Home District ಪಕ್ಷದ ಅಭ್ಯರ್ಥಿಗಳನ್ನ ಪರಿಚಯಿಸಿದ ಉಪೇಂದ್ರ! ಏಪ್ರಿಲ್ 1ರಿಂದ ರಾಜ್ಯಾದ್ಯಂತ ಪ್ರವಾಸ ತೆರಳಲಿರೋ ಉಪ್ಪಿ! ಸ್ಕಿಟ್ ಮೂಲಕ...

ಪಕ್ಷದ ಅಭ್ಯರ್ಥಿಗಳನ್ನ ಪರಿಚಯಿಸಿದ ಉಪೇಂದ್ರ! ಏಪ್ರಿಲ್ 1ರಿಂದ ರಾಜ್ಯಾದ್ಯಂತ ಪ್ರವಾಸ ತೆರಳಲಿರೋ ಉಪ್ಪಿ! ಸ್ಕಿಟ್ ಮೂಲಕ ಅಭ್ಯರ್ಥಿಗಳ ವಿಭಿನ್ನ ಪರಿಚಯ!

2171
0
SHARE

ಈ ಬಾರಿಯ ಲೋಕಸಭಾ ಚುನಾವಣೆ ರಂಗೇರಿದೆ..ಅದ್ರಂತೆ ಒಂದು ವರ್ಷದ ಹಿಂದೆ ನಟ ಉಪೇಂದ್ರ ಪ್ರಜಾಕೀಯ ಪಕ್ಷವನ್ನ ಘೋಷಣೆ ಮಾಡಿದ್ದು, ಇವತ್ತು ಅಧಿಕೃತವಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಮ್ಮ ಯುಪಿಪಿ ಪಕ್ಷದಿಂದ ಸ್ಪರ್ಧಿಸೋ ಅಭ್ಯರ್ಥಿಗಳನ್ನ ರಿಯಲ್ ಸ್ಟಾರ್ ಉಪೇಂದ್ರ ತಮ್ಮದೇ ಸ್ಟೈಲ್ನಲ್ಲಿ ವಿಭಿನ್ನವಾಗಿ ಪರಿಚಯಿಸಿದ್ದಾರೆ.

ಒಂದು ವರ್ಷದ ಹಿಂದೆ ಪ್ರಜಾಕೀಯ ಪಕ್ಷವನ್ನ ಘೋಷಣೆ ಮಾಡಿದ್ದ ರಿಯಲ್ ಸ್ಟಾರ್ ಉಪೇಂದ್ರ, ಇವತ್ತು ಉತ್ತಮ ಪ್ರಜಾಕೀಯ ಪಕ್ಷದಿಂದ 14 ಅಭ್ಯರ್ಥಿಗಳನ್ನು ಲೋಕಸಭಾ ಚುನಾವಣೆಯ ಕಣಕ್ಕೆ ಇಳಿಸಿದ್ದಾರೆ. ಬೆಂಗಳೂರಿನ ಪ್ರೆಸ್ಕ್ಲಕಬ್ನಭಲ್ಲಿ ಉಪೇಂದ್ರ ಇಂದು ಸುದ್ದಿಗೋಷ್ಠಿ ನಡೆಸಿದ್ರು ..ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜವಾಬ್ದಾರಿ ತಿಳಿಸುವ ಸಣ್ಣ ಸ್ಕಿಟ್ ಮೂಲಕ ಉಪೇಂದ್ರ ತಮ್ಮ ಪಾರ್ಟಿಯ ಅಭ್ಯರ್ಥಿಗಳನ್ನು ವಿಭಿನ್ನವಾಗಿ ಪರಿಚಯಿಸಿದ್ರು.

ಈ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಯುಪಿಪಿಯಿಂದ 14 ಜನ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 2ನೇ ಹಂತದ ಅಭ್ಯರ್ಥಿಗಳನ್ನ ಏಪ್ರಿಲ್ 6 ರಂದು ಪರಿಚಯಿಸಲಿದ್ದಾರೆ. ಅದ್ರಂತೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳ ಪರವಾಗಿ ಏಪ್ರಿಲ್ 1 ರಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರಚಾರ ನಡೆಸುವುದಾಗಿ ರಿಯಲ್ ಸ್ಟಾರ್ ಉಪೇಂದ್ರ ತಿಳಿಸಿದ್ದಾರೆ.

ನಮ್ಮ ವಿಚಾರವೇ ಪ್ರಚಾರ, ನಾವು ಸೇವಕರಲ್ಲಾ, ಕಾರ್ಮಿಕರು ಮತ ನೀಡಿ ಗೆಲುವು ಸಾಧಿಸಿದರೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೇವೆ ಎಂದು ಹೇಳಿದ ಉಪೇಂದ್ರ, ಪ್ರಜಾಕೀಯ ಜನಸಾಮಾನ್ಯರ ಪಕ್ಷವಾಗಿದ್ದು, ಸಭೆ, ಸಮಾರಂಭಗಳ ಅವಶ್ಯಕತೆ ಇಲ್ಲ, ಮಾಧ್ಯಮ, ಸಾಮಾಜಿಕ ಮಾಧ್ಯಮಗಳ ಮೂಲಕವೇ ಪ್ರಚಾರ ನಡೆಸಲಾಗುವುದು ಎಂದು ಹೇಳೀದ ಉಪ್ಪಿ , ಈ ಯುಪಿಪಿ ಪಕ್ಷದ ಪ್ರಚಾರ ಕಾರ್ಯಕ್ಕಾಗಿ 7ಲಕ್ಷ ಹಣವನ್ನ ಮೀಸಲಿಟ್ಟಿದ್ದಾರಂತೆ.

ಚುನಾವಣಾ ಪ್ರಣಾಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಉಪೇಂದ್ರ, ಚುನಾವಣಾ ಆಯೋಗ ಹಾಗೂ ಸುಪ್ರೀಂಕೋರ್ಟ್ ನಿಂದ ಪ್ರಣಾಳಿಕೆ ನೋಂದಣಿ ಆದ್ರರೆ ಮಾತ್ರ ಪ್ರಣಾಳಿಕೆ ಬಿಡುಗಡೆ ಮಾಡ್ತೀನಿ,ಇಲ್ಲವಾದಲ್ಲಿ ಪ್ರಣಾಳಿಕೆ ರಿಲೀಸ್ ಮಾಡೋದಿಲ್ಲ ಅಂತ ತಿಳಿಸಿದ್ರು..ಒಟ್ನಲ್ಲಿ ಸದ್ಯ ಚುನಾವಣಾ ರಣಕಣದಲ್ಲಿ ಭರ್ಜರಿಯಾಗಿ ಪೈಪೋಟಿ ನಡೆಯುತ್ತಿರುವ ಮಧ್ಯೆ ಉಪ್ಪಿಯ ಉತ್ತಮ ಪ್ರಜಾಕೀಯ ಪಕ್ಷಕ್ಕೆ ಪ್ರಜೆಗಳು ಯಾವ ರೀತಿ ಬೆಂಬಲ ತೋರಿಸ್ತಾರೆ ಅನ್ನೋದನ್ನ ಇನ್ನಷ್ಟೇ ಕಾದು ನೋಡ್ಬೇಕಿದೆ..

LEAVE A REPLY

Please enter your comment!
Please enter your name here