Home Cinema ಪರ್ಸನಲ್ ತೊಂದರೆಗಳ ಮಧ್ಯೆಯೂ ಶುರುವಾಯ್ತು ಬ್ಲ್ಯಾಕ್ ಕೋಬ್ರಾ ’ಕಾಳಗ’. . ! ಕುಸ್ತಿ ಅಖಾಡಕ್ಕೆ ಅಲ್ಪವಿರಾಮ,...

ಪರ್ಸನಲ್ ತೊಂದರೆಗಳ ಮಧ್ಯೆಯೂ ಶುರುವಾಯ್ತು ಬ್ಲ್ಯಾಕ್ ಕೋಬ್ರಾ ’ಕಾಳಗ’. . ! ಕುಸ್ತಿ ಅಖಾಡಕ್ಕೆ ಅಲ್ಪವಿರಾಮ, ವಿಜಿ ಇದೀಗ ಸಲಗ..!

1868
0
SHARE

ತಮ್ಮ ಸಂಸಾರ ಗಲಾಟೆಗಳಿಂದ ಬೇಸತ್ತು ಹೋಗಿದ್ದ ದುನಿಯಾ ವಿಜಿ ಮತ್ತೆ ಸಿನಿಮಾ ಮಾಡ್ತರಾ ಇಲ್ಲವಾ ಎನ್ನುವ ಒಂದು ನೋವಿನ ಪ್ರಶ್ನೆ ವಿಜಿ ಫ್ಯಾನ್‌ಗಳನ್ನ ಕಾಡ್ತಿತ್ತು. ಆದರೆ ವಿಜಿ ಈಗ ತಮಗೆ ಮೆತ್ತಿದ್ದ ಧೂಳನ್ನು ಕೊಡವಿ ಸ್ಯಾಂಡಲ್‌ವುಡ್‌ನಲ್ಲಿ ಅಬ್ಬರಿಸೋಕೆ ರೆಡಿಯಾಗಿದಾರೆ. ತಮ್ಮ ಪರ್ಸನಲ್ ಲೈಫ್‌ನ ಜಂಜಾಟಗಳಿಂದ ಹೊರಬಂದು ಬೇರೆಯಾದೇ ದುನಿಯಾವೊಂದನ್ನ ಕಟ್ಟಲು ತುದಿಗಾಲಿನಲ್ಲಿ ನಿಂತ ಕರುನಾಡ ಕರಿಯನ ಹೊಸ ಸಿನಿಮಾ ನ್ಯೂಸ್ ಇಲ್ಲಿದೆ ನೋಡಿ. . !

’ಸಲಗ’.. ಆಹ!ಹಾ! ಟೈಟಲ್ ಕೇಳಿದ್ರೆ ಒಂದು ಕ್ಷಣ ಮೈ ಜುಮ್ಮೆನಿಸುತ್ತೆ. ’ಸಲಗ’ ಎನ್ನುವ ಪದಕ್ಕೆ ಆ ದೊಡ್ಡ ಎನರ್ಜಿ ಇದೆ. ಇಂತಹ ಟೈಟಲ್ ಇಟ್ಕೊಂಡು ದುನಿಯಾ ವಿಜಿ ಮತ್ತೆ ಮಾಯಾನಗರಿಯಲ್ಲಿ ಘೀಳಿಡೋಕೆ ಬರ್ತಿರೋದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ದುನಿಯಾ ವಿಜಿಗೂ ಕಾಂಟ್ರವರ್ಸಿಗಳಿಗೂ ಬಿಡಿಸಲಾರದ ಕನೆಕ್ಷನ್. ಹಾಗಾಗೀ, ಈ ತಲೆಬಿಸಿಗಳ ಮಧ್ಯೆಯೂ ದುನಿಯಾವಿಜಿಯ ಈ ಗ್ರ್ಯಾಂಡ್ ಕಮ್‌ಬ್ಯಾಕ್ ಚಂದನವನದ ಕಣ್ಣು ಕುಕ್ಕಿಸಿ ಬಿಟ್ಟಿದೆ.

ತನ್ನ ಬದುಕಿನ ಏರುಪೇರುಗಳನ್ನ ದಾಟಿ ದುನಿಯವಿಜಿ ಒಂದು ಸಿಹಿಸುದ್ಧಿ ಕೊಟ್ಟಿದಾರೆ. ಹೊಸ ವರ್ಷ ಹತ್ತಿರ ಬರ‍್ತಾಇದ್ದಂಗೆ ವಿಜಿ ಬಾಳಲ್ಲೂ ಹೊಸ ಐಡಿಯಾಗಳು ಹುಟ್ಟಿಕೊಳ್ತಿವೆ. ಅದು ಎಲ್ಲರಿಗೂ ಇಷ್ಟವಾಗುವ ಭರವಸೆಯನ್ನ ವಿಜಿ ನೀಡಿದಾರೆ. ಅಂದುಕೊಂಡಂತೆ ಎಲ್ಲವೂ ನಡೆದಿದ್ರೇ, ’ಕುಸ್ತಿ’ ಸಿನಿಮಾದ ಮೂಲಕ ವಿಜಿ ಅಖಾಡಕ್ಕೀಳಿಯಬೇಕಿತ್ತು. ಆದರೆ ಸದ್ಯಕ್ಕೆ ’ಕುಸ್ತಿ’ ಸಿನಿಮಾ ಸ್ಟಾಪ್ ಆಗಿದೆ. ಸಮಸ್ಯೆಗಳಿಗೆ ಸೆಡ್ಡು ಹೋಡಿಯೋ ’ಸಲಗ’ದ ಸೌಂಡ್ ಜೋರಾಗಿದೆ.

ಈ ಹೊಸ ದುನಿಯಾದ ನಿರ್ಮಾಣಕಾರ್ಯಕ್ಕೆ ಸಾಥ್ ಕೊಟ್ಟಿರೋದು ’ಚೂರಿಕಟ್ಟೆ’ ಖ್ಯಾತಿಯ ಯುವ ನಿರ್ದೇಶಕ ರಾಘು ಶಿವಮೊಗ್ಗ. ರಾಘು ತಮ್ಮ ಕೆಲಸದಿಂದಲೇ ಗಾಂಧಿನಗರದಲ್ಲಿ ಭರವಸೆಯ ಡೈರೆಕ್ಟರ್ ಎನಿಸಿಕೊಂಡವರು. ಇನ್ನು ’ಗುಳ್ಟು’ ಸಿನಿಮಾದಲ್ಲಿ ಕ್ಯಾಮೆರಾ ಕೈ ಚಳಕವನ್ನ ಪ್ರದರ್ಶಿಸಿದ ಶಾಂತಿಸಾಗರ್ ’ಸಲಗ’ದ ಹೆಜ್ಜೆಗಳನ್ನ ಸೆರೆಹಿಡಿಯಲ್ಲಿದ್ದಾರೆ. ಈ ಹಿಂದೆ ದುನಿಯವಿಜಿ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ತಮ್ಮ ಮುಖ ಕಾಣಿಸದ ಫೋಟೊ ಹಾಕಿ ’ನಮ್ಮೊಳಗೆ ಏನೋ ಗುಟ್ಟು ನಡೆಯುತಿದೆ, ಸದ್ಯಕ್ಕೇ ನಮ್ಮ ಯೋಚನೆಗಳು ರಟ್ಟಾಗದ ಜುಟ್ಟು ಗಟ್ಟಿ ಮಾಡ್ಕೊತೀವಿ, ಆದರೆ ಈ ಸರ್‌ಪ್ರೈಸ್‌ಗಳೆಲ್ಲಾ ನಿಮಗಾಗಿ ಮಾತ್ರ’ ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ರು. ಆದರೆ ಈ ಎಲ್ಲಾ ಕನ್‌ಫ್ಯೂಷನ್‌ಗಳಿಗೆ ಈಗ ದೊಡ್ಡ ತೆರೆ ಬಿದ್ದಿದೆ ಬಿಡಿ.

’ಸಲಗ’ ಸಿನಿಮಾ ಸ್ಟಾರ್ಟ್ ಆಗೋಕು ಮುಂಚೆಯೇ ವಿಜಿ ಈ ಸ್ವೀಟ್ ನ್ಯೂಸ್‌ನ್ನ ತಮ್ಮ ಅಭಿಮಾನಿ ದೇವರುಗಳಿಗೆ ಮುಟ್ಟಿಸಿಬಿಟ್ಟಿದಾರೆ. ’ಸಲಗ’ದ ಹೊಸ ಜರ್ನಿಯ ಕುರಿತು ಮನಸ್ಸಿನಲ್ಲಿದ್ದ ಎಕ್ಸಾಯಟ್‌ಮೆಂಟನ್ನ ವಿಜಿ ಕಾವ್ಯಾತ್ಮಕವಾಗಿ ಯಾವ ರೀತಿಯಲ್ಲಿ ಆಚೆ ಹಾಕಿದಾರೆ ನೀವೆ ನೋಡಿ. . ನಮಸ್ಕಾರ. ಕೊನೆಗೂ ಆ ಸುಮುಹೂರ್ತ ಬಂತು. ಅದು ನನ್ನ ಹೊಸ‌ ಚಿತ್ರದ ಹೆಸರು ಹೇಳುವ ಸಮಯ. ಹೆಸರಿನ ಪೋಸ್ಟರ್ ಈಗಾಗಲೇ ನೋಡಿದ್ದೀರ. ‘ಸಲಗ’ ಎಂಬ ಈ ಹೆಸರಿನಲ್ಲಿ ಸಹಜವಾಗಿ ಆನೆಯ ಶಕ್ತಿ ಇದೆ.

ಈ ಸಲ ಸಲಗ ಮುನ್ನುಗ್ಗುವ ವೇಗ ಇನ್ನು ನೀವೇ ನೋಡಿ. ನಾನು ಸಲಗದಂತೆ ಎಂದು ಬಹಳ ಮಂದಿ ಹೇಳುತ್ತಾರೆ. ಒಮ್ಮೆ ನಿರ್ಧರಿಸಿದ ಮೇಲೆ ಅದೇ ಸರಿಯಾದ ದಾರಿ ಎಂದೇ ಮುಂದುವರಿದಿದ್ದೇನೆ. ಅದು ಸರಿಯಾಗಿಯೇ ಇತ್ತು ಎನ್ನುವುದು ಮುಂದೆ ನಿಮಗೂ‌ ಗೊತ್ತಾಗುತ್ತೆ. ನಿಜದಲ್ಲಿ ನಾನು ಒಂಟಿ‌ ಸಲಗ ಅಲ್ಲ. ಬಳಗದೊಂದಿಗೆ ಇರುವ ನೂರೆಂಟು‌ ಸಲಗಗಳ‌ ಜೊತೆಗಾರ. ಅಭಿಮಾನಿಗಳ ಬಳಗಕ್ಕೆ ಮಾತ್ರ ಸಲಿಗೆ ನೀಡುವ ಸಲಗ ನಾನು. ರಾಘು ಶಿವಮೊಗ್ಗ ಎಂಬ ಮಾವುತನ ಜೊತೆಗೆ ನುಗ್ಗಿ ಬರಲಿರುವ ಈ ಸಲಗಕ್ಕೆ ಈಗಲೇ ಕೋರಿ ಬಿಡಿ‌ ಸ್ವಾಗತ.

ಯಸ್. ದುನಿಯಾ ವಿಜಿಯ ಈ ’ಬ್ಯಾಕ್ ಟು ಫೀಲ್ಡ್’ ತಂತ್ರಕ್ಕೆ ಎಲ್ಲರೂ ವಾರ್ಮ್ ವೆಲ್‌ಕಮ್ ಮಾಡಿದಾರೆ. ಸಲಗದ ವಿಭಿನ್ನವಾದ ಸ್ಟೈಲ್ ನೋಡಿ ಕರುನಾಡ ಕರಿಯನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರ‍್ತಿದೆ. ತಮ್ಮ ವೈಯಕ್ತಿಕ ಜೀವನದ ಬೇಸರಗಳಿಂದ ಹೊರಬರೋಕೆ ವಿಜಿಗೆ ದೊಡ್ಡ ಆನೆಗಾತ್ರದ ಗೆಲುವೊಂದರ ತೀವ್ರ ಅವಶ್ಯಕತೆಯಿದೆ. ಆ ಸಂಭ್ರಮದ ಮೆಟ್ಟಿಲುಗಳನ್ನ ಈ ’ಸಲಗ’ ಕ್ರಿಯೆಟ್ ಮಾಡಬಹುದಾ ಅನ್ನೋದೆ ಗಾಂಧಿನಗರದ ಯಕ್ಷಪ್ರಶ್ನೆ. . !

LEAVE A REPLY

Please enter your comment!
Please enter your name here