Home Crime ಪುಟಾಣಿ ಕಂದನನ್ನ ಕೊಂದು ತಾಯಿಯೂ ಆತ್ಮಹತ್ಯೆ..! ಕೌಟುಂಬಿಕ ಕಲಹಕ್ಕೆ ಪ್ರಾಣ ಬಿಟ್ರಾ ತಾಯಿ ಮಗ..?

ಪುಟಾಣಿ ಕಂದನನ್ನ ಕೊಂದು ತಾಯಿಯೂ ಆತ್ಮಹತ್ಯೆ..! ಕೌಟುಂಬಿಕ ಕಲಹಕ್ಕೆ ಪ್ರಾಣ ಬಿಟ್ರಾ ತಾಯಿ ಮಗ..?

439
0
SHARE

ಗಂಡ ಹೆಂಡತಿ ಒಂದು ಪುಟಾಣಿ ಮಗು ಇದ್ದ ಮುದ್ದಾದ ಕುಟುಂಬ ಅದು. ಎಲ್ಲವೂ ಇತ್ತು ಎನ್ನುವಾಗಲೇ ಆ ಮುದ್ದಾದ ಕುಟುಂಬ ಬಿರುಗಾಳಿಗೆ ಸಿಕ್ಕಿ ಮನೆಯೇ ಮಶಾಣಾದಂತಾಗಿದೆ. ಅದು ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಕುಟುಂಬ.

ಗಂಡ, ಗಂಡನಿಗೊಂದು ಸರ್ಕಾರಿ ನೌಕರಿ ಮುದ್ದಾದ ಮಗು, ಪ್ರೀತಿಯ ಮಡದಿ ನೆಮ್ಮದಿಯಾಗಿ ಬದುಕಲು ಇನ್ನೇನು ಬೇಕು ಹೇಳಿ. ಹೀಗಿದ್ದ ಕುಟುಂಬದಲ್ಲಿ ಇವತ್ತು ಸಾವಿನ ಬಿರುಗಾಳಿ ಮನೆ ಮಾಡಿತ್ತು. ನಿನ್ನೆ ರಾತ್ರಿ 10 ಗಂಟೆ ಸಮಯದಲ್ಲಿ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣನಗರದಲ್ಲಿ ತಾಯಿ ಪ್ರತಿಮಾ ಹಾಗೂ ಆಕೆಯ 2 ವರ್ಷದ ಪುಟಾಣಿ ಕಂದಮ್ಮ ಸಾತ್ವಿಕ್ ನೇಣಿಗೆ ಶರಣಾಗಿದ್ದಾರೆ.

ಸರ್ಕಾರಿ ನೌಕರನಾಗಿರುವ ಸಂತೋಷ್ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ನಾಲ್ಕು ವರ್ಷಗಳಿಂದ ಈ ಸಂಸಾರ ಸುಖದ ಸಾಗರವಾಗಿತ್ತು. ಆದರೆ ಕಳೆದ ಸಾಯಂಕಲಾ ಅದೇನಾಯ್ತೋ ಬಲ್ಲವರು ಯಾರಿಲ್ಲ. ಕೆಲಸಕ್ಕೆ ಹೋಗಿದ್ದ ಗಂಡ ಸಂತೋಷ್ ಮನೆಗೆ ಬರುವ ವೇಳೆಗೆ ಅಮ್ಮ ಮಗು ಇಬ್ಬರು ಹೆಣವಾಗಿ ಹೋಗಿದ್ದಾರೆ.

ಮೊದಲು ಮಗುವನ್ನ ಕೊಂದಿರುವ ಪ್ರತಿಮಾ ನಂತರ ತಾನೂ ನೇಣಿಗೆ ಶರಣಾಗಿದ್ದಾಳೆ. ಗಂಡ ಸಂತೋಷ್ ಕೆಲಸದಿಂದ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.ಸದ್ಯ ಚಂದ್ರಾಲೇಔಟ್ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಒಟ್ನಲ್ಲಿ ಗಂಡನಿಂದ ಹೆಂಡತಿಗೆ ಕಿರುಕುಳ ಇತ್ತು ಅನ್ನೋ ಮಾತುಗಳು ಸದ್ಯ ಕೇಳಿ ಬರ್ತಾ ಇವೆ ಪೊಲೀಸ್ ತನಿಖೆಯಿಂದಷ್ಟೇ ಕೊಲೆಯೋ ಇಲ್ಲ ಆತ್ಮಹತ್ಯೆಯೋ ಅನ್ನೋದು ಗೋತ್ತಾಗ್ಬೇಕಿದೆ.

LEAVE A REPLY

Please enter your comment!
Please enter your name here