Home District ಪಾಕಿಸ್ತಾನಕ್ಕೆ ಕೋಲಾರದಿಂದ ಟೊಮ್ಯಾಟೋ ಬಂದ್..! ಟೊಮ್ಯಾಟೋ ಬಂದ್ ಹಿನ್ನೆಲೆ ಪಾಕ್ ಕಂಗಾಲು..! ಪುಲ್ವಾಮಾ ಯೋಧರ ಬಲಿಗೆ...

ಪಾಕಿಸ್ತಾನಕ್ಕೆ ಕೋಲಾರದಿಂದ ಟೊಮ್ಯಾಟೋ ಬಂದ್..! ಟೊಮ್ಯಾಟೋ ಬಂದ್ ಹಿನ್ನೆಲೆ ಪಾಕ್ ಕಂಗಾಲು..! ಪುಲ್ವಾಮಾ ಯೋಧರ ಬಲಿಗೆ ವರ್ತಕರ ಪ್ರತಿಕಾರ..

2437
0
SHARE

ಪಾಕಿಸ್ತಾನದ ವಿರುದ್ಧ ರಾಜ್ಯದ ವರ್ತಕರು, ರೈತರು ಗರಂ ಆಗಿದ್ದಾರೆ. ಕಾಶ್ಮೀರದ ಪುಲ್ವಾಮಾದಲ್ಲಿನ ದಾಳಿ ಖಂಡಿಸಿ ಅಗತ್ಯ ವಸ್ತುಗಳ ಸರಬರಾಜು ನಿಲ್ಲಿಸಿದ್ದಾರೆ.

ರಾಜ್ಯದಿಂದ ರಫ್ತಾಗುತ್ತಿದ್ದ ಟೊಮ್ಯಾಟೋ ವನ್ನ ಬಂದ್ ಮಾಡಲಾಗಿದೆ. ಆ ಮೂಲಕ ವರ್ತಕರು ಆಕ್ರೋಶ ಹೊರ ಹಾಕಿದ್ದಾರೆ. ಟೊಮ್ಯಾಟೋ ಬಂದ್ ಹಿನ್ನೆಲೆಯಲ್ಲಿ ಪಾಕ್ ಕಂಗಾಲ್ ಆಗಿದೆ.ದೂರದ ಪಾಕಿಸ್ತಾನದ ಜೊತೆ ಕೋಲಾರ ವ್ಯವಹಾರಿಕವಾಗಿ ಸಂಬಂಧ ಇರಿಸಿಕೊಂಡಿದೆ. ಹೆಚ್ಚು ತರಕಾರಿ ಬೆಳೆಯುವ ಕೋಲಾರ ಪಾಕಿಸ್ತಾನಕ್ಕೆ ಟೊಮ್ಯಾಟೋ ಸರಬರಾಜು ಮಾಡುತ್ತೆ. ಆದ್ರೆ ಪುಲ್ವಾಮಾ ದಲ್ಲಿ ನಮ್ಮ ವೀರ ಯೋಧರನ್ನ ಬಲಿ ಪಡೆದ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಿರುದ್ಧ ವರ್ತಕರು ಆಕ್ರೋಶ ವ್ಯಕ್ತಪಡಿಸಿದಾರೆ.

ಪಾಕಿಸ್ತಾನಕ್ಕೆ ಸರಬರಾಜು ಆಗುತ್ತಿದ್ದ ಟ್ಯೂಮ್ಯಾಟೋ ವನ್ನ ಬಂದ್ ಮಾಡಿದ್ದಾರೆ, ಆ ಮೂಲಕ ಪಾಪಿಸ್ತಾನದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.ಪಾಕಿಸ್ತಾನಕ್ಕೆ ಕೋಲಾರದಿಂದ ನಿತ್ಯ 200 ಟನ್ ನಷ್ಟು ಉತ್ಕೃಷ್ಟ ದರ್ಜೆಯ ಟೊಮ್ಯಾಟೋ ರಫ್ತಾಗುತ್ತಿತ್ತು. ಪುಲ್ವಾಮಾದಲ್ಲಿ ನಮ್ಮ ಸೇನಾನಿಗಳನ್ನ ಬಲಿ ಪಡೆದ ಹಿನ್ನೆಲೆಯಲ್ಲಿ ಟೊಮ್ಯಾಟೋ ಬ್ಯಾನ್ ಮಾಡೋ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಪಾಕ್ ಗೆ ಟೊಮ್ಯಾಟೋ ರಫ್ತು ಬಂದ್ ಆದ ಹಿನ್ನೆಲೆಯಲ್ಲಿ, ಟೊಮ್ಯಾಟೋ ಅಭಾವ ಕಂಡು ಬಂದಿದೆ.

ಅಲ್ಲದೇ ಪಾಕಿಸ್ತಾನದಲ್ಲಿ ಒಂದು ಕೆಜಿ ಟೊಮ್ಯಾಟೋಗೆ 300 ರುಪಾಯಿ ಆಗಿದೆ.ಇನ್ನೂ ಹವಾಮಾನ ವೈಪರೀತ್ಯದಿಂದಾಗಿ ನಮ್ಮಲ್ಲೆ ತರಕಾರಿ ಬೇಡಿಕೆ ಹೆಚ್ಚಾಗಿದೆ. ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಹಲವು ದೇಶಗಳಿಗೆ ತರಕಾರಿ ಸರಬರಾಜು ಮಾಡುತ್ತೆ. ಆದ್ರೆ ಪುಲ್ವಾಮಾ ಘಟನೆಯಿಂದಾಗಿ ನಮ್ಮ ವರ್ತಕರು ಪಾಕ್ ಗೆ ಟೊಮ್ಯಾಟೋ ರಫ್ತು ನಿಲ್ಲಿಸಿದ್ದು ಇದು ಪಾಕ್ ಗೆ ಶಾಕ್ ನೀಡಿದಂತಾಗಿದೆ. ರೈತರು, ವರ್ತಕರು, ಮಂಡಿ ಮಾಲೀಕರು ಒಂದಾಗಿ ತಮಗೆ ನಷ್ಟವಾದ್ರೂ ಸಹ, ಪಾಕಿಸ್ತಾನಕ್ಕೆ ಟೊಮ್ಯಾಟೋ ಕೊಡುವುದು ಬೇಡ ಎಂಬ ನಿರ್ಧಾರ ತೆಗೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಪುಲ್ವಾಮಾ ಘಟನೆಯನ್ನ ರೈತರು ಹಾಗೂ ವರ್ತಕರು ಖಂಡಿಸಿದ್ದು, ಶತ್ರು ದೇಶಕ್ಕೆ ಅಗತ್ಯ ವಸ್ತುಗಳ ರಫ್ತು ಬ್ಯಾನ್ ಮಾಡಿದ್ದಾರೆ. ಈ ಮೂಲಕ ಪಾಪಿಸ್ತಾನಕ್ಕೆ ನಮ್ಮ ರೈತರು, ವರ್ತಕರು ತಕ್ಕ ಪಾಠ ಕಲಿಸಿದ್ದಾರೆ.

LEAVE A REPLY

Please enter your comment!
Please enter your name here