Home Cinema ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ “ಮಟಾಷ್” ಮೂಲಕ ಸಪ್ರೈಸ್..!! ಏನಿದು “ಮಟಾಷ್” ಅಂತೀರಾ… ಸ್ಟೋರಿ ಓದಿ…

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ “ಮಟಾಷ್” ಮೂಲಕ ಸಪ್ರೈಸ್..!! ಏನಿದು “ಮಟಾಷ್” ಅಂತೀರಾ… ಸ್ಟೋರಿ ಓದಿ…

550
0
SHARE

ಪುನೀತ್ ರಾಜ್‌ಕುಮಾರ್. ಕನ್ನಡ ಚಿತ್ರರಂಗದ ಪವರ್‌ಸ್ಟಾರ್. ಅಭಿಮಾನಿಗಳ ಪ್ರೀತಿಯ ಅಪ್ಪು. ದೊಡ್ಮನೆಯ ರಾಜರತ್ನ. ತಮ್ಮ ನಟನೆ ಹಾಗೂ ವ್ಯಕ್ತಿತ್ವದ ಮೂಲಕ ಸರಳತೆಯ ಸಾಮ್ರಾಟ ಎಂದೇ ಕರೆಸಿಕೊಳ್ಳೊ ಪುನೀತ್. ಇತ್ತೀಚೆಗೆ ಅಭಿಮಾನಿಗಳಿಗೆ ಮಟಾಷ್ ಮೂಲಕ ಸಪ್ರೈಸ್ ನೀಡಿದ್ದಾರೆ. ಹೊಸ ಬ್ಯಾಂಡ್ ಜೊತೆಗೆ ಭರ್ಜರಿ ಸೌಂಡ್ ಮಾಡ್ತಿದ್ದಾರೆ.ಪುನೀತ್ ರಾಜ್ ಕುಮಾರ್ ಸಾಕಷ್ಟು ಸಿನಿಮಾ ಹಾಡುಗಳನ್ನು ಹಾಡುವ ಮೂಲಕ ಅಭಿಮಾನಿಗಳಿಂದ ಸೈ ಎನ್ನಿಸಿಕೊಂಡವರು ನಟ.

ಇನ್ನು ಹೊಸಬರ ಸಿನಿಮಾಗೆ ಹಾಡುವುದೆಂದ್ರೆ ಪವರ್ ಸ್ಟಾರ್ ಸದಾ ಮುಂದಿರ್ತಾರೆ. ಇತ್ತೀಚೆಗೆಷ್ಟೇ ತುಳು ಚಿತ್ರದ ಉಮಿಲ್ ಎಂಬ ತುಳು ಸಿನಿಮಾಗೆ ಹಾಡುವ ಮೂಲಕ ಕೋಸ್ಟಲ್ ವುಡ್‌ನಲ್ಲಿ ಅಪ್ಪು ಅಭಿಮಾನಿಗಳ ಮನ ಗೆದ್ದಿದ್ರು. ಆದ್ರೆ ಈ ಭಾರಿ ಸ್ವಲ್ಪ ಡಿಫರೆಂಟ್ ಸ್ಟೈಲ್‌ನಲ್ಲಿ ಪುನೀತ್ ಹಾಡಿದ್ದಾರೆ. ಈ ಮೂಲಕ ಮಟಾಷ್‌ಗೆ ಅಪ್ಪು ಸಾಥ್ ನೀಡಿದ್ದಾರೆ.

ಹೌದು.. ಅರವಿಂದ್ ನಿರ್ದೇಶನದ ಚಿತ್ರ. ಮಟಾಶ್ ಸಿನಿಮಾದ ಜೋಷ್ ಫುಲ್ ಸಾಂಗ್‌ಗೆ ಪುನೀತ್ ಧ್ವನಿ ನೀಡಿದಾರೆ. ಉತ್ತರ ಕರ್ನಾಟಕ ಸ್ಲ್ಯಾಂಗ್‌ನಲ್ಲಿ ಪವರ್‌ಸ್ಟಾರ್ ಹಾಡಿದ್ದಾರೆ. ಉಡಾಳ್ರಪ್ಪೋ. ಊಡಾಳ್ರು. ಊರ್ ತುಂಬಾ ಉಡಾಳ್ರು ಎಂಬ ಜೋಷ್ ಫುಲ್ ಸಾಂಗ್ ವೊಂದನ್ನು ಪವರ್ ಫುಲ್ಲಾಗಿ ಹಾಡಿದ್ದಾರೆ.ಇನ್ನು ಚಜ್ಜೀ ರೊಟ್ಟಿ, ಚವಳಿಕಾಯಿ ದುಡ್ಡಿಗೆ ಏರ್ ಬದನೇಕಾಯಿ ಎಂದು ಉತ್ತರ ಕರ್ನಾಟಕ ಶೈಲಿಯಲ್ಲಿ ಪಕ್ವಕಾಗಿ ಹಾಡಿ ಎಲ್ಲರ ಗಮನಸೆಳೆಯುತ್ತಿದಾರೆ.

ಅಂದ್ಹಾಗೆ, ಹಾಡಿಗೆ ಸುನೀಲ್ ಕುಮಾರ್ ಸುಧಾಕರ್ ಲಿರೀಕ್ಸ್ ಬರೆದಿದ್ದು, ಎಸ್.ಡಿ ಅರವಿಂದ್ ಮ್ಯೂಸಿಕ್ ಕಂಪೋಸ್ ಮಾಡಿದಾರೆ.ಅಂಜನಿಪುತ್ರ ಚಿತ್ರದಲ್ಲಿ ಪುನೀತ್ ಭಾರಿ ಖುಷಿ ಮಾರಾರ್ಯೆ ನನ್ನ ಪ್ರೀತಿ ಕಂಡ್ರೆ ಉತ್ತರ ಕರ್ನಾಟಕದ ಹಾಡಿಗೆ ಹೆಜ್ಜೆ ಹಾಕಿದ್ರು. ರಶ್ಮಿಕಾ ಜೋಡಿಯಾಗಿ ಮಿಂಚಿದ್ರು. ವಿನೂತನ ಲಿರಿಕ್ಸ್ ಇದ್ದ ಕಾರಣಕ್ಕೆ ಹಾಡು ಎಲ್ಲರ ಮನೆ ಮನ ತಪುಪಿತ್ತು. ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು.

ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಹೊಸ ಡ್ರೆಂಡ್ ಕ್ರಿಯೇಟ್ ಮಾಡಿತ್ತು. ಈಗ ಮಟಾಷ್ ಚಿತ್ರದ ಮೂಲಕ ಓನ್ಸ್ ಅಗೇನ್ ಉತ್ತರ ಕರ್ನಾಟಕ ಸ್ಲ್ಯಾಂಗ್‌ನಲ್ಲಿ ಅಪ್ಪು ಹಾಡಿದ್ದು, ಮತ್ತೊಮ್ಮೆ ಮ್ಯಾಜಿಕ್ ಮಾಡ್ತಿದ್ದಾರೆ.ಜುಗಾರಿ ಕ್ರಾಸ್, ಲಾಸ್ಟ್ ಬಸ್ ಸಕ್ಸಸ್ ಬಳಿಕ ಈಗ ಅರವಿಂದ್ ಮಟಾಷ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. ವಿಭಿನ್ನ ಕಾನ್ಸೆಫ್ಟ್ ಮೂಲಕ ಪ್ರೇಕ್ಷಕರಿಗೆ ಮಸ್ತ್ ಮನೋರಂಜನೆ ನೀಡಲು ಸಜ್ಜಾಗಿದ್ದಾರೆ.

೨೦೧೬ರಲ್ಲಿ ನೋಟ್ ಬ್ಯಾನ್ ಆದಾಗ ಏನೆಲ್ಲಾ ತೊಂದರೆ ಆಯ್ತು ಅನ್ನೊ ಕಥಾಹಂದರ ಚಿತ್ರದಲ್ಲಿದೆ. ಇನ್ನು ಚಿತ್ರಕ್ಕೆ ಎಸ್. ಡಿ ಅರವಿಂದ್ ನಿರ್ದೇಶನದ ಜೊತೆಗೆ ಸಂಗೀತ ಜವಾಬ್ದಾರಿಯನ್ನು ಹೊತ್ತಿರೋದು ವಿಷೇಶವಾಗಿದೆ. ಇನ್ನು ಮಟಾಷ್ ಚಿತ್ರದಲ್ಲಿ ಸಮರ್ಥ್ ನರಸಿಂಹರಾಜು, ಗಣೇಶ್, ರಜಿನಿ ಭಾರದ್ವಾಜ್, ರಾಘವೇಂದ್ರ , ಐಶ್ವರ್ಯ ಸಿಂಧೋಗಿ, ವಿ.ಮನೋಹರ್, ರಾಘವೇಂದ್ರ ರಾಮಕೊಪ್ಪ ಸೇರಿದಂತೆ ಹಲವರು ನಟಿಸಿದ್ದಾರೆ.

ಅಂದ್ಹಾಗೆ ಈ ಚಿತ್ರಕ್ಕೆ ಸತೀಶ್ ಪತಕ್, ಗಿರೀಶ್ ಪಟೇಲ್, ಚಂದ್ರಶೇಖರ್ ಸನೂರ್ ಮತ್ತು ಎಸ್.ಡಿ ಅರವಿಂದ್ ಬಂಡವಾಳ ಹೂಡಿದ್ದಾರೆ. ಅದೇನೇ ಇರ‍್ಲಿ.. ಪುನೀತ್ ರಾಜ್ ಕುಮಾರ್ ಮತ್ತು ಅರವಿಂದ್ ಇವರಿಬ್ಬರ ಜುಗಲ್‌ಬಂಧಿ, ಮಟಾಷ್‌ನಲ್ಲಿ ಮಸ್ತ್ ಮನೋರಂಜನೆ ನೀಡ್ತಿದ್ದು. ಅಭಿಮಾನಿಗಳಲ್ಲಿ ಕುತೂಹಲ ಹೆಜ್ಜಾಗುವಂತೆ ಮಾಡ್ತಿದೆ. ಸದ್ಯ ಸಾಂಗ್ ಮೂಲಕ ಚಿತ್ರ ಕದಿಯುತ್ತಿರುವ ಮಟಾಸ್ ಮುಂದಿನ ದಿನಗಳಲ್ಲಿ ಯಾವೆಲ್ಲಾ ವಿಶೇಷತೆಳೊಂದಿಗೆ ಬರಲಿದೆ ಕಾದುನೋಡುವಂತೆ ಮಾಡ್ತಿದೆ.

LEAVE A REPLY

Please enter your comment!
Please enter your name here