Home District ಪುಟ್ಟರಾಜು ಖ್ಯಾತೆ ಹಿಂದಿದೆ ಅಧಿಕಾರಿಗಳ ವರ್ಗಾವಣೆ ಮರ್ಮ.!? ಖಾತೆ ಖ್ಯಾತೆ ಹೆಸ್ರಲ್ಲಿ ನಡೀತಿದೆಯಾ ಜಿಲ್ಲೆಯ ಅಧಿಕಾರಿಗಳ...

ಪುಟ್ಟರಾಜು ಖ್ಯಾತೆ ಹಿಂದಿದೆ ಅಧಿಕಾರಿಗಳ ವರ್ಗಾವಣೆ ಮರ್ಮ.!? ಖಾತೆ ಖ್ಯಾತೆ ಹೆಸ್ರಲ್ಲಿ ನಡೀತಿದೆಯಾ ಜಿಲ್ಲೆಯ ಅಧಿಕಾರಿಗಳ ವರ್ಗಾವಣೆ ಯತ್ನ.

1141
0
SHARE

ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ್ರ ಬೀಗರಾದ ಡಿಸಿ ತಮ್ಮಣ್ಣ ಮತ್ತು ಮೇಲುಕೋಟೆ ಶಾಸಕರಾದ ಪುಟ್ಟರಾಜು ಸಚಿವರಾಗಿದ್ದಾರೆ… ಇದೀಗ ಇಬ್ಬರ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ… ಆದ್ರೆ ಜಿಲ್ಲೆಯಲ್ಲಿ ಜನ ಪುಟ್ಟರಾಜುಗಿಂತ ಹಿರಿಯರಾದ ತಮ್ಮಣ್ಣ ಉಸ್ತುವಾರಿ ಸಚಿವರಾದ್ರೆ ಜಿಲ್ಲೆಗೆ ಉತ್ತಮ ಅನ್ನೋ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ…

ಕಾರಣ ಅಧಿಕಾರಿಯಾಗಿ ಅನುಭವದ ಜೊತೆಗೆ ಮೂರು ಬಾರಿ ತಮ್ಮಣ್ಣ ಶಾಸಕರಾಗಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ನೀಲನಕ್ಷೆ ರೆಡಿ ಮಾಡಿಕೊಂಡಿದ್ದಾರೆ… ಇನ್ನೂ ಪುಟ್ಟರಾಜು ಕೇವಲ ತಮ್ಮ ಕ್ಷೇತ್ರಕ್ಕೆ ಮಾತ್ರ ಸೀಮತವಾಗಿದ್ದು, ವಿಧಾನಸಭಾ ಚುನಾವಣೆಯಲ್ಲೂ ಅವರಿಂದ ಪಕ್ಷಕ್ಕೆ ಹೆಚ್ಚಿನ ಲಾಭವಾಗಿಲ್ಲ… ಆದ್ರೆ ತಮ್ಮಣ್ಣ ಪ್ರಭಾವ ಕೇವಲ ಮದ್ದೂರಿಗೆ ಸೀಮಿತವಾಗದೆ ಅಕ್ಕಪಕ್ಕದ ಕ್ಷೇತ್ರಗಳಲ್ಲೂ ಅವರು ಜೆಡಿಎಸ್ ಪರ ಮತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ…

ಕಿರಗಾವಲು, ಕೊಪ್ಪ ಹೊಬಳಿಗಳಲ್ಲಿ ಹಿಡಿತ ಹೊಂದಿರೋ ತಮ್ಮಣ್ಣ, ಮಳವಳ್ಳಿಯಲ್ಲಿ ಅನ್ನದಾನಿ ಗೆಲುವಿಗೆ ಮತ್ತು ನಾಗಮಂಗಲದಲ್ಲಿ ಸುರೇಶ್ ಗೌಡ್ ಅತಿ ಹೆಚ್ಚು ಅಂತರದಲ್ಲಿ ಚೆಲುವರಾಯಸ್ವಾಮಿ ವಿರುದ್ಧ ಗೆಲ್ಲಲು ಕಾರಣಕರ್ತರಾಗಿದ್ದಾರೆ… ಹೀಗಾಗಿ ತಮ್ಮಣ್ಣ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಿದ್ರೆ ಮಂಡ್ಯ ಅಭಿವೃದ್ಧಿ ಮತ್ತು ಪಕ್ಷಕ್ಕೆ ಒಳ್ಳೆಯಾದಾಗಲಿದೆ ಎಂಬ ಅಭಿಪ್ರಾಯವನ್ನ ಜಿಲ್ಲೆಯ ಜನ ವ್ಯಕ್ತಪಡಿಸುತ್ತಿದ್ದಾರೆ..

ಚೆಲುವರಾಯಸ್ವಾಮಿ ಅವರಿಗೆ ಈ ಹಿಂದೆ ಸಾರಿಗೆ ಖಾತೆ ನೀಡಲಾಗಿತ್ತು ಎಂಬ ಏಕೈಕ ಉದ್ದೇಶದಿಂದ ಪುಟ್ಟರಾಜು ಸಾರಿಗೆ ಸಚಿವ ಸ್ಥಾನ ಕೇಳುತ್ತಿದ್ದಾರೆ ಎಂಬ ಆರೋಪವು ಮಂಡ್ಯದಲ್ಲಿ ಕೇಳಿಬರುತ್ತಿದೆ.ಇದೇ ವೇಳೆ,ಸಚಿವ ಪುಟ್ಟರಾಜು ಖ್ಯಾತೆ ಹಿಂದೆ ಅಧಿಕಾರಿಗಳ ವರ್ಗಾವಣೆ ಮರ್ಮವಿದೆ ಎಂದು ಹೇಳಲಾಗುತ್ತಿದೆ.ಜಿಲ್ಲೆಯ ಡಿಸಿ.ಮತ್ತು ಪಾಂಡವಪುರದ ಎಸಿ, ಮತ್ತು ತಹಶಿಲ್ದಾರ್ ವರ್ಗಾವಣೆಗೆ ಪುಟ್ಟರಾಜು ಪಟ್ಟುಹಿಡಿದಿದ್ದಾರೆ.

ಅಕ್ರಮ ಗಣಿಗಾರಿಕೆಗೆ ಸಹಕರಿಸದ ಅಧಿಕಾರಿಗಳ ಎತ್ತಂಗಡಿಗೆ ಪುಟ್ಟರಾಜು ಪ್ರಯತ್ನ ಮಾಡ್ತಿದ್ದಾರೆ.ಮೊನ್ನೆಯಷ್ಟೆ ಅಧಿಕಾರಿಗಳ ದಾಳಿಯಿಂದ ಪುಟ್ಟರಾಜು ಒಡೆತನ‌ದ ಕಲ್ಲುಕ್ವಾರೆಗೆ ಅಧಿಕಾರಿಗಳು ಬೀಗ ಜಡಿದಿದ್ದರು.ಪದೇ ಪದೇ ಅಧಿಕಾರಿಗಳ ದಾಳಿಗೆ ಕೆಂಗೆಟ್ಟು ಅಧಿಕಾರಿಗಳ ವರ್ಗಾವಣೆಗೆ ಪುಟ್ಟರಾಜು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಸಚಿವ ಪುಟ್ಟರಾಜು ಖ್ಯಾತೆ ಹಿಂದಿದೆ ಅಧಿಕಾರಿಗಳ ವರ್ಗಾವಣೆ ಮರ್ಮ?.ಜಿಲ್ಲೆಯ ಡಿಸಿ.ಮತ್ತು ಪಾಂಡವಪುರದ ಎಸಿ, ಮತ್ತು ತಹಶಿಲ್ದಾರ್ ವರ್ಗಾವಣೆಗೆ ಪುಟ್ಟರಾಜು ಪಟ್ಟು.ಅಕ್ರಮ ಗಣಿಗಾರಿಕೆಗೆ ಸಹಕರಿಸದ ಅಧಿಕಾರಿಗಳ ಎತ್ತಂಗಡಿಗೆ ಪುಟ್ಟರಾಜು ಪ್ರಯತ್ನ.ಖಾತೆ ಖ್ಯಾತೆ ಹೆಸ್ರಲ್ಲಿ ನಡೀತಿದೆಯಾ ಜಿಲ್ಲೆಯ ಅಧಿಕಾರಿಗಳ ವರ್ಗಾವಣೆ ಯತ್ನ.

ಸಕ್ಕರೆ ಜಿಲ್ಲೆಯಲ್ಲಿ ಪುಟ್ಟರಾಜು ಸೇರಿ‌ ಮತ್ತವರ ಕುಟುಂಬದವರಿಂದ ನಡೀತೀರೋ ಅಕ್ರಮ ಕಲ್ಲುಗಣಿಗಾರಿಕೆ.ಕಳೆದೆರಡು ವರ್ಷದಿಂದ ಅಧಿಕಾರಿಗಳ ಅಸಹಕಾರದಿಂದ ಅಕ್ರಮ ಕಲ್ಲುಗಣಿಗೆ ಕಂಟಕ.ಮೊನ್ನೆಯಷ್ಟೆ ಅಧಿಕಾರಿಗಳ ದಾಳಿಯಿಂದ ಪುಟ್ಟರಾಜು ಒಡೆತನ‌ದ ಕಲ್ಲುಕ್ವಾರೆ ಬೀಗ ಜಡಿದಿದ್ದ ಅಧಿಕಾರಿಗಳು.ಪದೇ ಪದೇ ಅಧಿಕಾರಿಗಳ ದಾಳಿಗೆ ಕೆಂಗೆಟ್ಟು ಅಧಿಕಾರಿಗಳ ವರ್ಗಾವಣೆಗೆ ಸಿ.ಎಸ್.ಪಿ. ಪಟ್ಟು…

LEAVE A REPLY

Please enter your comment!
Please enter your name here