Home Cinema ಪುನೀತ್ ಅಭಿಮಾನಿಗಳಿಗೆ ಸರ್‌ಪ್ರೈಸ್ ಕೊಟ್ಟ ರಚಿತರಾಮ್..! ಬುಲ್ ಬುಲ್ ಡ್ಯಾನ್ಸ್‌ಗೆ ಫಿದಾ ಆದ ಅಭಿಮಾನಿಗಳು…

ಪುನೀತ್ ಅಭಿಮಾನಿಗಳಿಗೆ ಸರ್‌ಪ್ರೈಸ್ ಕೊಟ್ಟ ರಚಿತರಾಮ್..! ಬುಲ್ ಬುಲ್ ಡ್ಯಾನ್ಸ್‌ಗೆ ಫಿದಾ ಆದ ಅಭಿಮಾನಿಗಳು…

694
0
SHARE

ಡಿಂಪಲ್ ಕ್ವೀನ್ ರಚಿತಾರಾಮ್ ಆಸೆಯೊಂದು ಇಷ್ಟು ದಿನಗಳಾದ್ರೂ ಈಡೇರಿಲ್ಲವಂತೆ. ಸದ್ಯಕ್ಕೆ ನಟಸಾರ್ವಭೌಮ ಸಿನಿಮಾದ ಖುಷಿಯಲ್ಲಿರುವ ರಚಿತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ಆಸೆಯನ್ನ ಬಿಚ್ಚಿಟ್ಟಿದ್ದಾರೆ.

ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗೆ ಹೊಸ ಸರ್‌ಪ್ರೈಸ್ ಕೊಟ್ಟಿರುವ ರಚಿತಾರಾಮ್ ಡ್ಯಾನ್ಸ್ ವಿಡಿಯೋ ಒಂದನ್ನ ಅಪ್‌ಲೋಡ್ ಮಾಡಿದ್ದಾರೆ. ರಚಿತಾರಾಮ್ ನಟಸಾರ್ವಭೌಮ ಸಿನಿಮಾದ ಡ್ಯಾನ್ಸ್ ವಿತ್ ಅಪ್ಪು ಸಾಂಗ್‌ಗೆ ಒಬ್ಬರೇ ಸ್ಟೆಪ್ ಹಾಕಿರುವ ವಿಡಿಯೋ ಬಿಟ್ಟು ಎಲ್ಲರ ಗಮನ ಸೆಳೆದಿದ್ದಾರೆ.

ಈಗಾಗಲೇ ಪುನೀತ್ ರಾಜ್‌ಕುಮಾರ್ ಜೊತೆ ಎರಡು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ರಚಿತಾಗೆ ಇನ್ನು ಪವರ್‌ಸ್ಟಾರ್ ಜೊತೆ ಬಿಂದಾಸ್ ಡ್ಯಾನ್ಸ್ ಮಾಡುವ ಅವಕಾಶ ಸಿಕ್ಕಿಲ್ಲವಂತೆ. ಅಪ್ಪು ಸಕತ್ತಾಗಿ ಡ್ಯಾನ್ಸ್ ಮಾಡ್ತಾರೆ.

ನಟನೆಯ ಜೊತೆಗೆ ಉತ್ತಮ ಡ್ಯಾನ್ಸರ್ ಆಗುವುದು ಸುಲಭದ ಮಾತಲ್ಲ. ಇವೆರಡನ್ನೂ ಪುನೀತ್ ಚೆನ್ನಾಗಿ ಬ್ಯಾಲೆನ್ಸ್ ಮಾಡ್ತಾರೆ. ಮುಂದೆ ಅವಕಾಶ ಸಿಕ್ಕರೆ ಅಪ್ಪು ಜೊತೆ ನಟಿಸುತ್ತೇನೆ ಎಂದಿದ್ದಾರೆ. ಇನ್ನು ನಟಸಾರ್ವಭೌಮ ಸಿನಿಮಾದ ರಿಲೀಸ್‌ಗೆ ಕ್ಷಣಗಣನೆ ಶುರುವಾಗಿದೆ. ಇದೇ ಫಸ್ಟ್ ಟೈಮ್ ಅಭಿಮಾನಿಗಳ ಒತ್ತಾಯದ ಮೇರೆಗೆ ಇಂದು ರಾತ್ರಿ ಶೋ ಶುರುವಾಗುತ್ತಿದೆ.

ಈಗಾಗಲೇ ನಟಸಾರ್ವಭೌಮ ಚಿತ್ರದ ಟಿಕೆಟ್‌ಗಳು ಹಾಟ್ ಕೇಕ್‌ನಂತೆ ಬಿಕರಿಯಾಗುತ್ತಿವೆ. ಅಡ್ವಾನ್ಸ್ ಬುಕ್ಕಿಂಗ್ ಶುರುವಾದ್ರೂ ಅಪ್ಪು ಫ್ಯಾನ್ಸ್ ಟಿಕೆಟ್‌ಗಳಿಗೋಸ್ಕರ ಮುಗಿಬೀಳುತ್ತಿರುವುದು ಚಿತ್ರದ ಹೈಪ್ ಹೇಗಿದೆ ಅಂತ ತೋರಿಸುತ್ತಿದೆ.

 

LEAVE A REPLY

Please enter your comment!
Please enter your name here