Home Crime ಪರೀಕ್ಷೆ ಬರೆಯಲು ಹೋಗಿದ್ದವನ ಕಿಡ್ನಾಪ್ ಮಾಡಿ ವಿಷಪ್ರಾಶನ..! ಬಯಲಿಗೆಳೆಯಿತು ಸಾಯುವ ಮುನ್ನ ಕೊಟ್ಟ ಆ ಒಂದು...

ಪರೀಕ್ಷೆ ಬರೆಯಲು ಹೋಗಿದ್ದವನ ಕಿಡ್ನಾಪ್ ಮಾಡಿ ವಿಷಪ್ರಾಶನ..! ಬಯಲಿಗೆಳೆಯಿತು ಸಾಯುವ ಮುನ್ನ ಕೊಟ್ಟ ಆ ಒಂದು ಸ್ಟೇಟ್ಮೆಂಟ್..??!!!

191
0
SHARE


ಎರಡು ಕುಟುಂಬಗಳ ಜಮೀನು ವಿವಾದದ ದ್ವೇಷಕ್ಕೆ ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಆಯನೂರು ಗ್ರಾಮದ ಚನ್ನೇನಹಳ್ಳಿಯಲ್ಲಿ ನಡೆದಿದೆ.

ಎರಡು ದಿನಗಳ ಎಟಿಎನ್ಸಿ ಕಾಲೇಜಿನಲ್ಲಿ ಪ್ರಥಮ ಬಿಕಾಂ ಪರೀಕ್ಷೆ ಬರೆಯಲು ಹೋಗಿದ್ದ 19 ವರ್ಷದ ಅಭಿಷೇಕ್‌ ಪರೀಕ್ಷೆ ಮುಗಿಸಿಕೊಂಡು ಬರುವಾಗ ಕಾರಿನಲ್ಲಿ ಕಿಡ್ನಾಪ್ ಮಾಡಿದ್ದ ಆರೊಪಿಗಳು ಬಲವಂತವಾಗಿ ವಿಷ ಪ್ರಾಷಣ ಮಾಡಿದ್ದರು., ವಿದ್ಯಾನಗರ ಬಳಿ ರೈಲ್ವೆ ಟ್ರಾಕ್ ಬಳಿ ಅಭಿಷೇಕ್‌ನನ್ನು ಬಿಸಾಡಿ ಹೋಗಿದ್ದರು.

ಅಸ್ವಸ್ಥಗೊಂಡಿದ್ದ ಅಭಿಷೇಕ್‌ನನ್ನು ಕಂಡ ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಕಿಡ್ನ್ಯಾಪ್ ಪ್ರಕರಣವನ್ನು ಅಭಿಷೇಕ್ ಪೊಲೀಸರಿಗೆ ತಿಳಿಸಿದ್ದ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಅಭಿಷೇಕ್ ಇಂದು ಸಾವನ್ನಪ್ಪಿದ್ದಾನೆ.

 

ಇನ್ನು ರಾಜಾ ನಾಯ್ಕ್ ಮತ್ತು ಮೆಗ್ಯಾ ನಾಯ್ಕ್ ಕುಟುಂಬಗಳ ನಡುವೆ ಗೋಮಾಳ ಜಮೀನಿಗಾಗಿ ಜಗಳ ನಡೆಯುತ್ತಿತ್ತು.. ಪ್ರಕರಣ ಸಂಬಂಧ ಮೆಗ್ಯಾ ನಾಯ್ಕ್ ಸಹೋದರ ಒಬ್ಯಾ ನಾಯ್ಕ್ ,ಪಾಪ ನಾಯ್ಕ್ ನಿರ್ಮಲ ಬಾಯಿ, ಗೀತಾಳನ್ನು ಕೋಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ…

LEAVE A REPLY

Please enter your comment!
Please enter your name here