Home Cinema ಪುನೀತ್‌ಗೆ ಜೋಡಿಯಾದ ಬಾಲಿವುಡ್ ನಟಿ….! ಗಾಂಧಿನಗರಕ್ಕೆ ಎಂಟ್ರಿ ಕೊಡ್ತಾರ ಸಯೇಷಾ ಸೈಗಲ್….!

ಪುನೀತ್‌ಗೆ ಜೋಡಿಯಾದ ಬಾಲಿವುಡ್ ನಟಿ….! ಗಾಂಧಿನಗರಕ್ಕೆ ಎಂಟ್ರಿ ಕೊಡ್ತಾರ ಸಯೇಷಾ ಸೈಗಲ್….!

2065
0
SHARE

ರಾಜಕುಮಾರ ಚಿತ್ರದ ನಂತ್ರ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಗೆ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಆಕ್ಷನ್ ಕಟ್ ಹೇಳ್ತಿರೋ ಯುವರತ್ನ ಚಿತ್ರಕ್ಕೆ ಬಾಲಿವುಡ್ ನಟಿ ಸೆಲೆಕ್ಟ್ ಆಗಿದ್ದಾರಂತೆ…

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ನಟಸೌರ್ವಭೌಮ ಸಿನಿಮಾ ಇದೇ ವಾರ ವಲ್ಡ್ ವೈಡ್ ರಿಲೀಸ್ ಆಗ್ತಿದೆ. ಇದರ ಜೊತೆಗೆ ಮುಂದಿನ ವಾರ ಪುನೀತ್ ಹಾಗೂ ನಿರ್ದೇಶಕ ಸಂತೋಷ್ ಆನಂದ್‌ರಾಮ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಯುವರತ್ನ ಸಿನಿಮಾದ ಶೂಟಿಂಗ್ ಕೂಡ ಶುರು ಆಗ್ತಿದೆ. ರಾಜಕುಮಾರ ಚಿತ್ರದ ನಂತ್ರ ಈ ಜೋಡಿ ಮತ್ತೆ ಒಂದಾಗಿದ್ದು, ನಿರೀಕ್ಷೆ ಸ್ವಲ್ಪ ಜಾಸ್ತಿನೆ ಇದೆ. ಸದ್ಯ ಯುವರತ್ನ ಚಿತ್ರದ ನಾಯಕಿ ಯಾರು ಅಂತ ಇದುವರೆಗೂ ಎಲ್ಲೂ ರಿವೀಲ್ ಆಗಿಲ್ಲ.

ಆದ್ರೆ ಬಾಲಿವುಡ್‌ನ ನಿರ್ಮಾಪಕನ ಮಗಳು ಈ ಚಿತ್ರದ ನಾಯಕಿ ಇರಬಹುದು ಅಂತ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಕೇಳಿಬರುತ್ತಿದೆ. ಹೌದು, ಬಾಲಿವುಡ್ ಬೆಡಗಿ ಸಾಯೇಷಾ ಸೈಗಲ್ ಯುವರತ್ನ ಚಿತ್ರದಲ್ಲಿ ನಟಿಸುವ ಸಾಧ್ಯತೆ ಇದೆಯಂತೆ.ಈ ಹಿಂದೆ ಮಹಾನಟಿ ಚಿತ್ರದ ನಟಿ ಕೀರ್ತಿ ಸುರೇಶ್ ಯುವರತ್ನಗೆ ಜೋಡಿ ಆಗ್ತಾರೆ ಅಂತ ಹೇಳಲಾಗುತ್ತಿತ್ತು, ನಂತ್ರ ತಮನ್ನಾ ಭಾಟಿಯಾ ಹೆಸರು ಸಹ ಕೇಳಿಬಂದಿತ್ತು. ಸದ್ಯ ಈ ಇಬ್ಬರ ನಟಿಯರನ್ನ ಹಿಂದಿಕ್ಕಿ ಯುವರತ್ನ ಚಿತ್ರತಂಡ ಸಾಯೇಷಾಗೆ ಆಫರ್ ನೀಡಿದ್ದಾರೆ. ದೀಲಿಪ್‌ಕುಮಾರ್-ಸಾಯಿರಾ ಬಾನು ಅವರ ಮೊಮ್ಮಗಳಾದ ಸಾಯೇಷಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು, ಈಗಾಗಲೇ ಟಾಲಿವುಡ್‌ನ ಅಖಿಲ್ ಚಿತ್ರದ ಮೂಲಕ.

ಇದರ ಜೊತೆಗೆ ಅಜಯ್ ದೇವ್‌ಗನ್ ನಟನೆಯ ಶಿವಾಯ್‌ನಲ್ಲೂ ಸಾಯೇಷಾ ಬಣ್ಣ ಹಚ್ಚಿದ್ದಾಳೆ. ಸದ್ಯ ಕಾಲಿವುಡ್‌ನಲ್ಲಿ ಸಾಯೇಷಾಗೆ ಬಾರಿ ಬೇಡಿಕೆ ಇದ್ದು, ಬ್ಯಾಕ್ ಟು ಬ್ಯಾಕ್ ಮ್ಯೂವಿಗಳಲ್ಲಿ ಬ್ಯುಸಿಯಾಗಿದ್ದು, ಸದ್ಯದಲ್ಲೇ ಅಂದ್ರೆ ಮುಂದಿನ ತಿಂಗಳು ನಟ ಆರ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಅನ್ನೋ ಸುದ್ದಿ ಕೂಡ ಕೇಳಿಬರುತ್ತಿದೆ.

ಏನೇ ಹೇಳಿ ಈ ಸುದ್ದಿಯನ್ನ ಸದ್ಯ ಸಂತೋಷ್ ಆನಂದ್ ರಾಮ್ ಇನ್ನು ನಿಖರ ಪಡಿಸಿಲ್ಲ. ಯುವರತ್ನ ಚಿತ್ರದ ನಾಯಕಿಯ ಹುಡುಕಾಟದಲ್ಲಿ ಇರೋ ಚಿತ್ರತಂಡ ಇನ್ನು ಯಾರನ್ನು ಫೈನಲ್ ಕೂಡ ಮಾಡಿಲ್ಲ. ಆದ್ರೆ ಕನ್ನಡದ ನಟಿಯರೇ ಯುವರತ್ನಗೆ ಜೋಡಿಯಾಗುತ್ತಾರ ಥವಾ ಬಾಲಿವುಡ್ ನಟಿ ಎಂಟ್ರಿ ಕೋಡ್ತಾರ ಅಂತ ಮುಂದಿನ ವಾರಗಳ ವರೆಗೂ ಕಾದು ನೊಡ್ಬೇಕು.

LEAVE A REPLY

Please enter your comment!
Please enter your name here