Home Crime ಪಾಳು ಮನೆಯಲ್ಲಿ ತಾಯಿಯನ್ನು ಬಂದಿಸಿದ ಮಗ..! ತಾಯಿಯನ್ನು ನರಕ ಯಾತನೆಯಿಂದ ಮುಕ್ತಿಗೊಳಿಸಿದ ಪೊಲೀಸರು..!

ಪಾಳು ಮನೆಯಲ್ಲಿ ತಾಯಿಯನ್ನು ಬಂದಿಸಿದ ಮಗ..! ತಾಯಿಯನ್ನು ನರಕ ಯಾತನೆಯಿಂದ ಮುಕ್ತಿಗೊಳಿಸಿದ ಪೊಲೀಸರು..!

484
0
SHARE

ಈ ಜಗತ್ತಿನಲ್ಲಿ ತಾಯಿಗಿಂತ ಬೇರೆ ಯಾವ ದೇವರಿಲ್ಲ, ತಾಯಿಯನ್ನ ದೇವರಿಂಗತಲೂ ಹೆಚ್ಚಾಗಿ ಪೂಜಿಸುತ್ತೇವೆ. ಆದರೇ ಇಲ್ಲೊಬ್ಬ ನಿಷ್ಕರುಣಿ ಮಗ ಹೆತ್ತ ತಾಯಿಯನ್ನು ಕಳೆದ ಮೂರು ತಿಂಗಳಿನಿಂದ ಹಂದಿಗೂಡಿನಂತ ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾನೇ.

ಆ ಸಣ್ಣ ಮನೆಯಲ್ಲಿ ನರಕಯಾತನೇ ಅನುಭವಿಸುತ್ತಿರುವ ತಾಯಿ ಅನ್ನ ಅಹಾರವಿಲ್ಲದೆ ಪರದಾಡುತ್ತಿದ್ದು ಸಹಾಯಕ್ಕಾಗಿ ಅಂಗಲಾಚುತ್ತಿದ್ದಳು.ಇನ್ನೂ ತನ್ನ ಕಷ್ಟ ಹೇಳಿಕೊಂಡು ಕಣ್ಣೀರು ಹಾಕುತ್ತಾ ದಾರಿಯಲ್ಲಿ ಹೋಗುವ,ಬರುವವರನ್ನು ಸಹಾಯಕ್ಕಾಗಿ ಅಂಗಲಾಚುತ್ತಿರುವ ಈಕೆಯ ಹೆಸರು ಮುನಿಯಮ್ಮ, ಮಾರತಹಳ್ಳಿ ಸಮೀಪದ ಕಾಡಬಿಸನಹಳ್ಳಿ ಗ್ರಾಮದಲ್ಲಿ ಇಂತಹ ಮನಕಲುಕುವ ಘಟನೆ ನಡೆಯುತ್ತಿದ್ದು, ಯಾವೊಬ್ಬರು ಕೂಡಾ ಸಹಾಯಕ್ಕೆ ಬರುತ್ತಿಲ್ಲ.

ಈಕೆಯ ಮಗ ವೆಂಕಟಸ್ವಾಮಿ ತನ್ನ ಪತ್ನಿ ಸುಜಾತ ಸೇರಿಕೊಂಡು ಮನಿಯಮ್ಮಳನ್ನು ಮೂರು ತಿಂಗಳಿಂದ ಹಂದಿಗೂಡಿನಂತ ಮನೆಯಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾರೆ. ಆ ಮನೆಯಲ್ಲಿ ಸರಿಯಾಗಿ ಗಾಳಿ ಬೆಳಕು ಕೂಡಾ ಆಡೋದಿಲ್ಲ, ಆಕೆ ಅಲ್ಲಿಂದ ಹೊರಬರಲು ಕೈಗಳಿಂದ ಮಣ್ಣನ್ನು ತೋಡಿ ಆಚೇ ಬರುವ ಪ್ರಯತ್ನ ಮಾಡಿದ್ದಾಳೆ. ಇನ್ನೂ ಸೊಸೆ ಸುಜಾತ ಸರಿಯಾಗಿ ನೀರು ಆಹಾರ ನೀಡುತ್ತಿಲ್ಲ ಎಂದು ತಮ್ಮ ಅಳಲಲ್ಲು ತೋಡಿಕೊಂಡಿದ್ದಾರೆ.

ಇನ್ನೂ ಕಾಡಬಿಸನಹಳ್ಳಿ ಸುತ್ತಮುತ್ತಲೂ ಭೂಮಿಗೆ ಬಂಗಾರದ ಬೆಲೆ ಇದೆ. ಮುನಿಯಮ್ಮ ಹೆಸರಿನಲ್ಲಿದ್ದ ಮೂರು ಎಕರೆ ಜಮೀನನ್ನು ವೆಂಕಟಸ್ವಾಮಿ ತನ್ನ ಹೆಸರಿಗೆ ಮಾಡಿಸಿಕೊಂಡು ಪತ್ನಿ ಮಕ್ಕಳೊಂದಿಗೆ ಐಷಾರಾಮಿ ಜೀವನ ನಡೆಸುತ್ತಿದ್ದಾನೆ. ಆತ ಮೂರು ಅಂತಸ್ತಿನ ಮನೆಯಲ್ಲಿದ್ದು ತನ್ನ ತಾಯಿಯನ್ನು ಹಂದಿಗೂಡಿನಂತ ಮನೆಯಲ್ಲಿ ಕೂಡಿ ಹಾಕಿದ್ದಾನೆ. ದಾರಿಯಲ್ಲಿ ಹೋಗುವವರು ಇವರಿಗೆ ಹಣ್ಣು, ನೀರು ಕೊಡುತ್ತಾರೆ. ಈಕೆಯ ಸೊಸೆ ಯಾವಾಗಲಾದರೂ ಊಟ ನೀಡಿದರೇ ಅದು ಕಿಟಕಿಯಿಂದ ಮನೆಯ ಬಾಗಿಲನ್ನು ತೆರೆಯುವುದಿಲ್ಲ.

ಈ ಸುದ್ದಿ ಮಾದ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮಾರತ್ತಹಳ್ಳಿ ಪೊಲೀಸರು ಈ ತಾಯಿಯನ್ನು ಪಾಳು ಮನೆಯ ವಾಸದಿಂದ ಮುಕ್ತಿಗೊಳಿಸಿ ಮಗನಿಗೆ ವಾರ್ನಿಂಗ್ ನೀಡಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ.ಈ ಸ್ಟೋರಿ ನೋಡಿದರೆ ನಿಜಕ್ಕೂ ಇಂತಹ ಮಕ್ಕಳೂ ಇರುತ್ತಾರಾ, ಐಟಿಸಿಟಿಯ ಮದ್ಯದಲ್ಲೇ ಇಂತಹದ್ದೊಂದು ಅಮಾನವೀಯ ಘಟನೆ ನಡೆದಿರುವುದು ನಿಜಕ್ಕೂ ಮಾನವ ಸಮಾಜವೇ ತಗ್ಗಿಸುವಂತಾಗಿದೆ.

LEAVE A REPLY

Please enter your comment!
Please enter your name here