Home Cinema ಪುತ್ರನ ಕುಸ್ತಿಗೆ ಫುಲ್ ಸ್ಟಾಫ್ ಇಟ್ಟರಾ ಕರಿಚಿರತೆ..!? ರಣಭೀಕರ ಸಾಂಸಾರಿಕ ಚಿತ್ರ..ಬದಲಾಯ್ತೇ ವಿಜಿ ದುನಿಯಾದ ಅಖಾಡ..!

ಪುತ್ರನ ಕುಸ್ತಿಗೆ ಫುಲ್ ಸ್ಟಾಫ್ ಇಟ್ಟರಾ ಕರಿಚಿರತೆ..!? ರಣಭೀಕರ ಸಾಂಸಾರಿಕ ಚಿತ್ರ..ಬದಲಾಯ್ತೇ ವಿಜಿ ದುನಿಯಾದ ಅಖಾಡ..!

1981
0
SHARE

ಒಂದ್ಕಾಲ ಇತ್ತು. ದುನಿಯಾ ವಿಜಯ್ ಹೆಸರು ಕೇಳಿದ ತಕ್ಷಣ, ವಿಜಿ ಪಟ್ಟ ಕಷ್ಟಗಳು ಕಣ್ಮುಂದೆ ಬರ‍್ತಿದ್ವು. ವಿಜಿ ಯಶಸ್ಸಿನ ಕಥೆ ಎಲ್ಲರಿಗೂ ಇನ್ಸ್‌ಪೈರಿಂಗ್ ಅನಿಸುತ್ತಿದ್ವು. ಆದ್ರೆ ಕಾಲ ಉರುಳಿದಂತೆ ಚೆಂದವಾಗಿದ್ದ ವಿಜಿಯ ದುನಿಯಾ ಹಳಿ ತಪ್ಪಿತ್ತು. ಅದ್ರಲ್ಲೂ ಇತ್ತೀಚಿನ ಕೆಲ ಘಟನೆಗಳಂತೂ ಖುದ್ದು ವಿಜಿ ಅಭಿಮಾನಿಗಳಿಗೆ ಅಸಹ್ಯ ಹುಟ್ಟಿಸಿದ್ವು.

ಎರಡು ಹೆಂಡ್ತಿಯರ ನಡುವೆ, ಹೈರಾಣಾಗಿ ಹೋಗಿರುವ ವಿಜಿ ಖಾಸಗಿ ಬದುಕಿನ ಕಿತ್ತಾಟಗಳು ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಪಾನಿಪುರಿ ಕಿಟ್ಟಿ ಪ್ರಕರಣದಿಂದ ಆರಂಭವಾದ ವಿವಾದ ಇದೀಗ ಪತ್ನಿಯರ ಮಾರಾಮಾರಿಯ ಮೂಲಕ ವಿಜಿಯನ್ನು ಆವರಿಸಿಕೊಂಡಿದೆ. ಇಂಥಾ ಜಂಜಾಟದಲ್ಲಿ ಕರಿಚಿರತೆ ಸಿಲುಕಿಕೊಂಡಾಗ್ಲೇ, ಗಾಂಧಿನಗರದ ಗಲ್ಲಿಗಳಲ್ಲಿ ಒಂದು ಸುದ್ದಿ ಹರಿದಾಡಲು ಶುರುವಿಟ್ಟುಕೊಂಡಿದೆ. ಅದುವೇ.. ಕನಸಿನಿಂದ ಶುರುಮಾಡಿದ್ದ ಕುಸ್ತಿ ಶುರುವಾಗುವ ಮೊದಲೇ ನಿಂತು ಹೋಗಿದೆ ಅನ್ನೋದು.ಯಸ್, ಕುಸ್ತಿ ನಿಂತು ಹೋಗಿದೆ.

ಹೀಗೊಂದು ಸುದ್ದಿ.. ಸದ್ಯ ವಿಜಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲ ದುನಿಯಾ ವಿಜಿಯ ಕಾಲ್ ಎಳೆಯಲು ಅಂಥನೇ ಇರುವ ಗುಂಪು, ಕುಸ್ತಿ ನಿಲ್ಲಲು.. ವಿಜಿಯ ರಣಭೀಕರ ಸಾಂಸಾರಿಕ ಚಿತ್ರವೇ ಕಾರಣ ಅನ್ನುವ ಸುದ್ದಿಯನ್ನೂ ತೇಲಿ ಬಿಡ್ತಿದೆ.ಹೌದು, ಅಸಲಿಗೆ ಕುಸ್ತಿಯಲ್ಲಿ.. ದುನಿಯಾ ವಿಜಿಯ ಮುದ್ದಿನ ಪುತ್ರ ಸಾಮ್ರಾಟ್ ಬಹುಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾನೆ. ಇದೇ ಸಿನಿಮಾ ಮೂಲಕ ಸಾಮ್ರಾಟ್ ಚಿತ್ರರಂಗಕ್ಕೆ ಪರಿಚಯವಾಗಬೇಕಿತ್ತು.

ಆದ್ರೆ ಹೆಂಡ್ತಿಯರ ಕಿತ್ತಾಟ, ಆಗ್ಲೇ ವಿಜಿ ಹಾಗೂ ಪುತ್ರಿಯರನ್ನ ದೂರ ಮಾಡಿಯಾಗಿದೇ. ಇದ್ರ ನಡುವೆ ಸಾಮ್ರಾಟ್ ಕೂಡಾ ಅಪ್ಪನಿಂದ ದೂರವಾಗಿ ಅಮ್ಮನ ಮಡಿಲು ಸೇರುವ ಸಾಧ್ಯತೆಗಳಿವೆ. ಇದೇ ಕಾರಣಕ್ಕೆ ಕುಸ್ತಿ ಶುರುವಾಗುವ ಮುನ್ನ ಕರಿಚಿರತೆ ರಿಸ್ಕ್ ಬೇಡ್ವೇ ಬೇಡ ಅಂಥ ಡಿಸೈಡ್ ಮಾಡಿ ಕುಂಬಳಕಾಯಿ ಹೊಡೆದಿದ್ದಾರೆ ಅನ್ನೋ ಮಾತುಗಳು ಗಾಂಧಿನಗರದ ಗಲ್ಲಿಗಳಿಂದ ಹಿಡ್ದು ವಿಜಿ ಮನೆಯ ಕಾಲನಿವರೆಗೆ ಕೇಳಿ ಬರ‍್ತಿವೆ. ಬಹುಶ, ಇದೇ ಕಾರಣಕ್ಕೋ ಏನೋ.. ಸ್ಪಷ್ಟೀಕರಣವೊಂದು ಇದೀಗ ವಿಜಿ ನಿವಾಸದಿಂದ ತೂರಿಕೊಂಡು ಬಂದಿದೆ.

ಯಸ್, ಕುಸ್ತಿ ಚಿತ್ರದ ಕಥೆ ಮಗೀತು ಅನ್ನುವ ಸುದ್ದಿಯೊಂದು ವ್ಯಾಪಕವಾಗಿ ಹರಿದಾಡಿದ ಬೆನ್ನಲ್ಲೇ, ಚಿತ್ರದ ನಿರ್ದೇಶಕ ರಾಘು ಶಿವಮೊಗ್ಗ ಸ್ಪಷ್ಟೀಕರಣ ನೀಡಿದ್ದಾರೆ. ನಿಂತು ಹೋಗಿದೆ ಅನ್ನುವ ಸುದ್ದಿ ಸುಳ್ಳೇ ಸುಳ್ಳು ಅಂದಿದ್ದಾರೆ. ನಿಮಗೆ ಗೊತ್ತಿರಲಿ ದುನಿಯಾ ವಿಜಿ ನಟಿಸುತ್ತಿದ್ದ ಕುಸ್ತಿ ಚಿತ್ರ ನಿಂತಿಲ್ಲ ಆದರೆ ಸದ್ಯಕ್ಕೆ ಮುಂದಕ್ಕೆ ಹೋಗಿದೆಯಷ್ಟೇ. ಬಹುಶಃ ಮಾಮೂಲಿ ಚಿತ್ರವಾಗಿದ್ದರೆ ಈ ಹೊತ್ತಿಗೆಲ್ಲಾ ದುನಿಯಾ ವಿಜಿ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದರೇನೋ. ಆದರೆ ಅವರು ಈ ಚಿತ್ರಕ್ಕಾಗಿ ನಡೆಸಿದ್ದ ಬಾಡಿ ಬಿಲ್ಡ್ ಮಾಡುವ ಕಸರತ್ತುಗಳು, ಕುಸ್ತಿ ತರಬೇತಿಗಳೆಲ್ಲ ವೈಯಕ್ತಿಕ ವಿವಾದಗಳು ಎಳ್ಳು ನೀರು ಬಿಟ್ಟಿವೆ.

ಹಾಗಾಗಿ, ಎಲ್ಲವನ್ನೂ ಇನ್ನೂ ಮೊದಲಿನಿಂದ ಶುರು ಮಾಡಬೇಕಿದೆ.ಇನ್ನು ವಿಜಿ ಮಗ ಸಾಮ್ರಾಟ್ ಕೂಡಾ ಈ ಚಿತ್ರದಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಲು ರೆಡಿಯಾಗುತ್ತಿದ್ದ. ಆತನಿಗೂ ತರಬೇತಿ ಕೊಡಿಸಲಾಗುತ್ತಿತ್ತು. ಆದ್ರೆ ಅದಕ್ಕೂ ಬ್ರೇಕ್ ಬಿದ್ದಿದೆ. ಹಾಗಾಗಿ, ಅಪ್ಪ ಮಗನಿಗೆ ಮತ್ತೊಮ್ಮೆ ತರಬೇತಿಗಳನ್ನು ಕೊಡಿಸುವ ಅಗತ್ಯವಿದೆ. ಇದ್ರ ನಡುವೆ ಸಾಮ್ರಾಟ್‌ಗೆ ಇನ್ನೇನು ಶಾಲಾ ಪರೀಕ್ಷೆಗಳು ಶುರುವಾಗಲಿವೆ. ಹಾಗಾಗಿ, ಕುಸ್ತಿ ಸದ್ಯಕ್ಕೆ ಕಷ್ಟ ಸಾಧ್ಯ.

ಇದೇ ಕಾರಣದಿಂದ ದುನಿಯಾ ವಿಜಿ ಮತ್ತು ರಾಘು ಸೇರಿ ಚರ್ಚೆ ನಡೆಸಿ ಕುಸ್ತಿ ಚಿತ್ರವನ್ನು ಮುಂದಿನ ವರ್ಷದಿಂದ ಆರಂಭಿಸಲು ನಿರ್ಧಾರ ಮಾಡಿದ್ದಾರಂತೆ.ಇದೆಲ್ಲದ್ರ ನಡುವೆ, ದುನಿಯಾ ವಿಜಿ ಹಾಗೂ ರಾಘು ಶಿವಮೊಗ್ಗ ಕುಸ್ತಿ.. ಆರಂಭಕ್ಕೂ ಮುನ್ನ, ಸೈಕಲ್ ಗ್ಯಾಫಿನಲ್ಲಿ ಮತ್ತೊಂದು ಸಿನಿಮಾದ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದರೆ. ಈ ಚಿತ್ರ ಕೂಡಾ ವಿಜಿಯ ಹೋಂ ಬ್ಯಾನರ್ ದುನಿಯಾ ಟಾಕೀಸ್‌ನಿಂದನೇ ನಿರ್ಮಾಣಗೊಳ್ಳಲಿದೆ.

ಈ ಚಿತ್ರದಲ್ಲಿ ಹಿಂದೆಂದೂ ಕಾಣದ ಅವತಾರದಲ್ಲಿ ವಿಜಿ ನಿಮ್ಮ ಮುಂದೆ ಪ್ರತ್ಯಕ್ಷವಾಗಲಿದ್ದಾರೆ. ಆಗ್ಲೇ ಚಿತ್ರದ ಬರವಣಿಗೆ ಕೆಲ್ಸಗಳೂ ಶುರುವಾಗಿವೆ. ಇದ್ರ ಜೊತೆ ಜೊತೆಯಲ್ಲಿ ಸಾಮ್ರಾಟ್ ಪರೀಕ್ಷೆಗಳು ಮುಗಿದ ಬಳಿಕ, ಕುಸ್ತಿಯ ತಯಾರಿಯೂ ಆರಂಭವಾಗಲಿದೆ. ಅದೇನೆ ಇರ‍್ಲಿ, ಕುಸ್ತಿ ನಿಂತಿಲ್ಲ. ಸದ್ಯದಲ್ಲೇ ಶುರುವಾಗಲಿದೆ. ಮುಂದಿನ ವರ್ಷ ವಿಜಿ ಅಭಿಮಾನಿಗಳಿಗೆ ಎರಡು ಮುಖ್ಯವಾದ ಗಿಫ್ಟ್‌ಗಳು ಸಿಗಲಿವೆ. ಕಾಯಬೇಕಷ್ಟೇ…

LEAVE A REPLY

Please enter your comment!
Please enter your name here