Home District ಪರೀಕ್ಷೆಗಾಗಿ ಮಾಂಗಲ್ಯ, ಕಾಲುಂಗರ ಕಳಚಿದ ನಾರಿಯರು..! ರೈಲ್ವೆ ನೇಮಕಾತಿ ಪರೀಕ್ಷೆ ವೇಳೆ ವಿಚಿತ್ರ ಘಟನೆ..!

ಪರೀಕ್ಷೆಗಾಗಿ ಮಾಂಗಲ್ಯ, ಕಾಲುಂಗರ ಕಳಚಿದ ನಾರಿಯರು..! ರೈಲ್ವೆ ನೇಮಕಾತಿ ಪರೀಕ್ಷೆ ವೇಳೆ ವಿಚಿತ್ರ ಘಟನೆ..!

1638
0
SHARE

ಪರೀಕ್ಷೆಯಲ್ಲಿ ಕಾಪಿ ಹೊಡೀ ಬಾರ್ದು ಅಂತಾ ಪುಸ್ತಕಗಳನ್ನು ಹೊರಗಿಡೋದು ಸಾಮಾನ್ಯ. ಆದ್ರೆ ರೈಲ್ವೆ ನೇಮಕಾತಿಗಾಗಿ ನಡೆದ ಪರೀಕ್ಷೆಯಲ್ಲಿ ಏನೇನು ಕಳಚಿಸಿದ್ದಾರೆ ಅನ್ನೋದನ್ನ ಕೇಳಿದ್ರೆ, ನೀನು ಆಶ್ಚರ್ಯ ಪಡ್ತೀರಿ.ಅರರೆ…ದೇನಪ್ಪಾ ಈ ರೀತಿ ಕೈಯಲ್ಲಿ ಕಾಲುಂಗರ, ಬಳೆ, ಕಾಲ್ಚೈನು… ಮಾಂಗಲ್ಯ ಸರವನ್ನು ಹಿಡ್ಕೊಂಡಿದ್ದಾರಲ್ಲ…

ಇದೇನು ಮಾರೋಕೆ ಹೊರಟಿದ್ದಾರೋ, ಗಿರವಿ ಇಡೋ ಹೊರಟ್ಟಿದ್ದಾರೋ ಅನ್ಕೋಬೇಡಿ. ಇದು ರೈಲ್ವೆ ನೇಮಕಾತಿ ಪರೀಕ್ಷೆ ಬರಯಲು ಬಂದ ಅಭ್ಯರ್ಥಿಗಳಿಗೆ ಇಲಾಖೆ ವಿಧಿಸಿದ ನಿರ್ಬಂಧ. ಹೌದು… ಮೈಸೂರಿನ ಹೆಬ್ಬಾಳಿನ ಜೋರ್ತಿರ್ಗಾಮ ಸ್ಕೂಲ್ ನಲ್ಲಿ ರೈಲ್ವೆ ಇಲಾಖೆಯ ಡಿ ಗ್ರೂಪ್ ನೌಕರರ ನೇಮಕಾತಿ ಪರೀಕ್ಷೆ ನಡೆಯಿತು.

ಪರೀಕ್ಷೆಗೂ ಮುನ್ನ ಮಹಿಳೆಯರು ಕಾಲುಂಗರ, ಚೈನು, ಮಾಂಗಲ್ಯ ಸರವನ್ನ ಬಿಚ್ಚಿಟ್ಟು ಪರೀಕ್ಷೆ ಬರೆಯಲೇ ಬೇಕಿತ್ತು. ರೈಲ್ವೆ ಇಲಾಖೆಯ ಈ ಕ್ರಮಕ್ಕೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ರು. ಇತ್ತ ಪರೀಕ್ಷೆ ಬರೆಯಲು ಬಂದಿದ್ದ ಪುರುಷರಿಗೂ ಸಹ ಬೆಲ್ಟ್, ಕೈ ಗಡಿಯಾರ ಬಿಚ್ಚಿಡಿಸಲಾಗಿತ್ತು.ತಾಳಿ, ಓಲೆ ಬಂಗಾರದ ಒಡವೆಗಳಲ್ಲಿ ಮೈಕ್ರೋಫೋನ್, ಮೈಕ್ರೋ ಕ್ಯಾಮೆರಾ ಹಾಕಿಕೊಂಡು ಅಕ್ರಮ ಮಾಡ್ತಾರೆಂಬ ಅನುಮಾನದಿಂದ ಈ ಪರೀಕ್ಷಾ ನಿಯಮಾವಳಿಯನ್ನ ಇಲಾಖೆ ಜಾರಿಗೆ ತಂದಿತ್ತು.

ಆದ್ರೆ ಪರೀಕ್ಷೆ ಬರೆಯಲು ಬಂದ ಮಹಿಳಾ ಅಭ್ಯರ್ಥಿಗಳಿಗೆ ಕಿರಿಕಿರಿ ಉಂಟಾಗಿತ್ತು. ಈ ಬಗ್ಗೆ ನೊಟೀಸ್ ಬೋರ್ಡ್ ನಲ್ಲೇ ಗೈಡ್ ಲೈನ್ ಪ್ರಕಟಿಸಿ ಆರ್ ಆರ್ ಬಿ ತಾಕೀತು ಮಾಡಿದ್ದು, ಮಹಿಳಾ ಅಭ್ಯರ್ಥಿಗಳು ಹಾಗೂ ಪೊಷಕರು ಆಕ್ರೋಶಕ್ಕೆ ಕಾರಣವಾಯ್ತು.ಒಟ್ಟಾರೆ, ಅಕ್ರಮ ತಡೆಯುವ ಸಲುವಾಗಿ ಇಲಾಖೆ ಕ್ರಮ ಸ್ವಾಗತಾರ್ಹವಾದರೂ, ಮಹಿಳೆಯರ ತಾಳಿ ಬಿಚ್ಚಿಸಿದ್ದು, ಕಾಲುಂಗರ ಬಿಚ್ಚಿಸಿದ್ದು, ಕಾಲುಚೈನು ಬಿಚ್ಚಿಸಿದ್ದು ಎಲ್ಲರ ಅಸಮದಾನದಕ್ಕೆ ಕಾರವಾಗಿದೆ.

LEAVE A REPLY

Please enter your comment!
Please enter your name here