Home Latest ನೋಟ್ ಬ್ಯಾನ್ ಆಗಿ 2 ವರ್ಷದ ಬಳಿಕ ಮೂಟೆಗಟ್ಟಲೆ ರಾಜ್ಯದಲ್ಲಿ 667 ಕೋಟಿ ಮೌಲ್ಯದ ಹಳೆ...

ನೋಟ್ ಬ್ಯಾನ್ ಆಗಿ 2 ವರ್ಷದ ಬಳಿಕ ಮೂಟೆಗಟ್ಟಲೆ ರಾಜ್ಯದಲ್ಲಿ 667 ಕೋಟಿ ಮೌಲ್ಯದ ಹಳೆ ನೋಟುಗಳು ಪತ್ತೆ..ಮನಿ ಡಬಲ್ ಮಾಡೋ ದಂಧೆಗೆ ಇಳಿದಿದ್ದ ಖದೀಮರು ಕೊನೆಗೂ ಅಂದರ್..

491
0
SHARE

ದೇಶದಲ್ಲಿ ನೋಟು ಅಮಾನ್ಯೀಕರಣ ಮಾಡಿ 2 ವರ್ಷಗಳೇ ಕಳೆದಿವೆ. 500 ಹಾಗೂ 1000 ರೂ ಮುಖಬೆಲೆಯ ಹಳೆ ನೋಟುಗಳು ಸದ್ಯ ಚಲಾವಣೆಯಲ್ಲಿಲ್ಲ. ಆದ್ರೆ ಇದೀಗ ರಾಜ್ಯದಲ್ಲಿ ಮೂಟೆಗಟ್ಟಲೆ ಹಳೆ ನೋಟುಗಳು ಪತ್ತೆಯಾಗಿವೆ. ನೋಟು ಬದಲಾವಣೆ ದಂಧೆ ನಡೆಸುತ್ತಿದ್ದ ಅಂತರರಾಜ್ಯ ಖದೀಮರನ್ನು ಪೊಲೀಸರು ಬಂಧಿಸಿದ್ದಾರೆ.

ಬಾಗಲಕೋಟೆ ಡಿಸಿಐಬಿ, ನವನಗರ ಠಾಣೆ ಪೊಲೀಸರು ಜಂಟಿ ದಾಳಿ ನಡೆಸಿ ಮನಿ ಡಬ್ಲಿಂಗ್ ಮತ್ತು ಹಳೆ ನೋಟ್ ಎಕ್ಷ ಚೇಂಜ್ ಜಾಲ ಪತ್ತೆ ಹಚ್ಚಿದ್ದಾರೆ. 667 ಕೋಟಿ ಹಳೆ ನೋಟ್ ಬದಲಾವಣೆ ಜಾಲ ಭೇದಿಸಿದ ಡಿಸಿಐಬಿ ಪೊಲೀಸರು ಮತ್ತು ನವನಗರ ಠಾಣೆ ಪೊಲೀಸರು 12 ಆರೋಪಿಗಳನ್ನು ಬಂಧಿಸಿದ್ದಾರೆ. ಖದೀಮರು ಕಮೀಷನ್ ಪಡೆದು ಹಳೆ ನೋಟು ಬದಲಾವಣೆಗೆ ಡೀಲ್ ನಡೆಸಿದ್ದರು.

100 ರೂಗೆ 30 ರೂ ಕಮೀಷನ್ ನಂತೆ ಮಾಡಿಕೊಂಡ ಡೀಲ್ ಇದಾಗಿದ್ದು, ಹಳೆ ನೋಟ್ ನೀಡಿದವರಿಂದ 30 ಲಕ್ಷ ಕೊಡಬೇಕೆಂದು ಡೀಲ್ ಕುದುರಿಸಿದ್ದ ಆರೋಪಿಗಳು ಈಗ ಅಂದರ್ ಆಗಿದ್ದಾರೆ. ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ತೋಳಮಟ್ಟಿ ಗ್ರಾಮದ ಶಂಕರ್ ಗಾಮಾ ಎಂಬುವನು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಉಳಿದಂತೆ ಮಹಾರಾಷ್ಟ್ರ, ಉತ್ತರಪ್ರದೇಶ, ಗೋವಾ,ರಾಜಸ್ಥಾನದ ಮೂಲದವರು ಹಳೆ ನೋಟು ಪಡೆದು ಹೊಸ ನೋಟು ನೀಡೋಕೆ ಮುಂದಾಗಿದ್ದು ಪೊಲೀಸರ ತನಿಖೆಯಿಂದ ಬಯಲಾಗಿದೆ.

ಬಾಗಲಕೋಟೆ ಡಿವೈ ಎಸ್ ಪಿ ಮಾರ್ಗದರ್ಶನದಲ್ಲಿ ನಡೆದ ದಾಳಿ ಇದಾಗಿದ್ದು, ನಗರದ ಹರಿಪ್ರಿಯಾ, ಅಕ್ಷಯ್, ವಿನಾಯಕ್ ಹೊಟೆಲ್ ನಲ್ಲಿ ಆರೋಪಿಗಳು ಒಂದು ವಾರದಿಂದ ತಂಗಿದ್ದರು. ಹೊಟೆಲ್ ನಲ್ಲಿಯೇ ಡೀಲ್ ನಡೆದಿತ್ತು. ಬಂಧಿತ ಆರೋಪಿಗಳು ನಮ್ಮದೇ ಆರ್ ಟಿ ಜಿಎಸ್ ಕಂಪನಿ‌ ಇದೆ, ಆರ್ ಬಿ ಐ ಸಿಬ್ಬಂದಿ ನಮಗೆ ಪರಿಚಯ ಇದ್ದಾರೆ, ಹಳೆ ನೋಟ್ ಕೊಟ್ಟರೆ ಹೊಸ ನೋಟ್ ನೀಡೋದಾಗಿ ಹೇಳಿಕೊಂಡು ಮೋಸ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.

ಈ ಹಿಂದೆ ಇದೆ ಗ್ಯಾಂಗ್ ಬೆಂಗಳೂರು, ಚೆನ್ನೈನಲ್ಲಿ ವಂಚನೆಗೆ ವಿಫಲ ಯತ್ನ ನಡೆಸಿದೆ. ಬಾಗಲಕೋಟೆ ಡಿಸಿಐಬಿ ಇನ್ಸ್ ಪೆಕ್ಟರ್ ಸಂಜೀವ್ ಕಾಂಬಳೆ, ನಗರ ಠಾಣೆ ಸಿಪಿಐ ಶ್ರೀಶೈಲ್ ಗಾಬಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ಎಪ್ ಐ ಆರ್ ದಾಖಲಾಗಿದೆ.ಶಂಕರ್ ಗಾಮಾ, ಮನೋಜಕುಮಾರ, ಶರತ್ ಪಾಟೀಲ್, ಮಹೇಂದ್ರ ನವಸಿ,ಆಶ್ಪಾಕ್,ಮಹಮದ್ ಅಕ್ಲಾಕ್,ಅಬ್ಬಾಸ್ ಫಾರುಕ್,ವಿಜಯ ಪಾಂಡೆ, ಇದ್ರೀಶ್ ಖಾಜಿ, ಸಂಗಪ್ಪ ಕೋಟಿ, ಮುರಾರಿ ಮೋರೆ, ಪಾಪತ್ ಕಾಕಾಡಿಯಾ ಬಂಧಿತ ಆರೋಪಿಗಳಾಗಿದ್ದಾರೆ.

ಇವರೆಲ್ಲರೂ ಅಂತರರಾಜ್ಯದ ಆರೋಪಿಗಳೆಂದು ಗುರುತಿಸಲಾಗಿದೆ. ಇನ್ನು ಮನಿ ಡಬ್ಲಿಂಗ್ ಪ್ರಕರಣದಲ್ಲಿ ಎಸ್ ಪಿ ಕಚೇರಿ ಮಿನಿಸ್ಟೇರಿಯಲ್ ಸಿಬ್ಬಂದಿ ಭಾಗಿಯಾಗಿದ್ದು ಕಂಡು ಬಂದಿದೆ. ಮನಿ ಡಬ್ಲಿಂಗ್ ಗಾಗಿ 20 ಸಾವಿರ ಹಣ ನೀಡಿದ್ದ ಎಸ್ ಪಿ ಕಚೇರಿ ಮಿನಿಸ್ಟೇರಿಯಲ್ ಸಿಬ್ಬಂದಿ ಅಶೋಕ ನಾಯಕ್ ಪ್ರಕರಣದಲ್ಲಿ ಭಾಗಿಯಾಗಿದ್ಧಾನೆ ಎಂಬ ಬಲವಾದ ಸಂಶಯ ಮೂಡಿದೆ.

ಆದರೆ ಪೊಲೀಸರು ಅಶೋಕ ನಾಯಕ್ ರಕ್ಷಣೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದ್ದು,ಅಶೋಕ ನಾಯಕನಿಂದಲೇ ನವನಗರ ಠಾಣೆಯಲ್ಲಿ ದೂರು ದಾಖಲಾಗಿದೆ.ಒಟ್ನಲ್ಲಿ ಇದೀಗ ಹಳೆಯ 667 ಕೋಟಿ ಮೌಲ್ಯದ ನೋಟುಗಳ ಬದಲಾವಣೆಗೆ ಮುಂದಾಗಿದ್ದ ಕಿರಾತಕರನ್ನು ಹೆಡೆಮುರಿಕಟ್ಟಿದ್ದಾರೆ. ಈ ಪ್ರಕರಣದಲ್ಲಿ ಯಾರ ಕೈವಾಡ ಇದೆ ಎಂಬುದು ಪ್ರಕರಣದ ಸಂಪೂರ್ಣ ತನಿಖೆ ನಡೆದ ನಂತರವಷ್ಟೇ ತಿಳಿಯಲಿದೆ.

LEAVE A REPLY

Please enter your comment!
Please enter your name here