ಈ ಪ್ರೀತಿ ಪ್ರೇಮನೇ ಹಾಗೆ,ಎಂಥವರನ್ನಾದ್ರು ಸರಿ ತನ್ನ ಬಲೆಯಲ್ಲಿ ಬೀಳಿಸಿಬಿಡುತ್ತೆ..ಪ್ರೀತಿಯಲ್ಲಿ ಬಿದ್ದ ಹುಡಗ ತನ್ನವಳಿಗಾಗಿ ಏನ್ ಬೇಕಾದ್ರು ಮಾಡೋಕೆ ತಯಾರಾಗಿರ್ತಾನೆ. ಇಲ್ಲೊಬ್ಬ ಪಾಗಲ್ ಪ್ರೀಮಿ ಕಮ್ ಕಳ್ಳ ತನ್ನ ಪ್ರೇಯಸಿಗಾಗಿ ಏನ್ ಮಾಡಿದ್ದ ಅನ್ನೋದನ್ನ ಕೇಳಿದ್ರೆ ಶಾಕ್ ಆಗ್ತೀರಾ.
ಪ್ರೀತಿಸಿದ ಹುಡುಗಿಗಾಗಿ ಪ್ರಿಯಕರ ಏನ್ ಕೊಡ್ಬೋದು.. ಏನಿಲ್ಲಾ ಅಂದ್ರು ಒಂದು ರೋಸ್ ಅಥವಾ ಬೆಲೆ ಬಾಳೋ ವಸ್ತು..ಆದ್ರೆ ಇಲ್ಲೊಬ್ಬ ಪ್ರಿಯಕರ ಇದ್ದಾನೆ ಆತ ಎಂಥ ಖದೀಮ ಅಂದ್ರೆ ಇಷ್ಟಪಟ್ಟವಳಿಗಾಗಿ ಬರೊಬ್ಬರಿ 11 ಬಜಾಜ್ ಪಲ್ಸರ್ ಬೇಕ್ ಕದ್ದು, ಅದರಲ್ಲಿ ಆಕೆಯನ್ನ ಸಿಟಿ ಫುಲ್ ರೌಂಡ್ ಹಾಕ್ಸಿ ಖುಷಿ ಪಡ್ತಾನೆ. ಈಗೆ ಕದ್ದ ಬೈಕನ್ನ ಮಾರಿ ಪ್ರೇಯಸಿಯೊಂದಿಗೆ ಮಸ್ತ್ ಮಜಾ ಮಾಡ್ತಾನೆ. ಆತ ಬೇರೆ ಯಾರು ಅಲ್ಲ ಇವನೇ ನೋಡಿ ಕಾರ್ತಿಕ್ ಅಲಿಯಾಸ್ ಕಾಕ.
ಈ ಕಾರ್ತಿಕ್ ತನ್ನ ಪ್ರೇಯಸಿ ಅದ್ಯಾವಾಗ ನನಗೆ ಬಜಾಜ್ ಪಲ್ಸರ್ ಬೈಕ್ ಇಷ್ಟ ಕಣೋ ಅಂದ್ಲೋ ಈತನಿಗೆ ಫುಲ್ ಡ್ಯೂಟಿ ಶುರುವಾಗಿಬಿಟ್ಟಿತ್ತು. ಬಂಡೇಪಾಳ್ಯ, ಬೊಮ್ಮನಹಳ್ಳಿ, ಹೆಚ್ ಎಸ್ ಆರ್ ಲೇಔಟ್, ಕೋರಮಂಗಲ ಸೇರಿದಂತೆ ಹಲವೆಡೆ ಮನೆ ಮುಂದೆ ನಿಲ್ಲಿಸಿದ್ದ ಪಲ್ಸರ್ ಬೈಕ್ ಗಳನ್ನ ಕದ್ದು ಅದೇ ಬೇಕ್ನಲ್ಲಿ ತನ್ನ ಪ್ರೇಯಸಿಯನ್ನ ಕೂರಿಸಿಕೊಂಡು ಡುಯೆಟ್ ಹಾಡ್ತಾ ಇದ್ದ. ಈಗೆ ಬೈಕ್ ಹತ್ತಿ ನಂದಿ ಬೆಟ್ಟ ಹೊಗನೆಕಲ್ ಫಾಲ್ಸ್ ಸೇರಿದಂತೆ ನಾನಾ ಭಾಗಗಳಿಗೆ ತೆರಳಿ ಮೋಜು ಮಸ್ತಿ ಮಾಡ್ತಿದ್ದ.
ಇನ್ನೂ ಈ ಆಸಾಮಿಗೆ ಇದೇನು ಮೊದಲ ಬಾರಿಯಲ್ಲ ಈ ಹಿಂದೆಯೇ ಹಲವು ಬಾರಿ ಐಷಾರಾಮಿ ಬೈಕ್ ಗಳನ್ನ ಕದ್ದು, ಕೋರಮಂಗಲ ಪೋಲೀಸ್ರಿಗೆ ಸಿಕ್ಕಿ ಜೈಲು ಪಾಲಾಗಿದ್ದ. ಈತನ ಕಳ್ಳತನ ಕೃತ್ಯದ ವಿಷಯ ತಿಳಿದ ಈತನ ಹೆಂಡತಿ ಆತನಿಂದ ದೂರಾಗಿದ್ಲು. ಆದ್ರೆ ಜೈಲಿನಿಂದ ಹೊರಬಂದ್ರು ಬುದ್ದಿ ಕಲಿಯದ ಕಾಕ ತನ್ನ ಕೃತ್ಯಗಳನ್ನ ಮುಂದುವರೆಸಿದ್ದಾನೆ. ಸದ್ಯ ಈ ಖತರ್ನಾಕ್ ಕಾಕನನ್ನ ಹೆಡೆಮುರಿಕಟ್ಟುವಲ್ಲಿ ಕೋರಮಂಗಲ ಪೊಲೀಸರು ಯಶಸ್ವಿಯಾಗಿದ್ದು, 11 ಪಲ್ಸರ್ ಬೈಕ್ ವಶ ಪಡಿಸಿಕೊಂಡಿದ್ದಾರೆ.
ಅದೇನೆ ಇರ್ಲಿ ಪ್ರೇಯಸಿಗಾಗಿ ಬೆಲೆಬಾಳೋ ವಸ್ತುಗಳನ್ನ ಕೋಡೋ ಪ್ರೇಮಿಗಳ ಪೈಕಿ, ಪ್ರೇಯಸಿಗಾಗಿ ಬೈಕ್ ಕದ್ದ ಈತ ಮಾತ ಡಿಫರೆಂಟ್ ಪ್ರೇಮಿನೆ ಬಿಡಿ.