ಪರ್ತ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿ ಬಿದ್ದಿದೆ. ಆಸೀಸ್ ನೀಡಿದ್ದ 287 ರನ್ ಗಳ ಗುರಿ ಬೆನ್ನಟ್ಟಲು ವಿಫಲವಾದ ಕೊಹ್ಲಿ ಪಡೆ ಘನಘೋರ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಯ್ತು. ಈ ಮೂಲಕ ದ್ವಿತೀಯ ಇನ್ನಿಂಗ್ಸ್ ನಲ್ಲಿ 140 ರನ್ ಗಳಿಗೆ ಆಲೌಟ್ ಆಗಿ ಸೋಲಿನ ಮುಖಭಂಗ ಅನುಭವಿಸಿತು.
ಪರ್ತ್ ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟೆಸ್ಟ್ ನಲ್ಲಿ ಟೀಂ ಇಂಡಿಯಾ 146 ರನ್ ಗಳಿಂದ ಸೋಲನ್ನ ಕಂಡಿತು. ಆಸೀಸ್ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ ಕೊಹ್ಲಿಪಡೆ ಘನಘೋರ ಬ್ಯಾಟಿಂಗ್ ವೈಫಲ್ಯಕ್ಕೆ ತುತ್ತಾಯ್ತು. ಈ ಮೂಲಕ ದ್ವಿತೀಯ ಇನ್ನಿಂಗ್ಸ್ ನಲ್ಲಿ 140 ರನ್ ಗಳಿಗೆ ಆಲೌಟ್ ಆಗಿ, ಕಾಂಗರೂಪಡೆಯ ಎದುರು ಮಂಡಿಯೂರಿತು. ಇದ್ರಿಂದ ಕಾಂಗರೂಪಡೆ 4 ಟೆಸ್ಟ್ ಪಂದ್ಯಗಳ ಸರಣಿಯನ್ನ 1-1ರಲ್ಲಿ ಸಮಬಲಗೊಳಿಸಿತು.
ದಿನಕ್ಕೊಂದು ರೀತಿಯಲ್ಲಿ ವರ್ತಿಸುತ್ತಿದ್ದ ಪರ್ತ್ ಪಿಚ್ ನ ಮರ್ಮವನ್ನ ಅರಿತ ಆಸೀಸ್ ಬೌಲರ್ ಗಳು, ಟೀಂ ಇಂಡಿಯಾವನ್ನ ಹೆಚ್ಚು ಒತ್ತಡಕ್ಕೆ ಸಿಲುಕಿಸಿದ್ರು. ಕೊಹ್ಲಿಪಡೆಯ ದಾಂಡಿಗರು ಕೂಡ ನಿರೀಕ್ಷೆಯಂತೆ ಸಮರ್ಥವಾಗಿ ಬ್ಯಾಟ್ ಬೀಸಲು ವಿಫಲರಾದ್ರು. ಹನುಮವಿಹಾರಿ 28 ಹಾಗೂ ರಿಶಬ್ ಪಂತ್ 30 ರನ್ ಸಿಡಿಸದ್ದನ್ನ ಹೊರತುಪಡಿಸಿದ್ರೆ, ಉಳಿದೆಲ್ಲಾ ಬಾಲಂಗೋಚಿಗಳು ಒಬ್ರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದ್ರು. ನಥನ್ ಲಿಯಾನ್ ಟೆಸ್ಟ್ ನಲ್ಲಿ 8 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು..
5 ವಿಕೆಟ್ ನಷ್ಟಕ್ಕೆ 112 ಕಲೆಹಾಕಿದ್ದ ಭಾರತ, ಮುಂದಿನ 28 ರನ್ ಗಳಲ್ಲಿ ಕೊನೆಯ 5 ವಿಕೆಟ್ ಗಳನ್ನ ಕಳೆದುಕೊಂಡಿದ್ದು ತಂಡದ ಬ್ಯಾಟಿಂಗ್ ದೌರ್ಬಲ್ಯವನ್ನ ಎತ್ತಿ ತೋರಿಸುತ್ತಿತ್ತು. ಅಷ್ಟೇ ಅಲ್ಲದೇ ತಂಡದ ಓಪನರ್ ಗಳಾದ ರಾಹುಲ್ ಹಾಗೂ ವಿಜಯ್ ಬೇಜವಾಬ್ದಾರಿ ಬ್ಯಾಟಿಂಗ್, ಮಧ್ಯಮ ಕ್ರಮಾಂಕದ ಕುಸಿತ, ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಅವಲಂಬನೆ, ಸ್ಪಿನ್ನರ್ ಗಳನ್ನ ಬಿಟ್ಟು 4 ಬೌಲರ್ ಗಳ ಹೆಚ್ಚುವರಿ ಆಯ್ಕೆ ಮತ್ತು ಕ್ಯಾಪ್ಟನ್ ಕೊಹ್ಲಿಯ ತಪ್ಪು ನಿರ್ಧಾರಗಳು, ಪರ್ತ್ ಪಿಚ್ ಬಗ್ಗೆ ಸರಿಯಾಗಿ ಅರಿಯದೇ ಇದ್ದದ್ದು ಜೊತೆಗೆ ಆಸೀಸ್ ತಂಡದ ಸಂಘಟಿತ ಪ್ರದರ್ಶನ ಭಾರತ ತಂಡದ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿದವು.
ಇನ್ನೂ ಕನ್ನಡಿಗ ಕೆಎಲ್ ರಾಹುಲ್ ಕಳಪೆ ಪ್ರದರ್ಶನ ಭಾರೀ ಚರ್ಚೆಗೆ ಗ್ರಾಸವಾಗಿದೆ.. ಎರಡನೇ ಇನಿಂಗ್ಸ್ ನಲ್ಲಿ 286 ರನ್ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ನೀಡಲು ರಾಹುಲ್ ವಿಫಲರಾಗಿ ಶೂನ್ಯ ಸಂಪಾದಿಸಿ ಪೆವಿಲಿಯನ್ ಗೆ ಹಿಂತಿರುಗಿದ್ದರು.. ಇನ್ನು ಮುಂದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಗೆ ವಿಶ್ರಾಂತಿ ನೀಡಿ, ಕನ್ನಡಿಗ ಮಾಯಾಂಕ್ ಅಗರ್ವಾಲ್ ಗೆ ಸ್ಥಾನ ನೀಡಬೇಕು ಅಂತಾ ಹಿರಿಯ ಆಟಗಾರರು ಮತ್ತು ಕ್ರಿಕೆಟ್ ಅಭಿಮಾನಿಗಳು ಆಗ್ರಹಿಸಿದ್ದಾರೆ..
ಒಟ್ಟಿನಲ್ಲಿ ಆಡಿಲೇಡ್ ಪಂದ್ಯ ಗೆದ್ದು ಉಮೇದಿಯಲ್ಲಿದ್ದ ಟೀಂ ಇಂಡಿಯಾ ಪರ್ತ್ ಅಂಗಳದಲ್ಲಿ ಮುಗ್ಗರಿಸಿ ಬಿದ್ದಿದೆ. ಇದ್ರಿಂದ ಕೊಹ್ಲಿಪಡೆಗೆ ಸರಣಿ ಗೆಲುವು ಅಂದುಕೊಂಡಷ್ಟು ಸುಲಭವಲ್ಲ ಅನ್ನೋದು ಮನವರಿಕೆಯಾಗಿದೆ. ಇನ್ನು ಡಿ.26 ರಂದು ಭಾರತ ಆಸ್ಟ್ರೇಲಿಯಾ 3ನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ ನಲ್ಲಿ ನಡೆಯಲಿದೆ.