Home Crime ಪಕ್ಕದ ಮನೆಯವರು ಕೊಟ್ಟ ಜೋಳದ ಹಿಟ್ಟಿಗೆ ಅಮಾಯಕರು ಬಲಿ..! ವಿಷಾಹಾರ ಸೇವಿಸಿ ನಾಲ್ವರು ಬಲಿ, ಮೂವರು...

ಪಕ್ಕದ ಮನೆಯವರು ಕೊಟ್ಟ ಜೋಳದ ಹಿಟ್ಟಿಗೆ ಅಮಾಯಕರು ಬಲಿ..! ವಿಷಾಹಾರ ಸೇವಿಸಿ ನಾಲ್ವರು ಬಲಿ, ಮೂವರು ಗಂಭೀರ..! ಚಿಕಿತ್ಸೆಗಾಗಿ ಊರೂರು ಅಲೆದಾಡಿದ್ರು ಉಳಿಯಲಿಲ್ಲ ಜೀವ..!

3356
0
SHARE

ಅದು ಕಡು ಬಡತನದ ಅವಿಭಕ್ತ ಕುಟುಂಬ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ವಿದ್ದರೂ ಎಲ್ಲರೂ ಕೂಡ ಒಟ್ಟಾಗಿಯೇ ಜೀವನ ನಡೆಸುತ್ತಿದ್ದರು. ಇದೀಗ ಉಂಡ ಆಹಾರವೇ ವಿಷವಾಗಿ, ನಾಲ್ಕು ಜೀವಗಳನ್ನು ಬಲಿಪಡೆದಿದೆ. ಮೂರು ಜನ ಮಕ್ಕಳು ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಮನಕಲಕುವ ಘಟನೆ ಕೋಟೆ ನಗರಿಯಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಸುಳ್ವಾಡಿಯಲ್ಲಿ ನಡೆದ ವಿಷ ಪ್ರಸಾದ ದುರಂತದ ತನಿಖೆ ನಡೆಯುತ್ತಿರುವಾಗಲೇ ರಾಜ್ಯದಲ್ಲಿ ಮತ್ತೊಂದು ವಿಷಹಾರ ಸೇವನೆ ಪ್ರಕರಣ ನಡೆದಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹುಲಿತೊಟ್ಟಿಲು ಗ್ರಾಮದಲ್ಲಿ ರಾತ್ರಿ ಊಟ ಸೇವಿಸಿ ನಾಲ್ಕು ಜನ ಸಾವನ್ನಪ್ಪಿದ್ದು, ಮೂವರು ಅಸ್ವಸ್ಥರಾಗಿದ್ದಾರೆ. ಹುಲಿತೊಟ್ಟಿಲು ಗ್ರಾಮದ‌ ಚಿತ್ತಪ್ಪ ಎಂಬುವರ ಮನೆಯಲ್ಲಿ ದುರಂತ ಸಂಭವಿಸಿದೆ.

ಗ್ರಾಮದ ಚಿತ್ತಪ್ಪ ಕುಟುಂಬದವರಿಗೆ ಪಕ್ಕದ ಮನೆಯವರು ಹಸುಗಳಿಗೆ ಹಾಕಲೆಂದು ಹಾಳಾದ ಹಿಟ್ಟನ್ನ ನೀಡಿದ್ದಾರೆ. ಆದ್ರೆ ಹಾಳದ ಹಿಟ್ಟಿನಲ್ಲಿ ಕುಟುಂಬದವರು ಮುದ್ದೆ ತಯಾರಿಸಿ ಅವರೆಕಾಳು ಸಾರು ಮಾಡಿ ಊಟ ಮಾಡಿದ್ದಾರೆ. ಊಟ ಮಾಡಿದ ಕೆಲ ಹೊತ್ತಿನಲ್ಲಿ ಏಳು ಜನರಿಗೆ ವಾಂತಿ ಬೇದಿ ಕಾಣಿಸಿಕೊಂಡಿದೆ. ಅಸ್ವಸ್ಥರಾಗಿದ್ದವರಲ್ಲಿ, ಶಶಿಧರ್, ಚಿತ್ತಪ್ಪ, ಹೇಮಲತಾ, ಭಾಗ್ಯಮ್ಮ ಸಾವನ್ನಪ್ಪಿದ್ರೆ, ಮೊಮ್ಮಕ್ಕಳಾದ ಮುತ್ತುರಾಜ್, ಅಜೇಯ್, ಸುಮಲತಾ ಸ್ಥಿತಿ ಗಂಭೀರವಾಗಿದೆ.

ಅಸ್ವಸ್ಥರಾಗಿದ್ದ ಏಳು ಮಂದಿಯನ್ನ ಕೂಡಲೇ ಹಿರಿಯೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಅಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಸಿಕಿಲ್ಲ. ಇದಾದ ಬಳಿಕ ಅವರನ್ನು ಚಿತ್ರದುರ್ಗದ ಜಿಲ್ಲಾಸ್ಪತ್ರೆಗೆ ಕೆರೆದುಕೊಂಡು ಹೋಗಿದ್ದರೂ ಅಲ್ಲಿಯೂ ಸರಿಯಾದ ಚಿಕಿತ್ಸೆ ಸಿಗದೆ ಕುಟುಂಬದ ಹಿರಿಯ ವ್ಯಕ್ತಿ ಚಿತ್ತಪ್ಪ ಸಾವನ್ನಪ್ಪಿದ್ದಾರೆ, ಇದಾದ ಬಳಿಕ ಉಳಿದ ಆರು ಜನರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಡಲಾಗಿದೆ.

ಆದರೆ ಅಲ್ಲಿಯೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಶಶಿಧರ್, ಹೇಮಲತಾ, ಭಾಗ್ಯಮ್ಮ ಸಾವನ್ನಪ್ಪಿದ್ದು, ಮಕ್ಕಳಾದ ಮುತ್ತುರಾಜ್, ಅಜೇಯಾ, ಸುಮಲತಾ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.ಇನ್ನು ಮನೆಯ ಯಜಮಾನಿ ಶಾಂತಮ್ಮ ಅನಾರೋಗ್ಯದಿಂದ ಊಟ ಮಾಡಿಲ್ಲಾ, ಹಾಗೂ ಮತ್ತೊಬ್ಬ ಮಗ ಸದಾಶಿವಪ್ಪ ಮನೆಯಲ್ಲಿ ಇಲ್ಲದೇ ಇದ್ದರಿಂದ ಇವರಿಬ್ಬರು ಪ್ರಾಣಾಪಾಯದಿಂದ ಪರಾಗಿದ್ದಾರೆ. ಸೂಕ್ತ ಸಮಯದಲ್ಲಿ ಏಳು ಜನರಿಗೆ ಚಿಕಿತ್ಸೆ ಸಿಕ್ಕಿದ್ರೆ ನಾಲ್ಕು ಜನರು ಬದುಕುಳಿಯುತ್ತಿದ್ರು. ವೈದ್ಯರ ನಿರ್ಲಕ್ಷದಿಂದ ಇದೀಗ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here