Home Crime ನ್ಯಾಯಕೊಡಿಸೋ ಬದಲಿಗೆ ಪೊಲೀಸರಿಂದಲೇ ಕಿರುಕುಳ..?! ಪೊಲೀಸಪ್ಪನ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ..!

ನ್ಯಾಯಕೊಡಿಸೋ ಬದಲಿಗೆ ಪೊಲೀಸರಿಂದಲೇ ಕಿರುಕುಳ..?! ಪೊಲೀಸಪ್ಪನ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ..!

496
0
SHARE

ಗಂಡನ ಕಿರುಕುಳ ತಪ್ಪಿಸಿ ಅಂತ ಪೊಲೀಸ್ ಠಾಣೆಗೆ ನ್ಯಾಯ ಕೇಳಲು ಹೋದ ಮಹಿಳೆಗೆ ಅನ್ಯಾಯವಾಗಿದೆ. ಪೋಲೀಸಪ್ಪನೇ ಮಹಿಳೆಗೆ ಹಿಂಸೆ ನೀಡಿದ್ದಾನೆ. ಇತ್ತ ಪತಿಯ ಹಿಂಸೆ ಮತ್ತೊಂದೆಡೆ ಪೊಲೀಸಪ್ಪನ ಕಿರುಕುಳ ತಾಳಲಾರದೆ ನೊಂದ ಮಹಿಳೆ ಆತ್ಮಹತ್ಯೆಗೂ ಯತ್ನಿಸಿದ್ದಾಳೆ. ಇದೀಗ ಎಎಸ್ ಐ ವಿರುದ್ಧ ಕ್ರಮಕ್ಕೆ ನೊಂದ ಮಹಿಳೆ ಆಗ್ರಹಿಸಿದ್ದಾಳೆ.ಹೀಗೆ ಅಸಹಾಯಕಳಾಗಿ ನಿಂತಿರುವ ಈ ಮಹಿಳೆ ಹೆಸರು ಲಕ್ಷ್ಮಮ್ಮ.

ಮೈಸೂರು ಜಿಲ್ಲೆ ಹುಣಸೂರಿನ ವಡೆರಹೊಸಹಳ್ಳಿ ಗ್ರಾಮದ ಈಕೆ ಗಂಡನ ಕಿರುಕುಳದಿಂದ ಬೇಸತ್ತಿದ್ದಾಳೆ. ಶೀಲ ಶಂಕಿಸಿ ನಿತ್ಯ ಕಿರುಕುಳ ನೀಡುವ ಗಂಡನ ಬಗ್ಗೆ ದೂರು ನೀಡಲು ಠಾಣೆಗೆ ಹೋಗಿದ್ದಾಳೆ. ಹುಣಸೂರಿನ ಬಿಳಿಕೆರೆ ಪೊಲೀಸ್ ಠಾಣೆಗೆ ಹೋದ ಈ ಲಕ್ಷ್ಮಮ್ಮಗೆ ಠಾಣೆಯ ಎಎಸ್ ಐ ತಮ್ಮಣ್ಣೇಗೌಡ ಎಂಬಾತ ನ್ಯಾಯ ಕೊಡಿಸುವ ಬದಲು ಗಂಡನ ಮುಂದಯೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದಾನೆ.

ಸತತ ಮೂರು ದಿನಗಳ ಕಾಲ ಠಾಣೆಗೆ ಕರೆಸಿ ಮನ ಬಂದಂತೆ ಬೈದು ಮಾನಸಿಕ ಹಿಂಸೆ ನೀಡಿದ್ದಾನೆ. ಒಂದೆಡೆ ಗಂಡನ ಕಿರುಕುಳ ಮತ್ತೊಂದೆಡೆ ಪೊಲೀಸಪ್ಪನ ಕಿರುಕುಳ ತಾಳಲಾರದೆ ಲಕ್ಷ್ಮಮ್ಮ ಆತ್ಮಹತ್ಯೆಗೂ ಯತ್ನಿಸಿದ್ದಾಳೆ.ಲಂಚ ಪಡೆದು ಮನ ಬಂದಂತೆ ಬೈಯುತ್ತಿರುವ ಎಎಸ್ ಐ ತಮ್ಮಣ್ಣೇಗೌಡ, ನಿನ್ನ ಗಂಡನಿಗೆ ನಿನ್ನ ಮುಂದೆಯೇ ಬೈಯುತ್ತೇನೆ 3 ಸಾವಿರ ರೂ ಕೊಡು ಅಂತ ಒತ್ತಾಯಿಸಿದ್ನಂತೆ. ಇದಕ್ಕೆ ಒಪ್ಪದಿದ್ದಕ್ಕೆ ಠಾಣೆಯಲ್ಲಿ ಅವಾಚ್ಯವಾಗಿ ನಿಂದಿಸಿ ಅಪಮಾನ ಮಾಡಿದ್ದಾರೆ ಎಂದು ಲಕ್ಷ್ಮಮ್ಮ ಆರೋಪಿಸುತ್ತಿದ್ದಾಳೆ.

ಎಎಸ್ ಐ ವರ್ತನೆ ಬಗ್ಗೆ ಮೈಸೂರು ಎಸ್ಪಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.ನ್ಯಾಯ ಕೊಡಿಸಬೇಕಾದ ಆರಕ್ಷಕರೇ ಅಮಾನವೀಯವಾಗಿ ವರ್ತಿಸಿದರೆ, ನೊಂದವರು ಯಾರ ಬಳಿ ನ್ಯಾಯ ಕೇಳುವುದು ಎನ್ನುವಂತಾಗಿದೆ ಸ್ಥಿತಿ . ದೂರು ನೀಡಲು ಬಂದವರ ವಿರುದ್ದವೇ ದುರ್ವತನೆ ತೋರಿದ ಈ ಪೊಲೀಸ್ ಅಧಿಕಾರಿ ವಿರುದ್ದ ಇಲಾಖೆ ಇನ್ನಾದರೂ ಕ್ರಮ ಕೈಗೊಂಡು ನೊಂದ ಮಹಿಳೆಗೆ ನ್ಯಾಯ ಕೊಡಿಸಬೇಕಿದೆ.

LEAVE A REPLY

Please enter your comment!
Please enter your name here