Home Crime ಪರ ಸ್ತ್ರೀ ಸಂಘಮಾಡಿ ತನ್ನ ಸ್ವಂತ ಹೆಂಡತಿ ಮಗಳ ಪೋಟೋ,ನಂಬರ್‌ನ್ನು ಅಶ್ಲೀಲ ವೆಬ್‌ಸೈಟ್‌ಗೆ ಹಾಕಿ ವಿಕೃತಿ...

ಪರ ಸ್ತ್ರೀ ಸಂಘಮಾಡಿ ತನ್ನ ಸ್ವಂತ ಹೆಂಡತಿ ಮಗಳ ಪೋಟೋ,ನಂಬರ್‌ನ್ನು ಅಶ್ಲೀಲ ವೆಬ್‌ಸೈಟ್‌ಗೆ ಹಾಕಿ ವಿಕೃತಿ ಮೆರೆದ ಕಿರಾತಕ..!!?

2467
0
SHARE

ಕೈ ಹಿಡಿದ ಪತ್ನಿಯನ್ನ ಬೇರೊಬ್ಬ ಪುರುಷ ಕಣ್ಣೆತ್ತಿ ಸ್ವಲ್ಪ ಮಟ್ಟಿಗೆ ಗುರಾಯಿಸಿದ್ರೇನೆ ದೊಡ್ಡ ರಾಧಾಂತ ನಡೆದೋಗುತ್ತೆ. ಆದ್ರೆ, ಇಲೊಬ್ಬ ವಿಕೃತ ಮನಸ್ಸಿನ ಪತಿ, ತನ್ನ ಪತ್ನಿ ಹಾಗೂ ಪುತ್ರಿಯ ಪೋಟೋ ಹಾಗೂ ಮೊಬೈಲ್ ನಂಬರ್ ನ್ನ ಫೋರ್ನ್ ವೆಬ್ ಸೈಟ್‌ಗೆ ಅಪ್ ಲೋಡ್ ಮಾಡಿ ವಿಕೃತಿ ಪ್ರದರ್ಶಿಸಿದ್ದಾನೆ. ಅವ್ನೇ ಈ ಮಹೇಶ್ ಕುಮಾರ…

ಕೆ.ಪಿ. ಅಗ್ರಹಾರ ನಿವಾಸಿಯಾದ ಈತ 20 ವರ್ಷಗಳ ಹಿಂದೆ ಈಕೆಯನ್ನ ವಿವಾಹವಾಗಿದ್ದ. ಆರತಿಗೊಬ್ಬಳು, ಕೀರ್ತಿಗೊಬ್ಬ ಎಂಬಂತೆ ಇಬ್ಬರು ಮಕ್ಕಳಿದ್ರು. ಆದ್ರೆ, ಪರ ಸ್ತ್ರೀ ಸಹವಾಸಕ್ಕೆ ಬಿದ್ದ ಮಹೇಶ್ ಕುಮಾರ್, ಹೆಂಡ್ತಿ ಮಕ್ಕಳನ್ನ ಕಡೆಗಣಿಸಿದ್ದಲ್ಲದೇ ಡೈವರ್ಸ್ ನೋಟಿಸ್ ಕಳಿಸಿದ್ದ. ಅದೇ ಟೈಮ್ ಗೆ ಈತನ ಪುತ್ರ ಅನಾರೋಗ್ಯಕ್ಕೆ ಬಲಿಯಾಗಿದ್ದು, ಅದಕ್ಕೆ ಪತ್ನಿಯೇ ಕಾರಣ ಅಂತ ದ್ವೇಷ ಕಾರೋದಕ್ಕೆ ಶುರು ಮಾಡಿದ್ದ…

ಅದಕ್ಕೆ ಆತ ಹಿಡಿದ ದಾರಿ ಲೊಕ್ಯಾಂಟೋ ಅನ್ನೋ ಫೋರ್ನ್ ವೈಬ್ ಸೈಟ್ ಗೆ ಪತ್ನಿಯ ಮಾಹಿತಿ ಹಾಕಿದ್ದು. ಕೇವಲ ಪತ್ನಿ ಮಾತ್ರವಲ್ಲದೆ ತನ್ನ ಮಾತು ಕೇಳ್ತಿಲ್ಲ ಅನ್ನೋ ಕಾರಣಕ್ಕೆ ರಕ್ತ ಹಂಚಿಕೊಂಡು ಹುಟ್ಟಿದ ಪುತ್ರಿಯ ಫೋಟೋ ಹಾಕಿ ಕೆಟ್ಟದಾಗಿ ಬರವಣಿಗೆಯನ್ನು ಹಾಕಿ, ಮೊಬೈಲ್ ನಂಬರ್ ಹಾಕಿದ್ದ. ಇದ್ರಿಂದ ಈಕೆಗೆ ಸಿಕ್ಕಾಪಟ್ಟೆ ಫೋನ್ ಕಾಲ್ಸ್ ಬರೋದಕ್ಕೆ ಶುರುವಾಗಿ, ನೆಮ್ಮದಿ ಹಾಳಾಗಿತ್ತು…

ಹೀಗಾಗಿ ಈ ಬಗ್ಗೆ ಕ್ರಮ ಕೈಗೊಳ್ಳಿ ಅಂತ ಸೈಬರ್ ಕ್ರೈಂ ಪೊಲೀಸ್ರಿಗೆ ದೂರು ನೀಡಿದ್ರು. ಆದ್ರೆ ಯಾವುದೇ ಪೊಲೀಸರಿಂದ ಯಾವುದೇ ಪ್ರಯೋಜನವಾಗಿಲ್ಲ ಅನ್ನೋದೆ ದುರಂತ.ಇನ್ನೂ ಪೊಲೀಸರು ಕೈ ಕಟ್ಟಿ ಕುಳಿತರೆ ಎಂತಹ ಅನಾಹುತವಾಗುತ್ತೊ ಗೊತ್ತಲ್ಲಿ. ಆದ್ದರಿಂದ ಪೊಲೀಸರು ಕೂಡಲಿ ಆಕ್ಷನ್ ತೆಗೆದುಕೊಳ್ಳಬೇಕಿದೆ…

LEAVE A REPLY

Please enter your comment!
Please enter your name here