ಆ ಕೇಂದ್ರ ಸಚಿವ್ರು ‘ಪುಟಗೋಸಿ’ ಹೇಳಿಕೆ ನೀಡಿದ್ರಂತೆ. ಅದಕ್ಕೆ ಸಿಟ್ಟಿಗೆದ್ದ ಕಾರ್ಯಕರ್ತರು ಅವರಿಗೆ ‘ಪುಟಗೋಸಿ’ ಗಿಫ್ಟ್ ಕಳಿಸಿದ್ದಾರೆ. ಇನ್ಮುಂದೆ ಹೀಗೆಲ್ಲ ಬಾಲೀಷವಾಗಿ ಮಾತಾಡ್ಬೇಡಿ ಅಂತ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಷ್ಟಕ್ಕೂ ‘ಪುಟಗೋಸಿ’ ಹೇಳಿಕೆ ಕೊಟ್ಟಿದ್ಯಾರು..? ‘ಪುಟಗೋಸಿ’ ಗಿಫ್ಟ್ ಕಳಿಸಿದ್ದ್ಯಾರು..?
ಇದು ಬಿಜೆಪಿ ಫೈರ್ ಬ್ರ್ಯಾಂಡ್ ಅಂತಾನೇ ಕರೆಸಿಕೊಳ್ಳೋ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ನೀಡಿದ ಪುಟಗೋಸಿ ಹೇಳಿಕೆ. ಮೊನ್ನೆ ಉತ್ತರ ಕನ್ನಡದ ಕುಮಟಾದಲ್ಲಿ ಮಾತನಾಡಿದ ಅನಂತ್ ಕುಮಾರ್, ಅತಿದೊಡ್ಡ ಪಕ್ಷ ಅಂತ ಕರೆಸಿಕೊಂಡ ಕಾಂಗ್ರೆಸ್, ಪುಟಗೋಸಿ ಜೆಡಿಎಸ್ ಮುಂದೆ ಸಲಾಂ ಹೊಡೆಯೋ ಸ್ಥಿತಿ ತಂದುಕೊಂಡಿತು ಅಂತ ಲೇವಡಿ ಮಾಡಿದ್ದರು…
ಕೇಂದ್ರ ಸಚಿವರ ಈ ಹೇಳಿಕೆಗೆ ಹೆಚ್ಡಿಕೆ ಸೇರಿದಂತೆ ಜೆಡಿಎಸ್ ನಾಯಕರು, ಕಾರ್ಯಕರ್ತರು ತಿರುಗಿ ಬಿದ್ದಿದ್ದರು.ಅಂದು ಪುಟಗೋಸಿ ಹೇಳಿಕೆ ನೀಡಿದ್ದ ಹೆಗಡೆ ವಿರುದ್ಧ ಇಂದು ಮಂಡ್ಯದ ಜೆಡಿಎಸ್ ಕಾರ್ಯಕರ್ತರು ಪುಟಗೋಸಿ ಚಳುವಳಿ ನಡೆಸಿದ್ರು…
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಅನಂತಕುಮಾರ್ ಹೆಗಡೆಗೆ ಪುಟಗೋಸಿ ಗಿಫ್ಟ್ ನೀಡೋದಾಗಿ ಘೋಷಿಸಿದ್ರು. ಎಲ್ಲರೂ ಕೈಯಲ್ಲಿ ಪುಟಗೋಸಿ ಹಿಡಿದು, ಸಚಿವರಿಗೆ ಕೇಳಿಸೋದಾಗಿ ಘೋಷಿಸಿದ್ರು. ಇನ್ಮುಂದೆ ಬಾಲೀಷ ಹೇಳಿಕೆ ನೀಡದಂತೆ ಎಚ್ಚರಿಸಿದ್ರು…
ಇವೆಲ್ಲ ಏನೇ ಇದ್ರು ಜನನಾಯಕರು ಎನಿಸಿಕೊಂಡವ್ರು ಮಾತನಾಡುವಾಗ ಹುಷಾರಾಗಿರಬೇಕು. ಇಲ್ಲಾಂದ್ರೆ ಮಾನ ಉಳಿಸೋ ಪುಟಗೋಸಿಯೇ ಅವರ ಮಾನಕಳೆಯುತ್ತದೆ ಅನ್ನೋದಕ್ಕೆ ಈ ಪುಟಗೋಸಿ ಚಳುವಳಿಯೇ ಉದಾಹರಣೆ…