Home District ಪುತ್ರನ ಗೆಲುವಿಗೆ ಟೊಂಕಕಟ್ಟಿ ನಿಂತ ಸಚಿವ ರೇವಣ್ಣ..! ಸಿದ್ದು ನೇತೃತ್ವದಲ್ಲಿ ಹಾಸನ ಕಾಂಗ್ರಸ್ ಮುಖಂಡರ...

ಪುತ್ರನ ಗೆಲುವಿಗೆ ಟೊಂಕಕಟ್ಟಿ ನಿಂತ ಸಚಿವ ರೇವಣ್ಣ..! ಸಿದ್ದು ನೇತೃತ್ವದಲ್ಲಿ ಹಾಸನ ಕಾಂಗ್ರಸ್ ಮುಖಂಡರ ಸಭೆ..!

466
0
SHARE

ಪ್ರತಿಷ್ಠೆಯ ಕಣವಾಗಿರುವ ಹಾಸನ ಲೋಕಸಭಾ ಕ್ಷೇತ್ರದಿಂದ ಪುತ್ರ ಪ್ರಜ್ವಲ್ ಗೆಲ್ಲಿಸಲು ಸಚಿವ ರೇವಣ್ಣ ಪಣತೊಟ್ಟಿದ್ದಾರೆ. ಈಗಾಗಲೇ ದೋಸ್ತಿ ಅಭ್ಯರ್ಥಿ ಜಿಲ್ಲೆಯಲ್ಲಿ ಬರ್ಜರಿ ಪ್ರಚಾರದಲ್ಲಿ ತೊಡಗಿ ಶಕ್ತಿ ಪ್ರದರ್ಶನ ನಡೆಸುತ್ತಿದ್ದಾರೆ. ಇತ್ತ ಹಾಸನದಲ್ಲಿ ಸಮನ್ವಯ ಸಾಧಿಸಲು ಬೆಂಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರ ಸಭೆ ನಡೆಯಿತು.

ಸಭೆಯಲ್ಲಿ ಮೈತ್ರಿಧರ್ಮ ಪಾಲಿಸಲು ಸೂಚಿಸಲಾಯ್ತು. ಹಾಸನದಲ್ಲಿ  ದೋಸ್ತಿ ಪಕ್ಷದ ಅಭ್ಯರ್ಥಿಪ್ರಜ್ವಲ್ ರೇವಣ್ಣ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಪ್ರಜ್ವಲ್ ಮೈತ್ರಿ ಪಕ್ಷ ಕಾಂಗ್ರೆಸ್ ನಾಯಕರ ಮನೆಗೆ ಭೇಟಿ ನೀಡಿ ಸಹಕಾರ ಕೋರುತ್ತಿದ್ದಾರೆ. ಸಚಿವ ಹೆಚ್.ಡಿ.ರೇವಣ್ಣ, ಪ್ರಜ್ವಲ್ ಹಾಗೂ ಭವಾನಿ ರೇವಣ್ಣ ಭರ್ಜರಿ ಮತಬೇಟೆಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ.ಈಗಾಗಲೇ ಹಾಸನದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಒಂದು ಸುತ್ತಿನ ಚುನಾವಣಾ ಪ್ರಚಾರ ಮುಗಿಸಿರುವ ದಳಪತಿಗಳು, ಜಿಲ್ಲಾ ಕೇಂದ್ರ ಹಾಸನದಲ್ಲಿ ಬೃಹತ್ ಕ್ಯಾಂಪೇನ್ ಮಾಡಿದ್ರು.

ಸಭೆಯಲ್ಲಿ ಮಾತನಾಡಿದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ನಾನು ಯಾರನ್ನೂ ಟೀಕೆ ಮಾಡಿ ರಾಜಕೀಯ ಮಾಡೋದಿಲ್ಲ.  ಬದಲಾಗಿ ದೇವೇಗೌಡರ ಹಾದಿಯಲ್ಲಿ ಸಾಗುವೆ ಎಂದ್ರು.ಜೆಡಿಎಸ್ ಶಕ್ತಿ ಪ್ರದರ್ಶನದಲ್ಲಿ ಮಾತನಾಡಿದ ಸಚಿವ ರೇವಣ್ಣ ಕೋಮುವಾದಿ ಪಕ್ಷವನ್ನು ದೂರ ಇಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜಾತ್ಯಾತೀತ ಪಕ್ಷ ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದ್ರು.ಇನ್ನೂ ಅಸಮಾಧಾನಗೊಂಡಿರುವ ಹಾಸನ ಕೈ ಪಕ್ಷದ ಮುಖಂಡರ ಸಭೆ ಬೆಂಗಳೂರಿನಲ್ಲಿ ನಡೆಯಿತು. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮೈತ್ರಿಧರ್ಮ ಪಾಲಿಸುವಂತೆ ಕಾರ್ಯಕರ್ತರಿಗೆ ಸೂಚಿಸಲಾಯ್ತು.

ಅಲ್ಲದೇ ಯಾವುದೇ ಸಮಸ್ಯೆಗಳಿದ್ರು ಪಕ್ಷದ ಮುಖಂಡರು ಬಗೆಹರಿಸುತ್ತಾರೆ, ಯಾವುದೇ ರೀತಿಯ ಅಸಮಾಧಾನಬೇಡ ಎಂದು ಮನವರಿಕೆ ಮಾಡಲಾಯ್ತು. ಇನ್ನೂ ಹಾಸನ ಕೈ ಪಕ್ಷದ ನಾಯಕರ ಜೊತೆ ಗುರುವಾರವೂ ಮತ್ತೊಂದು ಸುತ್ತಿನ ಸಭೆ ನಡೆಯಲಿದ್ದು ಸಚಿವ ರೇವಣ್ಣ  ಸಭೆಯಲ್ಲಿ ಭಾಗಿಯಾಗಲಿದ್ದಾರೆ.ಒಟ್ಟಾರೆ ಹಾಸನದಲ್ಲಿ ಪ್ರಜ್ವಲ್ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇತ್ತ ಕೈ ಕಾರ್ಯಕರ್ತರತಲ್ಲಿ ಉಂಟಾಗಿರೋ ಅಸಮಾಧಾನವನ್ನ ಶಮನ ಮಾಡೋ ಕೆಲಸ ಬೆಂಗಳೂರಿನಲ್ಲಿ ನಡೆದಿದೆ.

ಆ ಮೂಲಕ ಮೈತ್ರಿ ಅಭ್ಯರ್ಥಿಗೆ ತೊಂದರೆ ಆಗದಂತೆ ಉಭಯ ಪಕ್ಷಗಳು ಕಾರ್ಯಕರ್ತರಲ್ಲಿ ಮನವರಿಕೆ ಮಾಡಿಕೊಡುತ್ತಿವೆ.ಪುತ್ರನ ಗೆಲುವಿಗೆ ಟೊಂಕಕಟ್ಟಿ ನಿಂತ ಸಚಿವ ರೇವಣ್ಣಸಿದ್ದು ನೇತೃತ್ವದಲ್ಲಿ ಹಾಸನ ಕಾಂಗ್ರಸ್ ಮುಖಂಡರ ಸಭೆಹಾಸನದಲ್ಲಿ ಲೋಕ ಕ್ಷೇತ್ರದಲ್ಲಿ ತೆನೆ ಹೊರಲು ಭಾರಿ ಕಸರತ್ತುಭರ್ಜರಿ ಪ್ರಚಾರದಲ್ಲಿ ತೊಡಗಿರುವ ಪ್ರಜ್ವಲ್ ರೇವಣ್ಣ ಕೈ ನಾಯಕರ ಜೊತೆ ಗುರುವಾರವೂ ಕೂಡ ಮತ್ತೊಂದು ಸಭೆಮೈತ್ರಿಧರ್ಮ ಪಾಲಿಸುವಂತೆ ಕಾರ್ಯಕರ್ತರಿಗೆ ಸೂಚನೆಕೋಮುವಾದಿ ಪಕ್ಷವನ್ನು ದೂರ ಇಡಬೇಕು – ಸಚಿವ ರೇವಣ್ಣಯಾರನ್ನು ಟೀಕೆ ಮಾಡಿ ನಾನು ರಾಜಕೀಯ ಮಾಡುವುದಿಲ್ಲ.

LEAVE A REPLY

Please enter your comment!
Please enter your name here