Home Crime ಪತ್ನಿಯಿಂದಲೇ ಗಂಡನ ಮೇಲೆ ಆಸ್ತಿ ವಿಚಾರಕ್ಕೆ ಮಾರಣಾಂತಿಕ ಹಲ್ಲೆ..?! ಕಳೆದ 4 ವರ್ಷಗಳಿಂದೆ ದೂರವಾಗಿ ಆಸ್ತಿ...

ಪತ್ನಿಯಿಂದಲೇ ಗಂಡನ ಮೇಲೆ ಆಸ್ತಿ ವಿಚಾರಕ್ಕೆ ಮಾರಣಾಂತಿಕ ಹಲ್ಲೆ..?! ಕಳೆದ 4 ವರ್ಷಗಳಿಂದೆ ದೂರವಾಗಿ ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಮಾತುಕತೆ ಪಂಚಾಯ್ತಿ..!?

2589
0
SHARE

ಆಸ್ತಿ ವಿಚಾರಕ್ಕೆ ಪತ್ನಿಯಿಂದಲೇ ಗಂಡನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ನಡೆದಿದೆ. ನಗರದ ನಿವಾಸಿ ರಾಮಾಂಜಿನಪ್ಪ ಹಲ್ಲೆಗೊಳಗಾದ ಪತಿ.

ಅಂದಹಾಗೆ ಹಲ್ಲೆಗೊಳಗಾದ ರಾಮಾಂಜೀನಪ್ಪ ನಾಗೇನಹಳ್ಳಿ ನಿವಾಸಿ ನರಸಮ್ಮ ಎಂಬುವವರನ್ನ 14 ವರ್ಷಗಳಿಂದೆ ಮದುವೆಯಾಗಿದ್ದರು. ಆದ್ರೆ ಇಬ್ಬರ ವೈಮನಸ್ಸಿನಿಂದ ಕಳೆದ ನಾಲ್ಕು ವರ್ಷಗಳಿಂದೆ ದೂರವಾಗಿ ಆಸ್ತಿ ವಿಚಾರವಾಗಿ ಇಬ್ಬರ ನಡುವೆ ಮಾತುಕತೆ ಪಂಚಾಯ್ತಿ ನಡೆಯುತ್ತಿತ್ತು.

ನೆನ್ನೆಯಷ್ಟೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನ್ಯಾಯ ಪಂಚಾಯ್ತಿ ಮಾಡಲು ಗಂಡ ಹೆಂಡತಿಯನ್ನ ಕರೆಸಿದ್ದರು. ಈ ವೇಳೆ ರಣಚಂಡಿ ಅವತಾರವನ್ನ ತಾಳಿರುವ ಪತ್ನಿ ನರಸಮ್ಮ ಪಂಚಾಯ್ತಿಗೆ ಮುನ್ನವೇ ಪೊಲೀಸ್ ಠಾಣೆ ಆವರಣದಲ್ಲಿಯೇ ಮಾರಣಾಂತಿಕವಾಗಿ ಕಲ್ಲಿನಿಂದ ಹಲ್ಲೆಯನ್ನ ನಡೆಸಿದ್ದಾರೆ.

ಇನ್ನೂ ಹಲ್ಲೆಗೊಳಗಾಗಿರುವ ರಾಮಾಂಜೀನಪ್ಪ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದಾರೆ. ಆದ್ರೆ ಹಲ್ಲೆ ಮಾಡಿದ ನರಸಮ್ಮನನ್ನ ಬಂಧಿಸಿದ್ದ ಗ್ರಾಮಾಂತರ ಪೊಲೀಸರು ರಾತ್ರಿಯೇ ಎಪ್‍ಐಆರ್ ಮಾಡಿ ಸ್ಟೆಷನ್ ಬೇಲ್ ನೀಡಿ ಬಿಟ್ಟುಕಳಿಸಿದ್ದಾರೆ.

LEAVE A REPLY

Please enter your comment!
Please enter your name here