ ಕೊಟ್ರು ಖುಷಿಯ ವಿಚಾರವೇ ಬಿಡಿ. ಸುಮನ್‌ಗೆ ಇದು ಎರಡನೇ ಮದುವೆ.

ಈ ಹಿಂದೆ ಬಾಲಿವುಡ್ ನಿರ್ಮಾಪಕ ಬಂಟಿ ವಾಲಿಯರನ್ನ ಕೈ ಹಿಡಿದಿದ್ದ ಸುಮನ್ ಆಮೇಲೆ ೨೦೦೭ರಲ್ಲಿ ಅವರಿಂದ ಡಿರ್ವೋಸ್ ಪಡೆದುಕೊಂಡ್ರು. ನಂತರ ತುಂಬಾ ವರ್ಷಗಳ ಕಾಲ ಸಿಂಗಲ್ ಆಗಿದ್ದ ಸುಮನ್ ಈಗ ದಾಂಪತ್ಯ ಜೀವನಕ್ಕೆ ಎಂಟ್ರಿಕೊಟ್ಟಿರೋದು ಸುಮನ್ ಅಭಿಮಾನಿಗಳಿಗೆ ಸಹಜವಾಗಿಯೇ ಖುಷಿ ಕೊಟ್ಟಿದೆ. ಸದ್ಯಕ್ಕೆ ’ಲೇಡಿಸ್ ಟೈಲರ್’ ಹಾಗೂ ’ದಂಡುಪಾಳ್ಯ-೪’ ಚಿತ್ರಗಳಲ್ಲಿ ಸುಮನ್ ಬಿಜಿಯಾಗಿದಾರೆ. ಜೀವನದಲ್ಲಿ ಏನೇ ಏಳುಬೀಳುಗಳು ಎದುರಾದ್ರು ತಮ್ಮ ಬದುಕನ್ನ ಕಟ್ಟಿಕೊಳ್ಳೊಕೆ ಹೊಸ ಚಾನ್ಸ್ ಇದ್ದೇಇರುತ್ತೆ ಎನ್ನುವುದಕ್ಕೆ ಸುಮನ್ ಲೈಫ್ ಒಳ್ಳೆ ಉದಾಹರಣೆ. ಸುಮನ್-ಸಜನ್ ಈಗ ತಮ್ಮ ಹೊಸ ಜರ್ನಿಯನ್ನ ಶುರುಮಾಡಿದ್ದಾರೆ. ಈ ಪ್ರಣಯಪಕ್ಷಿಗಳ ಮುಂದಿನ ವೈವಾಹಿಕ ಜೀವನ ಯಾವಾಗಲೂ ಸುಖಕರವಾಗಿರಲಿ ಎನ್ನುವುದೇ ಎಲ್ಲರ ಆಶಯ.

LEAVE A REPLY

Please enter your comment!
Please enter your name here