Home Crime ಪತ್ನಿಯ ನಗ್ನ ವಿಡಿಯೋ ಸೆರೆಹಿಡಿದು ಚಿತ್ರಹಿಂಸೆ ನೀಡುತ್ತಿದ್ದ ಪತಿ..! ವರದಕ್ಷಿಣೆ ತರುವಂತೆ ಪತ್ನಿಗೆ ಪ್ರತಿನಿತ್ಯ ಕಿರುಕುಳ..!

ಪತ್ನಿಯ ನಗ್ನ ವಿಡಿಯೋ ಸೆರೆಹಿಡಿದು ಚಿತ್ರಹಿಂಸೆ ನೀಡುತ್ತಿದ್ದ ಪತಿ..! ವರದಕ್ಷಿಣೆ ತರುವಂತೆ ಪತ್ನಿಗೆ ಪ್ರತಿನಿತ್ಯ ಕಿರುಕುಳ..!

479
0
SHARE

ಹೋದ ಗಂಡನ ಮನೆಯಲ್ಲಿ ಮಗಳು ಚೆನ್ನಾಗಿರಲಿ ಅಂತಾ ಆ ಕುಟುಂಬದವರು ಸಾಲನೋ ಸೋಲನೋ ಮಾಡಿ ಅದ್ಧೂರಿಯಾಗಿ ಮದುವೆ ಮಾಡಿದ್ದರು. ಮದುವೆ ಸಂದರ್ಭದಲ್ಲಿ ಖರ್ಚು ಮಾಡಿದ್ದ ಹಣವನ್ನು ನೋಡಿ ಆತನಿಗೆ ಮತ್ತಷ್ಟು ಧನದಾಹ ಹೆಚ್ಚಾಗಿತ್ತು.. ಹಣಕ್ಕಾಗಿ ಪ್ರತಿದಿನ ಪತ್ನಿಗೆ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡ್ತಿದ್ದ. ಗಂಡನ ಇಲ್ಲ ಸಲ್ಲದ ಆರೋಪಗಳಿಂದ ಬೇಸತ್ತಿರೋ ಪತ್ನಿ ಠಾಣೆ ಮೆಟ್ಟಿಲೇರಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ..

ಈ ಪೋಟೋದಲ್ಲಿ ಕಾಣುತ್ತಿರುವವನ ಹೆಸರು ಪ್ರದೀಪ್ ಮೂರ್ತಿ. ಸಾಫ್ಟ್‌ವೇರ್ ಇಂಜಿನಿಯರ್‌ ಆದ ಪ್ರದೀಪ್ ಮೂಲತಃ ಆಂದ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಗ್ರಾಮಸ್ಥ.3 ವರ್ಷಗಳ ಹಿಂದೆ ಅನೂಪ ಎಂಬಾಕೆಯನ್ನು ಈತ ವರಿಸಿದ್ದ. ಹುಡುಗಿಯ ಕಡೆಯವರು ಸುಮಾರು 15 ಲಕ್ಷ ನಗದು 12 ತೊಲ ಬಂಗಾರ, 45 ಲಕ್ಷ ಖರ್ಚು ಮಾಡಿ ಹೈದ್ರಾಬಾದ್ ನ ಪ್ರತಿಷ್ಟಿತ ಕಲ್ಯಾಣಮಂಟಪದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಮಾಡುಕೊಟ್ಟಿದ್ದರು..

ಮದುವೆಯ ನಂತರ ದಂಪತಿ ರಾಮಮೂರ್ತಿನಗರದ ಹೊರಮಾವು ರಸ್ತೆಯಲ್ಲಿರುವ ಅನ್ನಪೂರ್ಣೆಶ್ವರಿ ಬಡಾವಣೆಯಲ್ಲಿ ವಾಸವಿದ್ದರು.ಮದುವೆ ಆರಂಭದಲ್ಲಿ ಪ್ರದೀಪ್- ಅನೂಪ ದಾಂಪತ್ಯ ಎಲ್ಲವೂ ಚೆನ್ನಾಗಿತ್ತು. ಕೆಲ ದಿನಗಳ ನಂತರ ಪ್ರದೀಪನ ಧನದಾಹ ಶುರುವಾಗಿದೆ. ತವರಿನಿಂದ ಹಣ ತರುವಂತೆ ಅನೂಪಗೆ ಪ್ರದೀಪ ಪೀಡಿಸತೊಡಗಿದೆ. ಅಷ್ಟೇ ಅಲ್ಲ. ಪ್ರದೀಪನ ಅಕ್ಕ ಪ್ರಶಾಂತಿ, ಆಕೆಯ ಪತಿ ಸಂಜೀವ್ ಕುಮಾರ್ ಕೂಡಾ ಮನೆಗೆ ಬಂದು ಹಣಕ್ಕಾಗಿ ಪೀಡಿಸಲು ಶುರು ಮಾಡಿದ್ದಾರೆ.

ಪ್ರದೀಪ್ ಅನುಮಾನದ ವ್ಯಕ್ತಿಯಾಗಿದ್ದ. ಪತ್ನಿಯ ಚಲನವಲನ ಗಮನಿಸಲು ಮನೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದ. ಅಡುಗೆ ಮನೆ, ಹಾಲ್, ಕೊನೆಗೆ ಬೆಡ್ ರೂಮಿನಲ್ಲೂ ಸಿಸಿ ಕ್ಯಾಮೆರಾ ಅಳವಡಿಸಿದ್ದಾನೆ. ಪ್ರತಿದಿನವೂ ಒಂದಲ್ಲ ಒಂದು ರೀತಿಯಲ್ಲಿ ಅನೂಪಳಿಗೆ ಚಿತ್ರಹಿಂಸೆ ಮಾಡುತ್ತಲೇ ಬಂದಿದ್ದ. ದೇಹದ ಪ್ರತಿಯೊಂದು ಅಂಗಗಳನ್ನು ಘಾಸಿಗೊಳಿಸಿದ್ದ. ಪತ್ನಿಯ ನಗ್ನ ವಿಡಿಯೋ ಸೆರೆಹಿಡಿಯುತ್ತಿದ್ದ.ಪ್ರದೀಪ ಮೊದಲ ಪತ್ನಿಯನ್ನೂ ಕೂಡಾ ಇದೇ ರೀತಿ ಚಿತ್ರಹಿಂಸೆ ನೀಡಿದ್ದನಂತೆ.

ಈಕೆಗೂ ಸಹ ಹಣಕ್ಕಾಗಿ ಕೊಡಬಾರದ ಹಿಂಸೆ ನೀಡಿದ್ದನಂತೆ ಪತಿಯ ಕಾಟ ತಾಳಲಾರದೇ ಅನೂಪ ಕೊನೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ಮಾಡಿ ತಲೆ ಮರೆಸಿಕೊಂಡಿದ್ದ ಪ್ರದೀಪ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಸ್ಥಳೀಯರ ಸಹಾಯದ ಮೂಲಕ ಆತನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಲಾಗಿದೆ. ಸದ್ಯಕ್ಕೆ ಪ್ರದೀಪ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.

LEAVE A REPLY

Please enter your comment!
Please enter your name here