Home District ಪರಿಷತ್ ಸಭಾಪತಿ ಸ್ಥಾನ ತಪ್ಪಿದ್ದಕ್ಕೆ ಹೊರಟ್ಟಿ ಕಣ್ಣೀರು..! ನೂತನ ಸಭಾಪತಿಗೆ ನಗುನಗುತ್ತಲೇ ಟಾಂಗ್ ಕೊಟ್ಟ ಬಸವರಾಜ...

ಪರಿಷತ್ ಸಭಾಪತಿ ಸ್ಥಾನ ತಪ್ಪಿದ್ದಕ್ಕೆ ಹೊರಟ್ಟಿ ಕಣ್ಣೀರು..! ನೂತನ ಸಭಾಪತಿಗೆ ನಗುನಗುತ್ತಲೇ ಟಾಂಗ್ ಕೊಟ್ಟ ಬಸವರಾಜ ಹೊರಟ್ಟಿ..! ಸೂಟ್‌ಕೇಸ್ ವಿಷಯ ಪ್ರಸ್ತಾಪಿಸಿದ ಹೊರಟ್ಟಿ..!

683
0
SHARE

ಚಳಿಗಾಲದ ಅಧಿವೇಶನದಲ್ಲಿ ತಾವು ಮೇಲ್ಮನೆಯಲ್ಲಿ ಸಭಾಪತಿ​ ಆಗುವುದು ಖಚಿತ ಎಂದು ಭಾವಿಸಿದ್ದ ಹಂಗಾಮಿ ಸಭಾಪತಿ​, ಜೆಡಿಎಸ್​ ನಾಯಕ ಬಸವರಾಜ ಹೊರಟ್ಟಿ ಅವರಿಗೆ ತೀವ್ರ ನಿರಾಸೆಯಾಗಿದೆ.. ಪ್ರತಾಪ್‌ ಚಂದ್ರ ಶೆಟ್ಟಿ ಅವರು ನೂತನ ಸಭಾಪತಿಯಾಗಿ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ನಿರ್ಗಮಿತ ಸಭಾಪತಿ ಬಸವರಾಜ ಹೊರಟ್ಟಿ ಭಾವುಕರಾದ್ರು.ಪ್ರತಾಪ್ ಚಂದ್ರ ಶೆಟ್ಟಿ ಅವರು ಸಭಾಪತಿ ಆಗಿ ಆಯ್ಕೆ ಆದ ಕೂಡಲೇ ಬಸವರಾಜ ಹೊರಟ್ಟಿ ಅವರು ಭಾವುಕರಾದರು.

ಬರುತ್ತಿದ್ದ ಅಳುವನ್ನು ತಡೆದುಕೊಳ್ಳಲು ಯತ್ನಿಸಿ ಸದನದಿಂದ ಹೊರನಡೆದರು.ಬಳಿಕ ಭಾವಕರಾಗಿ ಮಾತನಾಡಿದ ಹೊರಟ್ಟಿ, ಬೆಳಗಾವಿ ಅಧಿವೇಶನದವರೆಗೂ ಸಭಾಪತಿ ಯಾಗಿರುತ್ತೇನೆ ಎಂದು ಅಂದುಕೊಂಡಿದ್ದೆ.. ಆದ್ರೆ ಎರಡು ದಿನ ಮಾತ್ರ ಸಭಾಪತಿಯಾಗಿದ್ದೆ ಎಂದು ಬೇಸರ ವ್ಯಕ್ತಪಡಿಸಿದ್ರು..

ಇನ್ನು ಒಬ್ಬರು ಮೇಲೆ ಹೋಗುತ್ತಿರೋರನ್ನ ನೋಡಿ, ಇನ್ನೊಬ್ಬರು ಕಾಲು ಎಳೆಯೋ ಸಂಸ್ಕೃತಿ ರಾಜಕಾರಣದಲ್ಲಿದೆ ಎಂದು ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ರು..ಸೂಟ್ ಕೇಸ್ ಎಲ್ಲಿ!?:ಇದೇ ವೇಳೆ ಅಧಿಕಾರ ಹಸ್ತಾಂತರ ಮಾಡುವ ವೇಳೆ ಅಧಿಕಾರ ಹಸ್ತಾಂತರ ಮಾಡುವ ವೇಳೆ ಪ್ರತಾಪ್ ಚಂದ್ರ ಶೆಟ್ಟಿಗೆ ನಗುನಗುತ್ತಲೇ ಹೊರಟ್ಟಿ ಕಾಲೆಳೆದ್ರು…

ಸೂಟ್ ಕೇಸ್ ಎಲ್ಲಿ, ಯಾರಿಗೆ ಕೊಟ್ರಿ ಅಂತಾ ಕಿಚಾಯಿಸಿ ಕಾಲೆಳೆದಿದ್ದು ಆಶ್ಚರ್ಯ ಮೂಡಿಸಿತು.ಇನ್ನು ನೂತನ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಮಾತನಾಡಿ, ನಾನು ಯಾವುದೇ ಲಾಬಿ ಮಾಡದೇ ಸಭಾಪತಿಯಾಗಿದ್ದೇನೆ ಎಂದರು.ಈ ನಡುವೆ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದಿಂದ ಕೆಳಗಿಳಿಸಿದ್ದಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ..

ಹೊರಟ್ಟಿ ಅವರನ್ನು ಕೆಳಗಿಳಿಸುವ ಮೂಲಕ ಉತ್ತರ ಕರ್ನಾಟಕ ಭಾಗದವರಿಗೆ ಅವಮಾನ ಮಾಡಲಾಗಿದೆ ಎಂದು ಶೆಟ್ಟರ್ ಕಿಡಿಕಾರಿದ್ದಾರೆ.. ಹೊರಟ್ಟಿ ಕಣ್ಣೀರು ಮೈತ್ರಿ ಸರ್ಕಾರಕ್ಕೆ ಒಳ್ಳೆಯದು ಮಾಡಲ್ಲ ಎಂದರು..ಇನ್ನು ಎಸ್ ಆರ್ ಪಾಟೀಲ್ ಸಭಾಪತಿ ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಸಾಕಷ್ಟು ಪ್ರಯತ್ನ ನಡೆಸಿದ್ರು..ಆದ್ರೆ ತೆರೆಮರೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಆಸ್ಕರ್ ಫನಾಂಡೀಸ್, ತಮ್ಮ ಆಪ್ತನಿಗೆ ಸಭಾಪತಿ ಪಟ್ಟ ಕಟ್ಟಿದ್ದಾರೆ..

LEAVE A REPLY

Please enter your comment!
Please enter your name here