Home District ನೆಟ್ ಪರೀಕ್ಷೆ ಬರೆಯಲು ಬಿಚ್ಚಬೇಕಂತೆ ತಾಳಿ, ಕಾಲುಂಗುರ..! ಕಣ್ಣೀರಿಡುತ್ತಲೇ ತಾಳಿ ತೆಗೆದು ಪರೀಕ್ಷಾ ಕೇಂದ್ರಕ್ಕೆ ತೆರಳಿದ...

ನೆಟ್ ಪರೀಕ್ಷೆ ಬರೆಯಲು ಬಿಚ್ಚಬೇಕಂತೆ ತಾಳಿ, ಕಾಲುಂಗುರ..! ಕಣ್ಣೀರಿಡುತ್ತಲೇ ತಾಳಿ ತೆಗೆದು ಪರೀಕ್ಷಾ ಕೇಂದ್ರಕ್ಕೆ ತೆರಳಿದ ಮಹಿಳೆಯರು..‍!

968
0
SHARE

ಇಂದು ಎಲ್ಲಾ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳು ನೆಟ್ ಪರೀಕ್ಷೆಯನ್ನು ಸುಸೂತ್ರವಾಗಿ ಪರೀಕ್ಷೆ ಬರೆದ್ರು. ಆದ್ರೆ ಆ ಶಾಲೆಯಲ್ಲಿ ಮಾತ್ರ ತಾಳಿ, ಕಾಲುಂಗುರವನ್ನೆಲ್ಲಾ ಬಿಚ್ಚೋವರೆಗೂ ಪರೀಕ್ಷೆ ಬರೆಯಲು ಅವಕಾಶವೇ ನೀಡಿಲ್ಲ.. ಕ್ರಿಶ್ಚಿಯನ್ನ ಶಾಲೆ ಅನ್ನೋ ಒಂದೇ ಕಾರಣಕ್ಕೆ, ಆ ಶಾಲೆಯ ರೂಲ್ಸನ್ನೇ ಫಾಲೋ ಮಾಡ್ಬೇಕು ಅಂತ ಹಿಂದೂ ಧರ್ಮದ ವಿರುದ್ಧವಾಗಿ ನಡೆದುಕೊಂಡು. ಕೊನೆಗೆ ಗಲಾಟೆ-ಗಿಲಾಟೆ ಆದ್ಮೇಲೆ ಕ್ಷಮೆಯಾಚಿಸಿದ್ರು…

ಹಿಂದೆಂದೂ ನಡೆಯದಂತಾ ಘಟನೆ ಇಂದು ನಡೆದಿದೆ.. ಮುಂದಿನ ಭವಿಷ್ಯ ರೂಪಿಸಿಕೊಳ್ಳೋ ದೃಷ್ಠಿಯಿಂದ, ಯುಜಿಸಿಯಿಂದ ಆಯೋಜಿಸಿದ್ದ ನೆಟ್ ಪರೀಕ್ಷೆ ಬರೆಯಲು ಆಗಮಿಸಿದ್ದ ಮಹಿಳೆಯರಿಗೆ ಇಂದು ಶಾಕ್ ಕಾದಿತ್ತು. ಪರೀಕ್ಷಾ ಕೇಂದ್ರಕ್ಕೆ ತೆರಳೋ ಮುನ್ನ ತಾಳಿ, ಕಾಲುಂಗುರ ಬಿಚ್ಚುವಂತೆ ಸೂಚನೆ ನೀಡಲಾಯ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ರೂ ಕ್ಯಾರೆ ಎಂದಿಲ್ಲ…

ಅಂದ ಹಾಗೆ, ಬೆಂಗಳೂರಿನ ಜೆ.ಪಿ. ನಗರದ ಬ್ರಿಗೆಡ್ ಮಿಲೇನಿಯಂ ಶಾಲೆಯಲ್ಲಿ ನೆಟ್ ಪರೀಕ್ಷೆ ನಡೀತಿತ್ತು. ಪರೀಕ್ಷೆ ಬರೆಯಲು ಬಂದ ಮಹಿಳೆಯರ ತಾಳಿ, ಕಾಲುಂಗುರವನ್ನ ತೆಗೆಯುವಂತೆ ಪರೀಕ್ಷಾ ಸಿಬ್ಬಂದಿ ಸೂಚಿಸಿದ್ರು. ಆದ್ರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳಾ ಅಭ್ಯರ್ಥಿಯೋರ್ವರ ಪತಿ ಹಾಗೂ ಸಂಬಂಧಿಕರು, ಹಿಂದೂ ಧರ್ಮದ ಪ್ರಕಾರ ತಾಳಿ, ಕಾಲುಂಗುರ ಬಿಚ್ಚಬಾರದು ಅಂತ ತಿಳಿಸಿ ಹೇಳಿದ್ದಾರೆ…

ಆದ್ರೂ ಒಪ್ಪದ ಸಿಬ್ಬಂದಿ, ಕಡ್ಡಾಯವಾಗಿ ಬಿಚ್ಚಲೇಬೇಕು ಅಂತ ಹೇಳಿದ್ದಾರೆ. ಹೀಗಾಗಿ ಬೆಳಗ್ಗೆ 9.30ಕ್ಕೆ ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ತಾಳಿ, ಕಾಲುಂಗುರ ಬಿಚ್ಚಿಟ್ಟಿದ್ದಾರೆ.. ಕಣ್ಣೀರು ಹಾಕುತ್ತಲೇ ಪರೀಕ್ಷಾ ಕೇಂದ್ರಗಳಿಗೆ ತೆರಳಿದ್ದಾರೆ.. ಕ್ರಿಶ್ಚಿಯನ್ನ ಶಾಲೆ ಆಗಿರೋದ್ರಿಂದ ಈ ರೀತಿ ಮಾಡ್ತಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದ್ದು, ಕೆಲವರು ತಾಳಿ ಕಳಚೋಕೆ ಒಪ್ಪದೇ ಪರೀಕ್ಷೆ ಬರೆಯದೇ ಹೊರಬಂದಿದ್ದಾರೆ…

ಕೇವಲ ಹಿಂದೂ ಮಹಿಳೆಯರಿಗಷ್ಟೇ ಅಲ್ಲದೆ, ಮುಸ್ಲಿಂ ಅಭ್ಯರ್ಥಿಗಳಿಗೂ ಕೂಡ ಇದೇ ರೀತಿ ಮಾಡಿದ್ದಾರೆ.. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬರ್ತಿದ್ದಂತೆ ಎಚ್ಚೆತ್ತ ಆಡಳಿತ ಮಂಡಳಿ, ಇದು ಸೆಕ್ಯುರಿಟಿ ಗಾರ್ಡ್ ಹಂತದಲ್ಲಿ ಆಗಿರುವ ತಪ್ಪು ಅಂತ ತೇಪೆ ಹಚ್ಚಲು ಮುಂದಾಗಿದ್ದಾರೆ.. ಕಚೇರಿಯ ಒಳಗಿಂದ ಯಾವುದೇ ಮೆಟಲ್ ವಸ್ತುಗಳನ್ನ ಬಿಡಬಾರದು ಅನ್ನೋ ಮಾಹಿತಿ ನೀಡಲಾಗಿತ್ತು….

ಇದನ್ನ ಸರಿಯಾಗಿ ಅರ್ಥ ಮಾಡಿಕೊಳ್ಳದೆ, ಅಚಾತುರ್ಯವಾಗಿದೆ ಅಂತ ತಿಪ್ಪೇ ಸಾರಿಸಿದ್ದಾರೆ.ಕ್ರಿಶ್ಚಿಯನ್ ಶಾಲೆಯಾದ್ರೆ, ಅದನ್ನ ತಮ್ಮ ಶಾಲಾ ಮಕ್ಕಳ ಮುಂದೆ ಹಾಗೂ ಅವರ ಪೋಷಕರ ಮುಂದೆ ಪ್ರದರ್ಶನ ಮಾಡಲಿ.. ಆದ್ರೆ, ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳ ಮೇಲೆ ಕ್ರಿಶ್ಚಿಯಾನಿಟಿ ತೋರಿಸಿದ್ದು ಸರಿಯಲ್ಲ ಅನ್ನೋ ಮಾತುಗಳು ಸಾರ್ವಜನಿಕವಲಯದಲ್ಲಿ ಕೇಳಿಬಂದಿದೆ…

LEAVE A REPLY

Please enter your comment!
Please enter your name here