Home District ನೂರರ ಗಡಿಯಲ್ಲಿದ್ದ ಪೆಟ್ರೋಲ್ ಈಗ 70ರ ಅಸುಪಾಸಿಗೆ..! 2019ಕ್ಕೆ ನಮೋರಿಂದ ರೈತರಿಗೆ ಸಿಗಲಿದೆ ನ್ಯೂ ಇಯರ್...

ನೂರರ ಗಡಿಯಲ್ಲಿದ್ದ ಪೆಟ್ರೋಲ್ ಈಗ 70ರ ಅಸುಪಾಸಿಗೆ..! 2019ಕ್ಕೆ ನಮೋರಿಂದ ರೈತರಿಗೆ ಸಿಗಲಿದೆ ನ್ಯೂ ಇಯರ್ ಗಿಪ್ಟ್..! “ಮೋದಿ ಕಣ್ಣು ಎಲೆಕ್ಷನ್ ಮ್ಯಾಲೆ”..!

1571
0
SHARE

ಎಲೆಕ್ಷನ್….. ಎಲೆಕ್ಷನ್ ….. 2019 ಎಲೆಕ್ಷನ್… ಸರ್ವ ಪಕ್ಷಗಳು  ನಿದ್ದೆಯಲ್ಲು ಸಹ ಕನವರಿಸುತ್ತಿರೋ ಏಕೈಕ ಪದ ಅಂದ್ರೆ ಅದು 2019ರ ಲೋಕಸಭಾ ಎಲೆಕ್ಷನ್… ಒಂದೊಂದು ಪಕ್ಷಗಳು ಒಂದೊಂದು ತಯಾರಿಯಲ್ಲಿವೆ, ಕಾಂಗ್ರೆಸ್ ಈ ಬಾರಿ ಗೆಲ್ಲಲೇ ಬೇಕು ಅಂತಾ ಮೋದಿ ವಿರೋಧಿಗಳನ್ನ ಒಂದು ಗೂಡಿಸುತ್ತಿದೆ, ಮುಂದಿನ ಬಾರಿ ನಮ್ಮದೆ ಗೆಲುವು ರಾಹುಲ್ ಗಾಂಧಿಯೇ ಪ್ರಧಾನಿ ಅನ್ನೋ ರೇಂಜ್ ನಲ್ಲಿ ಕೆಲಸ ಮಾಡುತ್ತಿದೆ. ಮತ್ತೊಂದು ಕಡೆ ರಾಹುಲ್ ಅನ್ನು ಒಪ್ಪದ, ಮೋದಿಯನ್ನು ಒಪ್ಪದ ಮತ್ತೊಂದು ಕೂಟ ಸಿದ್ಧವಾಗುತ್ತಿದೆ.. ತೃತೀಯ ರಂಗದಲ್ಲಿ ಚಂದ್ರಶೇಖರ್ ರಾವ್, ಮಮತಾ ಬ್ಯಾನರ್ಜಿ, ಅಖಿಲೇಶ್ ಈ ಬಾರಿ ನಮ್ಮದೆ ಸರ್ಕಾರ ಅಂತಾ ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಈ ಎಲ್ಲರು ಅವರದ್ದೇ ಸಿದ್ಧತೆಯಲ್ಲಿ ಇದ್ರೆ, ನರೇಂದ್ರ ಮೋದಿ ಮಾತ್ರ ಬೇರೆಯದ್ದೇ ತಂತ್ರ ಹೆಣೆದು ಅಖಾಡಕ್ಕೆ ರೆಡಿಯಾಗುತ್ತಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಕೇಸರಿ ಪಾಳೆಯ ಪುಲ್ ಆಕ್ಟಿವ್ ಆಗುತ್ತಿದೆ, ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಅನ್ನೋ ಘೋ,ಣೆಯೊಂದಿಗೆ ಅಖಾಡಕ್ಕೆ ಇಳಿದಿರೋ ಬಿಜೆಪಿ ಈ ಬಾರಿಯೂ ನಮ್ಮದೆ ಸರ್ಕಾರ ಅನ್ನೋ ಉತ್ಸಾಹದಲ್ಲಿ ಇದೆ. ಯಾರು ಏನೇ ತಂತ್ರ ಮಾಡಿದ್ರು ಗೆದ್ದೇ ಗೆಲ್ತೀವಿ ಅನೋ ಆತ್ಮವಿಶ್ವಾಸದಲ್ಲಿ ಇದೆ. ಮಾತ್ರವಲ್ಲ  ನರೇಂದ್ರ ಮೋದಿ ಅನ್ನೋ ಬಿಜೆಪಿಯ ದಂಡನಾಯಕ ಮತದಾರರನ್ನ ಸೆಳೆಯಲು ಹೊಸ ಹೊಸ ತಂತ್ರಗಳನ್ನ ಹೆಣೆಯುತ್ತಿದ್ದಾರೆ, ಅದ್ರಲ್ಲಿ ಈ ಬೆಲೆ ಏರಿಕೆಯೂ ಒಂದು.

ಕಳೆದ ಎರಡು ತಿಂಗಳ ಹಿಂದೆ ಅಷ್ಟೆ, ನರೇಂದ್ರ ಮೋದಿ ದೇಶವಾಸಿಗಳ ಕೆಂಗಣ್ಣಿಗೆ ಗುರಿಯಾಗಿದ್ರು. ಅದು ತೈಲ ಬೆಲೆ ಏರಿಕೆಯ ಕಾರಣದಿಂದ, ಅಂದಿನ ಮೋದಿಯ ಪರಿಸ್ಥಿತಿ ಹೇಗಿತ್ತು ಅಂದ್ರೆ 2019ಕ್ಕೆ ಮೋದಿಗೆ ತೈಲ ಬೆಲೆಯೇ ಪೆಡಂ ಬೂತವಾಗಿ ಕಾಡುತ್ತೆ ಎನ್ನಲಾಗುತ್ತಿತ್ತು. ದೇಶ ಗೆದ್ದ ಮೋದಿಗೆ ಪೆಟ್ರೋಲ್ ಮತ್ತು ಡೀಸೇಲ್ ರೇಟ್ ಇನ್ನಿಲ್ಲದಂತೆ ಕಾಟ ಕೊಟ್ಟಿತ್ತು, ಅಷ್ಟೆ ಅಲ್ಲ ವಿಪಕ್ಷ ಕಾಂಗ್ರೆಸ್ ಗೆ ಇದೇ ಪ್ರಬಲ ಅಸ್ತ್ರವಾಗಿ ಹೋಗಿತ್ತು, ದೇಶದಾದ್ಯಂತ ಬೀದಿಗಿಳಿದಿದ್ದ ಕಾಂಗ್ರೆಸ್ ಕಾರ್ಯಕರ್ತರು ಮೋದಿ ವಿರುದ್ಧ ಆಕ್ರೋಶ ಹೋರ ಹಾಕಿದ್ರು, ಪೆಟ್ರೋಲ್ ರೇಟ್ ಹಿಡಿದು ದೊಡ್ಡ ಮಟ್ಟದ ಹೋರಾಟಕ್ಕೆ ಕಾಂಗ್ರೆಸ್ ಸಿದ್ಧವಾಗಿತ್ತು, ಆದ್ರೆ ಸೀನ್ ಎಲ್ಲವು ಉಲ್ಟಾ ಆಗಿ ಹೋಗಿದೆ. ನೂರರ ಗಡಿ ಹತ್ತಿರ ಬಂದು ನಿಂತಿದ್ದ ಪೆಟ್ರೋಲ್ ರೇಟ್ ಸಧ್ಯದ ಮಟ್ಟಿಗೆ 70ರ ಆಸುಪಾಸಿಗೆ ಬಂದು ನಿಂತಿದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 70.39 ರೂಪಾಯಿ ಇದೆ. ಅಂತೆಯೇ ಡೀಸೆಲ್ ದರ 64.15 ರೂಪಾಯಿ ಗೆ ಇಳಿಕೆಯಾಗಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 69.86 ರೂಪಾಯಿ ಇದ್ರೆ, ಮತ್ತು ಡೀಸೆಲ್‌ ದರ 63.83 ರೂಪಾಯಿಗಳಾಗಿವೆ. ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಪೆಟ್ರೋಲ್‌ ದರ 75.45 ರೂಪಾಯಿ , ಡೀಸೆಲ್ ಬೆಲೆ 66.76 ರೂಪಾಯಿ ಆಗಿದೆ. ಕೋಲ್ಕತಾದಲ್ಲಿ ಇಂದಿನ ಪೆಟ್ರೋಲ್‌ ಬೆಲೆ 71.93 ರೂಪಾಯಿ ಮತ್ತು ಡೀಸೆಲ್ ಬೆಲೆ 65.56 ರೂಪಾಯಿ  ಚೆನ್ನೈನಲ್ಲಿ ಇಂದಿನ ಪೆಟ್ರೋಲ್‌ ಬೆಲೆ 72.45 ರೂಪಾಯಿ ಇದ್ರೆ, ಡೀಸೆಲ್‌ ಬೆಲೆ 67.35 ರೂಪಾಯಿ ಇದೆ..

ಸೋ ನೂರರ ಗಡಿ ಹತ್ತಿರವಿದ್ದ ಪೆಟ್ರೋಲ್ 70ರ ಆಸುಪಾಸಿನಲ್ಲಿ ಬಂದು ನಿಂತಿದೆ, ಅಲ್ಲಿಗೆ ನರೇಂದ್ರ ಮೋದಿಗೆ ತೈಲ ರೂಪದಲ್ಲಿ ಎದುರಾಗಿದ್ದ ಗಂಡಾಂತರವೊಂದು ಜೆಸ್ಟ್ ಪಾಸ್ ಆಗಿದೆ.ಅಂದ ಹಾಗೆ ಈ ಪೆಟ್ರೋಲ್ ರೇಟ್ ಇಳಿಸೋದಕ್ಕೆ ಕಾರಣ 2019 ಎಲೆಕ್ಷನ್ ಅನ್ನೋ ಮಾತು ಕೂಡ ಇದೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರೋ ತೈಲ ಬೆಲೆಯ ಏರು ಪೇರು ಮತ್ತು ಮುಂದೆ ಬರಲಿರೋ ಎಲೆಕ್ಷನ್ ಎಫೆಕ್ಟ್  ನಿಂದಲೇ ತೈಲ ಬೆಲೆ ಇಳಿದಿದೆ ಅನ್ನೋದಂತು ನೂರಕ್ಕೆ ನೂರರಷ್ಟು ಸತ್ಯ. ಸೋ ಅಲ್ಲಿಗೆ ನರೇಂದ್ರ ಮೋದಿ ಸೈಲೆಂಟ್ ಆಗಿಯೇ ಎಲೆಕ್ಷನ್ ಗೆ ಸಿದ್ಧವಾಗುತ್ತಿದ್ದಾರೆ, ಒಂದು ಕಡೆ ತಲೆ ಬೆಲೆ ಇಳಿಕೆ, ಮತ್ತೊಂದು ಅಗತ್ಯ ವಸ್ತುಗಳ ಬೆಲೆ ಇಳಿಕೆ. ಹೀಗೆ ದೇಶವಾಸಿಗಳ ಕಣ್ಣಲ್ಲಿ ಮತ್ತೊಮ್ಮೆ ಹೀರೋ ಆಗದಕ್ಕೆ ಹೊರಟಿದ್ದಾರೆ.

ರೈತರ ಅನುಕೂಲಕ್ಕೆಂದು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಫಸಲ್ ಭೀಮಾಯೋಜನೆ ಅನ್ನೋದು ಸ್ವಾತಂತ್ರ್ಯ ನಂತರದ ಸರಕಾರವೊಂದು ದೇಶದ ರೈತರಿಗೆ ಮಾಡಿರುವ ಅತಿ ದೊಡ್ಡ ವಂಚನೆ ಅನ್ನೋ ಆರೋಪ ಕೇಳಿಬಂದಿದೆ.. ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆ ಎಂದು ಹೇಳಿಕೊಳ್ಳುತ್ತಿರುವ ಕೇಂದ್ರ ಸರಕಾರ, ಕಾರ್ಪೋರೇಟ್ ಕಂಪನಿ ಹಿತ ಕಾಯುವ ಸಲುವಾಗಿ ರೈತರಿಗೆ ವಂಚನೆ ಮಾಡಿದೆ ಅಂತ ಹೇಳಲಾಗುತ್ತಿದೆ. ಕೇಂದ್ರದ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಫಸಲ್ ಬೀಮಾ ಯೋಜನೆ ಹೆಸರಿನಲ್ಲಿ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎನ್ನಲಾಗುತ್ತಿದ್ದು, ರೈತರಿಗೆ ಇದರಿಂದ ಅನಾನುಕೂಲವಾಗಿದೆ, ದುಪ್ಪಟ್ಟು ಲಾಭ ಆಗಲಿದೆ ಎಂದು ಹೇಳಿ ಪ್ರಧಾನಿ ಮೋದಿ ಜನರನ್ನ ವಂಚಿಸಿದ್ದಾರೆ ಅಂತ ಹೇಳಲಾಗುತ್ತಿದೆ…

ಹೌದು ಮೋದಿ ಸರ್ಕಾರದ ಅತಿ ದೊಡ್ಡ ಹಗರಣ ರಫೆಲ್‌ ಅಲ್ಲ, ಕೃಷಿ ಬೆಳೆ ವಿಮೆ ಎಂದು ಹೇಳಲಾಗುತ್ತಿದೆ.. ರಫೆಲ್‌ ಹಗರಣದಂತೆ ಇಲ್ಲೂ ಸಹ ಅನಿಲ್ ಅಂಬಾನಿ ಅವರಿಗೆ ಸಹಾಯ ಮಾಡುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ರೈತರಿಗೆ ಮೋಸ ಮಾಡಿದೆ ಅನ್ನೋ ಆರೋಪಗಳು ಬಲವಾಗಿ ಕೇಳಿ ಬಂದಿದ್ದವು..  ಅಲೋಕ್ ವಿರುದ್ಧದ ತನಿಖೆ ಪೂರ್ಣ : ಕ್ಷಮೆಯೊಂದಿಗೆ ವರದಿ ಸಲ್ಲಿಕೆ ಬೆಳೆ ವಿಮೆಗೆ ಅನಿಲ್ ಅಂಬಾನಿಯ ರಿಲಯನ್ಸ್‌ ಅನ್ನು ಸರ್ಕಾರ ಆಯ್ಕೆ ಮಾಡಿಕೊಂಡಿದೆ. ರೈತರು ಮತ್ತು ಸರ್ಕಾರ ಬೆಳೆ ವಿಮೆಗೆ ರಿಲಯನ್ಸ್ ಗೆ ಕಂತಿನ ಹಣ ಪಾವತಿ ಮಾಡುತ್ತದೆ. ಆದರೆ ಆ ಹಣ ರಿಲಯನ್ಸ್‌ನ ಪಾಲಾಗುತ್ತಿದೆ ಎನ್ನಲಾಗುತ್ತಿದೆ. ರಿಲಯನ್ಸ್‌ಗೆ ವಿಮೆಯ ಕಂತಾಗಿ ರೈತರು ಮತ್ತು ಸರ್ಕಾರ ಕಟ್ಟಿದ್ದು 173 ಕೋಟಿ. ಆದರೆ ಅದು ರೈತರಿಗೆ ನೀಡಿದ್ದು ಕೇವಲ 30 ಕೋಟಿ ರೂಪಾಯಿ ಎನ್ನಲಾಗಿದೆ..

ಇದು ಕೇವಲ ಮಹಾರಾಷ್ಟ್ರದ ಒಂದು ಜಿಲ್ಲೆಯ ಒಂದು ಬೆಳೆಯ ಕತೆಯಷ್ಟೆ. ಆದರೆ ದೇಶದ ಎಲ್ಲೆಡೆ ಇದೇ ನಿಯಮಗಳಿವೆ. ದೇಶದ ಎಲ್ಲೆಡೆ ರಿಲಯನ್ಸ್‌ ಕೇಂದ್ರದ ಬೆಂಬಲದೊಂದಿಗೆ ರೈತರ ಹಣ ಹೊಡೆಯುತ್ತಿದೆ. ರಿಲಯನ್ಸ್‌ಗೆ ಸಹಾಯಕ ಆಗಲೆಂದು ಕೇಂದ್ರವು ನಿಯಮ ಸಹ ರೂಪಿಸಿದ್ದು ರೈತನಿಗೆ ಸಾಲ ಸಿಗಬೇಕೆಂದರೆ ಬೆಳೆ ವಿಮೆ ಮಾಡಿಸಲೇ ಬೇಕಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಗೊಂದಲದ ಗೂಡಾಗಿರುವ ಸಿಬಿಐ ‘ಲಂಚ’ದ ಹಗರಣ : ಯಾರು ಭ್ರಷ್ಟರು? ಕೆಲವು ಜಿಲ್ಲೆಗಳಲ್ಲಿ ರೈತರಿಂದ ಭಾರಿ ಆಕ್ಷೇಪ ಆದರೆ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಈ ಬಗ್ಗೆ ರೈತರು ಭಾರಿ ಆಕ್ಷೇಪ ಎತ್ತಿದರು. ಆಗ ರಿಲಯನ್ಸ್‌ ಅನ್ನು ಅಲ್ಲಿಂದ ಹೊರಗಿಡಲಾಯಿತು. ಇದೆಲ್ಲವನ್ನ ಗಮನಿಸುತ್ತಲೇ ಇದ್ದ ರೈತರು ಪಂಚರಾಜ್ಯಗಳ ಚುನಾವಣೆಯಲ್ಲಿ ಮೋದಿ ಸರ್ಕಾರಕ್ಕೆ ಮಹಾ ಮಂಗಳಾರುತಿಯನ್ನೇ ಮಾಡಿ ಕಳುಹಿಸಿದ್ದರು..

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಭರ್ಜರಿ ಎಲೆಕ್ಷನ್ ಮೂಡ್ ನಲ್ಲಿರೋ ಪ್ರಧಾನಿ ಮೋದಿ ಪ್ರತಿಪಕ್ಷಗಳ ಬಾಯಿ ಮುಚ್ಚಿಸೋದಕ್ಕೋ, ರೈತರ ಬಳಿ ಕಳೆದುಕೊಂಡಿರೋ ವರ್ಚಸ್ಸನ್ನು ಮರಳಿ ಪಡೆಯುವುದಕ್ಕೋ, ಅಥವಾ ಪಂಚರಾಜ್ಯ ಚುನಾವಣೆಗಳಲ್ಲಿ ಜನ ನೀಡಿದ ತೀರ್ಪಿಗೆ ಎಚ್ಚೆತ್ತೋ, ಮೇಲಿಂದ ಮೇಲೆ ಜನ ಹಿತ, ರೈತಪರ ಯೋಜನೆಗಳನ್ನ ಜಾರಿಗೆ ತರೋದ್ರ ಮೂಲಕ ಮತ್ತೆ ಮುನ್ನಲೆಗೆ ಬರಲೆತ್ನಿಸುತ್ತಿದ್ದಾರೆ.. ಆ ಮೂತಕ ಶತೃಗಳಿಗೆ ಟಾಂಗ್ ನೀಡುತ್ತಿದ್ದಾರೆ…

ಅದೇನೇ ಇರಲಿ ಯಾವುದೇ ರಾಷ್ಟ್ರವಾಗಿರಲಿ, ಪಕ್ಷವಾಗಿರಲಿ, ಅಲ್ಲಿನ ರೈತರನ್ನು ಕಡೆಗಣಿಸಿ ಅಭಿವೃದ್ಧಿ ಹೊಂದಲಾರದೆಂಬುದು ಈ ಮೂಲಕ ಸಾಬೀತಾಗಿದೆ.. ಆದ್ರೆ ಇದು ಖಂಡಿತವಾಗಿಯೂ ಭಾರತವನ್ನು ಜಾಗತಿಕ ಮಟ್ಟದಲ್ಲಿ ಮುನ್ನಡೆಸುವುದಲ್ಲದೇ, ಜನಕಲ್ಯಾಣ ಮತ್ತು ಇತರ ಎಲ್ಲಾ ಅಂಶಗಳಲ್ಲಿ ರಾಷ್ಟ್ರವು ಹೊಸ ಮಾನದಂಡವನ್ನು ಪಡೆದುಕೊಳ್ಳಲು ಸಹಕರಿಸುತ್ತದೆ ಅನ್ನೋದ್ರಲ್ಲಿ ಯಾವ ಸಂದೇಹವೂ ಇಲ್ಲ ನೋಡಿ…

LEAVE A REPLY

Please enter your comment!
Please enter your name here