Home Cinema ಪುನೀತ್‌ರ “ಯುವರತ್ನ” ಚಿತ್ರಕ್ಕೆ ನಾಯಕಿ ಯಾರು..!? ಮತ್ತೆ ಬರ್ತಿದ್ದಾರೆ ಕನ್ನಡಕ್ಕೆ “ಮಿಲ್ಕೀ ಬ್ಯೂಟಿ” ಹೌದಾ ಗುರು..??

ಪುನೀತ್‌ರ “ಯುವರತ್ನ” ಚಿತ್ರಕ್ಕೆ ನಾಯಕಿ ಯಾರು..!? ಮತ್ತೆ ಬರ್ತಿದ್ದಾರೆ ಕನ್ನಡಕ್ಕೆ “ಮಿಲ್ಕೀ ಬ್ಯೂಟಿ” ಹೌದಾ ಗುರು..??

695
0
SHARE

ಪುನೀತ್ ರಾಜ್‌ಕುಮಾರ್… ಪವರ್ ಸ್ಟಾರ್. ಸ್ಯಾಂಡಲ್‌ವುಡ್‌ನ ಯೂಥ್ ಐಕಾನ್. ಇತ್ತೀಚೆಗಷ್ಟೇ ಪುನೀತ್ ಮುಂದಿನ ಚಿತ್ರಕ್ಕೆ ಯುವರತ್ನ ಎಂಬ ಟೈಟಲ್ ಫೈನಲ್ ಆಗಿತ್ತು. ಫಸ್ಟ್ ಲುಕ್ ರಿಲೀಸ್ ಮಾಡಿದ್ದ ಚಿತ್ರತಂಡ ಗಾಂಧಿನರದಲ್ಲಿ ಸಿಕ್ಕಾಪಟ್ಟೆ ಸೌಂಡ್ ಕ್ರಿಯೇಟ್ ಮಾಡಿತ್ತು.ಯಸ್.. ರಾಜಕುಮಾರನಾಗಿ ಅಭಿಮಾನಿಗಳ ಮನತಣಿಸಿರುವ ಪುನೀತ್ ಮುಂದಿನ ಚಿತ್ರಕ್ಕೆ ಯುವರತ್ನ ಟೈಟಲ್ ಪಕ್ಕಾದ ಆಗಿದೆ.

ಇದರ ಬೆನ್ನಲೆ ಪುನೀತ್ ರಾಜ್‌ಕುಮಾರ್‌ಗೆ ನಾಯಕಿ ಯಾರು ಎನ್ನುವ ಕುತುಹಲ ಅಭಿಮಾನಿಗಳಲ್ಲಿ ಹೆಚ್ಚಾದೆ. ಚಿತ್ರದಲ್ಲಿ ಪುನೀತ್ ಕಾಲೇಜ್ ಹುಡುಗನ ಪಾತ್ರದಲ್ಲಿ ನಟಿಸುತ್ತಿದ್ದು, ಈಗ ಟಾಲಿವುಡ್ ಮಿಲ್ಕೀ ಬ್ಯೂಟಿ ತಮನ್ನಾ ಭಾಟಿಯಾ ಚಿತ್ರಕ್ಕೆ ನಾಯಕಿ ಆಗುತ್ತಾರೆ ಎಂಬ ಮಾತುಗಳು ಸದ್ಯ ಗಾಂಧೀನಗರದಲ್ಲಿ ಗಿರಿಕಿ ಹೊಡಿತ್ತಿದೆ.

ಸಿನಿಮಾ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಸಂತೋಷ್ ಆನಂದ್ ರಾಮ್. ಕನ್ನಡದ ಹುಡುಗಿಯನ್ನೆ ಹೋಲುವ ಚಿತ್ರರಂಗದ ದೊಡ್ಡ ನಟಿಯನ್ನು ಚಿತ್ರದ ನಾಯಕಿಯಾಗಿ ಕರೆತರುವ ಪ್ಲಾನ್ ಮಾಡ್ತಿರುವುದಾಗಿ ಹೇಳಿದ್ರು. ಅದೇ ರೀತಿ ಈಗ ತಮನ್ನಾ ಚಿತ್ರದ ಹೀರೋಯಿನ್ ಎಂಬ ಸುದ್ದಿ ಕೇಳಿಬಂದಿದೆ.

ತಮನ್ನಾ ಚಿತ್ರದ ನಾಯಕಿಯಾಗಿರುವುದು ಪಕ್ಕಾ ಅಂತ ಹೇಳಲಾಗ್ತಿದೆ.ತಮನ್ನಾ ಈಗಾಗಲ್ಲೇ ಜಾಗ್ವಾರ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟಿದ್ದಾರೆ. ನಿಕಿಲ್ ಜೊತೆಗೆ ಬಿಂದಾಸಾಗಿ ಹೆಜ್ಜೆಹಾಕುವ ಮೂಲಕ ತಮನ್ನಾ ಪ್ರೇಕ್ಷಕರ ದಿಲ್ ಕದ್ದಿದ್ದಾರೆ.ಈಗಾಲ್ಲೇ ಪುನೀತ್ ಮತ್ತು ತಮನ್ನಾ ಸಾಕಷ್ಟು ಜಾಹೀರಾತುಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ವೇಳೆ ಪುನೀತ್ ಜೊತೆಗೆ ತಮನ್ನಾ ಸಿನಿಮಾ ಮಾಡುವ ಹಿಂಗಿತವನ್ನು ವ್ಯಕ್ತಪಡಿಸಿದ್ರು.

ಇನ್ನು ನಾಯಕಿಯ ಪಟ್ಟಕ್ಕೆ ತಮನ್ನಾ ಹಾಗೂ ಕೀರ್ತಿ ಸುರೇಶ್ ಅವರ ಹೆಸರು ಕೇಳಿಬತ್ತಿದ್ದು, ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಪೂರ್ಣ ಪ್ರಮಾಣದ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಬಲಗಾಲಿಟ್ಟು ಬರಲು ತಮ್ಮನ್ನಾ ಸಜ್ಜಾಗಿದ್ದು. ಚಿತ್ರತಂಡ ತಮನ್ನಾರನ್ನು ಯುವರತ್ನನ ರಾಣಿಯನ್ನಾಗಿ ಫೈನಲ್ ಮಾಡುತ್ತಾ ಎನ್ನುವುದು, ಸದ್ಯ ಮಿಲ್ಕಿ ಬ್ಯೂಟಿ ಫ್ಯಾನ್ಸ್‌ಗಳ ಕಾಯುವಿಕೆಗೆ ಕಾರಣವಾಗಿದೆ.

LEAVE A REPLY

Please enter your comment!
Please enter your name here