Home Cinema ನೂರ‍್ಕಾಲ ಬದುಕು ದರ್ಶನ್, ಹೀಗಂತ ಆಶಿರ್ವಾದ ಮಾಡಿದ್ದ್ಯಾರು..? ಯಾರಿಗೆಲ್ಲಾ ತಲುಪಿದೆ ಗೊತ್ತಾ ದರ್ಶನ್ ದಾಸೋಹದ ತೇರು..!

ನೂರ‍್ಕಾಲ ಬದುಕು ದರ್ಶನ್, ಹೀಗಂತ ಆಶಿರ್ವಾದ ಮಾಡಿದ್ದ್ಯಾರು..? ಯಾರಿಗೆಲ್ಲಾ ತಲುಪಿದೆ ಗೊತ್ತಾ ದರ್ಶನ್ ದಾಸೋಹದ ತೇರು..!

2137
0
SHARE

ಕೊಟ್ಟ ಮಾತನ್ನ ಸ್ಯಾಂಡಲ್‌ವುಡ್ ಸಾರಥಿ ಯಾವತ್ತು ತಪ್ಪೋ ಚಾನ್ಸೆ ಇಲ್ಲ ಅಂತ ಮತ್ತೊಮ್ಮೆ ಪ್ರೂವ್ ಆಗಿದೆ. ’ಬಲಗೈಯಲ್ಲಿ ಕೊಟ್ಟ ದಾನ ಎಡಗೈಗೆ ಗೊತ್ತಾಗ್‌ಬಾರದು’ ಅನ್ನೋ ಸ್ವೀಟ್ ಪಾಲಿಸಿಯನ್ನ ಹೊಂದಿರೋ ಚಕ್ರವರ್ತಿ ಈ ಕಾರಣಕೋಸ್ಕರನೇ ಎಲ್ಲರ ಹೃದಯಗಳಲ್ಲಿ ಜಾಗ ಸಂಪಾದಿಸಿರೋದು ಕಣ್ರೀ.

ದಾಸನ ಈ ದಾನ ಎಲ್ಲರ ಮನಸ್ಸುಗಳಲ್ಲಿ ಬೆರೆತುಹೋಗಿದೆ. ಇಷ್ಟೆಲ್ಲಾ ಸಮಾಜಸೇವೆಯ ಹರಿಕಾರ ಎನಿಸಿಕೊಂಡ್ರೂ ದರ್ಶನ್ ಮಾತ್ರ ಎಲ್ಲೂ ಈ ವಿಷಯದ ಬಗ್ಗೆ ತುಟಿಕ್‌ಪಿಟಿಕ್ ಎಂದಿಲ್ಲ. ತಾನು ಮಾಡಿದ ಸೊಷಿಯಲ್ ಸರ್ವಿಸ್‌ಅನ್ನ ಜನರ ಮುಂದೆ ತೋರಿಸಿಕೊಂಡು ಪಬ್ಲಿಸಿಟಿ ಗಿಟ್ಟಿಸಿಕೊಳ್ಳುವ ಖಯಾಲಿ ದಚ್ಚು ಡಿಕ್ಷನರಿಯಲ್ಲೇ ಇಲ್ಲ. ’ದಟ್ ಈಸ್ ದಿ ಲೈಫ್ ಆಫ್ ಚಾಲೆಂಜಿಂಗ್ ಸ್ಟಾರ್’.ಈ ಸಲ ದರ್ಶನ್ ಜೀವನದ ಸಾರ್ಥಕ ಹುಟ್ಟುಹಬ್ಬವನ್ನ ನೋಡಿ ಕಣ್ತುಂಬಿಕೊಳ್ಳುವ ಸದವಕಾಶ ಡಿಬಾಸ್ ಅಭಿಮಾನಿಗಳಿಗೆ ಪಾಲಿಗೆ ದಕ್ಕಿದ್ದು ಒಂದು ಅನ್‌ಫರ್‌ಗೆಟೆಬಲ್ ಮೂಮೆಂಟ್. ’ಅಡಂಬರದ ಬರ್ತ್‌ಡೇ ಬೇಡ್ರಪ್ಪ, ಕೇಕು,ಹಾರ,ತುರಾಯಿ ಅಂತ ದುಬಾರಿ ಖರ್ಚುಗಳನ್ನ ಬಿಟ್ಟು ಅಕ್ಕಿ,ದವಸಧಾನ್ಯಗಳನ್ನ ತನ್ನಿ’ ಎನ್ನುವ ದಚ್ಚು ಕರೆಗೆ ಫ್ಯಾನ್ಸ್ ತಲೆಬಾಗಿಬಿಟ್ರು.

ದರ್ಶನ್ ಮನವಿಯನ್ನ ತಮ್ಮ ತಲೆಯ ಮೇಲಿಟ್ಟು ಫಾಲೋ ಮಾಡಿದ ಅಭಿಮಾನಿ ದೇವರುಗಳು ದರ್ಶನ್ ಹುಟ್ಟುಹಬ್ಬದ ದಿನ ದವಸಧಾನ್ಯಗಳ ಸುರಿಮಳೆಯನ್ನೇ ಸುರಿಸಿಬಿಟ್ರು. ಒಂದು ಕೈಯಲ್ಲಿ ತಮ್ಮ ನೆಚ್ಚಿನ ದಾಸನಿಗೆ ಶೇಕ್ ಹ್ಯಾಂಡ್ ಮಾಡಿದ್ರೆ, ಇನ್ನೊಂದು ಕೈಯಲ್ಲಿ ತಮ್ಮ ಹೆಗಲ ಮೇಲಿದ್ದ ಮೂಟೆಯನ್ನ ಗಿಫ್ಟ್ ಆಗಿ ಕೊಟ್ಟಿದ್ದು ದರ್ಶನ್ ಹುಟ್ಟುಹಬ್ಬಕ್ಕೆ ಎಂದೂ ಕಾಣದ ಕಳೆ ಮೂಡಿಬಿಟ್ಟಿತ್ತು. ದರ್ಶನ್ ಈ ಮರೆಯಲಾಗದ ಗಿಫ್ಟ್‌ಗಳನ್ನ ಕಂಡು ಅಕ್ಷರಶಃ ಮೂಕವಿಸ್ಮಿತರಾಗಿಬಿಟ್ಟಿದ್ರು. ಆಗಲೇ ನೀವು ಕೊಟ್ಟ ಊಡುಗೊರೆಗಳು ಅವಶ್ಯಕತೆಯಿರುವ ಹೊಟ್ಟೆಗಳನ್ನ ತಲುಪುವಂತೆ ನಾನೇ ಖುದ್ದಾಗಿ ನೋಡಿಕೊಳ್ತೀನಿ ಅಂತ ಪ್ರಾಮೀಸ್ ಮಾಡಿದ್ರು.

’ನೀವು ಮಾಡ್ತಿರುವ ಸಹಾಯ ತುಂಬಾ ದೊಡ್ಡದಲ್ವಾ’ ಅಂತ ಕೇಳಿದ್ರೆ ದರ್ಶನ್ ಒಂದು ಸಣ್ಣ ಸ್ಮೈಲ್ ಕೊಟ್ಟು ಸುಮ್ಮನಾಗಿಬಿಟ್ಟಿದ್ರು. ಅಭಿಮಾನಿಗಳ ಪ್ರೀತಿಗೆ ಯಾವಾಗಲೂ ಚಿರಋಣಿಯಾಗಿರೋ ದರ್ಶನ್ ನದಿಯ ನೀರನ್ನು ನದಿಗೆ ಚೆಲ್ಲುವಂತೆ ಸೀಕ್ರೇಟ್ ಆಗಿ ತಮ್ಮ ಕೆಲಸ ಮಾಡಿಮುಗಿಸಿದ್ದಾರೆ. ಕೊಟ್ಟ ಮಾತನ್ನ ಶಿರಸಾವಹಿಸಿ ಪಾಲಿಸಿದ್ದಾರೆ. ಕರುನಾಡ ದಾಸನ ಈ ದಾನ ಎಲ್ಲೆಲ್ಲಿ ಹೋಗಿ ತಲುಪಿದೆ ಎನ್ನುವ ಪಿನ್ ಟು ಪಿನ್ ಮಾಹಿತಿ ಇಲ್ಲಿದೆ ನೋಡಿ..ದರ್ಶನ್ ಹುಟ್ಟುಹಬ್ಬಕ್ಕೆ ರಾಜ್ಯದ ಮೂಲೆಮೂಲೆಗಳಿಂದ ಅಕ್ಕಿ,ಬೇಳೆ,ಸಕ್ಕರೆ ಮೂಟೆಗಳು ಲಗ್ಗೆ ಇಟ್ಟವು. ಆ ಮೂಟೆಗಳನ್ನ ಒಂದೆಡೇ ಗೋಡೌನ್‌ನಲ್ಲಿ ಸಂಗ್ರಹಿಸಿದ ದಚ್ಚು ಬಳಗ ಈಗ ಅವುಗಳನ್ನ ಡಿಸ್ಟ್ರಿಬ್ಯೂಟ್ ಮಾಡೋದ್ರಲ್ಲಿ ಯಶಸ್ವಿಯಾಗಿದೆ.

ಬೆಂಗಳೂರು,ಬಾಗಲಕೋಟೆ,ಹಾವೇರಿ,ಹಾಸನ,ಬಳ್ಳಾರಿ ಸೇರಿದಂತೆ ಕರ್ನಾಟಕದ ಮೂವತ್ತೊಂದು ಜಾಗಗಳಿಗೆ ಈ ದವಸಧಾನ್ಯಗಳ ಸ್ಪೆಷಲ್ ಗಿಫ್ಟ್ ರವಾನೆಯಾಗಿದೆ. ವೃದ್ಧಶ್ರಾಮ, ಅನಾಥಶ್ರಾಮ, ಸಹಾಯಸಂಘಗಳು ಇದರ ಪ್ರಯೋಜನ ಪಡೆಯುತ್ತಿರುವ ಗುಡ್ ನ್ಯೂಸ್ ಬಂದಿದೆ.ವಿಶೇಷವೆಂದ್ರೇ ದರ್ಶನ್ ಗಿಫ್ಟ್ ಪಡೆದ ಅಜ್ಜಿಯೊಬ್ಬರು ದಾಸನಿಗೆ ಆಶಿರ್ವಾದ ಮಾಡ್ತೀರೊ ವಿಡಿಯೊ ಈಗ ವೈರಲ್ ಆಗ್ತಿದೆ. ’ದರ್ಶನ್ ಗುಣ ನಿಜಕ್ಕೂ ಮೆಚ್ಚುವಂತದ್ದು. ಎಲ್ಲರಿಗೂ ಅನ್ನ ಹಾಕಿದ ದರ್ಶನ್ ಯಾವಾಗಲೂ ಚೆನ್ನಾಗಿರಬೇಕು. ನೂರು ಕಾಲ ದರ್ಶನ್ ಬಾಳಿಬದುಕುವಂತಾಗಲಿ. ದಚ್ಚು ಸಿನಿಮಾಗಳು ಸಕ್ಸಸ್ ಕಾಣಲಿ’ ಅಂತ ಪರಿಪೂರ್ಣ ಮನಸ್ಸಿಂದ ಹಾರೈಸಿದ್ದಾರೆ.

ಅಂತೂ ದರ್ಶನ್‌ರ ಈ ಕರ್ಣಗುಣ ಈಗ ಟಾಕ್ ಆಫ್ ದಿ ಟೌನ್ ಆಗಿಬಿಟ್ಟಿದೆ. ಒಬ್ಬ ಸ್ಟಾರ್ ನಟನ ಈ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿಯಾಗಬೇಕಿದೆ. ದರ್ಶನ್ ಅಭಿಮಾನಿಗಳು ತಮ್ಮ ಸ್ಟಾರ್‌ನ ಹೆಸರಿನಲ್ಲಿ ಈ ಕೆಲಸಕ್ಕೆ ಕೈ ಹಾಕಿದ್ದು ಬೇರೆ ಎಲ್ಲ ಸ್ಟಾರ್‌ಗಳಿಗೂ ದಾರಿತೋರಿಸುವಂತಿದೆ. ಸುಮ್ಮನೇ ಸ್ಟಾರ್‌ಗಳ ಪೋಸ್ಟರ್ ಮೇಲೆ ಹಾಲು ಚೆಲ್ಲುವ ಹಾಗೂ ರಾಶಿಗಟ್ಟಲೇ ಕೇಕ್ ತಂದು ರಸ್ತೆಗಳಲ್ಲಿ ಬಿಸಾಡುವ ಪರಿಪಾಠಗಳ ನಡುವೆ ದಚ್ಚು ಹುಟ್ಟುಹಬ್ಬ ನಿಜವಾದ ಸಾರ್ಥಕತೆಯನ್ನ ಪಡೆದುಕೊಂಡಿದೆ. ಈ ದಾನ ಪಡೆದ ಅಸಹಾಯಕ ಮನಸ್ಸುಗಳಲ್ಲಿ ದರ್ಶನ್ ಮೇಲಿನ ಪ್ರೀತಿ ಡಬಲ್ ಆಗಿದೆ. ’ಧಾಮ್‌ಧೂಮ್ ಅಂತ ಹುಟ್ಟುಹಬ್ಬ ಆಚರಿಸಿಕೊಳ್ಳೊದ್ರಲ್ಲಿ ಏನು ಸುಖ ಸ್ವಾಮಿ? ಹೀಗೆ ಸಮಾಜಕ್ಕೆ ನಮ್ಮ ಕೈಲಾದ ಅಳಿಲುಸೇವೆ ಮಾಡಿ, ಅದರ ಖುಷಿನೇ ಬೇರೆ’ ಎನ್ನುವ ದಚ್ಚು ಯೋಚನೆಗೆ ಹ್ಯಾಟ್ಸ್ ಆಫ್ ಹೇಳಲೆಬೇಕು ಅಲ್ವಾ..?

 

LEAVE A REPLY

Please enter your comment!
Please enter your name here