Home Cinema ಪವನ್ ಕಲ್ಯಾಣ್ ಕೋಟೆಗೆ ಮತ್ತೆ ಕಲ್ಲೆಸೆದಳು ನಟಿ ಶ್ರೀ ರೆಡ್ಡಿ..!? ಸೋಶಿಯಲ್ ಮಿಡಿಯಾದಲ್ಲಿ ಪವನ್ ವಿರುದ್ದ...

ಪವನ್ ಕಲ್ಯಾಣ್ ಕೋಟೆಗೆ ಮತ್ತೆ ಕಲ್ಲೆಸೆದಳು ನಟಿ ಶ್ರೀ ರೆಡ್ಡಿ..!? ಸೋಶಿಯಲ್ ಮಿಡಿಯಾದಲ್ಲಿ ಪವನ್ ವಿರುದ್ದ ಟ್ರೋಲ್ ಕಿಡಿ..! ಈ ವಿವಾದದಲ್ಲಿ ಪವನ್ ಕಲ್ಯಾಣ್, ಮತ್ತವರ ತಾಯಿಯನ್ನ ಎಳೆತಂದಿದ್ದೇಕೆ?

2692
0
SHARE

ಶ್ರೀ ರೆಡ್ಡಿ ಮತ್ತೊಮ್ಮೆ ಪವರ್ ಸ್ಟಾರ್ ಕೋಟೆಗೆ ಕಲ್ಲೆಸೆದಿದಾಳೆ. ಸೊಶಿಯಲ್ ಮಿಡಿಯಾನಲ್ಲಿ ಪವನ್ ಬಗ್ಗೆ ಕೆಟ್ಟ ಟ್ರೋಲ್ ಗಳನ್ನ ಹಾಕಿ ಮತ್ತೆ ವಿವಾದದ ಕಿಡಿ ಹೊತ್ತಿಸಿದಾಳೆ. ಅಷ್ಟಕ್ಕೂ ಶ್ರೀ ರೆಡ್ಡಿ ಪವನ್ ಕಲ್ಯಾಣ್ ಬಗ್ಗೆ ಹಾಕಿರೋ ಆ ಫೊಟೋಗಳು ಅಂತಿಂಥವಲ್ಲ. ಪವನ್ ಅಭಿಮಾನಿಗಳ ರಕ್ತ ಕುದಿಯುವಂಥಾ ಪೋಸ್ಟ್ ಗಳವು.ಪವರ್ ಸ್ಟಾರ್ ಪವನ್ ಮುಖಕ್ಕೆ ಸೀರೆಯುಟ್ಟಿರೋ ಹೆಣ್ಣಿನ ದೇಹವನ್ನ ಅಂಟಿಸಿರೋ ಫೊಟೋ ಇದು. ಈ ಫೊಟೋವನ್ನ ಹಾಕಿ ಶ್ರಾವಣ ಶುಕ್ರವಾರದ ಶುಭಾಷಯಗಳು ಅಂತ ವಿಶ್ ಕೂಡ ಮಾಡಲಾಗಿದೆ.

ಇನ್ನೂ ಪವನ್ ಜೊತೆಗಿನ ಅಫೇರುಗಳಿರೋ ಹೆಣ್ಣುಮಕ್ಕಳ ಫೋಟೋಗಳನ್ನೆಲ್ಲಾ ಪವನ್ ಮುಖಕ್ಕೆ ಅಂಟಿಸಿರೋ ಮತ್ತೊಂದು ಫೋಟೋದಲ್ಲಿ ತೆಲುಗು ಹುಡಿಗಿಯರೇ ಈ ವ್ಯಕ್ತಿ ನಮಗೆ ಬೇಕಾ ಅಂತ ಮೆಸೇಜ್ ಬರೆಯಲಾಗಿದೆ. ಅಚ್ಚರಿಯಂದ್ರೆ  ಪವನ್ ಜೊತೆಗೆ ಅಫೇರುಗಳಿರುವವರ ಪಟ್ಟಿಯಲ್ಲಿ ತನ್ನ ಮುಖವನ್ನೂ ಅಂಟಿಸಿಕೊಂಡಿದಾಳೆ ಶ್ರೀ ರೆಡ್ಡಿ. ಇದನ್ನ ನೋಡ್ತಿದ್ರೆ ಪವನ್ ರಾಜಕಾರಣವನ್ನೇ ಟಾರ್ಗೆಟ್ ಮಾಡಿಕೊಂಡು ಇದನ್ನೆಲ್ಲಾ ಮಾಡ್ತಿರುವಂತಿದೆ.ಅಸಲಿಗೆ ಪವನ್ ಮತ್ತು ಶ್ರೀ ರೆಡ್ಡಿ ನಡುವೆ ನಡೀತಿರೋ  ಈ ಕಿತ್ತಾಟ ಹೊಸದೇನಲ್ಲ.

ಈ ವರ್ಷಾರಂಭದಿಂದ ಶ್ರೀ ರೆಡ್ಡಿ ಚಿತ್ರರಂಗದ ಹಲವು ತಾರೆಯರ ವಿರುದ್ದ ಆರೋಪ ಮಾಡ್ತಿದಾಳೆ. ಕಾಸ್ಟಿಂಗ್ ಕೌಚ್ ವಿರುದ್ದ ಪ್ರತಿಭಟನೆ ಮಾಡ್ತಿದಾಳೆ.ಅದ್ರಲ್ಲೂ ಈ ಹಿಂದೆ ತೆಲುಗು ಫಿಲಂ ಚೇಂಬರ್ ಮತ್ತು ಆರ್ಟಿಸ್ಟ್ ಅಸೋಶಿಯೇಶನ್ ಎದುರು ಸಾರ್ವಜನಿಕವಾಗಿ ಅರೆಬೆತ್ತಲಾಗಿದ್ದ ಶ್ರೀ ರೆಡ್ಡಿ ತಾನು ಬೆತ್ತಲಾಗೋದ್ರ ಜೊತೆಗೆ ಟಾಲಿವುಡ್ ಅನ್ನೂ ಬೆತ್ತಲಾಗಿಸಿದ್ಳು.ಶ್ರೀ ರೆಡ್ಡಿ ಇಂಥದ್ದೊಂದು ಪ್ರತಿಭಟನೆ ಮಾಡಿದ್ದೇ ತಡ ಅದು ದೇಶದಾದ್ಯಂತ ಸುದ್ದಿಯಾಯ್ತು. ಅರೇ ತೆಲುಗು ಚಿತ್ರರಂಗದಲ್ಲಿ ಏನ್ ನಡೀತಾ ಇದೆ ಅಂತ ಎಲ್ಲರೂ ಒಮ್ಮೆ ತಿರುಗಿ ನೋಡಿದ್ರು.

ಇದೊಂದು ಘಟನೆ ತೆಲುಗು ಚಿತ್ರರಂಗಕ್ಕೆ ಕಪ್ಪು ಚುಕ್ಕೆಯಂತಾಗಿದ್ದು ಸುಳ್ಳಲ್ಲ.ಇಂಥದ್ದೊಂದು ಪ್ರತಿಭಟನೆ ಬಳಿಕ. ತೆಲುಗು ಚಿತ್ರ ಕಲಾವಿದರ ಸಂಘ ಶ್ರೀ ರೆಡ್ಡಿಗೆ ಸದಸ್ಯತ್ವವನ್ನ ಶಾಶ್ವತವಾಗಿ ನಿರಾಕರಿಸ್ತು. ಅದಕ್ಕೆ ಪ್ರತಿಯಾಗಿ ಶ್ರೀ ರೆಡ್ಡಿಯ ಪ್ರತಿಭಟನೆಗಳು ಮುಂದುವರೀತಾನೇಹೋದ್ವು. ಟಾ;ಲಿವುಡ್ ನ ಹಲವು ನಟ-ನಿರ್ಮಾಪಕರು ತನ್ನ ಜೊತೆ ಕೆಟ್ಟದಾಗಿ ವರ್ತಿಸಿರೊದಕ್ಕೆ ದಾಖಲೆ ಇವೆ ಅಂತ ಶ್ರೀ ರೆಡ್ಡಿ ಹೇಳತಾನೇ ಬಂದಿದ್ಳು. ಆದ್ರೆ ಈಕೆಯನ್ನ ಯಾರೂ ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ.

ಆದ್ರೆ ಶ್ರೀ- ಲೀಕ್ ಮಾಡ್ತಾ ಹೋದ ಫೋಟೋಸ್-ವಿಡಿಯೋಸ್ ನಂತರ ಟಾಲಿವುಡ್ ಅನ್ನ ಅಲ್ಲಾಡಿಸಿದ್ದು ಸುಳ್ಳಲ್ಲ.ಹೆಸರಾಂತ ನಟ ರಾಣಾ ದಗ್ಗಬಾಟಿಯ ಸಹೋದರ ಅಭಿರಾಮ್ ದಗ್ಗುಬಾಟಿಯ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗಿರೋ ಫೊಟೋಗಳನ್ನ ಶ್ರೀ ರೆಡ್ಡಿ ಲೀಕ್ ಮಾಡಿದಾಗ ತೆಲುಗು ಚಿತ್ರರಂಗ ಬೆಚ್ಚಿಬಿದ್ದಿದ್ದು ಸುಳ್ಳಲ್ಲ. ಅಭಿರಾಮ್ ತನ್ನನ್ನ ಬಳಸಿಕೊಂಡು ತನಗೆ ಮೋಸ ಮಾಡಿದ ಅಂತ ಶ್ರೀ ರೆಡ್ಡಿ ಹೇಳಿಕೊಂಡಿದ್ಳು. ಇನ್ನೂ ಹಲವು ಹೆಸರಾಂತ ನಟ-ನಿರ್ಮಾಪಕರು ತನ್ನ ಜೊತೆಗೆ ಅಸಭ್ಯವಾಗಿ ತೆಗಸಿಕೊಂಡಿರೋ ಫೊಟೊಗಳಿವೆ ಅಂತ ಬಾಂಬ್ ಕೂಡ ಹಾಕಿದ್ಳು.

ಶ್ರೀ ರೆಡ್ಡಿಯ ಈ ರಂಪಾಟದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ಎಂಟರ್ ಆಗಿದ್ದೊಂದು ಇನ್ ಟ್ರೆಸ್ಟಿಂಗ್ ಕಥೆ. ಅಸಲಿಗೆ ಶ್ರೀ ರೆಡ್ಡಿ ಈ ರೀತಿ ದಿನಕ್ಕೊಬ್ಬರ ಜೊತೆಗಿರೋ ಫೊಟೋ ಲೀಕ್ ಮಾಡ್ತಾ ತನಗೆ ಅನ್ಯಾಯವಾಗ್ತಿದೆ ಅಂತ ಬಟ್ಟೆ ಬಿಚ್ಚಿಕೊಂಡು ಓಡಾಡ್ತಿರೋವಾಗ, ತೆಲುಗು ಮಾಧ್ಯಮಗಳು ಈ ಬಗ್ಗೆ ಅಲ್ಲಿನ ನಟರ ಪ್ರತಿಕ್ರಿಯೆ ಕೇಳ್ತಾ ಇದ್ವು. ಹಾಗೇನೆ ನಟ-ಜನಸೇನಾ ಅಧ್ಯಕ್ಷ ಪವನ್ ಕಲ್ಯಾಣ್ ಗೂ ಶ್ರೀ ರೆಡ್ಡಿ ಬಗ್ಗೆ ಪ್ರಶ್ನೆ ಎದುರಾಯ್ತು. ಅದಕ್ಕೆ ಪವನ್ ಡಿಸೇಂಟ್ ಆಗೇ ಉತ್ತರ ಕೊಟ್ಟಿದ್ರು. ಹೀಗೆ ಬಟ್ಟೆ ಬಿಚ್ಚಿ ಪ್ರತಿಭಟನೆ  ಅಂತಾ ಮಾಧ್ಯಮಗಳಲ್ಲಿ ಸುದ್ದಿ ಮಾಡೋದ್ರ ಬದಲು ಶ್ರೀ ರೆಡ್ಡಿ ತನಗಾದ ಅನ್ಯಾಯದ ಬಗ್ಗೆ ಪೊಲೀಸರಿಗೆ ದೂರು ಕೊಡಲಿ ಅಂತ ಪವನ್ ಪ್ರತಿಕ್ರಿಯೆ ಕೊಟ್ಟಿದ್ರು.ಯೆಸ್ ಪವನ್,,

ಶ್ರೀ ರೆಡ್ಡಿ ಕುರಿತು ಇಂಥಾ ಹೇಳಿಕೆ ನೀಡಿದ್ದೇ ತಡ ಕೆಂಡಾಮಂಡಲಳಾದ ಶ್ರೀ ರೆಡ್ಡಿ ಮಾಧ್ಯಮಗಳ ಮುಂದೆ ಬಂದು ಪವನ್ ನ ಹಿಗ್ಗಾಮುಗ್ಗಾ ನಿಂದಿಸಿದ್ಳು. ಈ ಮೊದಲು ಪವನ್ ರನ್ನ ಅಣ್ಣಾ ಅಂತ ಭಾವಿಸಿದ್ದೆ. ಆದ್ರೆ ಅವರನ್ನ ಅಣ್ಣಾ ಅಂತ ನಂಬಿದ ತಪ್ಪಿಗೆ ಚಪ್ಪಲಿಯಿಂದ ಹೊಡೆದುಕೊಳ್ತಿನಿ ಅಂತ ಮಾಧ್ಯಮಗಳ ಎದುರು ಹೈಡ್ರಾಮಾ ಆಡಿದ್ಳು.ಇಷ್ಟೇ ಆಗಿದ್ರು ಮುಗಿದಿರೋದೇನೋ.. ಪವನ್ ಕಲ್ಯಾಣ್ ಗೆ ಅಸಭ್ಯಭಾಷೆಯಲ್ಲಿ ನಿಂದಿಸ್ತಾಳೆ. ಮಿಡಲ್ ಫಿಂಗರ್ ತೋರಿಸಿ ಕೆಟ್ಟದಾಗಿ ಸನ್ನೇ ಮಾಡ್ತಾಳೆ.ಪವನ್ ಕಲ್ಯಾಣ್ ಎಂಬ ಸೂಪರ್ ಸ್ಟಾರ್ ರನ್ನ ಯಕಃಶ್ಚಿತ್ ಎರಡನೇ ಧರ್ಜೆ ನಟಿಯೊಬ್ಳು ಹೀಗೆ ನಿಂದಿಸಿದ್ದು.

ಕೆಟ್ಟ ಕೊಳಕ ಭಾಷೆಯಲ್ಲಿ ಜರಿದಿದ್ದನ್ನ ನೋಡಿ ಟಾಲಿವುಡ್ ಸ್ಟನ್ ಆಗಿ ಹೋಯ್ತು. ತೆಲಗು ಮಾಧ್ಯಮಗಳು ಇದನ್ನ ದೊಡ್ಡ ಸುದ್ದಿ ಮಾಡಿದ್ವು.ಒಂದು ಹಂತದವರೆಗೂ ಸುಮ್ಮನಿದ್ದ ಮೆಗಾಫ್ಯಾಮಿಲಿ,,, ಆಂದ್ರ ಮಾಧ್ಯಮಗಳು ಪದೇ ಪದೇ ಶ್ರೀ ರೆಡ್ಡಿ ಪವನ್ ಗೆ ಬೈದ ಪದವನ್ನ ಹೈಲೈಟ್ ಮಾಡಿ ತೋರಿಸ್ತಾ ಇದ್ದಿದ್ದನ್ನ ನೋಡಿ ಕ್ರುದ್ದರಾಗಿ ಹೋದ್ರು. ಮೆಗಾ ಬ್ರದರ್ಸ್ ಇದನ್ನ ಸಿರಿಯಸ್ಸಾಗಿ ತೆಗೆದುಕೊಂಡು ಹೊರಬಂದ್ರು. ಅಭಿಮಾನಿಗಳು ದೊಡ್ಡ ಮಟ್ಟದ ಪ್ರತಿಭಟನೆಗೆ ಇಳಿದ್ರು. ಅಲ್ಲಿಗೆ ಕಾಸ್ಟಿಂಗ್ ಕೌಚ್ ನೆಪದಲ್ಲಿ ಶುರುವಾದ ವಿವಾದ ಬೇರೆಯದ್ದೇ ಸ್ವರೂಪ ಪಡೆದುಕೊಂಡು ಟಾಲಿವುಡ್ ಅಲ್ಲೋಲ ಕಲ್ಲೋಲವಾಗಿ ಹೋಗಿತ್ತು.

LEAVE A REPLY

Please enter your comment!
Please enter your name here