Home Crime ಪತ್ನಿ, 4 ಹೆಣ್ಣು ಮಕ್ಕಳಿಗೆ ವಿಷ ನೀಡಿ ನೇಣಿಗೆ ಶರಣಾದ ಗಂಡ..! ಒಂದೇ ಕುಟುಂಬದ 6...

ಪತ್ನಿ, 4 ಹೆಣ್ಣು ಮಕ್ಕಳಿಗೆ ವಿಷ ನೀಡಿ ನೇಣಿಗೆ ಶರಣಾದ ಗಂಡ..! ಒಂದೇ ಕುಟುಂಬದ 6 ಮಂದಿ ಆತ್ಮಹತ್ಯೆಗೆ ಶರಣು..! ಸಾವಿಗೆ ಸಾಲಬಾಧೆ, ವರದಕ್ಷಿಣೆ ಕಿರುಕುಳ ಕಾರಣವಾಯ್ತಾ..?

584
0
SHARE

ಇಲ್ಲೊಂದು ಕುಟುಂಬ ನಾಮಾವಶೇಷವಾಗಿದೆ. ಕುಟುಂಬದ ಆರು ಮಂದಿ ಸಾವಿಗೆ ಶರಣಾಗಿದ್ದಾರೆ. ಹೆತ್ತಪ್ಪನೆ ಮಕ್ಕಳಿಗೆ ಹಾಗೂ ಹೆಂಡತಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ. ಆತ್ಮಹತ್ಯೆಗೆ ಮಾತ್ರ ನಿಖರ ಕಾರಣ ತಿಳಿದು ಬಂದಿಲ್ಲ. ವರದಕ್ಷಿಣೆ ಕಿರುಕುಳ, ಸಾಲಬಾಧೆ ಆತ್ಮಹತ್ಯೆಗೆ ಕಾರಣವಾಯ್ತಾ ಅನ್ನೋ ಅನುಮಾನ ಕೇಳಿಬಂದಿದೆ.

ಇಂಥದೊಂದ್ದು ದಾರುಣ ಘಟನೆ ನಡೆದಿರೋದು ಕೊಪ್ಪಣ ಜಿಲ್ಲೆಯಲ್ಲಿ. ಕೊಪ್ಪಳದ ಮೇತಗಲ್ ಗ್ರಾಮದಲ್ಲಿ ಒಂದೇ ಕುಟುಂಬದ 6 ಮಂದಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಅಪ್ಪನೇ ಮನೆ ಮಂದಿಗೆಲ್ಲ ವಿಷ ಬೆರಸಿ ಕೊಂದು ಕೊನೆಗೆ ತಾನೂ ನೇಣಿಗೆ ಕೊರಳೊಡ್ಡಿದ್ದಾನೆ. ಮೇತಗಲ್ ಗ್ರಾಮದ ಶೇಖರಯ್ಯ ಹಾಗೂ ಪತ್ನಿ ಜಯಮ್ಮ, ಮಕ್ಕಳಾದ ಬಸಮ್ಮ, ಗೌರಮ್ಮ, ಸಾವಿತ್ರಿ ಹಾಗೂ ಪಾರ್ವತಿ ಸಾವನ್ನಪ್ಪಿದ್ದ ದುರ್ದೈವಿಗಳು.

ಇವರ ದಾರುಣ ಸಾವಿಗೆ ಯಾವುದೇ ನಿಖರ ಕಾರಣ ತಿಳಿದು ಬಂದಿಲ್ಲ.ಕುಟುಂಬದ ಆತ್ಮಹತ್ಯೆ ಬಗ್ಗೆ ಸಂಬಂಧಿಕರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ಗಂಡ ಹೆಂಡತಿ ಮಕ್ಕಳು ಅನುನ್ಯವಾಗಿದ್ರು. ಮದುವೆ ಮಾಡಿಕೊಟ್ಟಿದ್ದ ಹೆಣ್ಣು ಮಕ್ಕಳು ಸಹ ಗಂಡನ ಮನೆಯಲ್ಲಿ ಚೆನ್ನಾಗಿದ್ರು, ಆದ್ರೆ ಶೇಖರಯ್ಯನಿಗೆ ಸಾಲವಿತ್ತು, ಈ ಬಗ್ಗೆ ನಮ್ಮಗಳ ಬಳಿ ಹೇಳಿಕೊಂಡಿದ್ದ ಅಂತಾ ಸಂಬಂಧಿಕರು ಹೇಳಿದ್ದಾರೆ…
ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಶೇಖರಯ್ಯ ಇಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿದ್ದ. ಹೆಣ್ಣುಮಕ್ಕಳಿಗೆ ವರದಕ್ಷಿಣೆ ಕಿರುಕುಳ ಇತ್ತು ಎನ್ನಲಾಗಿದೆ. ಹೀಗಾಗಿ ವಿವಾಹಿತರಾದ ಹೆಣ್ಣುಮಕ್ಕಳನ್ನ ಗ್ರಾಮಕ್ಕೆ ಕರೆಸಿಕೊಂಡ ಶೇಖರಯ್ಯ ಕೊನೆಗೆ ಅವರಿಗೂ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಇತ್ತ ಕೊಪ್ಪಳ ಜಿಲ್ಲಾ ಪ್ರವಾಸದಲ್ಲಿರೋ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಆರು ಮಂದಿ ಸಾವಿನ ಸಂಗತಿ ತಿಳಿದ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ರು.ಘಟನೆಯಿಂದಾಗಿ ಮೆತಗಲ್ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ತುಂಬು ಕುಟುಂಬವೊಂದು ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here