Home Elections 2019 “ಪವರ್ ಮಿನಿಸ್ಟರ್” D.K.ಶಿವಕುಮಾರ್‌ಗೆ ಮತ್ತೆ ಐಟಿ ಭೀತಿ..?! ಸರ್ಕಾರ ರಚನೆ ಕೈ ತಪ್ಪಿದ್ದಕ್ಕೆ ಬಿಜೆಪಿ ದ್ವೇಶದ...

“ಪವರ್ ಮಿನಿಸ್ಟರ್” D.K.ಶಿವಕುಮಾರ್‌ಗೆ ಮತ್ತೆ ಐಟಿ ಭೀತಿ..?! ಸರ್ಕಾರ ರಚನೆ ಕೈ ತಪ್ಪಿದ್ದಕ್ಕೆ ಬಿಜೆಪಿ ದ್ವೇಶದ ರಾಜಕಾರಣ..??!!

2361
0
SHARE

ರಾಜ್ಯದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ರೂ ಸರ್ಕಾರ ರಚನೆಯಲ್ಲಿ ಎಡವಿದ ಬಿಜೆಪಿ ಇದೀಗ ಧ್ವೇಷ ರಾಜಕಾರಣಕ್ಕೆ ಮುಂದಾಗಿದೆಯಾ ಅನ್ನೋ ಅನುಮಾನ ಇದೆ… ಜೆಡಿಎಸ್ ಜೊತೆ ಮೈತ್ರಿ ಕುದುರಿಸಿ ದೋಸ್ತಿ ಸರ್ಕಾರ ರಚನೆಯಲ್ಲಿ ಮುಂದಾಳತ್ವ ವಹಿಸಿದ್ದ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮೇಲೆ ಮತ್ತೆ ಐಟಿ ಛೂ ಬಿಡೋ ಲಕ್ಷಣಗಳು ಕಾಣುತ್ತಿವೆ…

ಬಲ್ಲ ಮೂಲಗಳ ಪ್ರಕಾರ ಡಿಕೆಶಿ ಮತ್ತು ಅವರ ಆಪ್ತರ ನಡೆ ಮತ್ತು ವ್ಯವಹಾರಗಳ ಮೇಲೆ ಐಟಿ ಮತ್ತು ಇಡಿ ಹದ್ದಿನ ಕಣ್ಣಿಟ್ಟು ಸಮಯಕ್ಕೆ ಕಾಯುತ್ತಿದೆ ಎಂದು ತಿಳಿದುಬಂದಿದೆ… ಡಿಕೆಶಿಯನ್ನು ಸಂಕಷ್ಟಕ್ಕೆ ಸಿಲುಕಿಸುವುದರ ಜೊತೆಗೆ ದೋಸ್ತಿ ಸರ್ಕಾರದಲ್ಲಿ ಬಿರುಕು ಮೂಡಿಸಲು ಬಿಜೆಪಿ ಷಡ್ಯಂತ್ರ ಮಾಡುತ್ತಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ…

ಕೆಲ ದಿನಗಳ ಹಿಂದೆ ಡಿಕೆಶಿ ನಿವಾಸ ಮತ್ತು ಕಚೇರಿ ಮೇಲಿನ ದಾಳಿ ವಿಚಾರವಾಗಿಯೇ ಇನ್ನೂ ವಿಚಾರಣೆ ನಡೆಯುತ್ತಿದ್ದು, ಮುಂದುವರೆದ ಭಾಗವಾಗಿ ಡಿಕೆಶಿಗೆ ಮತ್ತಷ್ಟು ತೊಂದರೆ ನೀಡಲು ವ್ಯವಸ್ಥಿತವಾಗಿ ರಣತಂತ್ರ ರೂಪಿಸಲಾಗುತ್ತಿದೆ ಎಂದು ಹೇಳಲಾಗಿದೆ….

ಐಟಿ ದಾಳಿ ವೇಳೆ ಯಾವುದೇ ರೀತಿಯ ಅಕ್ರಮ ಕಂಡಬಂದಿಲ್ಲವಾದ್ರೂ ಅನಗತ್ಯವಾಗಿ ಮಾಜಿ ಪವರ್ ಮಿನಿಸ್ಟರ್ ರನ್ನು ಸಂಕಷ್ಟಕ್ಕೆ ದೂಡಲು ಬಿಜೆಪಿ ಐಟಿ ಇಲಾಖೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಆರೋಪ ಇದೆ. ಈ ನಡುವೆ ಮತ್ತಷ್ಟು ಕಾಂಗ್ರೆಸ್ ನಾಯಕರ ಮೇಲೂ ಐಟಿ ದಾಳಿ ನಡೆಯುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ….

ಇನ್ನೂ ವಿಶ್ವಾಸ ಮತ ಯಾಚನೆ ವೇಳೆ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೂಡ ಸದನದಲ್ಲಿ ಇಡಿ ವಿಚಾರ ಮಾತನಾಡಿ ತಮಗೂ ದೂರವಾಣಿ ಕರೆ ಬಂದಿತ್ತು… ಮಲೇಷ್ಯಾದಲ್ಲಿ ಅಕ್ರಮ ಆಸ್ತಿ ಹೊಂದಿದ್ದಿರಿ ಅಂತಾ ಅಧಿಕಾರಿಗಳು ತಮ್ಮ ಬಳಿ ಮಾತನಾಡಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನ ಬಹಿರಂಗಪಡಿಸಿದ್ದರು… ಚುನಾವಣೆ ವೇಳೆಯೂ ಕಾಂಗ್ರೆಸ್ ನಾಯಕರ ಮೇಲೆ ಐಟಿ ದಾಳಿಯಾಗಿದ್ದನ್ನ ಇಲ್ಲಿ ಸ್ಮರಿಸಬಹುದು….

LEAVE A REPLY

Please enter your comment!
Please enter your name here