Home Cinema ಪುಟ್ಟ ಅಭಿಮಾನಿಯ ನರಳಾಟಕ್ಕೆ ಒದ್ದಾಡಿತಲ್ಲ ಚಕ್ರವರ್ತಿಯ ಮನ..! ಈ ಅಭಿಮಾನಿಯ ಅಭಿಮಾನಕ್ಕೆ ಅವರೇ ಸಾಟಿ..

ಪುಟ್ಟ ಅಭಿಮಾನಿಯ ನರಳಾಟಕ್ಕೆ ಒದ್ದಾಡಿತಲ್ಲ ಚಕ್ರವರ್ತಿಯ ಮನ..! ಈ ಅಭಿಮಾನಿಯ ಅಭಿಮಾನಕ್ಕೆ ಅವರೇ ಸಾಟಿ..

75
0
SHARE

 

 

 

ದರ್ಶನ್,,, ಸ್ಯಾಂಡಲ್‌ವುಡ್‌ನ ಟಾಪ್ ಆಕ್ಟರ್. ಕಷ್ಟದಲ್ಲೇ ಬದುಕು ಕಟ್ಟಿಕೊಂಡ ಚಾಲೆಂಜಿಂಗ್ ಸ್ಟಾರ್. ಅಭಿಮಾನಿಗಳ ಪ್ರೀತಿಯ ದಾಸನಿಗೆ ಅಭಿಮಾನಿ ಬಳಗ ಬಹಳ ದೊಡ್ಡಿದಿದೆ..ಚಿಕ್ಕ ಮಕ್ಕಳಿಂದ ಹಿಡಿದು ಎಲ್ಲರಿಗೂ ದಚ್ಚು ಸಾಧನೆ ಅಚ್ಚುಮೆಚ್ಚು..ದರ್ಶನ್ ಕೂಡ ತಮ್ಮ ಅಭಿಮಾನಿಗಳಿಗೆ ಅಷ್ಟೇ ಗೌರವ ನೀಡುತ್ತಾರೆ,,,ಸಾಧ್ಯವಾದಗಲೆಲ್ಲ ಅಭಿಮಾನಿಗಳನ್ನು ಕರೆಸಿ ಭೇಟಿ ಮಾಡೋದು ದಾಸನ ದೊಡ್ಡ ಗುಣ..ಯಾರೇ ಕಷ್ಟದಲ್ಲಿರಲಿ ದಾಸನ ಹೃದಯ ಮಿಡಿಯುತ್ತದೆ..ಸಹಾಯಕ್ಕೆ ಹಾತೊರೆಯುತ್ತದೆ..ಈಗ ಮತ್ತೆ ದಾಸನ ಹೃದಯ ಈ ಪುಟ್ಟ ಅಭಿಮಾನಿಗಾಗಿ ಮಿಡಿದಿದೆ…

ಇವ್ರು ದರ್ಶನ್‌ನ ಅಪ್ಪಟ ಅಭಿಮಾನಿ…ದರ್ಶನ್ ಅಂದ್ರೆ ಇನ್ನಿಲ್ಲದ ಪ್ರೀತಿ..ಕಷ್ಟದಿಂದ ಸ್ಟಾರ್ ಪಟ್ಟಕ್ಕೆ ಬಂದಿರುವ ದಚ್ಚು ಮೇಲೆ ವಿಶೇಷ ಅಭಿಮಾನ. ಸದಾ ದಚ್ಚು ಧ್ಯಾನದಲ್ಲಿರೋ ಈ ಪುಟ್ಟ ಹುಡುಗಿಗೆ ಒಂದೇ ಆಸೆ..ತನ್ನ ನೆಚ್ಚಿನ ನಟನನ್ನು ಭೇಟಿ ಮಾಡಬೇಕು ಮಾತಾಡಬೇಕು ಅನ್ನೋದು..ಈಕೆಯ ಆಸೆ ಈಗ ಈಡೇರಿದೆ..

ದರ್ಶನ್ ತನಗೊಬ್ಬ ವಿಶೇಷ ಅಭಿಮಾನಿ ಇದ್ದಾರೆ ಎಂದು ತಿಳಿದ ತಕ್ಷಣ ಆಕೆಯನ್ನು ಕರೆಸಿ ಮಾತನಾಡಿದ್ದಾರೆ. ಯಜಮಾನ ಚಿತ್ರದ ಶೂಟಿಂಗ್‌ನಲ್ಲಿರುವ ದರ್ಶನ್ ತಾವಿರುವ ಸ್ಥಳಕ್ಕೆ ಆಕೆಯ ಕುಟುಂಬವನ್ನು ಕರೆಸಿಕೊಂಡು ಸ್ವಲ್ಪ ಹೊತ್ತು ಕಾಲ ಕಳೆದಿದ್ದಾರೆ..ಸಾಂತ್ವಾನ ಹೇಳಿದ್ದಾರೆ…


ಅಂದ್ಹಾಗೆ ಇವ್ರ ಹೆಸರು ಪೂರ್ವಿಕ…ಹನ್ನೊಂದು ವರ್ಷದ ಈ ಪುಟ್ಟ ಬಾಲೆಗೆ ದೊಡ್ಡ ನೋವನ್ನು ದೇವ್ರು ನೀಡಿದ್ದಾನೆ. ಪೂರ್ವಿಕ ಹೃದಯದಲ್ಲಿ ರಂಧ್ರವಾಗಿದ್ದು, ಅನಾರೋಗ್ಯದಿಂದ ಬಳಲುತಿದ್ದಾರೆ..ಜೊತೆಗೆ ಹೊಟ್ಟೆಯಲ್ಲಿ ಕೆಟ್ಟ ನೀರು ನಿಂತಿದ್ದು ಪ್ರತಿನಿತ್ಯ ಬದುಕಿಗಾಗಿ ಹೋರಾಡುತ್ತಿದ್ದಾಳೆ. ಇದ್ರ ನಡುವೆ ಒಮ್ಮೆಯಾದರೂ ದರ್ಶನ್‌ನ ನೋಡಬೇಕು ಎಂಬ ಮಹದಾಸೆ..ದಾಸನ ಕಿವಿಗೆ ಈ ಸುದ್ದಿ ಬೀಳುತ್ತಿದ್ದಂತೆ ಆಕೆಯ ಮನೆಯವರನ್ನು ಸಂಪರ್ಕ ಮಾಡಿ,,ಬರುವಂತೆ ಹೇಳಿದ್ದಾರೆ …ಮಂಡ್ಯದ ಮದ್ದೂರಿನ ಚಿಕ್ಕ ಹಳ್ಳಿಯೊಂದರ ನಿವಾಸಿಯಾಗಿರುವ ಪೂರ್ವಿಕ ತಮ್ಮ ಪೋಷಕರ ಜೊತೆ ದರ್ಶನ್ ಭೇಟಿ ಮಾಡಿದ್ದಾರೆ..ಸಂತಸ ಹಂಚಿಕೊಂಡಿದ್ದಾರೆ, ದಾಸನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿ ಪಟ್ಟಿದ್ದಾಳೆ…

ಇನ್ನು ದಾಸನ ಹೃದಯ ಅಭಿಮಾನಿಯ ಸ್ಥಿತಿ ಕಂಡು ಮರುಕ ಪಟ್ಟಿದೆ..ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸಿಕೊಂಡಿದ್ದಾರೆ. ಧೈರ್ಯ ಹೇಳಿದ್ದಾರೆ..ಜೊತೆಗೆ ಆಕೆಯ ಚಿಕಿತ್ಸೆಗೆ ನೆರವಾಗುವ ಭರವಸೆಯನ್ನು ನೀಡಿದ್ದಾರೆ..ಇದಕ್ಕೆ ಅಲ್ಲವೇ ಅಭಿಮಾನಿಗಳಿಗೆ ಡಿ ಬಾಸ್ ಇಷ್ಟವಾಗೋದು..ಪ್ರೀತಿ ಮಾಡೋದು…

 

 

 

LEAVE A REPLY

Please enter your comment!
Please enter your name here