Home District ನೋಟ್ ಬ್ಯಾನ್ ನಿಂದ ನಿಟ್ಟುಸಿರು ಬಿಟ್ರ್ರಾ ಜನತೆ..!? ಭವಿಷ್ಯ ನುಡಿದೇಬಿಡ್ರು ಮೋದಿ ಹಣೆಬರಹದ ವ್ಯಥೆ..! ಮೋದಿಗೆ...

ನೋಟ್ ಬ್ಯಾನ್ ನಿಂದ ನಿಟ್ಟುಸಿರು ಬಿಟ್ರ್ರಾ ಜನತೆ..!? ಭವಿಷ್ಯ ನುಡಿದೇಬಿಡ್ರು ಮೋದಿ ಹಣೆಬರಹದ ವ್ಯಥೆ..! ಮೋದಿಗೆ ನೋಟ್ ಬ್ಯಾನ್ ವರನೋ..? ಶಾಪಾನೋ..?

529
0
SHARE

ಈ ದಿನಾಂಕವನ್ನ ಭಾರತೀಯರು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಏಕೆಂದ್ರೆ ಅಂದು ದೇಶದಲ್ಲಿ ಪ್ರಧಾನಿ ಮೋದಿ ಕ್ರಾಂತಿಕಾರಕ ನಿರ್ಧಾರವೊಂದನ್ನ ತೆಗೆದುಕೊಂಡಿದ್ರು. ಆ ನಿರ್ಧಾರ ಬೇರೆ ಯಾವುದು ಅಲ್ಲ ಅದೇ ನೋಟ್ ಬ್ಯಾನ್…ಮೋದಿ ಈ ಮಾತು ಹೇಳಿದ್ದೇ ತಡ ದೇಶದಲ್ಲಿ ಅಲ್ಲೋಲ ಕಲ್ಲೋಲ ಶುರುವಾಗಿತ್ತು. ಇಡೀ ದೇಶಕ್ಕೆ ದೇಶವೇ ಹೊಸ ಆರ್ಥಿಕ ತುರ್ತು ಪರಿಸ್ಥಿತಿ ಎದುರಿಸುವಂತೆ ಆಯ್ತುಯ ವಿಪಕ್ಷಗಳು ಆಡಳಿತ ಪಕ್ಷದ ಮೇಲೆ ಮುಗಿ ಬಿದ್ದವು, ಯಾವ ಬ್ಯಾಂಕ್ ನೋಡಿದ್ರು ಅಲ್ಲಿ ಕಿಲೋ ಮೀಟರ್ ಗಟ್ಟಲೇ ಸಾಲು. ದೇಶವಾಸಿ ಅಂದು ಅಕ್ಷರಶಃ ಬಸವಳಿದು ಹೋಗಿದ್ದ.

ಮುಂದಿನ ಭವಿಷ್ಯಕ್ಕಾಗಿ ಆ ದಿನಗಳನ್ನ ಬಲಿ ಕೊಟ್ಟಿದ್ದ. ಆ ಕ್ರಾಂತಿ ಕಾರಕ ನಿರ್ದಾರದಿಂದ ದೇಶಕ್ಕೆ ಒಳ್ಳೆಯದೇ ಆಗುತ್ತೆ ಅಂತಾ ಭಾವಿಸಿದ್ದ. ತತ್ ಕ್ಷಣದಲ್ಲಿ ಅಂದು ದೇಶವಾಸಿ ಅನುಭವಿಸಿದ್ದ ಸಂಕಷ್ಟ ನಿಜಕ್ಕೂ ಊಹಿಸಲಾಧ್ಯವಾಗಿತ್ತು. ಕೈ ತುಂಬಾ ಕಾಸಿದ್ರು ಸಿಂಗಲ್ ಟೀ ಕುಡಿಯಲು ಅಂದು ಪರದಾಡಬೇಕಾಗಿತ್ತು. ಅಂದು ಸಂಭವಿಸಿದ್ದ ಸಾವು ನೋವು ಇನ್ನು ಕಣ್ಣೆದುರಲ್ಲೇ ಹಚ್ಚ ಹಸಿರಾಗಿದೆ.ಈಗ ನೋಟ್ ಬ್ಯಾನ್ ಆಗಿ ಎರಡು ವರ್ಷಗಳೇ ಕಳೆಯುತ್ತಿದೆ. ಇಂದಿಗೂ ಕೂಡ ನೋಟ್ ಬ್ಯಾನ್ ಲಾಭ ನಷ್ಟಗಳ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಬಿಜೆಪಿ ನೋಟ್ ಬ್ಯಾನ್ ನಿಂದ ದೇಶಕ್ಕೆ ಒಳ್ಳೆಯದು ಆಗಿದೆ ಅಂದ್ರೆ. ಪ್ರತಿಪಕ್ಷಗಳು ನೋಟ್ ಬ್ಯಾನ್ ನಿಂದ ದೊಡ್ಡ ಮಟ್ಟದಲ್ಲಿ ನಷ್ಟವಾಗಿದೆ ಅಂತಾ ಬೊಬ್ಬೆ ಹೊಡೆಯುತ್ತಿದೆ.

ಮೋದಿ ಮಾಜಿ ಆರ್ಥಿಕ ಸಲಹೆಗಾರರೊಬ್ಬರು ನೋಟ್ ಬ್ಯಾನ್ ದೇಶಕ್ಕೆ ದೊಡ್ಡ ಆಘಾತ ಅಂತಾ ಕೇಂದ್ರ ಸರ್ಕಾರಕ್ಕೆ ಶಾಕ್ ಕೊಟ್ಟಿದ್ದಾರೆ.ಸರ್ಕಾರದ ಭಾಗವಾಗಿದ್ದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರ ಮಹತ್ತರ ನಿರ್ಧಾರವಾದ ಅಪನಗದೀಕರಣವನ್ನು ಬೆಂಬಲಿಸಿ ಹೇಳಿಕೆ ನೀಡುತ್ತಿದ್ದ ಈ ಅಧಿಕಾರಿಗಳು, ಇದೀಗ ನೋಟ್ ಬ್ಯಾನ್ ಒಂದು ತಪ್ಪು ನಿರ್ಧಾರ ಎಂದು ಹೇಳಿಕೆ ನೀಡುತ್ತಿದ್ದಾರೆ. ಇತ್ತೀಚಿಗಷ್ಟೇ ಸಂಸದೀಯ ಸಮಿತಿ ಮುಂದೆ ಹಾಜರಾಗಿದ್ದ ಆರ್ ಬಿಐ ಗರ್ವನರ್ ಊರ್ಜಿತ್ ಪಟೇಲ್, ಕೆಲವು ಸಕಾರಾತ್ಮಕ ಬೆಳವಣಿಗೆಗಳ ಹೊರತಾಗಿಯೂ ನೋಟ್ ಬ್ಯಾನ್ ನಿಂದ ದೇಶದ ಆರ್ಥಿಕ ಪರಿಸ್ಥಿತಿ ಅಂತಂತ್ರವಾಗಿತ್ತು ಎಂದು ಹೇಳಿದ್ದರು.

ಇದೀಗ ಅಪನಗದೀಕರಣವನ್ನು ವಿರೋಧಿಸುವ ಸರದಿ ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಅವರದ್ದು. ಹೌದು, ಮೋದಿ ಸರ್ಕಾರದಲ್ಲಿ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಸುಬ್ರಮಣಿಯನ್, ಅಪನಗದೀಕರಣ ದೇಶದ ಆರ್ಥಿಕತೆ ಮೇಲೆ ಮಾಡಿದ ಕಠಿಣ ಆಘಾತ ಎಂದು ಅಭಿಪ್ರಾಯಪಟ್ಟಿದ್ದಾರೆ.ಸುಮಾರು ನಾಲ್ಕು ವರ್ಷಗಳ ಕಾಲ ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಅರವಿಂದ್ ಸುಬ್ರಮಣಿಯನ್, ಅಪನಗದೀಕರಣದ ವೇಳೆಯೂ ಇದೇ ಹುದ್ದೆಯಲ್ಲಿದ್ದರು. ನಂತರ 2018 ರಲ್ಲಿ ವೈಯಕ್ತಿಕ ಕಾರಣ ನೀಡಿ ಸುಬ್ರಮಣಿಯನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಾಜೀನಾಮೆ ನೀಡಿದ ಬಳಿಕ ದೇಶದ ಆರ್ಥಿಕತೆ ಕುರಿತಂತೆ ಒಂದು ಪುಸ್ತಕವನ್ನೂ ಬರೆದಿದ್ದರು, ಆ ಪುಸ್ತಕದಲ್ಲಿ ನೋಟ್ ಬ್ಯಾನ್ ಕುರಿತು ಉಲ್ಲೇಖ ಮಾಡಿದ್ದಾರೆ. ಅದ್ರಲ್ಲಿ ನೋಟ್ ಬ್ಯಾನ್ ದೇಶದ ಆರ್ಥಿಕತೆಗೆ ಯಾವ ರೀತಿ ಪೆಟ್ಟು ಕೊಟ್ಟಿದೆ ಅನ್ನೋದನ್ನ ವಿವರಿಸಿದ್ದಾರೆ.ಪನಗದೀಕರಣ ಬಳಿಕ ಬಿಡುಗಡೆಯಾದ 2000 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳು ಉತ್ತಮ ಗುಣಮಟ್ಟಹೊಂದಿಲ್ಲ, ಹೆಚ್ಚು ದಿನ ಬಾಳಿಕೆ ಬರುವುದಿಲ್ಲ ಎಂಬ ಜನಸಾಮಾನ್ಯರ ಮಾತು ಈಗ ನಿಜವಾಗುತ್ತಿದೆಯೇ? ಹೌದು ಎನ್ನುತ್ತಿವೆ ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿರುವ ವರದಿಗಳು. 2016ರ ನವೆಂಬರ್‌ ನಂತರ ಚಲಾವಣೆಗೆ ಬಂದಿರುವ ಹೊಸ ರೂಪ, ಬಣ್ಣದ ನೋಟುಗಳು ಈ ಹಿಂದೆ ಚಲಾವಣೆಯಲ್ಲಿದ್ದ ಹಳೆಯ ನೋಟುಗಳಿಗೆ ಹೋಲಿಸಿದರೆ ಬಹುಬೇಗನೇ ಆಯಸ್ಸು ಕಳೆದುಕೊಳ್ಳುತ್ತಿದ್ದು, ನಿರುಪಯುಕ್ತವಾಗುತ್ತಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಪ್ರಕಟವಾಗಿರುವ ವರದಿಗಳು ಹೇಳ್ತಾ ಇವೆ.

ಅರವಿಂದ್ ಸುಬ್ರಮಣಿಯನ್ ಪುಸ್ತಕದ ಉಲ್ಲೇಖ:’ಅಪನಗದೀಕರಣವು ತೀವ್ರ, ಕಠಿಣವಾದ ಆರ್ಥಿಕ ಆಘಾತ. ಚಾಲ್ತಿಯಲ್ಲಿದ್ದ ಶೇಕಡಾ 86ರಷ್ಟು ಕರೆನ್ಸಿಗಳನ್ನು ಒಂದೇ ಹಂತದಲ್ಲಿ ಹಿಂದಕ್ಕೆ ಪಡೆದುಕೊಳ್ಳಲಾಯಿತು. ಅಪನಗದೀಕರಣದಿಂದ ನೈಜ ಜಿಡಿಪಿ ಬೆಳವಣಿಗೆಗೆ ಹಾನಿಯಾಯಿತು. ಈ ಹಿಂದೆಯೂ ಬೆಳವಣಿಗೆ ಕುಂಠಿತಗೊಂಡಿತ್ತು. ಆದರೆ, ಅಪನಗದೀಕರಣದ ಬಳಿಕ ಕುಸಿತ ತೀವ್ರಗೊಂಡಿತು.’ ಅಪನಗದೀಕರಣಕ್ಕೆ ಆರು ತ್ರೈಮಾಸಿಕ ಅವಧಿಗೆ ಮುನ್ನ ಬೆಳವಣಿಗೆ ದರ ಶೇಕಡಾ 8ರಷ್ಟಿತ್ತು. ಏಳು ತ್ರೈಮಾಸಿಕ ಅವಧಿ ಬಳಿಕ ಅದು ಸರಾಸರಿ ಶೇಕಡಾ 6.8ಕ್ಕೆ ಕುಸಿಯಿತು. ಬೆಳವಣಿಗೆ ಕುಂಠಿತಗೊಳ್ಳಲು ಅಪನಗದೀಕರಣ ಕಾರಣ ಎಂಬುದಕ್ಕೆ ಯಾರ ತಕರಾರೂ ಇಲ್ಲ. ಆದರೆ, ಶೇಕಡಾ 2ರಷ್ಟು ಆಯಿತೇ ಅಥವಾ ಇನ್ನೂ ಕಡಿಮೆಯೇ ಎಂದು ಅದರ ಪರಿಣಾಮದ ಗಾತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಅವಧಿಯಲ್ಲಿ ಅನೇಕ ಅಂಶಗಳು ಬೆಳವಣಿಗೆ ಮೇಲೆ ಪರಿಣಾಮ ಬೀರಿದ್ದವು. ಮುಖ್ಯವಾಗಿ ಅಧಿಕ ವಾಸ್ತವ ಬಡ್ಡಿ ದರಗಳು, ಜಿಎಸ್ಟಿ ಜಾರಿ ಮತ್ತು ತೈಲ ಬೆಲೆಗಳು ಆರ್ಥಿಕತೆಗೆ ಹೊಡೆತ ನೀಡಿದ್ದವು.ಎಂದೂ ತಮ್ಮ ಪುಸ್ತಕದಲ್ಲಿ ಉಲ್ಲೇಖ ಮಾಡಿದ್ದಾರೆ..

2019……. ದೇಶಕ್ಕೆ ದೇಶವೇ ಎದುರು ನೋಡುತ್ತಿರೋ ವರ್ಷ… ಬರೀ ಹೊಸ ವರ್ಷ ಅನ್ನೋ ಕಾರಣಕ್ಕೆ ಮಾತ್ರವಲ್ಲ,… ಇದೇ 2019ಕ್ಕೆ ದೇಶಕ್ಕೆ ಸಾರ್ವತ್ರಿಕ ಚುನಾವಣೆಯೂ ಎದುರಾಗಲಿದೆ. ಆ ಕಾರಣಕ್ಕೆ ದೇಶ ತುದಿಗಾಲಲ್ಲಿ ನಿಂತು ಹೊಸ ವರ್ಷವನ್ನ ಬರ ಮಾಡಿಕೊಳ್ಳಲು ಕಾಯುತ್ತಿದೆ… ಈ ಚುನಾವಣೆ ನರೇಂದ್ರ ಮೋದಿ ಅಂಡ್ ಟೀಂ ಗೆ ಅಗ್ನಿ ಪರೀಕ್ಷೆ ಆದ್ರೆ, ಕಾಂಗ್ರೆಸ್ ಮತ್ತು ಅದ್ರ ಮಿತ್ರ ಬಳಗಕ್ಕೆ ಅಳಿವು ಉಳಿವಿನ ಪ್ರಶ್ನೆ. ಈಗಾಗಲೇ ಸಮೀಕ್ಷೆಗಳು ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಅಂತಾ ಹೇಳುತ್ತಿದೆ. ಇದ್ರ ನಡುವೆ ಮೋದಿಯನ್ನ ಸೋಲಿಸಬೇಕು ಅಂತಾ ಕಾಂಗ್ರೆಸ್ ಕಚ್ಚೆ ಕಟ್ಟಿ ನಿಂತಿದೆ.

ಈ 2019 ಯಾರಿಗೆ ಲಕ್ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.  ಮೋದಿ ತೆಗೆದುಕೊಂಡಿರೋ ಈ ಕ್ರಾಂತಿ ಕಾರಕ ನಿರ್ಧಾರ ಮೋದಿ ಪಾಲಿಗೆ ವರವಾಗುತ್ತಾ ಶಾಪವಾಗುತ್ತಾ. ಈ ಪ್ರಶ್ನೆಗೆ ಉತ್ತರ ಹೇಳೋದು ಸಧ್ಯಕ್ಕೆ ಕಷ್ಟ ಸಾಧ್ಯ, ಆದ್ರೆ ಸಧ್ಯದ ಪರಿಸ್ಥಿತಿಯಲ್ಲಿ ಮೋದಿ ಪಾಲಿಗೆ ನೋಟ್ ಬ್ಯಾನ್ ನಿಜಕ್ಕೂ ಕಲ್ಲು ಮುಳ್ಳಿನ ಹಾದಿ ಸೃಷ್ಟಿಸುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.ಒಟ್ಟಾರೆ ನೋಟ್ ಬ್ಯಾನ್ ವಿಚಾರದಲ್ಲಿ ಪ್ರತಿಪಕ್ಷಗಳು ಮೋದಿ ಮೇಲೆ ಯಾವ ರೀತಿ ಅಸ್ತ್ರ ಪ್ರಯೋಗಿಸುತ್ತವೇ ಅನ್ನೋದ್ರ ಮೇಲೆ ಮೋದಿ ಭವಿಷ್ಯ ನಿಂತಿದೆ. ಈಗಿನ ಪರಿಸ್ಥಿತಿಯಲ್ಲಿ ನೋಟ್ ಬ್ಯಾನ್ ಅನ್ನು ಫೇಲ್ಯೂರ್ ಅಂತಾ ಸಾಬೀತು ಪಡಿಸೋಕೆ ಕಾಂಗ್ರೆಸ್ ಕೈಯಲ್ಲಾಗಲಿ ಅವರ ಮಿತ್ರ ಪಕ್ಷಗಳ ಕೈಯಲ್ಲಿ ಸಾಧ್ಯವಾಗುತ್ತಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ನೋಟ್ ಬ್ಯಾನ್ ಮತ್ತಿನ್ಯಾವ ರೀತಿ ಪ್ರತಿ ಧ್ವನಿಸುತ್ತೆ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕು…

 

LEAVE A REPLY

Please enter your comment!
Please enter your name here