Home Crime ನೆತ್ತಿಗೇರಿದ್ದ ಪ್ರೀತಿ ಅಮಲಿನಲ್ಲಿ ಪ್ರೇಮಿ ಹೇಳ್ದಾ ಅಂತಾ ಹೆತ್ತವರನ್ನೇ ಮರೆತು ವಿಷ ಕುಡಿದ ಯುವತಿ..! ಸ್ವೀಕರಿಸಿಯೇ...

ನೆತ್ತಿಗೇರಿದ್ದ ಪ್ರೀತಿ ಅಮಲಿನಲ್ಲಿ ಪ್ರೇಮಿ ಹೇಳ್ದಾ ಅಂತಾ ಹೆತ್ತವರನ್ನೇ ಮರೆತು ವಿಷ ಕುಡಿದ ಯುವತಿ..! ಸ್ವೀಕರಿಸಿಯೇ ಬಿಟ್ಟಳು ಪ್ರಿಯತಮನ ಸವಾಲ್..!

564
0
SHARE

ದಿವ್ಯಾ ಶರಣಾಗಿರೋದು ಸಾವಿಗೆ. ಸೇರಿರೋದು ಎಂದೂ ಮರಳಿ ಬಾರದ ಸಾವಿನ ಮನೆಗೆ. ಬೆಂಗಳೂರಿನ ಹೊರವಲಯದ ಕೆ ಆರ್ ಪುರಂ ಬಳಿಯ ಕಿತ್ತಗನೂರಿನ ನಿವಾಸಿಯಾಗಿದ್ದ ದಿವ್ಯಾ ಮೂರು ನಾಲ್ಕು ದಿನಗಳ ಹಿಂದೆ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನ ಕೂಡಲೇ ಆಸ್ಪತ್ರೆಗೆ ಸೇರಿಸಿದ್ರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾಳೆ. ಈ ಹುಡುಗಿಯ ಈ ನಿರ್ಧಾರಕ್ಕೆ ಕಾರಣ.. ಅವಳ ಪ್ರೇಮ ಕಥೆ.ಪ್ರೀತಿಗೆ ಹೃದಯವೇ ಲಾಂಚನ ಅಂತ, ಕೆಂಗುಲಾಬಿಯೇ ಪ್ರತೀಕ ಅನ್ನೋದ್ಯಾಕೆ ಗೊತ್ತಾ..

ಕಣ್ಣೋಟದಲ್ಲಿ ಪ್ರೀತಿ ಅಂಕುರವಾದ್ರೂ ಅದು ಮನಸ್ಸಿಗೆ ಸಂಬಂಧಿಸಿದ ಭಾವನೆ. ಅದಕ್ಕೆ ಹೇಳೋದು.. ಪ್ರೀತಿ ಹೃದಯ ತುಂಬಿ ಬರುತ್ತೆ ಅಂತ. ಪ್ರೀತಿ ತುಂಬಿರೋ ಹೃದಯಕ್ಕೆ ಒಂಚೂರು ನೋವಾದ್ರೂ ಹೃದಯ ಭಾರವಾಗಿ ಕಣ್ಣಲ್ಲಿ ನೀರು ಜಿನುಗುತ್ತೆ. ಜೀವವೇ ಹೋದಂಗಾಗುತ್ತೆ. ಪ್ರೀತಿ ಇಲ್ಲದೆ ಜೀವನವೇ ಬೇಡವೆನ್ನಿಸುತ್ತೆ. ಅದೇ ಕಾರಣಕ್ಕೆ.. ಪ್ರೀತಿ ಸಿಗದ ಅದೆಷ್ಟೋ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗೋ ಘಟನೆಗಳನ್ನ ನಾವೆಲ್ಲಾ ನೋಡ್ತಾನೆ ಇರ್ತೇವೆ, ಕೇಳ್ತಾನೂ ಇರ್ತೇವೆ. ದಿವ್ಯಾಳ ಹಾಗೂ ಹರೀಶನ ಲವ್ ಸ್ಟೋರಿಯಲ್ಲೂ ಕೂಡ ಇಂತದ್ದೇ ಘಟನೆ ನಡೆದೋಗಿದೆ. ಅದೇ ಕಾರಣಕ್ಕೆ ಪ್ರೀತಿಯೇ ಉಸಿರು ಅಂತ ಅಂದುಕೊಂಡಿದ್ದ ಈ ಸುರಸುಂದರಿ ದಿವ್ಯಾ ಆ ಉಸಿರು ನಿಲ್ಲಿಸಿದ್ದಾಳೆ.

ನಮ್ಮ ಮಾತುಗಳು ನಿಮಗೆ ಅರ್ಥ ಆಗ್ತಿದ್ರೂ ನಿಮ್ಮ ಮನಸ್ಸಿಗೆ ನಮ್ಮ ಮಾತುಗಳು ನಾಟುತಿದ್ರೂ ಅಷ್ಟಾಗಿ ಅರ್ಥ ಆಗದೇ ಇರಬಹುದು. ಅದು ನಮಗೂ ಗೊತ್ತಿದೆ. ಸೋ.. ನಮ್ಮ ಮಾತಿನ ಭಾವಾರ್ಥ, ಈ ಪ್ರೇಮ ಕಥೆ ಬಗ್ಗೆ ಕ್ಲಾರಿಟಿ ಬರಬೇಕಂದ್ರೆ ನಾನೇಳೋ ಕಥೆಯನ್ನ ನೀಟಾಗಿ ಕೇಳ್ತಾ ಹೋಗಿ. ಬೆಂಗಳೂರಿನ ಕಿತ್ತಗನೂರಿನ ಗ್ರಾಮದ ಈ ಹುಡುಗಿ, ಕಾಲೇಜು ಮೆಟ್ಟಿಲು ಹತ್ತಿರೋ ಕಾಲೇಜು ಕನ್ಯೆ. ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಫಸ್ಟ್ ಇಯರ್ ಬಿಕಾಂ ಸ್ಟೂಡೆಂಟ್. ಈ ಕಾಲೇಜು ಕನ್ಯೆಯ ಹೃದಯ ಕದ್ದಿದ್ದು ಕಾಲೇಜಲ್ಲಿರೋ ಪೋರನಲ್ಲಾ ಬದಲಾಗಿ ಎದುರು ಮನೆಯ ಈ ಹರೀಶ.ಮಿಗಳೇ .. ಈ ಸ್ಟೋರಿಯನ್ನ ನೀವೇನಾದ್ರೂ ನೋಡ್ತಿದ್ರೆ ನಿಮಗೆ ಸಿಟ್ಟು ಬರದೇ ಇರಲ್ಲ ಅಲ್ವಾ.. ಈ ದೊಡ್ಡವರಿದ್ದಾರೇ ಪ್ರೀತಿಗೆ ಅವರೇ ಶತೃಗಳು ಅಂತ ನೀವು ಶಾಪ ಹಾಕ್ತಿರಲೂ ಬಹುದು.

ಬಟ್.. ನಿಮಗೊಂದು ವಿಚಾರವನ್ನ ಹೇಳ್ತೀವಿ ಕೇಳಿಸ್ಕೊಳ್ಳಿ .  ಈ ದಿವ್ಯಾ ಮತ್ತೆ ಹರೀಶನ ಲವ್ ಸ್ಟೋರಿಯಲ್ಲಿ  ವಿಲನ್ ಗಳು ಅವರ ಮನೆಯವರೇ ಆದ್ರೂ.. ದಿವ್ಯಾಳ ಸಾವಿಗೆ ಕಾರಣ ಆಗಿದ್ದು.. ಮತ್ತ್ಯಾರೂ ಅಲ್ಲಾ .. ಲವರ್ ಬಾಯ್ ಈ ಹರೀಶನೇ. ಅವನು ಕಳಿಸಿದ್ದ ಒಂದು ಚಾಲೆಂಜಿಂಗ್ ಮೆಸೇಜ್  ನಿಂದಾನೇ ಈ ದಿವ್ಯಾ ಅನ್ನೋ ಈ ಬಾಲೆ ಬಲಿಯಾಗಿ ಹೋಗಿದ್ದು.ವೀಕ್ಷಕರೇ.. ದಿವ್ಯಾ ಹಾಗೂ ಹರೀಶನ ಲವ್ ಸ್ಟೋರಿ ದಿವ್ಯಾಳ ಸಾವಿನೊಂದಿಗೆ ಟ್ರ್ಯಾಜಿಡಿ ಎಂಡ್ ಆಗಿದ್ಯಾಕೆ.. ಅಂತಾ ಹಕೀಕತ್ತು ಈ ಭೂಪ ಹರೀಶನ ಏನ್ ಮಾಡ್ದ, ಅವನು ಕಳಿಸಿದ್ದ ಮೆಸೇಜಲ್ಲಿ ಏನಿತ್ತು ಅಂತ ಡೈರೆಕ್ಟಾಗಿ ಹೇಳಿಬಿಡ್ತೀವಿ ಕೇಳಿ. ಗೂಡು ಬಿಟ್ಟೋಗಿದ್ದ ಈ ಹಕ್ಕಿಗಳನ್ನ ಮತ್ತೆ ಹಿಡ್ಕೊಂಡು ಬಂದು ಪಂಜರದೊಳಗೆ ಕೂಡಾಕಿದ್ರು. ರಾಜಿ ಪಂಚಾಯ್ತಿ ಮಾಡಿ ದೂರ ಮಾಡಿದ್ರು. ದಿವ್ಯಾವಳಿಗೆ ಮದುವೆ ಸಂಬಂಧವನ್ನೂ ನೋಡೋಕೆ ಶುರು ಮಾಡಿದ್ರು.

ಆದ್ರೆ ಪ್ರೀತಿಸೋ ಮನಸ್ಸುಗಳು ಅಷ್ಟು ಸಲೀಸಾಗಿ ಪ್ರೀತಿಯನ್ನ ಮರಿತವೇ ನೋ ಚಾನ್ಸ್. ಕಾಲೇಜು ಬಿಡಿಸಿ ಮನೆಯಲ್ಲಿಟ್ಟಿದ್ದ ದಿವ್ಯಾಳನ್ನ ಹೇಗಾದ್ರೂ ಮಾಡಿ ಮಾತಾಡಿಸಬೇಕು ಅಂತ ಈ ಅಮರ ಪ್ರೇಮಿ ಹರೀಶ ಪ್ರಯತ್ನ ಪಡ್ತಾನೆ ಇದ್ದ. ಮೊಬೈಲ್ ಖರೀದಿಸಿ ತನ್ನ ಗೆಳೆಯರಿಬ್ಬರ ಸಹಾಯದಿಂದ ದಿವ್ಯಾಳಿಗೆ ತಲುಪಿಸಿದ್ದ. ಹೀಗಾಗಿ ಇಬ್ಬರ ನಡುವೆ ತಾತ್ಕಾಲಿಕವಾಗಿ ಬ್ರೇಕಪ್ ಆಗಿದ್ದ ಲವ್ ಸ್ಟೋರಿ ಮತ್ತೆ ಟ್ರ್ಯಾಕಿಗೆ ಬಂದಿತ್ತು. ಮತ್ತೆ ದೂರವಾಗಿದ್ದ ಇಬ್ಬರು ಪ್ರೇಮಿಗಳು ಫೋನ್ ಮೂಲಕ ಸೇರಿದ್ರು. ಮುಂದೆ ಏನು ಮಾಡಬೇಕು. ಮನೆಯಲ್ಲಿ ಹುಡುಗನನ್ನ ಬೇರೆ ನೋಡ್ತಾ ಇದ್ದಾರೆ ಹೀಗಾಗಿ ಇಬ್ಬರು ಇದೇ ವಿಷಯವನ್ನ ಸಾಕಷ್ಟು ದಿನ ಮಾತನಾಡಿದ್ದಾರೆ.

ಅಲ್ಲದೆ ಹರೀಶ ನಾನು ಮದುವೆಯಂತ ಆದ್ರೆ ಅದು ನಿನ್ನನ್ನೆ ಅಂತ ಅವಳಿಗೆ ಹೇಳಿ ಅವಳನ್ನ ಸಂತೈಸೋದಕ್ಕೆ ಶುರುಮಾಡಿದ್ದ. ಅದ್ಯಾವಾಗ ಇಬ್ಬರು ಮತ್ತೆ ಫೋನ್ ಮೂಲಕ ಮಾತನಾಡೋದಕ್ಕೆ ಶುರುಮಾಡಿದ್ರೋ ಆಗ ಇಬ್ಬರ ಮನಸ್ಸು ತಿಳಿಯಾಗಿತ್ತು. ಮುಂದೆ ಏನೇ ಕಷ್ಟ ಬಂದ್ರು ನಾವಿಬ್ರು ಒಟ್ಟಿಗೆ ಇರಬೇಕು ಅಂತ ತೀರ್ಮಾನಕ್ಕೆ ಬಂದಿದ್ರು. ಆದ್ರೆ ಇಷ್ಟೆಲ್ಲಾ ಆದ ಮೇಲೂ ಈ ಹುಡುಗಿ ಯಾಕೆ ಸೂಸೈಡ್ ಮಾಡ್ಕೊಂಡ್ಳು ಅಂತಾನಾ.. ಅಲ್ಲೇ ಇರೋದು ನೋಡಿ ಈ ಸೈಕೋ ಹರೀಶನ ಅಸಲಿ ಬುದ್ದಿ. ಯಸ್.. ನೀನೆ ನನ್ನ ಚಿನ್ನ ನೀನೆ ನನ್ನ ರನ್ನ, ನೀನೆ ನನ್ನ ಜೀವ ನೀನೆ ನನ್ನ ಜೀವನ ಅಂತ ಬಣ್ಣದ ಮಾತೇಳಿ ಪ್ರೀತಿ ಮಾಡ್ತಿದ್ದ ಈ ಭೂಪ, ಅದ್ಯಾಕೋ ಕೆಲ ದಿನಗಳಿಂದ ದಿವ್ಯಾಳನ್ನ ಅವಾಯ್ಡ್ ಮಾಡೋಕೆ ಶುರು ಮಾಡಿದ್ದ.

ನವೀಬ್ರು ಮದುವೆಯಾಗೋದಕ್ಕೆ ಆ ಬ್ರಹ್ಮನೇ ಅಡ್ಡ ಬಂದ್ರು ಕೇರ್ ಮಾಡೋದಿಲ್ಲ ಅಂತಿದ್ದ ಹರೀಶ ಇದ್ದಕ್ಕಿದ್ದ ಹಾಗೆ ಯು ಟರ್ನ್ ತಗೊಂಡಿದ್ದ. ನೀನು ನನಗೆ ಬೇಡ ಮನೆಯಲ್ಲಿ ತೋರಿಸೋ ಹುಡುಗನ ಜೊತೆ ಮದುವೆಯಾಗು ಅಂತ ಹೇಳೋದಕ್ಕೆ ಶುರುಮಾಡಿದ್ದ. ಅಲ್ಲದೆ ಕೆಲವು ದಿನಗಳ ಹಿಂದೆ ಆಕೆಗೆ ಮೆಸೇಜ್ ಮಾಡಿದ್ದ. ನಿನ್ನ ಸಹವಾಸ ಸಾಕು , ನನಗೆ ಮತ್ತೊಂದು ಹುಡುಗಿ ಸಿಕ್ಕಿದ್ದಾಳೆ ಅಂತ ಹೇಳಿದ್ದ. ಇಷ್ಟು ಹೇಳ್ತಿದ್ದ ಹಾಗೆ ದಿವ್ಯಾಗೆ ಈ ಜೀವನವೇ ಬೇಡ ಅಂತ ಅನಿಸಿಬಿಟ್ಟಿತ್ತು. ಜೀವಕ್ಕಿಂತ ಹೆಚ್ಚು ಪ್ರೀತಿಸ್ತಿದ್ದ ಹುಡುಗನೇ ಈಗ ಬೇಡ ಅಂತಿದ್ದಾನೆ ಅಂತ ಮೇಲೆ ನಾನ್ಯಾಕೆ ಬದುಕಿರಬೇಕು ಅಂತ ಅವಳಿಗೆ ಅನಿಸಿದೆ. ಅಷ್ಟೇ ಅಲ್ಲ. ಆಕೆ ಹರೀಶನಿಗೆ ನಾನಾ ರೀತಿಯಲ್ಲಿ ಕೈಮುಗಿದು ಬೇಡಿದ್ದಾಳೆ.

ನೀನು ನನ್ನನ್ನ ಬಿಟ್ಟು ಹೋಗಬೇಡ. ನೀನೇ ನನ್ನ ಪ್ರಪಂಚ್, ನೀನಿಲ್ಲದೆ ನಾನು ಬದುಕಿರೋದಿಲ್ಲ ಅಂತ ಹೇಳಿದ್ಲು.   ಕಾಡಿದ್ಳು, ಬೇಡಿದ್ಳು, ಕಣ್ಣೀರಿಟ್ಟಳು ಆದ್ರೂ ಇವನ ಮನಸ್ಸು ಕರಗಲೇ ಇಲ್ಲ. ಸರಿ.. ನಿನ್ನ ಮದ್ವೆ ಆಗ್ಬೇಕು ಅಂದ್ರೆ ನನಗೆ 15 ಲಕ್ಷ ಕೊಡು.. ಇಲ್ಲಾ ಅಂದ್ರೆ ನನ್ನ ಬಿಟ್ಬಿಡು ಅಂತೇಳಿದ್ದ. ಅಷ್ಟೇ ಅಲ್ಲ.. ನನ್ನ ಮೇಲೆ ನಿನಗೆ ಅಷ್ಟು ಪ್ರೀತಿ ಇದ್ರೆ ವಿಷ ಕುಡಿದು ಸಾಯಿ, ಆಗ ನಿನ್ನ ಪ್ರೀತಿ ಸತ್ಯ ಅಂತ ಒಪ್ಪಿಕೊಳ್ತೀನಿ ಅನ್ನೋ ಚಾಲೆಂಜಿಂಗ್ ಮೆಸೇಜ್ ಕಳಿಸಿದ್ದ ಈ ಪಾಪಿ ಹರೀಶ. ಹರೀಶ ಆಕೆಯ ಪವಿತ್ರ ಪ್ರೀತಿಯನ್ನೇ ಅಗ್ನಿಪರೀಕ್ಷೆಗೆ ಒಳಪಡಿಸಿದ್ದ. ಇಷ್ಟು ವರ್ಷ ತಾನು ಪ್ರೀತಿಸಿದ್ದ ಹುಡುಗಿಯನ್ನ ಈಗ ಒಂದೇ ಒಂದು ಕ್ಷಣದಲ್ಲಿ ತಿರಸ್ಕರಿಸಿ ಬಿಟ್ಟಿದ್ದ. ಹುಡುಗನಾಗಲಿ ಹುಡುಗಿಯಾಗಲಿ ಇನ್ನೊಬ್ಬನೋ ಅಥವಾ ಇನ್ನೊಬ್ಬಳೋ ಸಿಕ್ಕಿಬಿಟ್ರೆ ತಮಗೆ ಹಿಂದಿನ ಪ್ರೀತಿಯೆಲ್ಲಾ ಸುಳ್ಳು ಅನಿಸಿಬಿಡುತ್ತೆ.

ನಾವು ಇಷ್ಟು ದಿನ ಪ್ರೀತಿಯೇ ಮಾಡಿಲ್ಲ ಅನ್ನೋ ಹಂತಕ್ಕೆ ಬಂದು ನಿಲ್ತಾರೆ. ಈ ಕೆಲಸವನ್ನ ಇಲ್ಲಿ ಹರೀಶ್ ಕೂಡಾ ಮಾಡಿದ್ದ. ಆತನಿಗೆ ದಿವ್ಯಾ ಸಾಕು ಅಂತ ಅನಿಸಿಬಿಟ್ಟಿದ್ಲು. ಹೊಸ ಹುಡುಗಿಯ ಜೊತೆ ಬೆಚ್ಚಗಿನ ಅಪ್ಪುಗೆ ಸಿಕ್ಕ ಮೇಲೆ ತನಗಾಗಿ ಕಾಯ್ತಿದ್ದ ಹುಡುಗಿ ಬೇಡವಾಗಿತ್ತು. ಹೀಗಾಗಿ ಆಕೆಗೆ ಸಾವಿನ ಚಾಲೆಂಜ್ ಹಾಕಿದ್ದ. ಅದನ್ನ ದಿವ್ಯಾ ಕೂಡಾ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದ್ಲು.ಈ ಮಾತನ್ನ ದಿವ್ಯಾ ತುಂಬಾ ಸೀರಿಯಸ್ ಆಗಿ ತೆಗೆದುಕೊಂಡು ಬಿಟ್ಲು. ಆತ ಹೇಳಿದ ಮಾತನ್ನ ಚಾಲೆಂಜ್ ಆಗಿ ತೆಗೆದುಕೊಂಡ್ಲು.

ಈ ಹುಚ್ಚು ಹುಡುಗಿ ಹಿಂದೆ ಮುಂದೆ ಯೋಚಿಸದೆ ಇಲಿ ಪಾಶಾಣ ಕುಡಿದು ಸತ್ತೇ ಹೋದಳು. ಎಂತಾ ಹುಚ್ಚಾಟ ಅಲ್ವಾ..  ಆದರೆ ಒಂದು ಮಾತು ಹೇಳ್ತೀವಿ ವೀಕ್ಷಕರೇ.. ಈ ಪಾಪದ ಬಾಲೆಯ ಸಾವಿನ ದಾರಿಗೆ ಹೋಗಿದ್ದು.. ಈ ಪ್ರಿಯಕರ ಮಾಡಿದ ಮೋಸದಿಂದ. ಅವಳು ಕಣ್ಣು ಮುಚ್ಚೋವಾಗ ಅವಳ ಕಣ್ಣಲ್ಲಿ ಬಂದಿದ್ದು ಕಣ್ಣೀರಲ್ಲಾ ರಕ್ತಕಣ್ಣೀರು. ನೋವಾಗಿದ್ದು ಅವಳ ಜೀವಕ್ಕಲ್ಲ ಮನಸ್ಸಿಗೆ. ಆದ್ರೇನೂ ಬಂತು.. ಹೋದ ಪ್ರಾಣ ಮತ್ತೆ ಬರುತ್ತಾ ಹೇಳಿ.. ಪ್ರಾಣದ ಜೊತೆ ಚೆಲ್ಲಾಟವಾಡಿದ ಹರೀಶ ಪರಾರಿಯಾಗಿದ್ದಾನೆ. ಈ ಹುಡುಗಿ ಪ್ರಾಣವನ್ನೇ ಕಳಕೊಂಡಿದ್ದಾಳೆ. ಇನ್ನೂ ಇವಳ ಹೆತ್ತವರಿಗೆ ಉಳಿದಿದ್ದು ಅವಳ ನೆನಪು ಮಾತ್ರ.

LEAVE A REPLY

Please enter your comment!
Please enter your name here