Home Cinema ಪವರ್ ಸ್ಟಾರ್ ಪುನೀತ್ ಹೆಸರಿನಲ್ಲಿ ಸಂಬಂಧಿಕರಿಗೇ ದೋಖಾ..!? ತಂಗಿ ಮದುವೆಗಾಗಿ ನಟನ PA ಎಂದು ವಂಚನೆ..!?

ಪವರ್ ಸ್ಟಾರ್ ಪುನೀತ್ ಹೆಸರಿನಲ್ಲಿ ಸಂಬಂಧಿಕರಿಗೇ ದೋಖಾ..!? ತಂಗಿ ಮದುವೆಗಾಗಿ ನಟನ PA ಎಂದು ವಂಚನೆ..!?

2007
0
SHARE

ಮೈಸೂರಿನಲ್ಲೊಬ್ಬ ಪವರ್ ಸ್ಟಾರ್ ಹೆಸರಿನ ಮೋಸಗಾರ.ಪವರ್‌ಸ್ಟಾರ್ ಹೆಸರೇಳಿ ದೋಖಾ ಮಾಡಿದ ಖದೀಮ.ತನ್ನ ತಂಗಿ ಮದುವೆಗಾಗಿ ಆತ ಮಾಡಿದ್ದು ಮಾಸ್ಟರ್ ಅಲ್ಲ ,ಪವರ್ ಪ್ಲಾನ್.ಪವರ್‌ಸ್ಟಾರ್ ಪುನಿತ್ ರಾಜ್‌ಕುಮಾರ್ ಹೆಸರನ್ನೆ ಬಳಸಿಕೊಂಡು ಸಂಬಂಧಿಕರು ಹಾಗೂ ಗೆಳೆಯರಿಗೆ ಮೋಸ.ನಾನು ಪುನಿತ್ ರಾಜ್‌ಕುಮಾರ್ ಪಿಎ ಎಂದು ಲಕ್ಷಾಂತರ ರೂ ಉಂಡೇನಾಮ.

ಪುನಿತ್ ಬಳಿ ಕೆಲಸ ಕೊಡಿಸುವ ಆಮಿಷ ತೋರಿಸಿ ಹಣ ಚಿನ್ನಾಭರಣ ಪಡೆದ ವ್ಯಕ್ತಿ.
ಬೆಂಗಳೂರಿನ ಶ್ರೀನಿವಾಸ‌ನಗರದ ನಿವಾಸಿ ರವಿ(28) ಎಂಬಾತನಿಂದ ಕೃತ್ಯ.ರವಿ ಮೂಲತಹ ಮೈಸೂರಿನ ಟಿ.ನರಸೀಪುರ ಬಳಿಯ ಅಂಕನಹಳ್ಳಿ ನಿವಾಸಿ.ತನ್ನ ತಂಗಿ ಮದುವೆ ಖರ್ಚಿಗಾಗಿ ಒಬ್ಬೋಬ್ಬರ ಬಳಿ ಒಂದೊಂದು ಸುಳ್ಳು ಹೇಳಿ ದೋಖಾ.

ಮದುವೆ ಕೆಲಸಕ್ಕೆ ಬಂದಿದ್ದ ಪೋಟೋಗ್ರಾಫರ್,ಪ್ಲವರ್ ಡೆಕೋರೇಟರ್, ಕಾರು ಚಾಲಕನಿಗು ಮೋಸ.ತನ್ನ ಸಂಬಂಧಿಗಳನ್ನೆ ಟಾರ್ಗೆಟ್ ಮಾಡಿ ವಂಚಿಸಿರುವ ರವಿ.ತಂಗಿ ಮದುವೆ ಮುಗಿದ ಮೇಲೆ ರವಿ ದೋಖ ಬೆಳಕಿಗೆ.ಬೆಂಗಳೂರಿನಲ್ಲು ಸಿಗದೆ ಮೈಸೂರಿಗು ಬರದೆ ನಾಪತ್ತೆಯಾಗಿರುವ ರವಿ.ಮೈಸೂರಿನ ಹೆಚ್‌.ಡಿ.ಕೋಟೆ ರಸ್ತೆಯ ಛತ್ರ‌ವೋಂದರಲ್ಲಿ ಅದ್ದೂರಿಯಾಗಿ ಮದುವೆ ಮಾಡಿದ್ದ ರವಿ.

ತನ್ನ ಗ್ರಾಮದ ಸುತ್ತಮುತ್ತ ಇದ್ದ ಸಂಬಂಧಿಗಳು ಹಾಗೂ ಸ್ನೇಹಿತರನ್ನ ವಂಚಿಸಿರುವ ರವಿ. ರವಿ ವಂಚನೆಯಿಂದ ಕಂಗಾಲದ ಸಂಬಂಧಿ ಹಾಗೂ ಹಣ ಕೊಟ್ಟವರು.ಟ್ರಾವೆಲ್ ಸೇರೆದಂತೆ ಎಲ್ಲವನ್ನೂ ನಾಜೂಕಾಗಿ ಬಳಸಿಕೊಂಡ ರವಿ.ಮೈಸೂರಿನ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು.ಹಣ ಕಳೆದುಕೊಂಡು ನೊಂದವರಿಂದ ದೂರು..

LEAVE A REPLY

Please enter your comment!
Please enter your name here