Home Elections 2019 ನೆತ್ತಿಯ ಮೇಲೆ ತೂಗುತ್ತಿದ್ದ ತೂಗುಗತ್ತಿಯಿಂದ ಮೋದಿ ಬಚಾವ್.! ರಾಹುಲ್ ಗಾಂಧಿ ಈಗ ಸೈಲೆಂಟ್.! ಲೋಕ ಚುನಾವಣೆಗೆ ಇಟ್ಟುಕೊಂಡಿದ್ದ...

ನೆತ್ತಿಯ ಮೇಲೆ ತೂಗುತ್ತಿದ್ದ ತೂಗುಗತ್ತಿಯಿಂದ ಮೋದಿ ಬಚಾವ್.! ರಾಹುಲ್ ಗಾಂಧಿ ಈಗ ಸೈಲೆಂಟ್.! ಲೋಕ ಚುನಾವಣೆಗೆ ಇಟ್ಟುಕೊಂಡಿದ್ದ ಬ್ರಹ್ಮಾಸ್ತ್ರ ಕಳೆದುಕೊಳ್ತಾ ಕಾಂಗ್ರೆಸ್.!? 

2277
0
SHARE

ರಫೇಲ್ ಡೀಲ್… ಭವಿಷ್ಯ ಮೋದಿ ಸರ್ಕಾರದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಕೇಳಿ ಬಂದ ಪದ ಅಂದ್ರೆ ಇದೇ ಇರಬೇಕು.. ರಾಹುಲ್ ಗಾಂಧಿ ಎಲ್ಲೇ ಹೋಗಲಿ, ಎಲ್ಲೇ ಬರಲಿ, ಅದು ಯಾವುದೇ ಸಮಾರಂಭವಾಗಲಿ, ಅಲ್ಲಿ ಹೇಳುತ್ತಿದ್ದದ್ದು ಒಂದೇ ಮಾತು, ಚೌಕಿದಾರ್ ಚೋರ್ ಹೈ ಅಂತಾ…. ಅಂದ್ರೆ ನಮ್ಮ ಕಾವಲುಗಾರ ಕಳ್ಳ ಅಂತಾ.. ಸೋ ಈ ಮಾತಿಗೆ ಇನ್ನು ಮುಂದೆ ಅಕ್ಷರಶಃ ಬ್ರೇಕ್ ಬಿದ್ದಿದೆ.. ಸುಪ್ರಿಂ ಕೋರ್ಟ್ ನೀಡಿದ ಒಂದೇ ಒಂದು ಹೇಳಿಕೆಗೆ ರಾಹುಲ್ ಗಾಂಧಿ ಕೈ ಕಟ್ ಬಾಯ್ ಮುಚ್ಚುವಂತೆ ಆಗಿದೆ.2019ರ ಲೋಕ ಸಭಾ ಚುನಾವಣೆಗೆ ರಾಹುಲ್ ಗಾಂಧಿ ಇಟ್ಟುಕೊಂಡಿದ್ದ ಬ್ರಹ್ಮಾಸ್ತ್ರವಿದು.

ಈ ಬ್ರಹ್ಮಾಸ್ತ್ರದಿಂದಲೇ ಮೋದಿಯನ್ನ ಹೊಡೆದುರುಳಿಸಬೇಕು ಅಂತಾ ಶತಪತ ಹೊಂಚು ಹಾಕುತ್ತಿದ್ರು. ಆ ಕಾರಣಕ್ಕೆ ಕಳೆದ ಒಂದು ವರ್ಷದಿಂದಲೂ ರಾಹುಲ್ ರಫೇಲ್ ಜಪ ಮಾಡುತ್ತಿದ್ರು. ಚುನಾವಣೆ ಪ್ರಚಾರಕ್ಕೆಂದು ಯಾವ ಕ್ಷೇತ್ರಕ್ಕೆ ಹೋದ್ರು ಅಲ್ಲಿ ತಮ್ಮ ಭಾಷಣ ಆರಂಭ ಮಾಡುತ್ತಿದ್ದದ್ದೇ ರಫೇಲ್ ವಿಚಾರವನ್ನ ಎತ್ತಿ. ಅಷ್ಟರ ಮಟ್ಟಿಗೆ ರಫೇಲ್ ರಾಹುಲ್ಗೆ ಅಪ್ಯಾಯಮಾನವಾಗಿ ಹೋಗಿತ್ತು. ಸದನದ ಹೊರಗೂ ಒಳಗೂ ದೊಡ್ಡ ಮಟ್ಟದಲ್ಲಿ ರಫೇಲ್ ವಿಚಾರ ಚರ್ಚೆಯಾಗಿತ್ತು. ಇನ್ನೇನು ನರೇಂದ್ರ ಮೋದಿ ಅಪರಾಧಿ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ.. ಬಿಜೆಪಿಗೆ ಇದು ಬೋಫೋರ್ಸ್ ಆಗುತ್ತೆ ಅಂತಾ ಎಲ್ಲಾರು ಭಾವಿಸಿದ್ರು.

ಆದ್ರೆ ಕಾಂಗ್ರೆಸ್ ಮತ್ತು ಮೋದಿ ವಿರೋಧಿಗಳ ಆಸೆಗೆ ಸುಪ್ರೀಂ ಕೋರ್ಟ್ ತಣ್ಣೀರು ಎರಚಿದೆ. ರಫೇಲ್ ವಿಚಾರವಾಗಿ ತೀರ್ಪು ನೀಡಿ.. ರಾಹುಲ್ ಮತ್ತು ಅವರ ಸಂಗಡಿಗರ ಬಾಯಿ ಮುಚ್ಚಿಸಿದೆ. ಈ ಮೂಲಕ ನರೇಂದ್ರ ಮೋದಿ ದೊಡ್ಡ ಮುನ್ನಡೆಯನ್ನ ಕಾಯ್ದುಕೊಳ್ಳುವಂತೆ ಆಗಿದೆ. ರಫೇಲ್ ವಿಚಾರದಲ್ಲಿ ಯಾವುದೇ ಪ್ರಮಾದ ಎಸಗಿಲ್ಲ ಅನ್ನೋದು ಸಾಬೀತ್ ಆಗಿದೆ.ರಫೇಲ್ ವಿಮಾನಗಳ ಮೌಲ್ಯದ ವಿಚಾರದಲ್ಲಿ ಪ್ರವೇಶಿಸುವುದು, ಬೆಲೆಯಲ್ಲಿನ ವ್ಯತ್ಯಾಸದ ವಿವರಗಳನ್ನು ಪರಿಶೀಲಿಸುವುದು ಕೋರ್ಟ್ ಕೆಲಸವಲ್ಲ. ಅದರಲ್ಲಿ ಗೋಪ್ಯತೆ ಕಾಪಾಡಿಕೊಳ್ಳಬೇಕು. ಯಾವುದೇ ಯೋಜನೆಗೆ ಪೂರ್ವಸಿದ್ಧತೆಯಿಲ್ಲದೆ ನಮ್ಮ ದೇಶ ಮುಂದುವರಿಯಲು ಸಾಧ್ಯವಿಲ್ಲ. ಇಲ್ಲಿ ತಪ್ಪುಗಳಾಗಿದ್ದರೆ ಸರಿಪಡಿಸಲು ನ್ಯಾಯಾಲಯ ಕೂರುವುದು ಸೂಕ್ತವಲ್ಲ.

ಫ್ರಾನ್ಸ್‌ ನ ಮಾಜಿ ಅಧ್ಯಕ್ಷ ಫ್ರಾಂಕೊಯಿಸ್ ಒಲಾಂಡ್ ಅವರು ಹೇಳಿಕೆ ನೀಡಿದ ಬಳಿಕವಷ್ಟೇ ಈ ಎಲ್ಲ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇದಕ್ಕೆ ಕೇವಲ ಪತ್ರಿಕಾ ಸಂದರ್ಶನಗಳನ್ನು ಆಧಾರವಾಗಿಟ್ಟು ಕೊಳ್ಳಲಾಗದು. ಆಫ್‌ಸೆಟ್ ಪಾಲುದಾರನನ್ನು ನಿರ್ಧರಿಸುವುದು ವಿಮಾನ ತಯಾರಿಸುವ ಕಂಪೆನಿಗೆ ಬಿಟ್ಟಿದ್ದೇ ಹೊರತು ಕೇಂದ್ರ ಸರ್ಕಾರ ನಿರ್ಧರಿಸುವುದು ಸಾಧ್ಯವಿಲ್ಲ. ಇದರಲ್ಲಿ ವಾಣಿಜ್ಯ ಹಿತಾಸಕ್ತಿಯಲ್ಲ. ಯಾವುದು ಸೂಕ್ತ ಎಂದು ತೀರ್ಮಾನಿಸುವುದು ಕೋರ್ಟ್‌ಗೆ ಸಂಬಂಧಿಸಿದ್ದಲ್ಲ. ಆಫ್‌ಸೆಟ್ ಪಾಲುದಾರಿಕೆ ಹಂಚಿಕೆಯ ಆಯ್ಕೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲು ಕಾರಣಗಳಿಲ್ಲ.

ರಕ್ಷಣಾ ಇಲಾಖೆಗೆ ಸಂಬಂಧಿಸಿದ ವ್ಯವಹಾರಗಳಂತಹ ಸೂಕ್ಷ್ಮ ವಿಚಾರಗಳಲ್ಲಿ ವೈಯಕ್ತಿಕ ಅಭಿಪ್ರಾಯಗಳ ಆಧಾರದಲ್ಲಿ ತನಿಖೆ ನಡೆಸಲಾಗದು. 126 ಯುದ್ಧ ವಿಮಾನಗಳನ್ನು ಖರೀದಿಸುವಂತೆ ನಾವು ಸರ್ಕಾರವನ್ನು ಒತ್ತಾಯಿಸಲು ಸಾಧ್ಯವಿಲ್ಲ. ಈ ಪ್ರಕರಣದ ಪ್ರತಿ ಅಂಶವನ್ನೂ ನ್ಯಾಯಾಲಯದ ಪರಿಶೀಲಿಸುವುದು ಸೂಕ್ತವಲ್ಲ. ಹಿಂದಿನ ಒಪ್ಪಂದ ಮುಂದಿನದ್ದಾಗಲು ಸಾಧ್ಯವಿಲ್ಲ. ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಕುರಿತು ಯಾವುದೇ ವಿಶೇಷ ತನಿಖಾ ತಂಡ ರಚನೆ ಮಾಡಲು ಆಗುವುದಿಲ್ಲ…

ರಫೇಲ್ ಹಗರಣದ ಮಾತುಗಳು ಕಾಂಗ್ರೆಸ್ ಅದ್ಯಕ್ಷರ ಬಾಯಿಂದ ಹೊರ ಬರುತ್ತಿದ್ದಂತೆ. ಅವರ ಸಂಗಡಿಗರು ಇದ್ರ ಬಗ್ಗೆ ಧ್ವನಿ ಗೂಡಿಸಿದ್ದರು, ಅಷ್ಟೆ ಅಲ್ಲ ರಫೇಲ್ ಡೀಲ್ ಮೋದಿ ಪಾಲಿಗೆ ಮತ್ತೊಂದು ಬೋಪೋರ್ಸ್ ಆಗಲಿದೆ ಅಂತಾ ಘಂಟಾಘೋಷವಾಗಿ ಒಪ್ಪಿಕೊಂಡಿದ್ದರು. ಕಾಂಗ್ರೆಸ್ ಮುಖವಾಣಿಯಲ್ಲೂ ಇದು ಬಿಜೆಪಿಯ ಬೋಪೋರ್ಸ್ ಅನ್ನೋ ಮಾತುಗಳು ಅಚ್ಚೊತ್ತಿದ್ದವು. ಹೇಗಾದ್ರು ಸರಿಯೇ ಮೋದಿಯನ್ನ ರಫೇಲ್ ಖೆಡ್ಡಾದಲ್ಲಿ ಕೆಡವ ಬೇಕು ಅಂತಾ ಕಾಂಗ್ರೆಸ್ ಮತ್ತು ಅವರ ತಂಡ ಹಗಲಿರುಳು ಶ್ರಮಿಸಿತ್ತು. ಆದ್ರೀಗ ಸುಪ್ರೀಂ ಕೋರ್ಟ್ ಎಲ್ಲದಕ್ಕೂ ಪುಲ್ ಸ್ಟಾಪ್ ಇಟ್ಟು, ರಕ್ಷಣಾ ವಿಚಾರದಲ್ಲಿ ಮಧ್ಯ ಪ್ರವೇಶ ಇಲ್ಲ ಅಂತಾ ಖಂಡ ತುಂಡವಾಗಿ ಹೇಳಿದೆ.

ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢ ಮುಖ್ಯಮಂತ್ರಿ ಆಯ್ಕೆ ಕುರಿತಂತೆ ತಲೆಬಿಸಿ ಮಾಡಿಕೊಂಡಿದ್ದ ರಾಹುಲ್ ಗಾಂಧಿ ಅವರಿಗೆ ರಫೇಲ್ ಡೀಲ್ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಮತ್ತಷ್ಟು ಕಂಗೆಡಿಸಿದೆ. ರಾಹುಲ್ ಗಾಂಧಿ ಅವರು ರಫೇಲ್ ಡೀಲ್ ಬಗ್ಗೆ ಮತ್ತು ನರೇಂದ್ರ ಮೋದಿಯವರ ಬಗ್ಗೆ ಎಷ್ಟು ಆಕ್ರೋಶ ತುಂಬಿಕೊಂಡಿದ್ದರೆಂದರೆ, ಮಿಜೋರಾಂನ ಗುಡ್ಡಗಾಡು ಪ್ರದೇಶಕ್ಕೇ ಹೋಗಲಿ, ಮಧ್ಯ ಪ್ರದೇಶದಲ್ಲಿರುವ ಹಳ್ಳಿಗೇ ಹೋಗಲಿ ಅಲ್ಲಿಯೂ ಕೂಡ ರಫೇಲ್ ಡೀಲ್ ಅವ್ಯವಹಾರದ ಬಗ್ಗೆ ಏರಿದ ಸ್ವರದಲ್ಲಿ ಭಾಷಣ ನೀಡುತ್ತಿದ್ದರು. ಫ್ರಾನ್ಸ್ ಮತ್ತು ಭಾರತ ಸರಕಾರದ ನಡುವೆ 36 ರಫೇಲ್ ಫೈಟರ್ ಜೆಟ್ ಖರೀದಿಯ ಅವ್ಯವಹಾರವನ್ನು ತನಿಖೆಗೆ ಒಳಪಡಿಸಬೇಕೆಂದು ಕೋರಲಾಗಿದ್ದ ಎಲ್ಲ ಅರ್ಜಿಗಳನ್ನು ಸರ್ವೋಚ್ಚ ನ್ಯಾಯಾಲಯ ತಿರಸ್ಕರಿಸಿದ್ದರಿಂದ, ಲೋಕಸಭೆಗೂ ಮುನ್ನ ಕಾಂಗ್ರೆಸ್ಸಿಗೆ ಮತ್ತು ರಾಹುಲ್ ಗಾಂಧಿಯವರಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.. ಈ ಮೂಲಕ 2019ಕ್ಕೆ ಕಾಯ್ದಿರಿಸಿದ್ದ ಚುನಾವಣಾ ವಿಷಯವೊಂದು ಕೈ ತಪ್ಪಿ ಹೋಗಿದೆ..

ಸೋ ರಫೇಲ್ ವಿಚಾರ ಕಾಂಗ್ರೆಸ್ ಪಾಲಿಗೆ ಕಹಿಯಾಗಿದ್ರೆ, ಬಿಜೆಪಿ ಪಾಲಿಗೆ ಸಿಹಿಯನ್ನ ಉಣ ಬಡಿಸಿದೆ. ಈಗ ರಫೇಲ್ ವಿಚಾರದಲ್ಲಿ ರಾಹುಲ್ ಮಾಡುತ್ತಿದ್ದ ಸುಳ್ಳು ಆರೋಪಗಳೇ ಬಿಜೆಪಿಗೆ ಪ್ಲಸ್ ಆದರೂ ಅಚ್ಚರಿ ಪಡಬೇಕಿಲ್ಲ. ಏಕೆಂದ್ರೆ ರಾಹುಲ್ ಗಾಂಧಿ ಸುಳ್ಳು ಹೇಳುತ್ತಿದ್ದಾರೆ. ರಫೇಲ್ ನಲ್ಲಿ ಯಾವುದೇ ಅವ್ಯಹಾರ ನಡೆದಿಲ್ಲ ಅಂತಾ ಬಿಜೆಪಿ ನಾಯಕರು ಕೂಗೆಬ್ಬಿಸಿದ್ದಾರೆ, ಅಷ್ಟೆ ಅಲ್ಲ ನಾವು ಚೌಕಿದಾರರು, ನಾವು ಚೋರರಲ್ಲ, ರಾಹುಲ್ ದೇಶದ ಜನರ ಹಾದಿ ತಪ್ಪಿಸುತ್ತಿದ್ದಾರೆ ಅಂತಾ ರಾಹುಲ್ ಮೇಲೆ ಮುಗಿ ಬಿದ್ದಿದ್ದಾರೆ. ಹಾಗಾಗಿ ರಾಹುಲ್ ಗೆ ರಫೇಲ್ ಬಲ ಸಧ್ಯಕ್ಕೆ ಇಲ್ಲ.

ಒಟ್ಟಾರೆ ರಫೇಲ್ ಡೀಲ್ ರಾಜಕೀಯಲಾಗಿ ಹಲವಾರು ಹೋರಾಟ, ಹಾರಾಟಕ್ಕೆ ಕಾರಣವಾಗಿತ್ತು. ಎಲ್ಲೇ ಹೋದ್ರು ರಫೇಲ್ ಏರಿ ಮೋದಿ ಮೇಲೆ ಮಾತಿನ ಬಾಂಬ್ ಸುರಿಯುತ್ತಿದ್ದ ರಾಹುಲ್ ಗಾಂಧಿ ಈಗ ಸೈಲೆಂಟ್ ಆಗಬೇಕಾದ ಅನಿವಾರ್ಯತೆ ಎದುರಾಗಿದೆ. ಸಧ್ಯ ಮೋದಿ ರಫೇಲ್ ಮುಕ್ತವಾಗಿದ್ದಾರೆ. ಕಾಂಗ್ರೆಸ್ ನಾಯಕರ ಹೇಳಿಕೆ ನೋಡ್ತಾ ಇದ್ರೆ ಇಲ್ಲಿಗೆ ಅವರು ಸುಮ್ಮನಾಗುವಂತೆ ಕಾಣುತ್ತಿಲ್ಲ. ರಫೇಲ್ ಹಿಟ್ಟುಕೊಂಡೆ ಬೇರೆಯದ್ದೇ ಪ್ಲಾನ್ ರೂಪಿಸುತ್ತಿದ್ದಾರೆ. ಆ ಪ್ಲಾನ್ ಬಿಜೆಪಿಗೆ ಮುಳುವಾಗುತ್ತಾ. ಇಲ್ಲ ಕಾಂಗ್ರೆಸ್ ಗೆ ಪೆಟ್ಟು ಕೊಡುತ್ತಾ? ರಫೇಲ್ ಹಾಕುವ ಬಾಂಬ್ ಗೆ ಸಿಡಿದು ಹೋಗುವವರು ಯಾರು? ಆ ಎಲ್ಲದಕ್ಕೂ ಕಾಲವೇ ಉತ್ತರಿಸಬೇಕು…

LEAVE A REPLY

Please enter your comment!
Please enter your name here