Home District ಪಂಚ ಫಲಿತಾಂಶದಿಂದ ಪಾಠ ಕಲಿತ ಮೋದಿ ಬಜೆಟ್ ನಲ್ಲಿ ರೈತರಿಗೆ ಕೊಟ್ಟಿದ್ದೇನು? ಓಟ್ ಹಾಕಲು ಹೊರಟಿದ್ದ...

ಪಂಚ ಫಲಿತಾಂಶದಿಂದ ಪಾಠ ಕಲಿತ ಮೋದಿ ಬಜೆಟ್ ನಲ್ಲಿ ರೈತರಿಗೆ ಕೊಟ್ಟಿದ್ದೇನು? ಓಟ್ ಹಾಕಲು ಹೊರಟಿದ್ದ ಬಡವರಿಗೆ; ಮಧ್ಯಮ ವರ್ಗಕ್ಕೆ ಸಿಕ್ಕಿದ್ದೇನು.!?

2310
0
SHARE

ಲೋಕ ಚುನಾವಣೆಯನ್ನ ದೃಷ್ಟಿಯಲ್ಲಿ ಇಟ್ಕೊಂಡು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಧ್ಯಂತರ ಬಜೆಟ್ ಮಂಡನೆ ಮಾಡಿದೆ. ನಾಲ್ಕು ವರ್ಷದಲ್ಲಿ ಏನೆಲ್ಲಾ ಮರೆತಿತ್ತೋ, ಯಾರನ್ನೆಲ್ಲಾ ಕಡೆಗಣಿಸಿದ್ರೋ ಆ ಎಲ್ಲಾ ವರ್ಗವನ್ನ ಸಂತೃಪ್ತಿ ಪಡಿಸುವ ಕೆಲಸಕ್ಕೆ ಮೋದಿ ಕೈ ಹಾಕಿದ್ದಾರೆ. ಮುಖ್ಯವಾಗಿ ಬಡವರು ಮಧ್ಯಮ ವರ್ಗವನ್ನೇ ಟಾರ್ಗೆಟ್ ಮಾಡಿರೋ ಮೋದಿ, ಮತ ಹಾಕಲು ಹೊರಟು ನಿಂತಿದ್ದ ಅವರನ್ನೆಲ್ಲಾ ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಸಂಸತ್ ನಲ್ಲಿ ಬಜೆಟ್ ಮಂಡಿಸಿದ ಪಿಯೂಶ್ ಗೋಯಲ್ ರೈತರಿಗೆ ಬಂಪರ್ ಆಫರ್ ನೀಡಿದ್ದಾರೆ. ಈ ಮೂಲಕ ಅನ್ನದಾತ ಸುಖೀಭವ ಅನ್ನೋ ಮಂತ್ರವನ್ನ ಉಚ್ಛರಿಸಿದ್ದಾರೆ.ಸಣ್ಣ ಹಿಡುವಳಿದಾರರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯನ್ನು ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ. ಇದಿಷ್ಟೇ ಅಲ್ಲದೇ ಪಶುಸಂಗೋಪನೆ, ಮೀನುಗಾರಿಕೆ ಕ್ಷೇತ್ರಕ್ಕೆ ಭರಪೂರ ಯೋಜನೆಗಳನ್ನು ಘೋಷಿಸಲಾಗಿದ್ದು,

ಗೋವುಗಳ ರಕ್ಷಣೆಗೆ ರಾಷ್ಟ್ರೀಯ ಕಮಾಧೇನು ಯೋಜನೆ ಘೋಷಣೆ ಮಾಡಲಾಗಿದೆ.  2 ಹೆಕ್ಟೇರ್ ಹಾಗೂ ಅದಕ್ಕಿಂತ ಕಡಿಮೆ ಇರುವ ಸಣ್ಣ ಹಿಡುವಳಿದಾರರಿಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ರೂಪಾಯಿ ಅಂದ್ರೆ ಪ್ರತಿ ತಿಂಗಳಿಗೆ 500 ರೂ ರೈತರ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಿದೆ.  ಇದನ್ನೇ ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಎನ್ನಲಾಗುತ್ತಿದೆ.

2018 ರ ಡಿಸೆಂಬರ್ ನಿಂದಲೇ ಈ ಯೋಜನೆ ಪೂರ್ವಾನ್ವಯ ಜಾರಿಯಾಗಲಿದೆ. ಅಷ್ಟೆ ಅಲ್ಲದೆ ಪಶುಪಾಲನೆ ಮೀನುಗಾರಿಕೆ ಯೋಜನೆಗೆ 750 ಕೋಟಿ ಕೊಡಲಾಗಿದೆ. ಪ್ರತಿ ಬಾರಿ 2 ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ 6 ಸಾವಿರ ರೂಪಾಯಿ ಹಣ ವರ್ಗಾವಣೆ ಮಾಡಲಾಗುತ್ತೆ, ಅಷ್ಟೆ ಅಲ್ಲ ಸಕಾಲದಲ್ಲಿ ಸಾಲ ಪಾವತಿ  ಮಾಡುವ ರೈತರಿಗೆ ಶೇಕಡಾ 3 ರಷ್ಟು ಬಡ್ಡಿ ವಿನಾಯಿತಿಯನ್ನ ನೀಡಲಾಗುತ್ತೆ.  ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತರಿಗೆ ಶೇಕಡಾ 2ರಷ್ಟು ಬಡ್ಡಿ ರಿಯಾಯಿತಿಯನ್ನ ನೀಡಲಾಗುತ್ತೆ.

ಈ ಯೋಜನೆಯಿಂದ 12 ಕೋಟಿ ರೈತರಿಗೆ ಲಾಭವಾಗಲಿದೆ, ಅಂದ ಹಾಗೆ ಕೇಂದ್ರ ಸರ್ಕಾರ ಯೋಜನೆಗಾಗಿ 75,000 ಕೋಟಿ  ರೂಪಾಯಿಯನ್ನ ಮೀಸಲಿಡಲಾಗಿದೆ. ರೈತರ ಕಲ್ಯಾಣ ಮತ್ತು ಅವರ ಆದಾಯ ದ್ವಿಗುಣ ಮಾಡುವ ಉದ್ದೇಶದಿಂದ ಎಲ್ಲ 22 ಬೆಳೆಗಳಿಗೆ 1.5ರಷ್ಟು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ.

ಸೋ ರೈತರನ್ನೇ ಉದ್ದೇಶವಾಗಿಟ್ಟು ಕೊಂಡು ನರೇಂದ್ರ ಮೋದಿ ರೈತರಿಗೆ ಬಂಪರ್ ಆಫರ್ ಕೊಟ್ಟಿದ್ದಾರೆ. ಈ ಮೂಲಕ ರೈತಾಪಿ ವರ್ಗದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸುಮಾರು 5 ವರ್ಷಗಳ ಕಾಲ ಮೋದಿಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ರೈತರು ಈ ಚುನಾವಣಾ ಬಜೆಟ್ ನಿಂದ ಫುಲ್ ಖುಷ್ ಆಗುದ್ದಾರೆ.ಎಸ್ ನರೇಂದ್ರ ಮೋದಿ ಸರ್ಕಾರದ ಈ ಬಜೆಟ್ ಮೇಲ್ನೋಟಕ್ಕೆ ಎಲ್ಲಾ ರೀತಿಯಲ್ಲೂ ಸುಂದರವಾಗಿ ಕಾಣುತ್ತಿದೆ ಇದ್ರ ಆಳಕ್ಕೆ ಇಳುದ್ರೆ ಅಲ್ಲಿ ಗೋಚರಿಸೋದು 2019ರ ಚುನಾವಣಾ ತಂತ್ರ. ಅದು ಎಲ್ಲಾ ಸರ್ಕಾರಗಳು ಮಾಡಿಕೊಂಡೆ ಬಂದಿವೆ.

ಅದೇ ದಾರಿಯಲ್ಲಿ ನರೇಂದ್ರ ಮೋದಿ ಸರ್ಕಾರವೂ ಸಾಗಿದೆ. ಹಾಗೆ ಮೋದಿ ಇತರೆ ಕ್ಷೇತ್ರಗಳಿಗೆ ಬೇರೆ ಯಾವೆಲ್ಲಾ ಕೊಡುಗೆ ಕೊಟ್ಟಿದೆ ಅನ್ನೋದನ್ನ ನೋಡೋದ್ ಆದ್ರೆ.ದೇಶದಲ್ಲಿ ಗೋಸಂರಕ್ಷಣೆಗೆ ಸದಾ ಮುಂದಿರುವ ಬಿಪೆಪಿ ಸರ್ಕಾರ ಕಾನುಧೇನು ಆಯೋಗ ರಚಿಸಲಿದೆ.  ಉದ್ಯೋಗ ಖಾತರಿ ಯೋಜನೆಗೆ  60 ಸಾವಿರ ಕೋಟಿ ಮೀಸಲಿಟ್ಟಿದ್ದು, ಈ ಮೂಲಕ ಉದ್ಯೋಗ ಹೆಚ್ಚಳಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.  ಅಲ್ಲದೆ ಈ ಮೊತ್ತವನ್ನು ಇನ್ನು ಹೆಚ್ಚಿಸಲಾಗುವುದು ಅಂತಾ ಈ ಬಜೆಟ್ ನಲ್ಲಿ ಹೇಳಿದೆ. 21 ಸಾವಿರ ಸಂಬಳ ಪಡೆಯುವವರಿಗೆ ಇಎಸ್ ಐ ಯೋಜನೆ ಸಿಗಲಿದೆ.

ಇಎಸ್ ಐ ಆದಾಯ ಮಿತಿ ಯನ್ನು 15 ಸಾವಿರದಿಂದ 21ಸಾವಿರಕ್ಕೆ ಏರಿಕೆ ಮಾಡಲಾಗಿದೆ. ಬಹುಮುಖ್ಯವಾಗಿ ಸುಮಾರು 10 ಕೋಟಿ ಕಾರ್ಮಿಕರಿಗೆ ಪಿಎಂ ಪಿಂಚಣಿ ಯೋಜನೆ ಜಾರಿ ತರಲಾಗುವುದು. ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಸೇರಿದಂತೆ ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು  3 ಸಾವಿರ ರೂಪಾಯಿ ಪಿಂಚಣೆ ಸೌಲಬ್ಯ ಸಿಗಲಿದೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ 8 ಕೋಟಿ ಗ್ರಾಮೀಣ ಕುಟುಂಬಗಳಿಗೆ ಉಚಿತ ಎಲ್ಪಿಜಿ ಸಂಪರ್ಕ ಕಲ್ಪಿಸುವ ಗುರಿ ಹೊಂದಿದ್ದು, ಈಗಾಗಲೇ ಸುಮಾರು 6 ಕೋಟಿ ಕುಟುಂಬಗಳಿಗೆ ಎಲ್ಪಿಜಿ ಸಂಪರ್ಕ ಕಲ್ಪಿಸಲಾಗಿದೆ. ದೇಶದಲ್ಲಿರುವ ಸಾವಿರಾರು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಅಲೆಮಾರಿ ನಿಗಮ ಸ್ಥಾಪನೆ ಮಾಡಲಾಗುವುದು. ಜೊತೆಗೆ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಜಾರಿ ತಂದು ಆ ಮೂಲಕ ಒಂದು ಕೋಟಿ ಯುವಕರಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗುವುದು.

ಮೇಲ್ನೋಟಕ್ಕೆ ಮೋದಿ ಸರ್ಕಾರ ಮಧ್ಯಮ ವರ್ಗಕ್ಕೆ ಈ ಯೋಜನೆಗಳನ್ನ ನೀಡಿದೆ. ಅಷ್ಟೆ ಅಲ್ಲ ಆದಾಯ ತೆರಿಗೆ ಮಿತಿಯನ್ನ ಕಡಿಮೆ ಮಾಡೋದ್ರ ಮೂಲಕ ದೇಶದಲ್ಲಿ ಆದಾಯ ತೆರಿಗೆ ಪಾವತಿಸುತ್ತಿದ್ದ ಬಹುದೊಡ್ಡ ವರ್ಗಕ್ಕೆ ಗಿಪ್ಟ್ ಹ್ಯಾಂಪರ್ ರವಾನಿಸಿದೆ.ಆದಾಯ ತೆರಿಗೆ ಮಿತಿಯನ್ನು 2.5 ಲಕ್ಷ ದಿಂದ 5 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 2.4 ಲಕ್ಷ ರೂಪಾಯಿ ವರೆಗಿನ ಮನೆ ಬಾಡಿಗೆಗೆ ಮೂಲದಲ್ಲಿ ತೆರಿಗೆ ಕಡಿತ ಇಲ್ಲ. ಸ್ಟಾಂಡರ್ಡ್‌ ಡಿಡಕ್ಷನ್‌  40 ಸಾವಿರದಿಂದ ರೂಪಾಯಿ 50 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಪಿ.ಎಫ್‌ ಸೇರಿದಂತೆ ಹಲವು ಉಳಿತಾಯಗಳಲ್ಲಿ ಉಳಿಸುವುದು ಸೇರಿದಂತೆ ಒಟ್ಟು 6.5 ಲಕ್ಷದ ಆದಾಯದವರೆಗೂ ತೆರಿಗೆ ಬರುವುದಿಲ್ಲ.

 ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ಶೈಕ್ಷಣಿಕ ಸಾಲ ಪಡೆದುಕೊಂಡಿದ್ದರೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. 5ಲಕ್ಷ ರೂಪಾಯಿಗಳಿಗಿಂತ 10 ಲಕ್ಷ ರೂಪಾಯಿಗಳವರೆಗೆ ಶೇಕಡಾ 20%ರಷ್ಟು ತೆರಿಗೆ, 10 ಲಕ್ಷ ರೂಪಾಯಿಗಳಿಂದ 49 ಲಕ್ಷ ರೂಗಳ ವರೆಗೂ ಶೇಕಡಾ 30ರಷ್ಟು ತೆರಿಗೆ ಮತ್ತು 50 ಲಕ್ಷ ರೂಪಾಯಿಗಳಿಗೂ ಅಧಿಕ ಆದಾಯ ಹೊಂದಿರುವವರಿಗೆ ಶೇಕಡಾ 30%ರಷ್ಟು ತೆರಿಗೆ ವಿಧಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ವೇತನದಲ್ಲಿ ಸುಮಾರು 50 ರಷ್ಟು ಹೆಚ್ಚಳ ಮಾಡಲಾಗಿದೆ. ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು 3 ಸಾವಿರ ರೂಪಾಯಿ ಪಿಂಚಣಿ  ನೀಡಲಾಗುತ್ತೆ. ಇಎಸ್ ಐ ಆದಾಯ ಮಿತಿ ಏರಿಕೆ, 15 ಸಾವಿರದಿಂದ 21ಸಾವಿರಕ್ಕೆ ಮಿತಿ ಏರಿಕೆ. ಸಂಘಟಿತ ವಲಯ ಕಾರ್ಮಿಕರಿಗೆ ಪಿಂಚಣಿ, ಮೀನುಗಾರರು, ಪಶುಸಂಗೋಪನಾ ಕ್ಷೇತ್ರದವರಿಗೆ ಶೇಕಡಾ 2ರಷ್ಟು ಬಡ್ಡಿ ವಿನಾಯಿತಿ ನೀಡಲಾಗುತ್ತೆ. ಅಷ್ಟೆ ಅಲ್ಲ ಕಾರ್ಮಿಕ ಕನಿಷ್ಟ ಆದಾಯ 21 ಸಾವಿರಕ್ಕೆ ಏರಿಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here