Home Crime ಪತಿಯಿಂದ ದೂರವಾಗಲು ಪತ್ನಿಯ ಮಾಸ್ಟರ್ ಪ್ಲ್ಯಾನ್… ಕೊರೊನಾ ಬಂದಿದೆ ಎಂದು ಬಾಯ್ ಫ್ರೆಂಡ್ ಜೊತೆ ಎಸ್ಕೇಪ್

ಪತಿಯಿಂದ ದೂರವಾಗಲು ಪತ್ನಿಯ ಮಾಸ್ಟರ್ ಪ್ಲ್ಯಾನ್… ಕೊರೊನಾ ಬಂದಿದೆ ಎಂದು ಬಾಯ್ ಫ್ರೆಂಡ್ ಜೊತೆ ಎಸ್ಕೇಪ್

397
0
SHARE

ಕೊರೊನಾ ವೈರಸ್ ಹೆಸರನ್ನೇ ಬಂಡವಾಳ ಮಾಡ್ಕೋಂಡು ಬ್ಯುಸಿನೆಸ್ ಮಾಡ್ತಿರೋದನ್ನು ನೋಡಿದಿವಿ..ಕೆಲವೊಬ್ರು ಕೊರೋನಾದಿಂದಲೇ ಕೋಟಿ-ಕೋಟಿ ಹಣ ಲೂಟಿ ಕೂಡ ಮಾಡ್ತಿದ್ದಾರೆ..ಆದ್ರೆ ಇಲ್ಲೊಬ್ಬ ಲೇಡಿ, ಗಂಡನ ಕಿರುಕುಳಕ್ಕೆ ಬೇಸತ್ತು ಎಸ್ಕೇಪ್ ಆಗೋಕೆ ಕೊರೋನಾ ಪಾಸಿಟಿವ್ ಡ್ರಾಮಾ ಆಡಿದ್ಳು..ಅಷ್ಟೇ ಅಲ್ಲ, ಪಿಪಿಇ ಕಿಟ್ ಹಾಕೊಂಡು ಬಂದಿದ್ದ ಸ್ನೇಹಿತನ ಜೊತೆ ಎಸ್ಕೇಪ್ ಆಗಿದ್ದಾಳೆ…

ಹೌದು.ಇಲ್ಲಿ ಒಬ್ಬಳು ಲೇಡಿ ಕೊರೋನಾ ಮಹಾಮಾರಿನ್ನೇ ಬಂಡವಾಳವನ್ನಾಗಿ ಬಳಸಿಕೊಂಡು ಮನೆಯಿಂದ ಎಸ್ಕೇಪ್ ಆಗಿದ್ದಾಳೆ.ಬೆಂಗಳೂರಿನ ಬೊಮ್ಮನಹಳ್ಳಿಯ ವಿಕ್ಕಿಕುಮಾರ್ ಹಾಗೂ ರುಚಿಕುಮಾರಿ, ಸಾಫ್ಟ್‌ವೇರ್ ಕಂಪೆನಿಯಲ್ಲಿ‌ ಕೆಲ್ಸ ಮಾಡ್ತಿದ್ರು. ಕೊರೋನಾ ಕಾರಣಕ್ಕೆ ವರ್ಕ್ ಫ್ರಮ್ ಹೋಮ್ ಅಡಿ ಕೆಲಸ ಮಾಡ್ತಿದ್ದರು. ಬೆಂಗಳೂರಿನಲ್ಲಿ ಕೊರೋನಾ ಸಂಖ್ಯೆ ಮಿತಿಮೀರಿದ ಭಯಕ್ಕೆ ಮನೆಯಿಂದ ಯಾವುದೇ ಕಾರಣಕ್ಕೂ ಹೊರಹೋಗ್ಬೇಡ ಅಂತ ಪತಿ ವಿಕ್ಕಿ ಪತ್ನಿ ರುಚಿಗೆ ಕಟ್ಟಪ್ಪಣೆ ಹೊರಡಿಸಿದ್ದ..ಇದೇ ಕಾರಣಕ್ಕೆ ಇಬ್ಬರ ನಡುವೇ ಪದೇ-ಪದೇ ಕಿರಿಕ್ ನಡೀತಿತ್ತು..ಹೇಗಾದರೂ ಮಾಡಿ ಮನೆಯಿಂದ ಆಚೆ ಹೋಗಿ, ಗಂಡನಿಂದ ಮುಕ್ತಿ ಪಡೆದು ದೂರ ಹೋಗಿ ಬದುಕಬೇಕು ಅಂತ ಡಿಸೈಡ್ ಮಾಡಿದ್ಳು..ಅದರಂತೆ ರುಚಿಕುಮಾರ್ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿದ್ಳು..

ಇದೇ ರುಚಿಕುಮಾರಿ, ದೆಹಲಿಯ ತನ್ನ ಸ್ನೇಹಿತ ಮೊಹಮ್ಮದ್ ಗೆ ಕರೆ ಮಾಡಿ, ತನ್ನನ್ನ ಹೊರಗಡೆ ಕರೆದೊಯ್ಯುವಂತೆ ಹೇಳಿದ್ಳು..”ನೀನು ಪಿಪಿಇ ಕಿಟ್ ಧರಿಸಿಕೊಂಡು ಕರೋನಾ ಟೆಸ್ಟ್ ಮಾಡೋ ರೀತಿ ಬಂದು, ಆ್ಯಂಬುಲೆನ್ಸ್‌ನಲ್ಲಿ ಕರೆದುಕೊಂಡು ಹೋಗು..”ಅಂತ ಮಾಸ್ಟರ್ ಪ್ಲಾನ್ ಹೇಳಿಕೊಟ್ಟಿದ್ಲು, ಅದರಂತೆ ಇದೇ ಸೆಪ್ಟೆಂಬರ್ 1ಕ್ಕೆ ಸ್ನೇಹಿತೆ ಮನೆಗೆ ಬಂದಿದ್ದ ಮೊಹಮ್ಮದ್, ರುಚಿ ಹಾಗೂ ಆಕೆ ಪತಿ ವಿಕ್ಕಿಗೆ ಕೊರೋನಾ ಟೆಸ್ಟ್ ಮಾಡಿ ರೀತಿ ಫೇಕ್ ಟೆಸ್ಟ್ ಮಾಡಿದ್ದ. ಬಳಿಕ ಸೆಪ್ಟೆಂಬರ್ 3ಕ್ಕೆ ಮತ್ತೆ ಪ್ರಿಯತಮೆಗೆ ಪಾಸಿಟಿವ್ ಆಗಿದೆ ಅಂತ ಸುಳ್ಳು ಹೇಳಿ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ದಿದ್ದ..ಮೂರು ದಿನಗಳ ಬಳಿಕ ಆಕೆ ಆಸ್ಪತ್ರೆಗೂ ಅಡ್ಮಿಟ್ ಆಗಿಲ್ಲ ಫೋನ್ ಸ್ವಿಚ್ ಆಫ್ ಇದೆ ಅಂತ ಆಕೆ ಗಂಡ ವಿಕ್ಕಿ ಬೊಮ್ಮನಹಳ್ಳಿ ಪೊಲೀಸರಿಗೆ ಕಿಡ್ನಾಪ್ ಕೇಸ್ ದಾಖಲಿಸಿದ್ದ..

ಪ್ರಕರಣ ದಾಖಲಾಗ್ತಿದ್ದಂತೆ‌ ಎಚ್ಚೆತ್ತ ಬೊಮ್ಮನಹಳ್ಳಿ ಪೊಲೀಸರು ಲೇಡಿ ಫೋನ್ ಟ್ರಾಕ್ ಮಾಡಿದ್ರು..ಬಳಿಕ‌ ಆ್ಯಂಬುಲೆನ್ಸ್ ಬುಕ್ ಮಾಡೋಕೆ ಬಳಸಿದ್ದ ಮೊಹಮ್ಮದ್ ನ ಫೋನ್ ನಂಬರ್ ಕೂಡ ಟ್ರಾಕ್ ಆಗಿತ್ತು.ಮಾಹಿತಿ ಜಾಡು ಹಿಡಿದಾಗ, ರುಚಿ ದೆಹಲಿಯಲ್ಲಿರೋದು ಪತ್ತೆಯಾಗಿತ್ತು..ಬಳಿಕ ಆಕೆಯನ್ನು ಸಂಪರ್ಕ ಮಾಡಿದ ಪೊಲೀಸರಿಗೆ ಶಾಕ್ ಕಾದಿತ್ತು, ಯಾಕೆಂದ್ರೆ, ಸರ್..ನಾನು ಕಿಡ್ನಾಪ್ ಆಗಿಲ್ಲ..ಗಂಡನ ಕಿರುಕುಳಕ್ಕೆ ಬೇಸತ್ತು, ಸ್ನೇಹಿತನ ಸಹಾಯ ಪಡೆದು ನಾನೇ ಬಂದಿದ್ದಿನಿ..ಕರೋನಾ ಪಾಸಿಟಿವ್ ಅಂತ ನಾವೇ ಸುಳ್ಳು ಹೇಳಿದ್ದಿವಿ ಅಂತ ರುಚಿ ತಪ್ಪೊಪ್ಪಿಕೊಂಡಿದ್ಳು.

ಇದೆಲ್ಲಾ ಆದ ಬಳಿಕ ಬೊಮ್ಮನಹಳ್ಳಿ ಪೊಲೀಸರು ಪತಿ‌ ವಿಕ್ಕಿ,ಪತ್ನಿ ರುಚಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ..ಅಷ್ಟೇ ಅಲ್ಲ, ಎಸ್ಕೇಪ್ ರಾಣಿ ರುಚಿಗೆ ಪೊಲೀಸರು ಬುದ್ದಿವಾದ ಹೇಳಿ ಕಳುಹಿಸಿದ್ದಾರೆ..

LEAVE A REPLY

Please enter your comment!
Please enter your name here