ಪತ್ರಕರ್ತೆ ಗೌರಿ ಲಂಕೇಶರನ್ನು ಗುಂಡಿಟ್ಟು ಕೊಂದಿದ್ದು ಪರಶುರಾಮ್ ವಾಗ್ಮೋರೆ ಎಂಬುದು ಕೇವಲ 6 ಸೆಕೆಂಡ್ನ ಫೂಟೇಜ್ ಹಿಡಿದು ಎಸ್ಐಟಿ ಆರೋಪವನ್ನು ಸಾಬೀತು ಪಡಿಸಿದೆ. ಸಿಸಿಟಿವಿ ದೃಶ್ಯಾವಳಿ ಮತ್ತು ಕ್ರೈಮ್ ಸೀನ್ ಮರುಚಿತ್ರೀಕರಣದ ವಿಡಿಯೋ ಶೂಟ್ ಮಾಡಿರುವುದರ್ರೆ ಮ್ಯಾಚಿಂಗ್ ಆಗಿದೆ.
2 ಸಿಸಿಟಿವಿಯಲ್ಲಿರುವ ದೃಶ್ಯಾವಳಿಗಳು ಆರೋಪಿ ವಾಗ್ಮೋರೆ ಚಲನವಲನ ಹೊಂದಾಣಿಕೆಯಾಗಿದೆ. ಹೆಲ್ಮೆಟ್ ಧರಿಸಿದ್ದರೂ, ಬೈಕ್ನಲ್ಲಿ ಇದ್ದಿದ್ದು ಪರಶುರಾಮ್ ವಾಗ್ಮೋರೆ ಎಂಬುದು ಕನ್ಫರ್ಮ್ ಆಗಿದೆ.ಗುಜರಾತ್ನ ವಿಧಿವಿಜ್ಞಾನ ಪ್ರಯೋಗಾಲಯ ಫೊರೆನ್ಸಿಕ್ ಗೇಟ್ ಅನಾಲೀಸಿಸ್ ಮೂಲಕ ತಾಂತ್ರಿಕವಾಗಿ ಆರೋಪ ಸಾಬೀತು ಮಾಡಿದೆ.
ಭಾರತದಲ್ಲಿ ಇದೇ ಮೊದಲ ಬಾರಿಗೆ ಫೊರೆನ್ಸಿಕ್ ಗೇಟ್ ಅನಾಲೀಸಿಸ್ ಟೆಕ್ನಿಕ್ ಬಳಕೆ ಮಾಡುವ ಮೂಲಕ ಆರೋಪಿ ಪರಶುರಾಮ್ ವಾಗ್ಮೋರೆ ಶೂಟ್ ಮಾಡಿರುವುದು ಸಾಬೀತಾಗಿದೆ.
ದೇಶದಲ್ಲೇ ಮೊದಲ ಬಾರಿಗೆ ತಾಂತ್ರಿಕವಾಗಿ ಸಾಬೀತಾದ ಮೊದಲ ಪ್ರಕರಣ ಇದಾಗಿದ್ದು, ಲಂಡನ್ನಲ್ಲಿ 18ವರ್ಷಗಳ ಹಿಂದೆ ಮೊದಲ ಬಾರಿಗೆ ಈ ಟೆಕ್ನಿಕ್ ಬಳಸಲಾಗಿತ್ತು. ಗೌರಿ ಹತ್ಯೆ ಪ್ರಕರಣದ ತನಿಖೆಯಲ್ಲಿ ಎಸ್ಐಟಿ ಮಹತ್ವದ ಯಶಸ್ಸನ್ನು ಸಾಧಿಸಿದೆ.