Home Crime ಪಡ್ಡೆ ಹುಡುಗರಿಗೆ‌ ಪ್ರೀತಿ ಅರ್ಪಿಸಿದ್ದ ‘ಅರ್ಪಿತಾ’..! ಸ್ಕೆಚ್ ಹಾಕಿದವಳನ್ನು ಯಮನಪಾದಕ್ಕೆ ಕಳುಹಿಸಿದ ‘ಲೋಹಿತಾ’..!

ಪಡ್ಡೆ ಹುಡುಗರಿಗೆ‌ ಪ್ರೀತಿ ಅರ್ಪಿಸಿದ್ದ ‘ಅರ್ಪಿತಾ’..! ಸ್ಕೆಚ್ ಹಾಕಿದವಳನ್ನು ಯಮನಪಾದಕ್ಕೆ ಕಳುಹಿಸಿದ ‘ಲೋಹಿತಾ’..!

3692
0
SHARE

ಅವರಿಬ್ಬರದ್ದು ಬರೊಬ್ಬರಿ ಎರಡು ವರ್ಷಗಳ ಲವ್ ಕಹಾನಿ.. ಒಂದು ಬಿಲ್ ವಿಚಾರವಾಗಿ ಆರಂಭವಾದ ಗೆಳತನ ಪ್ರೀತಿಯಾಗಿ ಮುಂದುವರಿದು ಈಗ ಕೊಲೆಯಲ್ಲಿ ಅಂತ್ಯವಾಗಿದೆ.. ಸುಂದರಿ ಅಂತ ಹಿಂದೆ ಬಿದ್ದ ಯುವಕ ಈಗ ಕೊಲೆಗಾರನಾಗಿದ್ದಾನೆ..

ಲೈಫ್ ಎಂಜಾಯ್ ಮಾಡೋ ಭರದಲ್ಲಿ ಯುವತಿ ಮರ್ಡರ್ ಆಗಿದ್ದಾಳೆ.ದಿನಕ್ಕೊಂದು ನಡೆಯುತ್ತಿರೋ ಕ್ರೈಂ‌ಗಳನ್ನ ನೋಡಿತ್ತಿದ್ರೆ ಮನಸ್ಸಿಗೆ ಬೇಸರವೂ ಆಗುತ್ತೆ.. ಆದ್ರೆ ಬೇಸರ ಮಾಡಿಕೊಳ್ಳದೇ ಈ ಸ್ಟೋರಿಯನ್ನು ನೋಡಿ ಯುವತಿ, ತನ್ನ ಪ್ರಿಯಕರ ಕೊಲೆ ಮಾಡಿಸೋ ಪ್ಲಾನ್ ಮಾಡಿ, ಕೊನೆಗೆ ಅವಳೇ ಯಮನ ಪಾದಕ್ಕೆ ಸೇರಿದ ಸ್ಟೋರಿ ಇದು.

ಪೆ.3ರಂದು ಕುಣಿಗಲ್ ತಾಲೂಕಿನ ಸಂತೆಮಾರನಹಳ್ಳಿ ಬಳಿ ಕೊಲೆಯಾದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿತ್ತು. ಕೇಸ್ ದಾಖಲಿಸಿಕೊಂಡ ಹುಲಿಯೂರುದುರ್ಗ ಪೊಲೀಸರು, ಯುವತಿ ಅಡ್ರೆಸ್‌ಗಾಗಿ ಹುಡುಕಾಡಿದ್ರು ಸಿಗಲಿಲ್ಲ.. ಪೆಟ್ರೋಲ್ ಬಂಕ್‌ಗಳಲ್ಲಿ ಯುವತಿ ಕಾಣೆಯಾಗಿರುವ ಬಗ್ಗೆ ಜಾಲಾಡಿದ್ರು. ಕೊಲೆ ಪೊಲೀಸರಿಗೆ ಸತ್ತಿರೋ ಯುವತಿ ಅರ್ಪಿತಾ ಅಂತ ಗೊತ್ತಾಗುತ್ತೆ.

ಅರ್ಪಿತಾ ಉಡುಪು ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಟ್ಟೆ ಖರೀದಿಸಲು ಬಂದಿದ್ದ ಲೋಹಿತ ಬುಟ್ಟಿಗೆ ಬಿದಿದ್ದಳು. ಇವರಿಬ್ಬರ ಪ್ರೇಮಕ್ಕೆ ಸಂಬಂಧಿಕರ ವಿರೋಧ ಒಟ್ಟಿಗೆ ಜೀವಿಸುತ್ತಿದ್ದರು. ಆದ್ರೆ ಕಾಲಕ್ರಮೇಣ ಇಬ್ಬರ ಸಂಬಂಧವೂ ಹಳಸಿದ್ದರಿಂದ ದೂರ ಸರಿದ್ದರು.ಇನ್ನು ಲೋಹಿತ್, ಅರ್ಪಿತಾಗೆ 20 ಸಾವಿರ ಮೊತ್ತದ ಮೊಬೈಲ್ ಕೊಡಿಸಿದ್ದ. ಅದನ್ನು ಮರಳಿ ಪಡೆಯುವ ವಿಚಾರದಲ್ಲಿ ಇಬ್ಬರ ನಡುವೆ ಕಿತ್ತಾಟವಾಗಿತ್ತು.

ಆಕೆಯ ಸಹೋದರ ಲೋಹಿತ್‌ನನ್ನು ಥಳಿಸಿದ್ದರು. ಈ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮತ್ತೆ ಫೆ. 2ರಂದು ಅರ್ಪಿತಾ ಲೋಹಿತ್ ಗೆ ಕರೆ ಮಾಡಿದ್ಲು, ಬಳಿಕ ಇಬ್ಬರೂ ಬೈಕ್ ನಲ್ಲಿ ಕುನಿಗಲ್ ಕಡೆ ಪ್ರಯಾಣ ಬೆಳೆಸಿದ್ರು.. ಇತ್ತ ಅರ್ಪಿತಾಗೆ ಈ ಮುಂಚೆ ನಾಲ್ಕೈದು ಯುವಕರ ಜೊತೆ ಸಂಪರ್ಕ ಇದ್ದದ್ರಿಂದ ಇವಳೇ ನನ್ನನ್ನ ಕೊಲೆ ಮಾಡಿಸುತ್ತಾಳೆ ಅಂದುಕೊಂಡು ಲೋಹಿತಾ, ಅರ್ಪಿತಾಳನ್ನು ಕೊಲೆ ಮಾಡಿದ್ದ..

ಒಟ್ಟಾರೆ ಶೋಕಿಗಾಗಿ ನಾಲ್ಕೈದು ಯುವಕರ ಜೊತೆ ಎಂಜಾಯ್ ಮಾಡ್ತಿದ್ದ ಯುವತಿ ಬಾರದ ಲೋಕಕ್ಕೆ ಪಯಣಿಸಿದ್ದಾಳೆ. ಪ್ರೀತಿ ನಂಬಿ ಮೋಸ ಹೋದ ಲೋಹಿತಾ ಜೈಲು ಸೇರಿದ್ದಾನೆ. ಜೀವನ ಕಟ್ಟಿಕೊಂಡು ಬದುಕುಕಾಣ್ಬೇಕಿದ್ದ ಯುವ ಪ್ರೇಮಿಗಳ ಈ ರೀತಿಯ ಅಂತ್ಯ ಕಂಡಿರೋದು ಮಾತ್ರ ದುರಂತವೇ ಸರಿ..

LEAVE A REPLY

Please enter your comment!
Please enter your name here